ಶ್ರೀ ಮಹಾದೇವದೇವಗೆಸೋಮಶೇಖರನಿಗೆವಾಮಾಂಕದೊಳು ಪಾರ್ವತಿಯಪ್ರೇಮದಿಂದ ತಾಳ್ದವಗೆಹೇಮದಾರತಿಯ ಬೆಳಗಿರೆ 1
ಮಾರಮರ್ದನಗೆ ತ್ರಿಪು-ರಾರಿಗೆ ಶ್ರೀಕರನಿಗೆಶಾರದೆ ಲಕ್ಷ್ಮಿಯರು ವೈ-ಯಾರದಿಂದ ಪಾಡುತಮೇರುವೆಯಾರತಿಯ ಬೆಳಗಿರೆ 2
ಕರುಣಾಸಾಗರಗೆ ಶ್ರೀ-ಕರಗೆ ಸರ್ವೇಶಗೆಪರಮ ಪಾವನಗೆಪಾರ್ವತಿಗೆ ವನಿತೆಯರುಕುರುಜಿನಾರತಿಯ ಬೆಳಗಿರೆ 3
ದೇವದುಂದುಭಿ ಮೊಳಗೆದೇವತೆಗಳೆಲ್ಲಾ ನೆರೆದುಹೂವಿನ ಮಳೆಗರೆಯೆಭಾವಕಿಯರು ಮಾದೇವಗೆಹೂವಿನಾರತಿಯ ಬೆಳಗಿರೆ 4
ಪಂಕಜಾಕ್ಷಿಯರು ಕೂಡಿಭೋಂಕನೆ ಗಾನವ ಪಾಡಿಕಂಕಣ ಕಡಗ ಝಣ ಝಣರೆನೆ ಶ್ರೀರಾಮೇಶಗೆಕುಂಕುಮದಾರತಿಯ ಬೆಳಗಿರೆ5