ನೀನೆ ಗತಿ ಮುಕುತೆನೆಗೆ ಅನಂತ ಜನುಮಗಳಲಿ ಪ
ಆನೇನರಿಯೆ ಗರುಡಗಮನ ಸಿರಿಕೃಷ್ಣ ರಾಯಾ ಅ.ಪ
ಅನ್ಯವಾರ್ತೆ ಅನ್ಯಸಂಗ ಅನ್ಯಜನರಾರಾಧನೆಅನ್ಯಸತಿ ಅನ್ಯಕರ್ಮ ಮೊದಲು ಸಕಲತನ್ನು ಮನ್ನ(=ತನುಮನ) ವಾಕ್ಯಗಳಿಂದ ಜರಿದೆ ನಿನ್ನವರೊಳುಎನ್ನ ಕೂಡಿಸೊ ನಿನ್ನ ಚರಣ ಭಕುತಿಯಲಿ ಶ್ರೀಶ 1
ಅಂದು ವೇದೋದ್ಭವಳ ಮೊರೆಯನು ಕೇಳಿ ಕಾಯ್ದಂತೆಮಂದ ಗಜೇಂದ್ರನಿಗೊಲಿದು ರಕ್ಷಿಸಿದ ಪರಿಯಂತೆತಂದೆತಾಯಿ ಬಂಧುಬಳಗ ಎಂದೆಂದು ನೀನೇ ದಯಾ-ಸಿಂಧು ನಿನ್ನ ದಾಸರ ದಾಸನೆಂದೆನಿಸೆನ್ನ2
ಪಾದ ಜಂಘೆ ಜಾನೂರುಕಟಿಘನ್ನ ಬಾಹು ಉದರವಕ್ಷ ಭುಜ ಕುಂತಳದಿಚನ್ನ ಕಿರೀಟ ಸರ್ವಾಲಂಕಾರದಿಂ ಶೋಭಿಸುವನಿನ್ನ ಮೂರ್ತಿಯನ್ನೆ ತೋರೊ ಭಕ್ತವತ್ಸಲ ಸಿರಿಕೃಷ್ಣ3