ಒಟ್ಟು 211 ಕಡೆಗಳಲ್ಲಿ , 64 ದಾಸರು , 170 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾರ್ವತಿ ಬೀರೆ ಸನ್ಮತಿಯ ಪಾರ್ವತಿ ಬೀರೆ ಸನ್ಮತಿಯ ಪ ಪೋರನಲ್ಲಪಾರ ದೊಷ ದೂರಗೈಯುತ ಮಾರನೈಯ್ಯನ ಚಾರು ಮೂರುತಿ ತೋರಿ ನಿರುತ ಸಾರಸಾಕ್ಷಿ ಗಾರು ಮಾಡದೆ 1 ಕ್ಷೋಣಿಯಲ್ಲಿ ಪ್ರಾಣಮತವ ಜ್ಞಾನದಿಂದಲಿ ಗಾನಮಾಡುವ ದಾನವಿತ್ತು ಸಾನುರಾಗದಿ ದಾನವಾಂತಕ ಕಾಣುವಂತೆ 2 ಕಾಮಹರನ ವಾಮಭಾಗದಿ ಪ್ರೇಮದೀರುವ ಭಾಮಾಮಣಿಯೆ ಕಾಮಮಾರ್ಗಣ ಧಾಮಕೆಡೆಹಿ ಶ್ರೀ ನರಹರಿ ನಾಮಸುಖವ 3
--------------
ಪ್ರದ್ಯುಮ್ನತೀರ್ಥರು
ಪಾರ್ವತಿ ಭದ್ರಾಣಿ ದೇಹಿ ಮೇ ಗೌರಿ ಪ. ಭದ್ರಾಣಿ ದೇಹಿಮೇ ಗೌರಿ ರುದ್ರಾಣಿ ಭೂರ್ಯಾ (ರಿ?) ಭರಣಿ ಅ.ಪ. ಗರ್ವಾದಿ ನಿರ್ಮಿತಾನಿ ದುರ್ವಾಸ ಸುಖದಾನಿ(?)ಸರ್ವಾಣಿ ಪಾತ ಕಾನಿ ಸರ್ವಾಣಿ ಭಿಂತಾನಿ(?) 1 ಅಂಬೋಜನಾಭ ಸುಹಿತೇ ರಂಬೋರು ಶಂಭೋದಯಿತೇಗಾಂಭೀರ್ಯ ಸುಗುಣಸಹಿತೇ ಕುಂಭೋದ್ಭವಾದಿ ವಿನುತೇ 2 ಇಂದೀವರಾಭ ನಯನೇ ನಂದಿತ ಹಯವದನೇಕುಂದಕುಟ್ಮಲರದನೆ ಚಂದ್ರಸಹಸ್ರ ವದನೆ 3
--------------
ವಾದಿರಾಜ
ಪಾರ್ವತಿ ದೇವಿ ಉಮಾ - ನಿನಗೆ ಸರಿಯಾರೇಕಮ್ಮಗೋಲ್ವೈರಿಯ ಪ್ರೇಮ ಪಾತ್ರಳಾದ ಪ ಆಡೂವ ನುಡಿಗಳ - ಜೋಡಿಸಿ ಹರಿಯಲಿಮಾಡೀಸು ಸತ್ಸಾಧನಾ ||ಬೇಡಿಕೊಂಬೆನು ದೇವಿ - ರೂಢಿಗೊಡೆಯನ ತಡಮಾಡದೆ ತುತಿಪಂಥ - ಜೋಡಿಸು ಮನಾ 1 ಸುರಪಾದಿ ದೇವತೆ ಕರಗಳ ಜೋಡಿಸಿಶರಣೆಂದು ಪೇಳುವರೇ ||ಹರ್ಯಕ್ಷ ಯಕ್ಷನ ಈಕ್ಷಿಸಿ ಬರುತಿರೆಹರಿ ಪೇಳೆ ಸುರಪಗೆ ಬೋಧಿಸಿದೆ 2 ಸತಿ - ವ್ಯತ್ಯಸ್ತ ಮನವನುಸತ್ಯಾತ್ಮನಲಿ ನಿಲಿಸೇ ||ಅರ್ಥೀಲಿ ಹರಿಯ - ಅತ್ಯರ್ಥ ಪ್ರಸಾದಕ್ಕೆಪಾತ್ರನೆಂದೆನಿಸಿ - ಪಾಲಿಸೇ 3 ಪ್ರಾಣಂಗೆ ಪ್ರಾಣನ - ಗಾನ ಮಾಡಲು ಗುಣಶ್ರೇಣಿಗಳ ಜೋಡಿಸೇ ||ಗಾನ ವಿನೋದಿ - ಪ್ರ - ದಾನ ಪುರೂಷನಮಾಣದೆನಗೆ ತೋರಿಸೇ 4 ಹಿಮಗಿರಿಸುತೆತವ - ವಿಮಲಪದಾಬ್ಜಕೆನಮಿಸುವೆ ನೀ ಪಾಲಿಸೇ ||ಅಮಿತಾರ್ಕ ನಿಭ ಗುರು ಗೋವಿಂದ ವಿಠಲನಕಮನೀಯ ಪದ ಕಾಣಿಸೇ 5
--------------
ಗುರುಗೋವಿಂದವಿಠಲರು
ಪಾರ್ವತಿದೇವಿ ಕರುಣದಿ ಕಾಯೆ ತಾಯೆ ಕರುಣಾಭರಣೆ ವಿಶ್ವಂಭರಣೆ ಪ. ಕರುಣಿಸಿ ಕಾಯೆ ತಾಯೆ ಮರೆಯದೆ ನಿನ್ನಯ ಚರಣಸ್ಮರಣೆಯಿತ್ತು ಭರದಿ ಕಾಪಾಡೆ ಅ.ಪ. ಅಂಬಾ ಲೋಕೇಶ್ವರಿ ಅಂಬಿಕೆ ನಿನಪಾದ ನಂಬಿದವರಿಗೆ ಕಷ್ಟಗಳುಂಟೆ ತಾಯೆ ನಿನ್ನ ಕಂಬುಕಂಠನರಾಣಿ ಬೆಂಬಿಡದಲೆ ಕಾಯೆ ಸಂಭ್ರಮದಲಿ ನಿನ್ನ ಇಂಬ ತೋರಿಸುತ 1 ಅಖಿಳಾಂಡನಾಯಕಿ ಸುಖಪ್ರದಾಯಕಿ ಸಖ ಶಂಕರನೊಳು ಸುಖಿಪ ಕಲ್ಯಾಣಿ ಅಕಳಂಕ ಮಹಿಮಳೆ ಸಕಲಕಾಲದಿ ನಿನ್ನ ಭಕುತಿಯೊಳ್ ಪೂಜಿಪÀ ಸಖರೊಳಗಿರಿಸೆ 2 ಭಕ್ತ ಮಂದಾರೆ ಭಕ್ತಿ ಮುಕ್ತಿಯನೀಯೆ ಸಹೋದರಿ ಕಾಯೆ ಭುಕ್ತಿಗೋಸುಗ ನಿನ್ನ ಸ್ಮರಣೆ ನಾನೊಲ್ಲೆನೆ ಶಕ್ತಿ ಸ್ವರೂಪಿಣಿ ಶಂಕರಿ ಶುಭಕರಿ 3
--------------
ಸರಸ್ವತಿ ಬಾಯಿ
ಪಾರ್ವತಿದೇವಿ ಗಿರಿಜೆ ನೀ ಒಲಿಯುವರೇ ಪರಶಿವನು ತಕ್ಕ ವರನೆಂದು ಮೆರೆಯುವರೆ ಪ ಪರಮ ವೈಷ್ಣವ ಭಕ್ತಾಗ್ರಣಿಯಾದ ಶಿವನಿಗೆ ಇರುತಿಹ ಕೊರತೆಗಳರಿಯದೆ ಗರುವದಲಿ ಅ.ಪ ಮನ್ಮಥನ ವೈರಿಗೆ ವಾಸಕೆ ಯೋಗ್ಯ ಮನೆಯಿಲ್ಲದಿರುವಾತಗೆ ಮನೆಯು ಮಶಾಣವೆನ್ನುತ ಪೇಳುತಿಹರಿನ್ನು ಸುಮನಸರೊಡಯನೆ ಸಖನಂತೆ ಇದು ಕೇಳು ಮನಸಿನ ಅಭಿಮಾನಿ ಶಿವನು ಘನತರದ ವಿಷಪಾನಗೈದನು ಮನದಿ ಶ್ರೀ ರಘುವರನ ಸ್ಮರಿಸುತ ವೃಷಭ ವಾಹನವೇರಿ ಚರಿಪಗೆ 1 ರುಂಡಮಾಲೆಯ ಧರಿಸಿದ ಕೊರಳೊಳಗೆ ಸರ್ಪ ದಂಡೆ ಅಲಂಕರಿಸಿರುವ ಮಂಡೆಯೊಳಗೆ ಚಲುವ ಗಂಗೆಯ ಧರಿಸಿಹ ಚಂದ್ರಶೇಖರ ಶಿವನೆಂದು ಕರೆಸಿಕೊಂಬ ಕೆಂಡಗಣ್ಣಿನ ಕ್ರೂರರೂಪನ ಕಂಡು ಹರುಷದಿ ಹಿಗ್ಗಿ ನಲಿಯುವಿ ಮಂಡೆಯಲಿ ಕೆಂಜಡೆಯ ಸುತ್ತಿಹ ಹಿಂಡು ವಿಷ ಸರ್ಪಗಳಲಂಕೃತನಿಗೆ 2 ಕರಿಚರ್ಮಾಂಬರನುಡುವ ಕೈಯಲ್ಲಿ ಕಪಾಲ ತಿರಿದುಂಡು ಹರುಷಿಸುವ ಪರಿ ದೈತ್ಯ ಪಿಶಾಚಯಕ್ಷರ ಕೂಡಿ ಚರಿಸುತ್ತ ಕುಣಿಯುತ್ತ ಗೊರವನಂತಿರುತಿಹ ಪರಮ ವೈರಾಗ್ಯವನು ಧರಿಸಿ ಫಣೆಯ ಗಣ್ಣನು ಬಳಿದು ಭಸುಮವ ಚರಿಸುವನು ರುಷಿವರರ ತೆರದಲಿ ಎಣಿಸಿ ಮಣಿಗಳ ಒಲಿಸಿ ಹರಿಯನು 3 ರಾಮಮಂತ್ರವ ಜಪಿಸಿ ರಮಣಿಗೆ ದಿವ್ಯ ರಾಮಚರಿತೆಯ ಬೋಧಿಸಿ ಕಾಮಹರನು ಕೈಲಾಸಪತಿಯು ಮತ್ತೆ ಕಾಮದೇವನು ಎಂಬ ನಾಮಸ್ಮರಿಸುವ ಆ ಮಹಾಗಣಪತಿಯು ಪುತ್ರನು ವೀರಭಕ್ತನು ಸುತನು ಶಿವನಿಗೆ ಪ್ರೇಮದಲಿ ಷಣ್ಮುಖನು ಸುತನೆಂ- ದೀ ಮಹಾಮಹಿಮೆಗಳು ತಿಳಿಯದೆ4 ಸುಂದರಾಂಗಿ ನಿನ್ನಯ ಚಲುವಿಕೆಗೆ ತಕ್ಕ ಚಂದದ ವರನೇ ಕೇಳು ಮಂದರೋದ್ಧರ ಶ್ರೀ ಮುಕುಂದನ ಭಜಿಸಲು ಚಂದದ ವರಗಳ ಕುಂದದೆ ಕರುಣಿಪ ಕಂದುಗೊರಳನು ಶಿವನು ಕಮಲ ನಾಭ ವಿಠ್ಠಲನ ಭಜಿಪ ಸಂತತ ಮಂದಗಮನೆಯ ಇಂದುಧರನಿಗೆ ಚಂದದಲಿ ವನಮಾಲೆ ಹಾಕುತ 5
--------------
ನಿಡಗುರುಕಿ ಜೀವೂಬಾಯಿ
ಪಾರ್ವತಿದೇವಿ ಪಾದ ನಂಬಿದೆ ಪ ಪಾದ ಜಗದಂಬೆ ಅರುಣೆ ಪಂಚಭೇದಾ ಆಹಾಶಂಭುವಿನರ್ಧಾಂಗಿ ಬಿಂಬನ ತೋರಿಸೆಅಂಬುಜೋದ್ಭವನ ಪ್ರತಿಬಿಂಬವ ರಾಣಿಯೆ ಅ.ಪ. ಮನದಭಿಮಾನಿ ದೇವತೆಯೆ ಯನಮನವ ನಿಲ್ಲಿಸು ಪಾರ್ವತಿಯೆ ಆಹಾಮುನಿಜನ ವಂದ್ಯಳೆ ಮನ್ಮಥ ಜನನಿಯೆಸಾನುರಾಗದಲಿ ನೀ ಜ್ಞಾನ ಕೊಡುವೆಯೆಂದು 1 ಸಾರಥಿ 2 ಶರಣು ಬಂದೆನೆ ನಾ ನಿನಗೆ ತವಚರಣ ಭಜನೆ ಕೊಡು ಎನಗೆ ಆಹಾಶರಧಿ ಶಯನ ತಂದೆವರದವಿಠಲನನ್ನುಪರಿಪರಿ ಸ್ತುತಿಸುವ ವರಕಾಳಿ ದೇವಿಯೆ3
--------------
ಸಿರಿಗುರುತಂದೆವರದವಿಠಲರು
ಪಾರ್ವತಿಪತಿ ಆರ್ವರಾಭಿಷ್ಟಿಯ ಸರ್ವಪೂರಿಸಿ ತನ್ನಿಜಪದ ಸೇವಕನಿಗೆ ಕರುಣವ ಬೀರ್ವನಿಗೆ ಚರಿತ ಆ ಪೂರ್ವನಿಗಾರತಿಯಾ ಬೆಳಗಿರೇ ಸೋ 1 ತಾರ್ಕು ಪದೇಶಿತಾ ಸರ್ಕನೆ ಕರ್ಕಶ ಮಾರ್ಗವ ಬಿಡಿಸುವ ಅತಕ್ರ್ಯನಿಗೆ ಅಘತಮರ್ಕನಿಗೆ ಸುರಸ ಪರ್ಕನಿಗಾರತಿಯಾ ಬೆಳಗೀರೇ ಸೋ 2 ಅಂಬುಶಶಿಬಿಂಬಾಂಕಿತ ಜಟೆ ಅಂಬಕತ್ರಯ ಶಾಂಭವ ವಾಸೆ ಚಿದಂಬರಗೆ ಗಜಚರ್ಮಾಂಬರಗೆ ಹರಸಿ ಶ್ವಂಭರಗಾರತಿಯ ಬೆಳಗಿರೇ ಸೋ3 ಕರ್ಪುರ ಗೌರವತನು ತೋರ್ಪುವ ಸರ್ಪಾಭರಣಗಳಲಿ ಶೋಭಿಸುತಿರ್ಪನಿಗೆ ಹತ ಕಂರ್ದಪನಿಗೆ ಸುಜ್ಞಾನ ದರ್ಪಣೆಗಾರತಿಯಾ ಬೆಳಗೀರೆ ಸೋ 4 ಕುಂದದಿ ಆನಂದದಿ ಮಹೀಪತಿ ನಂದನ ಸಲಹುವ ಘನ ಅಶಿತ ಕಂದರಿಗೆ ಪೂಜಿತ ಇಂದರಗೆ ಸದ್ಗುಣ ಸಾಂದರ ಗಾರತಿಯಾಬೆಳಗೀರೆ ಸೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾರ್ವತಿರಮಣ ಕರುಣಾಭರಣ ಪಾಹಿಪುರಮಥನ ತ್ರಿಲೋಚನ ಪ ಪಾವನವೇಷ ಫಣಿಗಣಭೂಷ ಭೂತೇಶ ಮಹೀಶ 1 ಕಲುಷ ವಿದೂರ ಸೋಮಶೇಖರ ಶಂಕರ 2 ಕರಿಗಿರೀಶಪ್ರಿಯ ಕೈಲಾಸನಿಲಯಪರಮ ಕೃಪಾಮಯ ಸುಕಾಯ 3
--------------
ವರಾವಾಣಿರಾಮರಾಯದಾಸರು
ಪಾಲಯಮಾಂ ಪಾರ್ವತಿಯೆ ಪಾಪ ವಿನಾಶಿನಿ ತಾಯೆ ಶೀಲ ಮೂರುತಿ ಶಿವೆ ಈ ಜಾಲ ಸಂಸಾರದಿ ಪ. ತ್ರಿಜಗ ಪೂಜಿತೆ ನಿನ್ನ ಭಜಿಸೂವಾಮನವಿತ್ತು ಸುಜನರಾಪ್ತೆಯೆ ಎನ್ನಾ 1 ರಾಗ ರಾಗದಿ ನಿನ್ನ ಅನುರಾಗದಿಂ ಪೂಜಿಪೆ ಭಾಗ್ಯವನು ಕೊಟ್ಟು ನೀ ವೈರಾಗ್ಯ ಭಕ್ತಿಯನು 2 ಅರಿಶಿಣ ಕುಂಕುಮವನ್ನು ವರ ಮಾಂಗಲ್ಯದಾ ಭಾಗ್ಯ ನಿರುತದಿ ನೀಡುತ ಪೊರೆಯೆ ಶ್ರೀ ಶ್ರೀನಿವಾಸ ಸಹೋದರಿಯೆ3
--------------
ಸರಸ್ವತಿ ಬಾಯಿ
ಪಾಲಿಸು ಪಾಲಿಸು ಪಾರ್ವತಿ ತನಯನೆ ಫಾಲಚಂದ್ರಯುತನೆ ಕಾಲ ಸಂಭಾವನಲೋಲುಪ ವಾರಿಜಾಸ್ಯನುತನೆ ಪ ಸುಜನ ಗಜವದನಾ ಸುರಕುವಲಯ ದಿನಕರ ಧೂರ್ಜಟಿಸುತ ಗಣಪ 1 ಕಾಮಿತ ಫಲಗಳ ಪಡೆಯಲು ಸುಜನರು ನೇಮದಿ ಪೂಜಿಪರು ಸಾಮಜ ವದನನೆ ಭಕ್ತರಭೀಷ್ಟವÀ ಪ್ರೇಮದಿ ಕರುಣಿಸುತ 2 ಗಾನಲೋಲ ವರತಾಂಡವ ಪ್ರೀತನೆ ಕೋಮಲಾಂಗ ಸತತಂ ಧೇನುನಗರ ಸಂರಕ್ಷಣ ದಕ್ಷನೆ ಸಾನುರಾಗದಲನಿಶಂ 3 ಇಂದ್ರಾದಿ ದಿವಿಜರೆಲ್ಲ ಕುಂದುತ್ತ ದೈತ್ಯ ಭಯದಿಂ ಸುಂದರಿ ನಿನ್ನ ಭಜಿಸೆ ನಿಂದೆಲ್ಲರನ್ನು ಪೊರೆದೆÀ 4 ಕಮಲಾಕ್ಷಿ ವಿಮಲಪಾಣಿ ಕಮಲಾಪ್ತ ಮುಖ್ಯರಮಣೆ ಸುಮಶೋಭಮಾನವೇಣಿ ಕಮನೀಯ ದಿವ್ಯಪಾಣಿ 5 ಶಾಕಿನಿರೂಪೆ ದೇವಿ ಲೋಕೈಕ ವೀರ್ಯ ಧೈರ್ಯ ಬೇಕಾದ ವರಗಳಿತ್ತು ಶ್ರೀಕಾರ ಶಕ್ತಿಯೆನ್ನ 6 ಜ್ಞಾನವು ಮೌನ ಜಯವುಂ ಧ್ಯಾನ ಸುಮಂಗಲತ್ವಂಮಾನ ಸುಪುತ್ರ ಹಿತಮಂ ಧೇನು ಪುರೀಶೆ ಕೊಟ್ಟು 7
--------------
ಬೇಟೆರಾಯ ದೀಕ್ಷಿತರು
ಪಾಲಿಸು ಪಾಲಿಸು ಪಾಲಿಸು ಸುಮನಾ ಪಾರ್ವತಿ ತಾಯೇ ಪ. ಪಾಲಿಸು ಶ್ರೀ ರಜತಾದ್ರಿನಿವಾಸಿ ಶೀಲಮೂರುತಿ ಶಿವಶಂಕರಿ ದೇಹಿಮೆ ಅ.ಪ. ಮನಕಭಿಮಾನಿ ಮಾನುನಿರನ್ನೆ ಸರ್ವ ತನುಮನನಿನಗರ್ಪಿಸಿಹೆನೆ ತಾಯೆ ಕಾಯೆ ಅನುದಿನ ನಿನ್ನಯ ಚರಣವ ಪೂಜಿಪ ಮನವಿತ್ತು ಕರುಣದಿ ನಿನ್ನ ತನುಜರಿಗೇ ನೀಡೆ 1 ಪಂಕಜಗಂಧಿನಿ ಪಂಕಜಾಕ್ಷಿಯೆ ಶಿವ ನಂಕದಿ ಅಲಂಕೃತ ಮಾತೆ ಸುಗೀತೆ ತಾಯೆ ಅಂಕುರವಾಗುವ ತೆರ ನಿನನಾಮವ ಕಿಂಕರರಿಗೆ ನೀಡಿ ದಯಮಾಡೆ ತಾಯೆ 2 ಶ್ರೀಶ ಶ್ರೀ ಶ್ರೀನಿವಾಸ ಸಹೋದರಿ ಈಶನೈಯ್ಯನೈಯ್ಯನೊಲಿಸುವ ಮರೆಯ ಶಂಕರಿ ಶುಭಕರಿ 3
--------------
ಸರಸ್ವತಿ ಬಾಯಿ
ಪಾಲಿಸು ಶಂಕರನೆ ಪಾರ್ವತಿ ಪತೆ ಪಾಲಿಸು ಶಂಕರನೆ ಪ. ಹರಚರ್ಮಾಂಬರ ಗೌರಿ ಮನೋಹರ ಸುರನರ ವಂದಿತ ಗರಳಕಂಧರನೆ 1 ಮನದಭಿಮಾನಿಯೆ ಸನುಮತದಲಿ ಎನ್ನ ಮನದಲಿ ಶ್ರೀ ಹರಿ ವನಜ ಪಾದವ ತೊರೋ2 ಪುಟ್ಟ ಮೊಮ್ಮಗ ನೀನೆ ತುಷ್ಟಿಯಿಂದಲಿ ಕಾಯೊ 3
--------------
ಅಂಬಾಬಾಯಿ
ಪಾಲಿಸೆನ್ನ ಪಾರ್ವತಿ ರನ್ನಾ ಪ ಪಾರ್ವತಿ ಪರ್ವತ ರಾಜಕುಮಾರಿಯೆ ಘನ್ನ ಅ.ಪ. ಸತಿ ಸುಮ್ಮನೆ-ದೊಳಗಿದ್ದು ಪರಿಪಾಲಿಸೆ ಬೊಮ್ಮನ ಸೊಸಿಯೆ 1 ಸತಿ ಅಂಬಕೇಶನ ಜನನಿ ಜಗದಂಬೆ ಭವಾನಿಯೆ 2 ಪಾದ ಸತಿ 3
--------------
ತಂದೆವರದಗೋಪಾಲವಿಠಲರು
ಪಾಲಿಸೆನ್ನ ಪಾಲಿಸೋ ಎನ್ನಾ ಪ ಪಾಲಿಸೆನ್ನ ಗುರು ಫಾಲನಯನಾಸುರಪಾಲನ ಪಿತ ಶ್ರೀ ಪಾರ್ವತಿರಮಣಅ.ಪ. ಲಿಂಗವೇರಿ ಸುರರಂಗದಿ ಚರಿಸುವ ಶಿರಿರಂಗನ ಪದ ಪವನನ ಭೃಂಗಾ 1 ಕವಿ ವಿನುತ ಪರರಾಳಿಯ ಪ್ರಿಯಬಾಲಾ 2 ನವಿಲನೇರಿ ಬರುತಿಪ್ಪನ ಪಿತತಂದೆವರದಗೋಪಾಲವಿಠಲನ ಆಪ್ತಾ 3
--------------
ತಂದೆವರದಗೋಪಾಲವಿಠಲರು
ಪಾಲಿಸೋ ಸದಾ ಪರಿಪಾಲಿಸೋ ಪಾಲಿಸೋ ಪಾರ್ವತಿ ರಮಣ | ತ್ರಿದ ನಾಲಿಗೆಯಿಂದಲಿ | ಶ್ರೀಲಕುಮೀಶನ ಕಾಲ ಕಾಲಕ್ಕೆ ಕೊಟ್ಟು ಅ.ಪ ಭೇಷಪಾವಕ ಪತಂಗ | ನಯನ ಭಾಸುರ ಸ್ಪಟಿಕ ನಿಭಾಂಗ | ಹರಿ ದಾಸ ಜನರ ಸುಸಂಗವಿತ್ತು ದೋಷ ಕಳೆಯೊ ರಾಮಲಿಂಗ ಆಹಾ 1 ಕೇರ ಕುಮಾರ ಕುಮಾರ | ಪಿತ ಕೀರನಾಮಕನವತಾರ |ಕೀರಾ ದೇವನ ಗರ್ವಪರಿಹಾರ | ತಾಟ ಕಾರಿನಾಮ ಸವಿಗಾರ | ಆಹಾ ಶರಧಿ ವೈಕಾರಿಕÀ | ತತ್ವಾಧಿ ಕಾರಿ ವಿಕಾರಿ ಷಕಾರ ಪದಾರ್ಚಕ 2 ನಂದಿವಾಹನ ನಾಗಶರನೆ | ನೀಲ ಸುರನದಿ ಧರನೆ | ಶಾಮ ಸುಂದರ ವಿಠಲನ ಸಖನೆ ಮಹಿ ಶ್ಯಂದನ ಶಿವಶಂಕರನೆ | ಆಹಾ ಒಂದೂರಾರ್ಯರ ಕರದಿಂದ ಪೂಜಿತನಾಗಿ ನಿಂದು ಭಜಿಪರಿಗಾನಂದವೀವ ದೇವ 3
--------------
ಶಾಮಸುಂದರ ವಿಠಲ