ಒಟ್ಟು 83 ಕಡೆಗಳಲ್ಲಿ , 36 ದಾಸರು , 78 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಜ್ಜನರ ಸಂಗ ನಮಗೆಂದಿಗಾಗುವುದೊ |ದುರ್ಜನರ ಸಂಗದಿಂದಲಿ ನೊಂದೆ ಹರಿಯೆ ಪವಾಕು-ವಾಕಿಗೆ ಡೊಂಕನೆಣಿಸುವರು-ಮತ್ತೆ |ಪೋಕರಾಡಿದ ಮಾತು ನಿಜವೆಂಬರು ||ವಾಕ್‍ಶೂಲಗಳಿಂದ ನೆಡುವರು ಪರರ ನೀ |ಪೋಕುಮಾನವರಿಂದ ನೊಂದೆ ಹರಿಯೆ 1ತಾವೆ ತಮ್ಮನ್ನು ಕೊಂಡಾಡಿಕೊಳ್ಳುವರು |ನ್ಯಾಯವಿಲ್ಲದೆ ನುಡಿವರು ಪರರ ||ಭಾವಿಸಲರಿಯರು ಗುರುಹಿರಿಯರನಿಂಥ |ಹೇಯ ಮನುಜರಿಂದ ನೊಂದೆ ಹರಿಯೆ 2ಒಡಜನರನು ಕೊಂದು ಅಡಗಿಸಿಕೊಂಬರು |ಬಿಡಲೊಲ್ಲರು ಹಿಡಿದನ್ಯಾಯವ ||ನುಡಿದು ಕೇಡನು ಒಡನೆ ತಪ್ಪಿಸಿಕೊಂಬಂಥಕಡು ಮೂರ್ಖರಿಂದ ನಾ ನೊಂದೆನು ಹರಿಯೆ 3ತೊತ್ತಿನೊಡನೆ ತನ್ನ ಸ್ನೇಹ ಸರಸ ಮಾತು |ತೆತ್ತಿಗರೊಡನೆ ಪಂಥವ ನುಡಿವರು ||ಸತ್ತಬಳಿಕ ಸೃಷ್ಟಿ ಸಟೆಯೆಂಬರು ಇಂಥ |ಮತ್ತಮನುಜರಿಂದ ನೊಂದೆ ಶ್ರೀಹರಿಯೆ4ಇಷ್ಟುದಿನವು ನಿನ್ನ ನೆನೆಯದ ಕಾರಣ |ಕಷ್ಟಪಡುವ ಕೈಮೇಲಾಗಿ ||ಸೃಷ್ಟಿಗೊಡೆಯ ಶ್ರೀ ಪುರಂದರವಿಠಲನೆ |ಮುಟ್ಟಿ ಭಜಿಸಬೇಕು ಧೃಷ್ಟಮನವು ನಿನ್ನ 5
--------------
ಪುರಂದರದಾಸರು
ಸಮಾಧಿಸಾಧಕಗೆಸಮಾಧಿಸಾಧಕಗೆಇವು ಎಲ್ಲಿ ಇರಬೇಕುಪಮಾತುಗಳು ಕಿವಿಯಲ್ಲಿ ಬೀಳದಿರಬೇಕುಮಹಾ ಕಠೋರ ರವಗಳು ಬೀಳದಿರಬೇಕುವಾತವೆಂಬುದು ಸುತ್ತ ಸುಳಿದಾಡದಿರಬೇಕುದುರ್ಜನರು ದೂರದಲಿರೆ ನೋಡದಲಿರಬೇಕು1ಆಕಳಿಕೆ ಆಲಸ್ಯಗಳಿಲ್ಲದಿರಬೇಕುತೇಗು ಬಿಕ್ಕಳಿಕೆ ಕಡಿಕಿಲ್ಲದಿರಬೇಕುಉಗುಳುವುದು ತೂಕಡಿಕೆ ಇವು ಇಲ್ಲದಿರಬೇಕುತಾಗುವ ಮದನಿದ್ರೆಗೆ ತವಕಿಸದಿರಬೇಕು2ಕನಸು ಸೀನು ಕಳವಳಿಕೆಗಳಿಲ್ಲದಿರಬೇಕುಜಿನುಗು ಸಂಶಯಗಳು ಜಾರುತಲಿರಬೇಕುಘನಚಿದಾನಂದನ ಘನಸುಖ ಕಾಣಬೇಕುಮನವೀ ಪರಿನಿಂದು ಮೈಮರೆತು ಇರಬೇಕು3
--------------
ಚಿದಾನಂದ ಅವಧೂತರು
ಸುಬ್ರಹ್ಮಣ್ಯ ಸ್ವಾಮಿ ತೇ ನೌಮಿ ಶರಣಾಗತರ್ಗೆನಿರ್ಭಯವ ಪಾಲಿಸು ಪ್ರೇಮಿ ಪ.ಅಭ್ರವಾಹನಾದಿದೇವ ಸಭ್ಯ ಸಂಭಾವಿತ ಜಗ-ದಭ್ಯುದಯ ತೇಜೋಮಯ ಕರ್ಬುರಾಂತಕ ನಿಶ್ಯೋಕ ಅ.ಪ.ಭಾವಭಕ್ತಿಭಾಗ್ಯಶೂನ್ಯರು ನಿನ್ನಯ ಪದಸೇವೆಗಾಲಸ್ಯವ ಮಾಳ್ಪರುಕೇವಲ ದುರ್ಜನರು ಬಾರರು ದೇವದೇವ ನಿನ್ನ ಕರು-ಣಾವಲಂಬಿಗಳನೆಲ್ಲ ಕಾವನೆ ಮಹಾನುಭಾವನೆ 1ಚಂದ್ರಸೂರ್ಯರಿರುವ ತನಕ ಸ್ಥಾನಿಕ ವಿಪ್ರ-ರಿಂದ ಪೂಜೆಗೊಳೈ ಷಣ್ಮುಖವಂದನೀಯ ಪಾರ್ವತಿಯ ನಂದನ ನಳಿನಾಯತಾಕ್ಷಇಂದುಶೇಖರಕುಮಾರ ಸ್ಕಂದನೆ ನಿತ್ಯಾನಂದನೆ 2ಪಾವಂಜಾಖ್ಯಸುಕ್ಷೇತ್ರವಾಸ ಪೊರೆಯೊ ಪರಮೇಶಕೇವಲ ವಿಜ್ಞಾನಪ್ರಕಾಶಭಾವಜೋಪಮ ಲಾವಣ್ಯ ಕೋವಿದಾಗ್ರಗಣ್ಯ ಮಹಾ-ದೇವ ಲಕ್ಷ್ಮೀನಾರಾಯಣನ ಸೇವಕ ಬುದ್ಧಿದಾಯಕ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ