ಒಟ್ಟು 84 ಕಡೆಗಳಲ್ಲಿ , 35 ದಾಸರು , 82 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ರಮಾಧವಾ ನಮಿಸುವೆ ದೇವಾ ಪವಾರಿಜೋದ್ಭವನುತಸಾರಸಗುಣಯುತಸಾರಿ ನುತಿಪೆ ದಯದೋರಿ ಸಲಹು ಹರೀಅ.ಪತೋರುವಾ ಸುಂದರ ಶಾಂತಾಕಾರವಾ ಸ್ಥೂಲಸೂಕ್ಷ್ಮ ಶರೀರವಾ ತಪಯೋಗಿ ಹೃದಯಸುಮಾ ಸಾರವಾ ನೀ ಮೆರೆವಾ ಸಾರಸಾಂಘ್ರಿಯುಗವಾಶಂಕವಾ ಉದಿದತಿ ಭಕ್ತಕಳಂಕವಾ ಮುರಿದತಿದುರುಳರ ಬಿಂಕವಾ ಭಕ್ತಜನರ ಸದೃಶಾಂಕವಾಸೇರುವಾ ಪಂಕಜಾಸನ ಪಿತನೇ ಪಾಲಿಸು ಶಂಕರಗತಿಹಿತನೇ ಭವಭಯ ಬಿಂಕವ ಬಿಡಿಸೈ ಪಂಕಜ-ಕರಯುತ ವೆಂಕಟೇಶ ಸರ್ವಾಂಕಿತ ರೂಪನೆ2ಸುಂದರಾ ವನಮಾಲ ಶೋಭಾ ಕಂದರಾಮುಖಪದ್ಮಾಕಾರ ಚಂದಿರಾ ಸದ್ಧರ್ಮಶಾಸ್ತ್ರಸ್ಮøತಿಮಂದಿರಾ ವೇದೋದ್ಧಾರಾ ಚಂದ್ರಸೂರ್ಯನಯನಾ ಕರುಣಾನಂದ ವಿಮಲಚರಣಾಮುನಿಜನವೃಂದ ವಂದ್ಯ ಚರಣಾರವಿಂದವನುಬಂದು ತೋರಿಸಿ ಗೋವಿಂದದಾಸನಪೊರೆ3xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಶ್ರೀಹರಿ ಸಂಕೀರ್ತನೆ2ಶರಣು ಹೊಕ್ಕೆನೊ ನಿನ್ನ ಜಾತರೂಪಾಂಗದವರದ ಕೈಪಿಡಿಯನ್ನಪರಮೇಷ್ಠಿವಂದಿತ |ಚರಣಸುರ ಶಿರೋರನ್ನ ಸುಖ ಜ್ಞಾನ ಪೂರ್ಣಾಪಉರಗಪರ್ವತನಿಲಯಭಕತರ ಕರೆದು |ವರಗಳ ಕೊಡುವ ವೆಂಕಟ | ಗರುಡವಾಹನಲಕ್ಷ್ಮೀಪತಿ ಮಂದರಧರಾಧರಧಾರ ದೇವ ಅ.ಪ.ಕಾಮಿತಾರ್ಥದ ರಂಗ ಮಧ್ವಮುನಿ ಪೂಜಿತ |ರಾಮ ಭವಭಯಭಂಗದಶರೂಪಿ ಶರಧಿಜಾ |ಪ್ರೇಮ ಸುಜನರ ಸಂಗ ಕೊಡು ಎಂದೆಂದಿಗೂ ||ತಾಮಸರಿಪುಕುರಂಗಾಅಂಕಸಖಸಾಂಗ |ಹೇಮಗರ್ಭನ ನಾಭೀ ಕಮಲದಿ |ನೀ ಮುದದಿ ಪಡೆದೀ ಚರಾಚರ |ನೇಮದಿಂದಲಿ ಸೃಜಿಸ ಪೇಳಿದ |ಸ್ವಾಮಿ ನೀ ಸರ್ವರೊಳು ವ್ಯಾಪಿಸಿ |ಭೂಮಿಯೊಳು ಸಾತ್ವಿಕರು ರಾಜಸ |ತಾಮಸರ ನಿರ್ಮಾಣ ಮಾಡಿ ಸು |ಧಾಮಸಖಿಗತಿ ದುರ್ಗತಿಗಳನು |ಈ ಮರುಳು ಜನರಿಗೀಯುತ |ನೀ ಮಡಿವಂತನು ಎನಿಸುವೆ ಲೇಸುತ್ರಾಮಾ ವರಜ ಬಲು ಸೋಜಿಗವೊ ಇದು |ವ್ಯೋಮನ ದೀಪದ ನೀ ಮಾಡಿದ ಮರ್ಯಾದೆಯೋಮರಳ್ಯೊಬ್ಬರು ಪೇಳುವರುಂಟೇ 1ಪುಂಡರೀಕದಳಾಕ್ಷ ತನ್ಮಾತ್ರಾ ದೂರ |ಪಾಂಡುರಂಗಘ ಕಕ್ಷಗಾಂಗೇಯಗೀತ |ಪಾಂಡುನಂದನ ಪಕ್ಷದರಚಕ್ರಪಾಣಿ |ಪುಂಡ ಕೌರವ ಶಿಕ್ಷ ಶ್ರೀವತ್ಸವಕ್ಷ |ಕುಂಡಲೀಶ ಶಯನ ವಿದುರಸಖ| ಮಾ-ರ್ತಾಂಡ ಕೋಟಿ ಪ್ರಕಾಶಹರಿವು|ದ್ದಂಡ ಮಹಿಮನೆ ಕಂಡ ಕಂಡವ |ರಂಡಲೆಯ ಯನ್ನ ಶರೀರವು ||ಬೆಂಡು ಆಯಿತು ಕಾಣೆ ಕಾಯ್ವರ |ಜಾಂಡೋದರ ನಿನ್ನುಳಿದು ಓರ್ವರ |ದಂಡಿಸದೆ ಬರುತಿಪ್ರ್ಪ ಜನ್ಮವ |ಖಂಡಿಸಿ ನಿನ್ನ ನಾಮವುಳಿಸೊ ||ಮಂಡೋದರೀವಲ್ಲಭಶಕಟ ಪ್ರ |ಚಂಡ ಮುರಾದಿಖಳಕುಲಾಂತಕ |ದಂಡಾತ್ಮಜ ರಕ್ಷಕಹರಿಮೇ |ಷಾಂಡಜ ಸಂಹರ ಕರುಣದಿ ನೋಡೋ2ಧರಣಿಯೊಳಗಿನ ರಾಯರೆಂಬುವರು ವೇಷಕಾ |ಪುರುಷನಿಗೆ ಬಹು ದ್ರವ್ಯವಿತ್ತಿನ್ನು ವೇಷವ |ತರಲಿಗೊಡರೆಲೊ ದೇಹ ಬಹು ತಾಳಿ ಬಂದೆನೊ |ಕರುಣವಿಲ್ಲದೆಜೀಯ| ಸಾಕೆನ್ನೂ ಮಾಯಾ- ||ವರನೆ ಅಟವು ಮಾತ್ರ ಹಣ ಕೊಡ- |ದಿರೊ ನಾ ಬಲ್ಲೆನೊ ಕುಡಿದ ಸ್ತನ - ಪಯ |ಶರಧಿದ್ವಿಗುಣವು ಯನ್ನ ಅಸ್ಥಿಯು |ಗಿರಿಗೆ ದ್ವಿಗುಣವಾಗಿಹ್ಯವೊ ಇಂತಿ |ಕರೆ ಕರೆಯ ನಾನಾರಿಗುಸಿರಲಿ |ಸುರಪತಿಪ್ರಾಣೇಶ ವಿಠ್ಠಲ |ತರುಣಿ ಸುತ ಧನ ಪಶು ಎಂಬುವ ಈ |ಪರಮಮೋಹದ ಮಡುವೋಳ್ಬಿದ್ದು ||ಹರಿನಿನ್ನೊಂದಿನ ಸ್ಮರಿಸಿಲ್ಲವೋ ನೀ |ನರಿಯೆ ನಿಂತ್ಯಲ್ಲವೋ ಪರತರ |ಕರಿವರದಿ ಮ್ಯಾಲೆನರಿದದು ಮಾಡುವ - |ದರಿ ಕರಿಷಂಡ ಮೃಗೇಂದ್ರ ಪರಾಶು || ಶರಣು 3
--------------
ಪ್ರಾಣೇಶದಾಸರು
ಸತ್ಯಕೆ ಶಿವನೀಗ ಮೆಚ್ಚುವಸತ್ಯವಿಲ್ಲದಿರೆ ಶಿವನೆಂತು ಒಲಿವಪಕೊಟ್ಟನಲ್ಲವೆ ಶಿಖಿಧ್ವಜ ಕೃಷ್ಣಗರ್ಧ ದೇಹವಕೊಡನೆ ಶಿಬಿಯು ಕೊಯ್ದು ಇಂದ್ರಗೆ ಮಾಂಸವಕೊಡನೆ ಚಂದ್ರಹಾಸ ಕೊರೆದು ಹೋಮ ಕಂಗವಕೊಡನೆ ಕಪೋತ ಶಿಬಿಗೆ ಶರೀರವ1ಕೊಡನೆ ಭದ್ರಾಯು ತನ್ನ ಕುಲವಧುವಕೊಡನೆ ದಧೀಚಿ ಕಲಹಕೆ ಬೆನ್ನೆಲುವಕೊಡನೆ ಶಿರಿಯಾಳನೀಗ ತನ್ನ ಮಗನಕೊಡನೆ ಕರ್ಣನೀಗಕರ್ಣಕುಂಡಲವ2ಈ ಪರಿಯ ನಿಷ್ಠೆಯಂತೋ ಆಶ್ಚರ್ಯವನೀಗಪಾಪಲೇಪಕೆ ತಾನು ಹೊರತೀಗ ಆದವಕಾ ಪಥಗಳನ್ನೆಲ್ಲಾ ಕಡೆಯ ದಾಟಿದವಭೂಪ ಚಿದಾನಂದ ಬಗಳೆ ಯಾದವ3
--------------
ಚಿದಾನಂದ ಅವಧೂತರು
ಸಿರಿಸೊಕ್ಕಿ ಮರೆಯದೆ ಮುರವೈರಿಯಮರೆಹೋಗು ಮೊರೆಯಿಡು ಮರೆಯದೆ ಮನವೆ ಪ.ಶರೀರವು ಸೆರೆಮನೆ ಸರಿಕಾಣ ಜೀವಕ್ಕೆಸಿರಿಪಂಚಶರನವಸರಕೆ ಮೆಚ್ಚಿಸಿರಿಪತಿ ಶರಣಾನುಸರಣೆ ಭಕುತಿಜ್ಞಾನಸರಕಿಲ್ಲ ಸರಿಯಿತಾಯುಷ್ಯಿರವು ವ್ಯರ್ಥಾಯಿತು 1ಸತಿಸ್ನೇಹ ಸುತಮೋಹಾಶ್ರಿತ ಜನರನು ಬೇಡಿಸ್ಯಾತನೆಯ ಸುತ್ತಿಕೊಂಡು ಶಿಥಿಲಿಪಾಗಸತಿಇಲ್ಲ ಸುತರಿಲ್ಲಾಶ್ರಿತ ಸಹಾಯವಿಲ್ಲವೈವಸ್ವತ ಭೃತ್ಯಶತಕೆ ಈಷತ್ತೂ ಕೃಪೆಯಿಲ್ಲ 2ಪುಸಿನುಡಿ ಪಿಸುಣರ ಪೆಸರಿಸದಲೆನಿತ್ಯಪ್ರಸಾದರ ಪ್ರಸಾದವ ಪ್ರಸನ್ನೀಕರಿಸೆಪೊಸತಾಪೋಪಶಮನ ಪ್ರಸನ್ನವೆಂಕಟಪತಿಯಪ್ರಸಿದ್ಧರ ಪ್ರಸರದ ಪ್ರಸಂಗದೆ ಮುಕುತಿ 3
--------------
ಪ್ರಸನ್ನವೆಂಕಟದಾಸರು
ಸುಮ್ಮನೆ ಕಾಲವ ಕಳೆವರೆ - ಯಮ - |ಧರ್ಮರಾಯನ ದೂತರೆಳೆಯರೆ ಪ.ನರಿ - ನಾಯಿ ಜನುಮವು ಬಾರದೆ - ಹಾಗೆ - |ನರಜನ್ಮದಲಿ ಬಂದು ಸೇರದೆ ||ಹರಿಯ ಸ್ಮರಣೆ ಮಾಡಲಾರದೆ - ಸುಮ್ಮ |ನಿರಲು ಪಾಪದ ವಿಷವೇರದೆ 1ಬಾಲನಾಗಿದ್ದಾಗ ಬಹುಲೀಲೆ - ಮುಂದೆ |ಲೋಲನಾಗಿ ಬಾಳಿದ ಮೇಲೆ ||ಮೂಳ ವೃದ್ಧಾಪ್ಯ ಬಂತಾಮೇಲೆ - ಇನ್ನು - |ಬಾಳುವುದೆಲ್ಲ ನೂಲಮಾಲೆ 2ಮಡದಿ - ಮಕ್ಕಳ ಕೂಡಣ ಬಾಳು - ತನ್ನ |ಒಡಲಿಗಾಗೆ ತಾನು ಕರವಾಳು ||ಬಿಡದೆ ಸಂಕೀರ್ತನೆ ಮಾಡೇಳು - ಮಿಕ್ಕ - |ನುಡಿದ ನುಡಿಗಳೆಲ್ಲವು ಬೀಳು 3ಮನೆಮನೆ ವಾರ್ತೆಯು ಸ್ಥಿರವಲ್ಲ - ಈ |ಮನುಜರ ಮಾತೇನು ಘನವಲ್ಲ ||ವನಜಸಂಭವಗೂ ನಿಶ್ಚಯವಿಲ್ಲ - ಮುಂದೆ |ಹನುಮಂತ ಪಟ್ಟಕೆ ಬಹನಲ್ಲ 4ಇಂದಿನಹಮ್ಮು ನಾಳೆಗೆ ಇಲ್ಲ -ಭವ |ಬಂಧನದೊಳು ಸಿಕ್ಕಿ ನರಳಿದೆನಲ್ಲ ||ಮುಂದನರಿತು ನಡೆದುದಿಲ್ಲ - ಮೃತ್ಯು |ಬಂದಾಗ ಬಿಡಿಸಿಕೊಳ್ಳುವರಿಲ್ಲ 5ಮರಣವುಆವಾಗ ಬರುವುದೋ - ತನ್ನ |ಶರೀರವುಆವಾಗ ಮುರಿವುದೊ ||ಕರಣಂಗಳೆಲ್ಲವು ಜರಿವುದೊ - ತನ್ನ |ಗರುವದುಬ್ಬಸವೆಲ್ಲ ಮುರಿವುದೊ 6ಮರಣಕಾಲಕೆ ಅಜಮಿಳನಾಗ - ತನ್ನ |ತರಳನನಾರಗನೆಂದು ಕರೆದಾಗ ||ಕರುಣದಿ ವೈಕುಂಠ ಪದವೀಗ -ನಿತ್ಯ - |ಪುರಂದರವಿಠಲನ ನೆನೆ ಬೇಗ 7
--------------
ಪುರಂದರದಾಸರು
ಹರಿಭಕುತಿಯುಳ್ಳವರ ಶರೀರವೆ ಕುರುಕ್ಷೇತ್ರ - ಇವರು |ನರರೆಂದು ಬಗೆವವರೆ ನರವಾಸಿಗಳು ಪ.ಸದಮಲನ ಧ್ಯಾನಿಸುವ ಹೃದಯ ಕಾಶೀಪುರವು |ಮಧುವೈರಿಗೊಲಿದ ಮನ ಮಣಿಕರ್ಣಿಕೆ ||ಪದುಮನಾಭನ ಪಾಡಿ ಪೊಗಳುವಾತನ ದಿವ್ಯ |ವದನವು ಅಯೋಧ್ಯೆ ಪುರವಾಗಿ ಇಹುದು 1ನರಹರಿಯ ನೀಕ್ಷಿಸುವ ನಯನ ದ್ವಾರಾವತಿಯು |ಹರಿಯ ನಿರ್ಮಾಲ್ಯ ವಾಸಿಪ ಮೂಗು ಮಥುರೆ ||ಕರುಣಾಕರನ ಕಥೆಯ ಕೇಳ್ವ ಕಿವಿ ಕೇದಾರ |ಸಿರಿಧರೆಗೆ ಎರಗುವಾ ಶಿರವೆ ಬದರಿ 2ಚಕ್ರಧರಗೆ ಪೋಪಚರಣ ಮಾಯಾವತಿ ತ್ರಿ - |ವಿಕ್ರಮನ ಪೂಜಿಸುವ ಕರಿವೆ ಕಂಚಿ ||ಅಕ್ರೂರಗೊಲಿದಸಿರಿ ಪುರಂದರವಿಠಲನಸತ್ಕøಪೆಯು ಉಳ್ಳವರ ಅಂಗಸಾಯುಜ್ಯವು 3
--------------
ಪುರಂದರದಾಸರು
ಹರಿಯ ನೆನೆಯಿರೋ - ನಮ್ಮಹರಿಯ ನೆನೆಯಿರೊ ಪ.ಬರದೆ ಮಾತನಾಡಿ ಬಾಯಬರಡು ಮಾಡಿ ಕೆಡಲುಬೇಡಿ ಅಪನಿತ್ಯವಿಲ್ಲದೀ ಶರೀರವ |ನಿತ್ಯವೆಂದು ನೋಡಿರಯ್ಯ ||ಹೊತ್ತು ಕಳೆಯಬೇಡಿಕಾಲ |ಮೃತ್ಯ ಬಾಹೊದೇಗಲೊ 1ಹಾಳು ಹರಟೆ ಮಾಡಿ ಮನವ |ಬೀಳು ಮಾಡಿಕೊಳ್ಳ ಬೇಡಿ ||ಏಳುದಿನದ ಕಥೆಯಕೇಳಿ |ಏಳಿರಯ್ಯ ವೈಕುಂಠಕೆ 2ಮೆಟ್ಟಿ ಪುಣ್ಯಕ್ಷೇತ್ರಗಳನು |ಸುಟ್ಟು ಹೋಹುದು ಪಾಪ ಮನ ||ಮುಟ್ಟಿ ಭಜಿಸಿರಯ್ಯಪುರಂದರವಿಠಲನಾ ಚರಣವನ್ನು 3
--------------
ಪುರಂದರದಾಸರು