ಒಟ್ಟು 189 ಕಡೆಗಳಲ್ಲಿ , 46 ದಾಸರು , 182 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಪಾಡಿದವರ ಪ್ರಾಣ ಮಾಡು ಕಾರುಣ್ಯವ ಮಾತಾಡು ಮನ್ನಿಸಿ ರೂಢಿಯೊಳಗೆ ನಿನಗೀಡುಗಾಣೆನೊ ಕರ ಪಿಡಿವ ತಾರಾಕ್ಷರೂಢ ವೆಂಕಟರಾಯ ಪ ಯೋನಿ ಮೊಗದಿಂದ ವೃದ್ಧ ಹಾನಿ ದೇಹವ ತೆತ್ತು. ನಾನು ನಿನ್ನದು ಎಂದು ಹೀನ ಮತಿಯಿಂದಪಮಾನಕೊಳಗಾಗಿ ಏನು ಕಾಣದೆ ಪಾಪ ಕಾನನದೊಳು ಬಿದ್ದು ಙÁ್ಞನರಹಿತನಾದೆ ಕಾಣೆ ಲಾಭಕೆ ಮದ್ದು- ನೀಯಳ ಕಳಕೊಂಡ ಮಾನವನಂತೆ ನಿತ್ರಾಣಗೆಟ್ಟೆನೊ ಈ ಕ್ಷೋಣಿಯೊಳಗೆ ಪುಟ್ಟಿದಾಗ ವಿನೋದಿಯೆ ನೀನೆ ಗತಿ ಎಂದು 1 ನಿತ್ಯ ನಿನ್ನ ನಂಬಿದೆ ಬೆಚ್ಚಿಸಲಾರೆ ಬಲು ಅರ್ಚನೆ ಬಗೆಯಿಂದ ಮುಚ್ಚಿದಾವರ್ಕ ದೇಹ ಬಿಚ್ಚಿಯಿಟ್ಟು ದೇವಾ ಅಚ್ಚನಾಗ್ರಹದಿಂದ ಅಚ್ಯುತಾ ಶರಣೆಂದು ಅಚ್ಯುತಾ ಅಚ್ಯುತಾ ಚಚ್ಚರಾ ನಾಮಗಳುಚ್ಚರಿಸುವ ಧ್ಯಾನ ಬಿಚ್ಚದೆ ಒದಗಲಿ ಇಚ್ಛಾಕ ಮೂರುತಿ 2 ಧನ್ಯ ಸ್ವಾಮಿ ಕಾಸಾರಾಪುಣ್ಯ ಕಾನನವಾಸಾರಣ್ಯಗಳೆಲ್ಲಾದಿ ಅಲ್ಲ ನಿನ್ನ ಭಕ್ತರ ಕುಲಕೆ ಮಾನ್ಯರಹಿತನೆ ತಾ- ಮದನ ಲಾ- ವಣ್ಯ ಕ್ಷೀರವಾರಿಧಿ ಕನ್ಯ ಭೂ ಸತಿಪತಿ ಶೂನ್ಯ ನೀನೆಲೊ ದುರಿತಾ- ಸಿರಿ ವಿಜಯವಿಠ್ಠಲ ಹಿ- ರಣ್ಯೋದರ ಪಿತ ಸನ್ಯಾಯದಿಂದಲಿ 3
--------------
ವಿಜಯದಾಸ
ನಿನಗೇನಾಯಚ್ಚರಿಲ್ಲೋ|ಕೇಳಾತ್ಮಾ| ಪಾದ ಭಕುತಿಯ ತೊರೆದಿಪ ನಾನಾ ಯೋನಿಯಲಿ ತೊಳಲಿ | ಭವದು:ಖ | ಕಾನನದಲಿ ಬಳಲಿ | ಮಾನವ ಜನುಮ ಬಂದು ಹರಿ ಹರಿ1 ವಿಷಯ ಸುಖವ ಬೆರೆದು | ಬೇಕಾದ | ಸ್ವಸುಖವನೆಗಳದು | ಅಶನ ವ್ಯಸನದಲಿ ಪಶುವಿನ ಪರಿಯಲಿ | ನಿಶಿದಿನವನುಗಳೆದೇ ಹರಿ ಹರಿ2 ಸಾಧು ಸಂಗಕತ್ಯಗಳೀ | ಕುಜನರಾ | ಹಾದಿಯಿಂದಲಿ ಮರಳೀ | ಸಾದರ ವಿವೇಕ ದೀಪ ಮನೆಯೊಳಿಟ್ಟು | ಸಾಧಿಸೋ ನಿಜ ಘನವಾ ಹರಿ ಹರಿ3 ಅರಗಳಿಗೆಯ ನೋಡಲು ಶ್ರೀಹರಿ | ಸ್ಮರಿಸದೆ ತಾ ನಿರಲು | ಕರೆದು ವಡಿಯ ನಿನ್ನ ತನು ಲೇಶವ ಕೇಳಲು | ತೆರಗಾಣಿ ನುಡಿಗಳಿಗೇ ಹರಿ ಹರಿ4 ಹಿಂದಾದ ಮತಿಗಳಿಯೋ ಇನ್ನಾರೆ | ಪಥ ವರಿಯೋ | ಭವ | ಬಂದಗೆಲಿದು ಸುಖಿಸೋ ಹರಿ ಹರಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀನು ಸರ್ವಜ್ಞನಾಗಿರಲು ನಿನ್ನಲಿ ಜನರು ಜಾಣತನ ತೋರಲಾಗುವುದೆ ಪವಮಾನ ಪ ಪ್ರಾಣಪತೇ ನಿನ್ನೊಲುಮೆ ಪಡೆದು ಸುಜನರು ದಿವ್ಯ ಸ್ಥಾನಗಳ ಪೊಂದಿ ಇಹಪರದಿ ಸುಖಿಸುವರು ಅ.ಪ ಧರ್ಮಯೋನಿಯ ಶಾಸನಗಳ ಸಂರಕ್ಷಣೆಯ ಕರ್ಮ ನಿನಗಲ್ಲದನ್ಯರಿಗೆ ತರವೆ ಕಿಮ್ಮೀರ ಕೀಚಕ ಜರಾಸಂಧ ಮೊದಲಾದ ಧರ್ಮಘಾತಕರ ಸದೆ ಬಡಿದ ಬಲಭೀಮ 1 ಜ್ಯೇóಷ್ಠನೆಂಬುವ ಮಮತೆ ತೊರೆದು ಧೈರ್ಯದಲಿ ಧೃತ ರಾಷ್ಟ್ರನಿಗೆ ಕಿಲುಬು ಕಾಸನು ಕೊಡದೆಲೆ ಭಾಗವತ ಧರ್ಮಗಳ ಹಂಚುವ ಹರಿಗೆ ಪ್ರೇಷ್ಟತಮ ನೀನಲ್ಲದನ್ಯರಾರಿಹರೊ 2 ನಿನ್ನ ಮತವೇ ಸಿರಿಯರಮಣನಿಗೆ ಸಮ್ಮತವು ನಿನ್ನ ದಯವೇ ಸಾಧು ಜನಕೆ ಅಭಯ ನಿನ್ನ ಮಾರ್ಗವ ನಂಬಿ ಧನ್ಯರಾಗುವರಲಿ ಪ್ರ ಸನ್ನನಾಗುವ ಹನುಮ ಭೀಮ ಮಧ್ವೇಶ 3
--------------
ವಿದ್ಯಾಪ್ರಸನ್ನತೀರ್ಥರು
ನೀನೇ ನಿನ್ನ ಮರೆದಿಹುದೇನು ಮನವೇ | ಸುಜ್ಞಾನದಿಂದ ನಿಜವನೀ ನರಿಯಲಿಲ್ಲವೇ ಪ ಶ್ವಾನ ಸೂಕರಾದಿ ಅತಿ ಹೀನ ಯೋನಿಯಲಿ ಸುಖದೊಳು | ನಾನಾ ಪರಿಯಲಿ ಬಾಹುದೇನು ಅನುವೇ 1 ಹರಿವ ಮೃಗಜಲಕ ಬೆಂಬತ್ತಿ ಪೋಪಾ ಹರಿಣನಂತೆ | ಹರಿದು ವಿಷಯ ಕೂಡಾ ಕೆಡುದೇನು ಗುಣವೇ 2 ನಿನ್ನ ಬಯಕೆಯಂತಾದಡೆ ಮನ್ನಿಸುವ ಅಲ್ಲದಡೆ | ಘನ್ನ ಚಿಂತೆಯೊಳು ಬೀಳುತಿಹುದೇನು ಸುಖವೇ 4 ನೆನೆದು ತರಿಸು ಮಹಿಪತಿ ಚರಣಾ ಚಿನ್ನ ಕೃಷ್ಣ ನಾ | ತನುವಿನೊಳಗಾಡುತಿಹ ನಿಜ ಮನವೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀನೇನು ಮಾಡಲಾಪೆನಾನು ಮುನ್ನ ಜನ್ಮ ಪಡೆದಲ್ಲದೆ ರಂಗ ಪ ಯೋನಿ ಮುಖದಲಿ ಬಾಹಹೀನತ್ವವನು ನೀನು ಕಳೆಯಲಾಪೆಯನಾನು ನನ್ನದು ಎಂಬ ಅಹಂಕಾರವಿರೆ ನಿನ್ನಧ್ಯಾನಿಸಲು ಬುದ್ಧಿಯ ಕೊಡಲಾಪೆಯ 1 ಸಂಚಿತವಾಗಿರುವ ಪ್ರಾರಬ್ಧದೊಳಗೊಂದುಕಿಂಚಿತಾದರೂ ನೀನು ಕಳೆಯಲಾಪೆಯಪಂಚೇಂದ್ರಿಯಂಗಳು ದೆಸೆದೆಸೆಗೆ ಎಳೆದಾಗವಂಚನೆ ಇಲ್ಲದೆ ನೀನಡ್ಡ ಬರಲಾಪೆಯ2 ಸರಸಿಜೋದ್ಭವಗೆ ಬುದ್ಧಿಯ ಪೇಳಿ ಪಣೆಯೊಳುಬರೆದ ಬರೆಹವನು ನೀನು ತೊಡೆಯಲಾಪೆಯಪರಬ್ರಹ್ಮ ಕಾಗಿನೆಲೆಯಾದಿಕೇಶವ ನಿನ್ನಸ್ಮರಣೆಗೈಯಲು ಕಾಯದಿರಲಾಪೆಯ 3
--------------
ಕನಕದಾಸ
ನೀನೊಲಿಯಬೇಕು ನೀನೊಲಿಯಬೇಕು 'ಜ್ಞಾನ'ೀನನಿಗೆ ನಿತ್ಯಾನಂದ ಮೂರುತಿಯೆ ವಾಸುದೇವಾರ್ಯ ಪನರಳಿ ಬಹುಭವದಿ ನಾನಾ ಯೋನಿಮುಖಗಳಿಂದುರುಳಿ ಕೋಟಲೆಗೊಂಡು ಪುಳು ಪಕ್ಷಿ ಪಶು ಜಲಜತರು ಶಿಲೆಗಳೆನಿಪ ಹಲವಲಿ ನವೆಸವೆದು ಸ್ತ್ರೀಪುರುಷತ್ವ ಭೇದವಹ ನರಜನುಮ ಬಹರೆ 1ಪುರುಷನೆನಿಸಿದರು ಪಾದೋರು ಬಾಹುಜ ಭೇದವರಿತು 'ಪ್ರತ್ವ 'ದ್ಯಾ ನಯ 'ಜ್ಞಾನಶರಧಿಯೆನಿಸುವ ಭಾಗ್ಯ ಬರುವ ಸಾಧನಗಳನುಕರುಣಿಸುವ ಪರಮೇಶನೊಲಿವಂತೆನಗೆ 2'ವೃತ ಫಲವಹ ಸಶಾಸ್ತ್ರ ನಿಗಮಾಧೀತಿಯೊಪ್ಪದಿತದುಕ್ತ ಕರ್ಮಾಚರಣೆಗೈಯುತ ಸಮರ್ಪಿಸುತ್ತೀಶ್ವರಗೆ ತತ್ಫಲವ ಬಯಸದೆತೆಪ್ಪಗಿರುವಧಿಕಾರಿಯಪ್ಪ ಸತ್ಪಥಕೆ3ಶೃತಿಯುಕ್ತಿ ಸ್ವಾನುಭವಗಳ ಬಲದಿ ಮನನಗೈಯುತಲಿ ನಿತ್ಯಾನಿತ್ಯ ವಸ್ತುಗಳ ತಿಳಿದನರ್ಥತೆಯರ್ಥಗಳೊಳು ವೈರಾಗ್ಯ ಭಾಗ್ಯವನೀವಮತಿ ಬಂದು ಭಕತಿ ಜ್ಞಾನಗಳಳವಡುವರೆ 4ಬಂದ ವೈರಾಗ್ಯ ನೆಲೆಗೊಂಡು ಬಳಸಿದ ಕ್ರಿಯಾದಂದುಗವು ಸಡಿಲಿ ಬ'ರಂಗ ವ್ಯಾಪಿಸಿ ಕನಸೆಂದು ಕಾಣುತಲೂಡಲುಣುತಲುಡಿಸಿದರುಡುತತಿಂದು ತೇಗುವ ಕರ್ಮ ಬೆಂದು ಸುಖಿಯಹರೆ 5ಹೊರಗೊಳಗುಗಾಣದಾಗಸದಂತೆ ಬಯಲಾಗಿಕರಣಗಳ ಕಾಲಾಟವುಡುಗಿ ಸ್ವ ವ್ಯತಿರಿಕ್ತವರಸಿದರು ಸಂತೃಪ್ತಿ ತೋರದೆ ಸ್ವಾನುಭವಬರಿಯರಿವೆ ನೆಲೆಯಾಗಿ ತಾನೆ ತಾನಹರೆ 6ನಿಂತವೇದಾಂತ ಪದ್ಧತಿಯ ನಿಲಿಸುವರೆ ಮೊದಲಂತೆ ಕೃಷ್ಣಾವತಾರದಿ ಪಾರ್ಥಗೊರೆದ ಕೃಪೆವಂತ ನೀ ಮರಳಿ ಚಿಕನಾಗಪುರದಲಿ ಹೊಳೆದನಂತಮ'ಮನಾಗಿರುವೆ ವಾಸುದೇವಾರ್ಯ 7
--------------
ತಿಮ್ಮಪ್ಪದಾಸರು
ನೀರೆ ತೋರೆಲೆ ಜಗಪಾಲ ಮುಕುಂದನಾ| ಶೂಲಧರನ ಮಿತ್ರನಾ ಪ ಪಾಂಡವರಕ್ಷಕನಾ|ಪುಂಡಲೀಕಾಕ್ಷನಾ| ಚಂಡಕೋಟಿ ಪ್ರಕಾಶನಾ|| ಕುಂಡಲ ವಿಭೂಷಿತ ಗಂಡಸತ್ಕಪೋಲನಾ| ಪುಂಡಲೀಕಗತಿವರದನ ನಂದಕಿಶೋರನ1 ಪರಮ ವರಪುರಾಣ ಪುರುಷೋತ್ತಮನಾ| ಕಂಸಾಸುರ ಮರ್ದನ ಗೋಪಾಲನಾ|| ಉರಗಾರಿ ಗಮನನಾ ನಿರುಪಮ ಚರಿತನಾ| ವಾಸುದೇವ ಮುಕುಂದನಾ2 ಸನಕ ಸನಂದನಮುನಿ ಮಾನಸ ಹಂಸನಾ| ಅನುಪಮ್ಯನಂತ ಮಹಿಮಾ|| ವನರುಹ ಯೋನಿವಂದ್ಯನ ಮಧು ಸೂಧನ| ಘನಗುರು ಮಹಿಪತಿ ಸುತಪ್ರಭು ಶ್ರೀ ಕೃಷ್ಣನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರೇ ತೋರೇ ಪಯೋನಿಧಿ ವಾಸನಾ| ನೀರ ಜಾಸನಾನಂತ ಸರ್ವೇಶನಾ ಪ ಹಸ್ತ ವರದನ ಹರಿಮಧುಸೂದನ| ಹಸ್ತಿ ವಾಹಜನ ಸೂತಾದನಾ 1 ಕರಿಯೇರಿದಾತನ ಶರಕುರುವಾತನ| ಕರಿಹರ ಸಖ ಸನಾತನಾ 2 ಅನಂತ ಮಹಿಮ ಕೇಶವ ಮುಕುಂದನ| ಅನಂತ ಶಯನ ಗೋವಿಂದನಾ 3 ಮಕರ ಧ್ವಜ ಪಿತನ ಪರಮಾನಂದನ| ಮಕರ ಧ್ವಜ ಪಿತ ವಂದ್ಯನಾ4 ತಂದೆ ಮಹಿಪತಿ ನಂದನ ಜೀವನ| ಹೊಂದಿದವರ ಕಾವಾ ದೇವನಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೊಂದೆ ನಾ ಹರಿಯೆನ್ನದೆ ಪ ವೈರಿ ಷಡ್ವರ್ಗದಾಟಗಳಿಂದ ನೊಂದೆ ನಾ ಹರಿಯೆನ್ನದೆ ಅ ಮಾಸ ತಾಯುದರದಲಿಸಂದೇಹವಿಲ್ಲ ನವಮಾಸ ಮಲ ಮೂತ್ರದೊಳುಒಂದಾಗಿ ನಿಂದು ಕುದಿಕುದಿದು ಹುಟ್ಟಿಬಂದೆ ಎಂಬತ್ತು ನಾಲುಕು ಲಕ್ಷ ಯೋನಿಯೊಳುನೊಂದೆ ಮುನ್ನೂರ ಅರವತ್ತು ಬೇನೆಗಳಿಂದಒಂದು ಕ್ಷಣವೂ ಯಮನ ಬಾಧೆ ತಾಳಲಾರೆನುಹಿಂದೆಗೆಯದಿರು ಇಂಬಿತ್ತು ಕಾಯೊ ಮುರಾರಿ 1 ಎಲುವುಗಳ ಗಳ ಮಾಡಿ ಬಲು ನರಂಗಳ ಬಿಗಿದುಚೆಲುವ ತೊಗಲಂ ಪೊದಿಸಿ ಮಜ್ಜೆ ಮಾಂಸವ ತುಂಬಿಹೊಲೆ ಗೂಡಿನೊಳು ಪೊಗಿಸಿ ತಲೆ ಹುಳಕ ನಾಯಂತೆಅಲೆದು ಮನೆಮನೆಯೆದುರು ಉಚ್ಚಿಷ್ಟವನು ತಿಂದುಕಳವು ಹಾದರ ಪಂಚಪಾತಕಂಗಳ ಮಾಡಿನೆಲೆಯಿಲ್ಲದಧಿಕತರ ನರಕದೊಳಗಾಳ್ದೆನೈಒಲಿದು ಬಂದು ರಕ್ಷಿಸು ನಾಗವೈರಿ ವಾಹನನೆನಳಿನ ಲೋಚನನೆ ನೀ ಎನ್ನ ಕೈ ಬಿಡದೆ 2 ಹುಟ್ಟುವಾಗಲೆ ಜಾತಕರ್ಮ ಷೋಡಶವೆಂಬಕಟ್ಟಳೆಯ ದಿವಸದಲಿ ನಂಟರಿಷ್ಟರು ಕೂಡಿಕಟ್ಟಿ ಮುಂಜಿಯ, ಹರುಷದಲಿ ಮದುವೆ ಮಾಡಿ ಉಂ-ಡುಟ್ಟು ಹಾಡಿ ಹರಸಿದರು ನೂರ್ಕಾಲ ಬದುಕೆಂದುಬಿಟ್ಟು ಪ್ರಾಣಂ ಪೋಗೆ ಪೆಣನೆಂದು ಮೂಲೆಯೊಳುಕಟ್ಟಿ ಕುಳ್ಳಿರಿಸಿ ಹೊಟ್ಟೆಯ ಹೊಯ್ದುಕೊಂಡಳುತಸುಟ್ಟು ಸುಡುಗಾಡಿನಲಿ ಪಿಂಡಗಳನಿಕ್ಕಿ ಬಲುಕಟ್ಟಳೆಯ ಕಾಣಿಸಿದರಯ್ಯ ಹರಿಯೆ 3 ಹಲವು ಜನುಮದಿ ತಾಯಿ ಎನಗಿತ್ತ ಮೊಲೆಹಾಲುನಲಿನಲಿದು ಉಂಬಾಗ ನೆಲಕೆ ಬಿದ್ದುದ ಕೂಡಿಅಳೆದು ನೋಡಿದರೆ ಕ್ಷೀರಾಂಬುಧಿಗೆ ಎರಡು ಮಡಿಹಲವಾರು ಸಲ ಅತ್ತ ಅಶ್ರುಜಲವನು ಕೂಡಿಅಳೆದು ನೋಡಿದರೆ ಲವಣಾರ್ಣವಕೆ ಮೂರು ಮಡಿಎಲುವುಗಳ ಕೂಡಿದರೆ ಮೇರುವಿಗೆ ನಾಲ್ಕು ಮಡಿಸುಲಿದು ಚರ್ಮವ ಹಾಸಿದರೆ ಧರೆಗೆ ಐದು ಮಡಿನೆಲೆ ಯಾವುದೀ ದೇಹಕೆ ನರಹರಿಯೆ4 ಸತಿ ಇಂದು ಕಾಯ್ವರದಾರುದಂದುಗವನಿದನೆಲ್ಲ ನೀಬಲ್ಲೆ ನಾನರಿಯೆತಂದೆ ನೆಲೆಯಾದಿಕೇಶವನೆ ನಿನ್ನಯ ಪಾದದ್ವಂದ್ವವನು ಎಂದಿಗೂ ಬಿಡೆನು ಬಿಡೆನೊ 5
--------------
ಕನಕದಾಸ
ಪಂಡರಿಯ ಪುರನಾಥ | ಭಕುತರ ದಾತಾ | ಅಂಡಲೆದು ಜನುಮಗಳ | ಬೆಂಡಾದೆ ಹರಿಯೇ ಪ ಸೂಕರ ಖರದ | ಹೇನು ಹಕ್ಕಿಯ ಮೃಗದಯೋನಿ ಯೋನಿಯ ಚರಿಸಿ | ಬೇನೆಗ್ವೊಳಗಾದೇಮಾನನಿಧಿ ಕಾರುಣ್ಯ | ವೇನ ಬಣ್ಣಿಪೆನಯ್ಯಮಾನವನ ಮಾಡೆನ್ನ | ನೀನಾಗಿ ಪೊರೆದೇ 1 ಕರ್ಮ ಕೋಟಿಗಳಲ್ಲಿ | ಮರ್ಮಗಳ ಮರೆತಲ್ಲಿಒಮ್ಮನದಿ ಸೂತ್ರಗಳ ತದ್ಭಾಷ್ಯಂಗಳಾ ||ಪೇರ್ಮೆಯಲಿ ನೋಡದಲೆ | ಕರ್ಮಚರಿಸಿದೆನಲ್ಲೆಭರ್ಮ ಗರ್ಭನನಯ್ಯ | ನಿರ್ಮಮನ ಮಾಡಯ್ಯ 2 ಸಕಲ ಶಾಸ್ತ್ರಾರ್ಥಗಳ | ಸಕಲ ಸಾರನೆ ಅಖಳಭಕುತ ಜನ ಸಂಸೇವ್ಯ | ಮಧ್ವಮುನಿ ವಂದ್ಯ ||ಸಕಲಾತ್ಮಕನೆ ಗುರು | ಗೋವಿಂದ ವಿಠಲಯ್ಯಸಕಲಕೂ ನೀನೇ ಚೇ | ಷ್ಟಕನೆಂದು ತಿಳಿಸೊ3
--------------
ಗುರುಗೋವಿಂದವಿಠಲರು
ಪದ್ಮನಾಭ ಮುದ್ದು ಪದ್ಮನಾಭ ಸಿರಿ ಪದ್ಮನಾಭಪ ನಾನಾಯೋನಿಗಳಲ್ಲಿ ಜನಿಸಿ ಪದ್ಮನಾಭ ನಾನಾಕ್ಲೇಶಗಳಿಂದ ಬಳಲಿ ಪದ್ಮನಾಭ ನಾ ನಿನ್ನನು ಸ್ಮರಿಸದ್ಹೋದೆ ಪದ್ಮನಾಭ ಪದ್ಮನಾಭ 1 ಪದ್ಮನಾಭ ನಿನ್ನ ನಂಬಿದ ಭಕ್ತರೊಳಿರಿಸಿ ಪದ್ಮನಾಭ ಪದ್ಮನಾಭ ಪೀ- ಪದ್ಮನಾಭ 2 ಪದ್ಮನಾಭ ಅ- ಪಾವಕ ಪದ್ಮನಾಭ ಶ್ರೀಕಾಂತನೀ ಸಲಹಬೇಕೊ ಪದ್ಮನಾಭ ಪದ್ಮನಾಭ 3 ಪದ್ಮನಾಭ ಗೋ- ವಿಂದ ರಕ್ಷಿಸೆಂದು ಸ್ಮರಿಸೆ ಪದ್ಮನಾಭ ಪದ್ಮನಾಭ ಮು- ಪದ್ಮನಾಭ 4 ಮಡುವಿನಲ್ಲಿ ಗಜವ ಕಾಯ್ದೆ ಪದ್ಮನಾಭ ದೃಢ ಪ್ರಹ್ಲಾದಗೆ ಅಭಯವಿತ್ತೆ ಪದ್ಮನಾಭ ಮಡದಿ ನುಡಿಯ ಕೇಳಿ ತ್ವರದಿ ಪದ್ಮನಾಭ ಅಡವಿಯಲ್ಲಿ ಅಭಿಮಾನವ ಕಾಯ್ದೆ ಪದ್ಮನಾಭ5 ವಂದಿಪೆ ಮುಚುಕುಂದ ವರದ ಪದ್ಮನಾಭ ವಂದಿಪೆ ಗಜರಾಜ ವರದ ಪದ್ಮನಾಭ ವಂದಿಪೆ ಉರಗಾದ್ರಿವಾಸ ಪದ್ಮನಾಭ ಪದ್ಮನಾಭ 6 ಪದ್ಮನಾಭ ಶ್ರಮ ಪರಿಹರಿಸು ನಮಿಪೆ ದೇವ ಪದ್ಮನಾಭ ಕಮಲ ಸಂಭವನನ್ನು ಪಡೆದ ಪದ್ಮನಾಭಕಮಲನಾಭ ವಿಠ್ಠಲ ಕಾಯೋ ಪದ್ಮನಾಭ7
--------------
ನಿಡಗುರುಕಿ ಜೀವೂಬಾಯಿ
ಪನ್ನಗಾಚಲ ವಾಸ - ಪದುಮಿನೀಶಾ ಪ ಬನ್ನ ಬಡಿಸುವ ರೋಗವನ್ನು ಕಳೆ ಶ್ರೀಶಾ ಅ.ಪ. ತನುವ ರಥವನೆ ಮಾಡಿ ತತ್ಸೂತ ನೀನೆನಿಸೀಮನ ಆದಿ ಕರಣವೆಂಬಶ್ವಗಳ ಬಿಗಿಸೀ ||ಗುಣವೆನಿಪ ವಾಗಭಿ - ಮಾನಿಯನೆ ಬಂಧಿಸೀಚನ್ನ ರಥವನು ಚರಿಪೆ ಜೀ | ವನ್ನ ಕುಳ್ಳಿರಿಸೀ 1 ಸೂತ್ರಾಂತರಾತ್ಮಕನೆ | ಸೂತ್ರಧಾರಿಯೆ ನೀನುಮಾತ್ರಾದಿ ಸುಖ ದುಃಖ | ಸಮವೆಂದು ತಿಳಿಸೋ ||ಧಾತೃ ಪಿತ ನೀನಹುದೊ | ಮಾತರಿಶ್ವ ಪ್ರಿಯನೆಗಾತ್ರ ಬಳಲಿಸ ಬೇಡ | ಪ್ರಾರ್ಥಿಸುವ ನಿನ್ನಾ 2 ಘನ್ನ ಮಹಿಮನೆ ನಿನ್ನ | ಏನು ಬೇಡಲಿ ನಾನುನಿನ್ನ ನಾಮ ಸ್ಮರಣೆ | ಅನ್ನಂತ ವೀಯೋನಿನ್ನೊಲಿಮೆ ಉಳ್ಳನಕ | ಇನ್ಯಾವ ಭಯವಯ್ಯಪನ್ನಂಗ ಶಯನ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಪರಬೊಮ್ಮನ ಧ್ಯಾನಿಸು ಕಂಡ್ಯಾ ಸೋಹಂ ಎನುತಿರಕಂಡ್ಯಾ ಪ ಒಂದು ನಿಮಿಷ ಸುಖವಿಲ್ಲ ವಿಧಿ ಏಳೇಳೆಂದು ಎಳೆವರಲ್ಲ ಗೋವಿಂದನೆ ತಾ ಬಲ್ಲ 1 ಯೋನಿಯೊಳಗೆ ಜನಿಸಿ ನಾನದನೆಲ್ಲವ ನುಳಿದು ಈಗಳು ನರಮಾನವನೆಂದೆನಿಸಿ ಏನೋ ಪುಣ್ಯದಿ ಪುಟ್ಟಿದೆ ನಿಲ್ಲಿ ನಿಧಾನದಿ ಸಂಚರಿಸಿ ಆನಂದ ಮಯನೆನಿಸಿ 2 ಎಲ್ಲಾ ಜನ್ಮದೊಳ್ಳಿತು ನೀನಿದರಲ್ಲಿ ಸಾಧಿಸುಗತಿಯಾ ಹೊಲ್ಲದ ತನುವಿದ ನಂಬಿ ನೀ ಕೆಡದಿರು ಪೊಳ್ಳೆ ನಿನಗೆ ತಿಳಿಯ ಬಲ್ಲಡೆ ಜಿಹ್ವೆಯೊಳಗೆ ನೀ ನಿರಂತರ ಸೊಲ್ಲಿಸು ಶ್ರೀಹರಿಯ ಲಕ್ಷ್ಮೀನಲ್ಲನ ಪೋಗು ಮರೆಯ 3
--------------
ಕವಿ ಪರಮದೇವದಾಸರು
ಪರಿ ಪೋಷಕ ತ್ವಂ ಪ ಮಾ ಕಮಲಾಸ ದಿವೌಕಸ ಪ್ರೇರಕ ಏಕಮೇವ ಜಗದಾಧಾರಕಾ 1 ಅನಿರುದ್ಧ ಮುಕುಂದಾ 2 ನಾಭಿ ಪದ್ಮ ಸುನಿಕೇತನ ಪ್ರದ್ಯುಮ್ನಾಭಿಧ ಷಣ್ಮಹಿಷಿಯರರಸಾ 3 ಅಷ್ಠ ದಳಗಳಲಿ ವಸುದಿಕ್ಷತಗಳಅಷ್ಟ ನಿಯಂತ ಸಂಕರುಷಣನೇ 4 ಎರಡು ದಶವು ದಳ ಸರಸಿವಾಸನೆಎರಡಾರರ್ಕರ ನಿಯಾಮಕ ಹರಿಯೆ 5 ಎರಡೆಂಟರ ದಳ ಇಂದ್ರ ಯೋನಿಯಲಿಉರಗೇಶಣ ನಾರಾಯಣನೇ 6 ಖಗ ವಾಹನನೇ 7 ಪದುಮ ಸಾಸಿರ ದಳ ವಸನೆ ಈಶಾಪದುಮಜ ಪೋಷಕ ವಾಸುದೇವಾ 8 ಸಪುತ ಚಕ್ರದಲಿ ವ್ಯಾಪಿಸಿ ಪೊರೆಯುವಖಪತಿಗಮನ ಗುರು ಗೋವಿಂದ ವಿಠಲಾ 9
--------------
ಗುರುಗೋವಿಂದವಿಠಲರು
ಪವಮಾನವಿಠಲ | ಕಾಪಾಡೊ ಇವನಾ ಪ ಭುವಿ ಭವ್ಯ ಮರುತಮತ | ದೀಕ್ಷೆಯುಳ್ಳವನಾ ಅ.ಪ. ಭಾವಿಮಾರುತರ ದಿವ್ಯ | ಪಾದಗಳನಾಶ್ರಯಿಸಿದೇವ ಗುಹ್ಯವು ಎಂಬ | ಆಖ್ಯಾನ ಪಠಿಸೀಭಾವಭಕ್ತಿಯಲಿಂದ | ಪೂರಿತನು ತಾನಾಗಿಧಾವಿಸಿ ಬಂದಿಹನೊ | ಎನ್ನ ಬಳಿಗಾಗಿ1 ಗುರುವನುಗ್ರಹ ಪಡೆದು | ಗುರುದತ್ತ ಅಂಕಿತವನೆರವಿನಾ ಸಾಧನವ | ವಿರಚಿಸಲು ಮಾರ್ಗಅರಿಯದಲೆ ಪ್ರಾರ್ಥಿಸುವ | ಕರುಣಪಯೋನಿಧಿಯೇಪೊರೆಯ ಬೇಕಿವನ ಪರಿಯ | ಮರುತಾಂತರಾತ್ಮ 2 ತರತಮಜ್ಞಾನವನು | ಹರಿಗುರು ಸದ್ಭಕ್ತಿಪರಿಪರಿಯಲಿಂ ವೃದ್ಧಿ | ಗೈಸಿವಗೆ ಹರಿಯೇಗುರು ಕರುಣ ಕವಚದಿಂ | ಹರಿಯ ಸರ್ವೊತ್ತಮತೆಅರಿವಾಗಲಿವಗೆಂದು | ಪ್ರಾರ್ಥಿಸುವೆ ಹರಿಯೆ 3 ಮೂರ್ತಿ | ಕೃತಿರಮಣ ದೇವ 4 ಮಧ್ವ ರಮಣನೆ ದೇವ | ಹೃದ್ಯ ಹರಿ ನಿನಕಾಂಬಹೃದ್ಯ ಸಾಧನ ಗೈಸಿ | ಉದ್ದರಿಸೊ ಇದನಾಶುದ್ಧ ಮೂರುತಿ ಗುರು | ಗೋವಿಂದ ವಿಠಲನೆಬುದ್ಧಿಯಲಿ ನೀನಿಂತು | ಶುದ್ಧ ಮತಿ ಈಯೋ 5
--------------
ಗುರುಗೋವಿಂದವಿಠಲರು