ಪಾಪಿಯೆಂದೆನಲು ನಾ ತಗ್ಗೆ ಪುಣ್ಯ
ರೂಪಿಯೆಂದೆನಲು ನಾ ಹಿಗ್ಗೆ
ವ್ಯಾಪಿಸಿ ನೀ ಎನ್ನ ಕುಣಿಸಿದ ಮೇಲೆ ನಿ
ಪರಿ ಜನರೆನ್ನ ಪ
ನಡೆಸಿದಂತೆ ನಾ ನಡೆವೆ
ಉಡಿಸಿದಂತೆ ನಾನುಡುವೆ ನೀ
ತೊಡಿಸಿದಂತೆ ನಾ ತೊಡುವೆ ಎ
ನ್ನೊಡೆಯ ಸೂತ್ರಧಾರ ನೀನೆಂದರಿಯದೆ
ಪೊಡವಿ ಜನರು ಬಾಯಿ ಬಡಿಕ ತನದೊಳೆನ್ನ 1
ಬಿಂಬಕ್ಕೆ ಸ್ವತಂತ್ರವೇನು ತುತ್ತು
ಗೊಂಬಾತ ಉಂಬಾತ ನೀನು
ಗೊಂಬೆಯಂತಿರಲದಕೇನು ಬರಿಯ
ಹಂಬಲಿಪರು ಬರಿ ಕುಂಭಿನಿ ಜನರೆನ್ನ 2
ಭಾಗ್ಯವುಂಟೆಂದು ನಾ ಮೆರೆಯೆ ವೈ
ರಾಗ್ಯವುಂಟೆಂದು ನಾ ಜರಿಯೆ
ಯೋಗಿಗಳಿಗೆ ನಾ ಸರಿಯೇ ಯಾ
ವಾಗಲು ನಡಿಸಿದ ಪರಿಯೆ
ಈಗ ಕಾಯದ ಬರಿಯ ಡಂಬವ ಕಂಡು
ಭಾಗ್ಯವಂತನೆಂದು ಜನರು ಕೊಂಡಾಡಲು 3
ಬರಿಯ ಸುಖವ ನಾ ತೊಟ್ಟೆ ಸರ್ವ
ಸಿರಿಯ ಹೆಡತಲೆಯೊಳಿಟ್ಟೆ
ಅರಿತರಿತು ಮಾಯದ ಲೊಟ್ಟೆ ಕಂಡು
ಬೆರಗಾಗಿ ನಂಬಿ ನಾ ಕೆಟ್ಟೆ
ಗುರು ವಿಮಲಾನಂದವರ ಮಾಂಗೀರೀಶನು
ಇರಿಸಿದ್ಹಾಗೆ ನಾನಿರಬೇಕಲ್ಲದೆ4