ಒಟ್ಟು 1653 ಕಡೆಗಳಲ್ಲಿ , 102 ದಾಸರು , 1334 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರುಣೋದಯಕೆ ಮುಂಚೆ ಬಲು ಕತ್ತಲಂತೆ ಪ ಸಿರಿ ಬರುವುದಕೆ ಮುಂಚೆ ಮುಖ ಸುತ್ತು ಜನಕೆ ಅ.ಪ ಹೊಟ್ಟಿ ಹಸಿದರೆ ಅನ್ನ ಬಹಳ ರುಚಿಯಂತೆ ಕೆಟ್ಟು ಬದುಕುವ ಮನುಜ ಬಲು ಘಟ್ಟಿಯಂತೆ ಸಿಟ್ಟು ಮಾಡುವ ಮನುಜ ಕೊನೆಗೆ ಕುರಿಯಂತೆ ಬಿಟ್ಟಿ ಬಯಸುವ ನರನು ಬಲು ಮೋಸವಂತೆ 1 ಸುಳ್ಳು ಹೇಳುವ ನರಗೆ ಪರದಾಟವಂತೆ ಜಳ್ಳುರಾಶಿಯ ನೋಡೆ ದೊಡ್ಡಗಿರಿಯಂತೆ ಕಳ್ಳ ಒಳಗಿರಲಲ್ಲಿ ಶಾಂತಿಯಿಲ್ಲಂತೆ ಕುಳ್ಳ ಹೋರಾಡಿದರೆ ಜಯವಿಲ್ಲವಂತೆ 2 ಭಾರಿ ಮಳೆ ಸುರಿಯಲಿರೆ ಬಹಳ ಬಿಸಿಲಂತೆ ಊರು ಸೇರುವ ಮುನ್ನ ಬಹಳ ದಣಿಯಂತೆ ಕೀರುತಿಯ ಪಡೆಯುವಗೆ ಬಹು ಶತ್ರುವಂತೆ ಮೂರು e್ಞÁನಿಗಳಿರಲು ಭಾರಿ ಸಭೆಯಂತೆ 3 ಮುಳ್ಳಿರುವ ಗಿಡಗಳಲಿ ಬಹು ಪುಷ್ಪವಂತೆ ಹಳ್ಳದಲಿ ಸಿಗುವ ಜಲ ಬಹಳ ರುಚಿಯಂತೆ ಹಳ್ಳಿಗಾರನ ಸತ್ಯ ಬಹಳ ಒರಟಂತೆ ಎಳ್ಳು ಕಾಳುಗಳು ಶನಿಯ ಓಡಿಸುವುದಂತೆ 4 ಮುಟ್ಟಲಾಗದ ನಾಯಿ ದಾಸಾನುದಾಸ ಶ್ರೇಷ್ಠರೆಂದರಿತಿರುವರೆಲ್ಲ ಬಲು ಮೋಸ ಧಟ್ಟನೆ ಹೊಳೆಯುವಗೆ ಬಲು ಮನವಿಕಾಸ ಬಿಟ್ಟಿರುವ ಮನುಜನಿಗೆ ಜಗದಿ ಸುಖವಾಸ 5 ಮುದಿತನವು ಭೂಷಣವು ಸ್ಥಾನವಿರುವವರಿಗೆ ಕುದಿಯುವುದೆ ಭೂಷಣವು ಕ್ಷೀರಜಲದಲ್ಲಿ ಹೆದರುವುದೆ ಭೂಷಣವು ದುಷ್ಟಸಂಗದಲಿ ಗದಗದವೆ ಭೂಷಣವು ಭಕ್ತಿರಸದಲ್ಲಿ 6 ತನ್ನ ತಾ ಶೋಧಿಸಲು ಬಲು ದುಃಖವಂತೆ ಅನ್ಯರನು ಶೋಧಿಸಲು ಸಂತೋಷವಂತೆ ಕನ್ನಡಿಯ ನೋಡದಿರೆ ಬಲು ಚೆಲುವನಂತೆ ಕನ್ನಡಿಯ ನೋಡಿದರೆ ತಾನಳುವನಂತೆ 7 ನಗರ ಸುಂದರಲ್ಲಂತೆ ಬಚ್ಚಿಟ್ಟ ಧನವು ತಾ ಕದ್ದವನಿಗಂತೆ ಸ್ವಚ್ಛ ಬಡತನದವಗೆ ಬಲು ಭಕುತಿಯಂತೆ ಬಿಚ್ಚೊಲೆ ಗಿರಿಜೆಗತಿ ಪ್ರಿಯವಸ್ತುವಂತೆ 8 ಗುಂಡು ಬ್ರಾಹ್ಮಣ ಬರಲು ಅಪಶಕುನವಂತೆ ಹೆಂಡದಾ ಪೀಪಾಯಿ ಬಲು ಶಕುನವಂತೆ ಮಂಡೆ ಬೋಳಿರುವವಳು ಬರಬಾರದಂತೆ ತೊಂಡು ಸೂಳೆಯು ಬರಲು ಬಹಳ ಶಕುನವಂತೆ 9 ಖ್ಯಾತಿ ಬಾರದು ನರಗೆ ಬದುಕಿರುವ ತನಕ ಗೋತ ಹೊಡೆದವನು ಬಲು ಗುಣಶಾಲಿಯಂತೆ ನೀತಿ ಹೇಳುವ ಸ್ಥಳದಲೊಬ್ಬರಿಲ್ಲಂತೆ ಕೋತಿ ಕುಣಿಯುತಿರಲು ನೂರು ಜನರಂತೆ 10 ಬಹು ಧನಿಕ ಬಲು ಬಲಗೆ ಮಕ್ಕಳಿಲ್ಲಂತೆ ದಹಿಸುತಿಹ ದಾರಿದ್ರಗೆ ವರ್ಷಕೊಂದಂತೆ ಅಮೃತ ಸಮವಂತೆ ಸಿಹಿಯಾದ ಕ್ಷೀರ ಮಕ್ಕಳಿಗೆ ಬೇಡಂತೆ 11 ಸಾಲಿಗ್ರಾಮ ತೊಳೆಯಲತಿ ಬೇಸರಂತೆ ಸಾಲು ಎಮ್ಮೆಯ ತೊಳೆಯಲಿ ಉತ್ಸಾಹವಂತೆ ಶೀಲವಾಡುವ ನುಡಿಗೆ ಸಂದೇಹವಂತೆ ಗಾಳಿ ಸುದ್ದಿಗಳೆಲ್ಲ ಬಲು ಸತ್ಯವಂತೆ 12 ಒಳಿತವನು ಜಗದಲ್ಲಿ ತಲೆ ಎತ್ತನಂತೆ ಕಲಿಪುರುಷನಂಥವನು ಬಲು ಮೇಲೆಯಂತೆ ಹುಲಿ ಚಿರತೆ ಕರಡಿಗಳ ಬಲಿಯ ಕೊಡರಂತೆ ಗೆಳತಿ ಮಾರಿಗೆ ಕುರಿಯ ಬಲಿಯೆ ಬೇಕಂತೆ 13 ಅತಿ ಚೆಲುವೆ ಸತಿಯಲ್ಲಿ ಹಿತವಿಲ್ಲವಂತೆ ಗತಿಗೆಟ್ಟ ನಾರಿಯಲಿ ಅತಿ ಮೋಹವಂತೆ ಇತರ ಜನರೇಳಿಗೆಗೆ ಹೊಟ್ಟಿಯುರಿಯಂತೆ ಪ್ರತಿಕ್ಷಣವು ತನಗಾಗಿ ಹಂಬಲಕೆಯಂತೆ 14 ಭೂಮಿ ಎಲ್ಲವು ಇನ್ನು ಉಳುವಾತಗಂತೆ ಭೂಮಿಯೊಡೆಯಗೆ ದೊಡ್ಡನಾಮ ಬಿತ್ತಂತೆ ರಾಮರಾಜ್ಯದಿ ಕಾರು ಓಡಿಸುವವಗಂತೆ ಆ ಮದುವೆ ಕನ್ಯೆಯು ಪುರೋಹಿತಗಂತೆ 15 ಬಕಳಿಸುವ ನಾಯಕರೆ ಸರಕಾರವಂತೆ ಪ್ರಕೃತಿ ನಡೆನುಡಿ ನೀತಿಗೆ ಧಿಕ್ಕಾರವಂತೆ ಸುಖದ ಅನುಭವ ಜನಕೆ ಕುದುರೆ ಕೊಂಬಂತೆ ಮುಖವಿಲ್ಲ ಕಣ್ಣಿಲ್ಲ ಸುಖರಾಜ್ಯವಂತೆ 16 ಚಂದ್ರಲೋಕಕೆ ಪಯಣ ಕಾದಿರುವುದಂತೆ ಮುಂದಲ್ಲಿ ನೆಲಕೆ ಬಲು ಕಟ್ಟು ನಿಟ್ಟಂತೆ ಮುಂದರಿದ ಜನಕಲ್ಲಿ ಸ್ಥಾನವಿಹುದಂತೆ ಹಿಂದುಳಿದ ಗುಂಪಿಗವಕಾಶವಿಲ್ಲಂತೆ 17 ಪುಷ್ಪಾಕ್ಷತೆಯ ಪೂಜೆ ಗೋಮಾತೆಗಂತೆ ಶುಷ್ಕ ತೃಣವನಕೆಲ್ಲ ಮಳೆಗಳ ಕಂತೆ ನಿಷ್ಫಲದ ಗಿಡಬಳ್ಳಿ ತೋಟದಲ್ಲಂತೆ ಪುಷ್ಕಳದ ಫಲ ವೃಕ್ಷಗಳು ಸೌದೆಗಂತೆ 18 ಬರಿಯ ಪಾತ್ರೆಗಳಲಿ ಬಹಳ ಸದ್ದಂತೆ ಅರಿಯುವe್ಞÁನಿಗಳು ತಲೆಹರಟೆಯಂತೆ ಅರಿತವನು ನುರಿತನಾದರು ಬೇಡವಂತೆ ಬದಿಯ ಬಹು ದಡ್ಡನಿಗೆ ಮಾರ್ಯಾದೆಯಂತೆ19 ರೈಲು ಉರುಳಿಸೆ ರಾಜ್ಯಕಧಿಕಾರಿಯಂತೆ ಥೈಲಿಯಿದ್ದರೆ ಖೂನಿ ಮಾಡಬಹುದಂತೆ ಶೈಲವೇರುವ ನರನು ಮೇಧಾವಿಯಂತೆ 20 ನರಬಲಿಯ ಕೊಡುವವರು ಹಿರಿಯ ಜನರಂತೆ ಹಿರಿಯ ಮಾರ್ಗದ ಜನರು ಧರೆ ಭಾರವಂತೆ ಗುರುಗಳಿಗೆ ತಿರುಮಂತ್ರ ಹೇಳಬೇಕಂತೆ ಸುರಿಸುವರು ಧನಧಾನ್ಯ ಸುರಿಮಳೆಗಳಂತೆ21 ಮಂತ್ರವಾದಿಯು ನೋಡಿ ಗ್ರಹಭಯವಿದೆಂದ ಯಂತ್ರದಲಿ ನೋಡಿದವ ಹೃದಯರೋಗೆಂದ ಚಿಂತಿಸುತ ಪಂಡಿತನು ಮೋಹಿನಿಯಿದೆಂದ ಅಂತ್ಯದಲಿ ರೋಗಿ ತನಗೊಂದಿಲ್ಲವೆಂದ 22 ಶಿಂಗಪ್ಪ ಕದ್ದು ತಾ ಜೈಲು ಸೇರಿದನು ಕಾಂಗ್ರಪ್ಪ ಜೈಲಿನಿಂದ ಬಂದು ಕುಳತಿಹನು ಹೇಂಗ್ರಪ್ಪ ಬದುಕುವುದು ಎಂದು ಫಲವೇನು ನುಂಗ್ರಪ್ಪ ಸುಖ ದು:ಖಗಳನು ಸಹಿಸುತಲಿ 23 ವೇದಾಂತಿಯಾಗೆನಲು ಹೊಟ್ಟೆಗಿಲ್ಲಂತೆ ಕಾದಾಡಿ ಬದುಕಲನುಭವವಿಲ್ಲವಂತೆ ಓದು ಬದುಕೆಂದರವಕಾಶವಿಲ್ಲಂತೆ ಆದುದಾಯಿತು ಹರಿಗೆ ಶರಣು ಹೊಡಿ ತಮ್ಮ25 ಯಮನು ತಲ್ಲಣಿಸುವನು ಸ್ಥಳವಿಲ್ಲವಂತೆ ಸುಮನಸರು ಆಳುತಿಹರು ಜನವಿಲ್ಲವಂತೆ ಕಮಲೆರಮಣಗೆ ಬಂತು ಪೀಕ್ಲಾಟವಂತೆ ಎಮಗೆಂಥ ಕಷ್ಟವು ಪ್ರಸನ್ನ ಹರಿಯಿರಲು26
--------------
ವಿದ್ಯಾಪ್ರಸನ್ನತೀರ್ಥರು
ಅಲ್ಪದೇಹವು ಹುಟ್ಟಿ ಮಾಯ ಕಲ್ಪನೆಗೊಳಗಾಗಿ ಸ್ವಲ್ಪವನ (ಸ್ವಲ್ಪವು) ಶ್ರೀಹರಿ ನಾಮಸ್ಮರಿಸಿ ಸದ್ಗತಿ ಕಾಣುವ ಸಾಧನೆ ಇಲ್ಲದ್ಹೋಯಿತು ಪ ಜನುಮ ಜನುಮದಲಿ ಸಂಸಾರ ಜಲಧಿಯೊಳಗೆ ಮುಳುಗಿ ಘನ ಪುರುಷನ ಮಹಿಮೆ ಕಾಣದೆ ಗಾಢಾಂಧ ಕಾರದಲಿ ದಿನಗಳ ಕಳೆದು ದೇವರ ಭಜಿಸದೆ ಜನುಮಗಳಳಿದೂ ಚರಿಸುವದಾಯಿತು 1 ಭ್ರಾಂತಿಯ ಘನವಾಗಿ ಪ್ರಪಂಚ ಬದ್ಧನಾಗಿ ಕಾಂತೇರ ಮೋಹಕ್ಕೆ ಸಿಲುಕಿ ಕಾಲವುಕಳೆದಿನ್ನು ಚಿಂತನೆ ಮಾಡದೆ ಮುಕ್ತಿ ಸೇರದಂತಾಯಿತು 2 ಪನ್ನಗಶಯನನ್ನಾ ಪರಿಪರಿ ಭಕುತಿಲಿ ಮನದಿಂದ ವರ್ಣಿಸಿ ಜಿವ್ಹದಲಿ ಹರಿಪದವನ್ನೇ ಕಾಣದಲೆ ಇನ್ನು ಶ್ರೀ ವ್ಯರ್ಥವು ಹೋಯಿತು 3
--------------
ಹೆನ್ನೆರಂಗದಾಸರು
ಅವನಿಯೊಳವತರಿಸಿದ ವ್ಯಾಸರಾಯ ಭೂಸುರಜನವರ್ಯ ಸುವಿನೋದವ ಪಡೆದರು ಸುರನರಜನರು ಪ ಪವನಸುತರ ಮತ ಭುವಿಯಲಿ ಸುಲಭದಿ ವಿವರಿಸಿ ಜನರಿಗೆ ಪ್ರವಚನವೆಸಗಲು ಅ.ಪ ಗುರು ಬ್ರಹ್ಮಣ್ಯರ ವರಪದ ಕಮಲಗಳ ಪರತÀರ ಭಕುತಿಯಲಿ ಪರಿಪರಿ ಸೇವಿಸಿ ಗುರುಕರುಣದಲಿ ಹರುಷವ ಪೊಂದುತಲಿ ವರವ ಪಡೆದ ಭೂಸುರ ರಾಮಾರ್ಯರ ವರಸತಿಯುದರದಿ ವಹ್ನಿಪುರದೊಳವ ತರಿಸುವ ಧರೆಯೊಳು ಸುಜನಗಣವನು ದ್ಧರಿಸಲು ಮುದದಲಿ ಸಿರಿಪತಿಭಕುತನು 1 ಅತಿಬಾಲ್ಯದಿ ಗುರ್ವಾಜ್ಞೆಯನನುಸರಿಸಿ ಯತಿಯಾಶ್ರಮವಹಿಸಿ ಕ್ಷಿತಿಯೊಳಪರೋಕ್ಷe್ಞÁನಿಗಳೆಂದು ಪ್ರಥೆಯನು ಪೊಂದಿದ ಲಕ್ಷ್ಮೀನಾರಾಯಣ ಯತಿಯಲಿ ಶಾಸ್ತ್ರಾಮೃತ ಪಾನ ಮಾಡುತ ಅತಿ ಸುಲಭದ ಶ್ರುತಿಗಳ ಸಾರವ ಕ್ಷಿತಿ ಸುರರೊಳಗತಿ ಹಿತದಲಿ ಅರುಹಲು 2 ಗಜಗಹ್ವರ ದೇಶದ ನರಪತಿಗಳಿಗೆ ನಿಜವರ ಕರುಣದಲಿ ವಿಜಯಾಭ್ಯುದಯಗಳನು ಸತತ ಪೊಂದಿಸುತ ರಜತಕನಕ ನವಮಣಿಗಣಯುತ ವಾ ರಿಜವನು ಪೋಲುವ ಸಿಂಹಾಸನದಲಿ ಸುಜನ ಸಮೂಹಕೆ ನಿಜಪದಯುಗಳಾಂಬುಜ ಸೇವೆ ನೀಡಲು 3 ನಂದತೀರ್ಥರ ವರಶಾಸ್ತ್ರಗಳನ್ನು ಚಂದದಿ ವಿವರಿಸಲು ಚಂದ್ರಿಕಾ ನ್ಯಾಯಾಮೃತ ಮೊದಲಾದ ಗ್ರಂಥಗಳನು ರಚಿಸಿ ಮಂದಜನಕೆ ಮುಚುಕುಂದನ ಶುಭಗುಣ ವೃಂದಗಳನು ಸುಖದಿಂದ ಬೋಧಿಸಲು ಅಂದಪದಗಳನು ರಚಿಸುತ ಶುಭಗುಣ ಸಾಂದ್ರನ ಭಜನಾನಂದ ಪೊಂದಿಸಲು 4 ವಿಜಯೀಂದ್ರ ವಾದಿರಾಜ ಮೊದಲಾದ ನಿಜವರ ಶಿಷ್ಯರುಗಳ ವ್ರಜಕೆ ಶಾಸ್ತ್ರಾರ್ಥಗಳನು ಬೋಧಿಸುತ ಪುರಂದರ ಸುಜನ ಶಿರೋಮಣಿ ಕನಕ ಪ್ರಮುಖ ಪೂಜಿತ ಪದಯುಗಳಾಂಬುಜ ಯತಿಶೇಖರ ವಿಜಯಸಾರಥಿಯು ಪ್ರಸನ್ನನಾಗಲೆಂದು 5
--------------
ವಿದ್ಯಾಪ್ರಸನ್ನತೀರ್ಥರು
ಅವನೆವೆ ಯೋಗ್ಯ ನೋಡಿರೈ ಭಕುತಿಗೆ | ಸಾಯಾಸವಿಲ್ಲದ ಯೈದನವನಿಯೊಳಗ ಮುಕುತಿಗೆ ಪ ನಿತ್ಯ ಶ್ರವಣ ಮಾಡಲೆಂದು ಬ್ಯಾಸರಾ | ಹ್ಯಾವ ಹೆಮ್ಮೆಯಲ್ಲಿ ಕಳಿಯ ವ್ಯರ್ಥವಾಸರಾ | ನೋವ ಮಾಡುತಿರಲು ತಾಪತ್ರಯದ ತೂರಾ | ಬಳಲ ಆವಗಿರುವ ಕೂಡಿಕೊಂಡು ಹರಿಯ ದಾಸರಾ 1 ನ್ಯೂನ ನೋಡದೆ ಪರರ ಸದ್ಗುಣವನೆ ಕೊಂಬನು | ದಂಭ | ಮಾನ ತೊರೆದು ಸ್ತುತಿಯ ನಿಂದ್ಯ ಸರಿಯ ಕಾಂಬನು | e್ಞÁನದಿಂದ ಪಡೆದು ಗುರುಹಿರಿಯರಿಂಬನು | ತ್ವರಿತ | ಸ್ವಾನುಭವದ ಸೌಖ್ಯಸಾರ ಸವಿಯನುಂಬನು 2 ಬಲಿದು ಭಾವನಿಂದ ತಿಳಿದು ಸ್ವಹಿತುಪಾಯನು ದೃಢದಿ | ಹುಲು ಮನಿಜರಿದಿರ ಹೋಗಿ ದೆರಿಯ ಬಾಯನು | ತಳೆದು ವೇಷದಿಂದ ದಣಿಸವಾವ ಕಾಯನು | ಹೃದಯ | ದೊಳನವನ ನಲುವ ಗುರುಮಹಿಪತಿ ಪ್ರೀಯನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅಸದೃಶಮಹಿಮೆಯನು ಪ ಬಿಸಜಸಖ ಕಿರಣ ತರಂಗ ವಸುಧೀತಳದೊಳು ಇವರ ಸುಶಿತ ಸತ್ಕೀರ್ತಿಯ ಪಸರಿಸಿರುವುದು ಘನ್ನ ಅ.ಪ ಭಕುತಿಪೂರ್ವಕವಾಗಿ ಸತಲಕ್ಷೇತ್ರವ ಸಂಚರಿಸಿ | ನಿಖಿಲ ಭೂದೇವಗಣಕೆ | ವಿಖಿನಾರ್ಚಿನ ಮೂಲ ಲಕುಮೀಶ ದರುಶನದಿ | ಸುಖವಿತ್ತು ಪಾಲಿಸಿದ ಅಕಳಂಕಮಹಿಮ 1 ಭಯ ಭಕುತಿಯಲಿವರ ಸೇವಿಸುವ ನರರಿಗೆ ಆವಾವ ಭಯವಿಲ್ಲವೋ | ಗೋವತ್ಸನ್ಯಾಯದಲಿ ತಾವು ಬೆಂಬಲರಾಗಿ | ಭೂವರಜನದಿ ವಾಸರಿವರಿಗೆ ಜಯವ 2 ಈ ಯತಿಯೊಲುಮೆಯೇ ರಾಯರೋಲಿಮೆಯೋ ಕೇಳೋ ರಾಯರೊಲಿಯಲು ಗುರುವಾಯು ವಲಿವಾ | ವಾಯು ವಲಿದಾ ಮಾತ್ರದಿ | ಕಾಯಜ ಜನಕ ಯಮರಾಯನಂಬಿಸಿ ಬಿಡಿಸಿ ಕಾಯುವನು 3 ಸು ವಿನಲು ಸುe್ಞÁನ | ಶೀ ಎನಲು ಶೀಲತ್ವ | ಕಾಯ ಶುದ್ಧಿಯಲಿ ಇಂದ್ರಾ ಎಂದುಚ್ಚರಿಸಲಾ ಇಂದ್ರಲೋಕ ಸುಖವೊ ನಿಜವೋ 4 ವೃಂದಾರ ಕಾಂಶಜರು | ಸಂದೇಹ ವಿಲ್ಲಿವರ ವೃಂದಾ ಮಂದಾಕಿನಿಯೊಳಗೆ ಮಿಂದ ಫಲಸಂಪ್ರಾಪ್ತಿ ಇಂದಿರಾಪತಿ ಶಾಮಸುಂದರನ ಕರಪಿಡಿವ 5
--------------
ಶಾಮಸುಂದರ ವಿಠಲ
ಅಸಾಧಾರಣ ವಿಠಲ ನೀ ಸಲಹೊ ಇವಳಾ |ಈಶಾದಿ ದಿವಿಜೇಡ್ಯ | ಶ್ರೀರಾಮಚಂದ್ರಾ ಪ ವಿಶ್ವ ಮೂರುತಿಯೇ |ಮೀಸಲ ಮನದಲಿರೆ | ನೀ ಸ್ವಪ್ನ ಸೂಚಿಸಿದೆಏಸು ಕರುಣವೊ ನಿನಗೆ | ದಾಸ ಜನರಲ್ಲೀ1 ಪರಿಪರಿಯ ಭವಣೆಗಳ | ಪರಿಹರಿಸಿ ಭಕ್ತಳಿಗೆಪೊರೆಯೊ ಕರುಣಾವನಧಿ ನರಹರಿಯೇ ಸ್ವಾಮೀ |ತರತಮದ e್ಞÁನ ಸ | ದ್ವೈರಾಗ್ಯ ಭಕುತಿಯನುಕರುಣಿಸೀ ಪೊರೆ ಇವಳ | ಮರುತಾಂತರಾತ್ಮ 2 ಪಂಚಾತ್ಮಕನೆ ಪ್ರಾ | ಪಂಚ ಸುಖದೊಳಗೆ ತವಸಂಚಿಂತನೆಯ ಕೊಟ್ಟು | ಕಾಪಾಡೊ ಹರಿಯೇಪಂಚಭೇದವು ಅಂತೆ | ನೀಚೋಚ್ಚ ಕ್ರಮ ತಿಳಿಸೀವಾಂಛಿತಾರ್ಥದ ಕಳೆಯೊ | ಸಂಚಿತಾಗಮವಾ 3 ಸೃಷ್ಟಾದಿಕರ್ತನೇ | ಕೃಷ್ಣ ಮೂರುತಿ ದೇವಭ್ರಷ್ಟಸಂಗವ ಕೊಡವೆ | ಶಿಷ್ಟರಲ್ಲಿಡಿಸೋ |ಇಷ್ಟ ಮೂರ್ತಿಯ ಮನದಿ | ಸ್ಪಷ್ಟ ತೋರುತ ಸಲಹೋಶಿಷ್ಟ ಜನ ಸದ್ವಂದ್ಯ | ವಿಷ್ಣು ಪ್ರಾರ್ಥಿಸುವೇ 4 ಗೋವರ್ಧನೋದ್ದರಗೆ | ಭಾವುಕರ ಪರಿಪಾಲಪಾವನಕೆ ಪಾವನನೆ | ಕಾವುದೀಕೆಯನುದೇವನೀನಲ್ಲದಲೆ | ಕಾವರನ್ಯರನ ಕಾಣೆಗೋವಿದಾಂಪತಿ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಅಹುದಹುದನಾಥ ಬಂಧು ಅಹುದಹುದನಾಥ ಬಂಧು|ಅನುಪಮ್ಯ| ಮಹಿಮೆ ಕಾರುಣ್ಯಸಿಂಧು| ಏನೆಂದು ಪೇಳೆಲೆಮ್ಮಾ|ಈ ದಯಕ| ತಾನು ಪಮೆ ಇಲ್ಲವಮ್ಮಾ| ನ್ಯೂನಾರಿಸದೆ ಬಂದನು,ಕ್ಷಮೆಯಿಂದ| ತಾನಾಗಿ ಸಲಹುತಿಹನು| e್ಞÁನವಿಲ್ಲದೆ ತರಳನೆಂದಪೇಕ್ಷಿಸದೆನ್ನ| ಮನ ನೆನೆವಿನೊಳಗಿಟ್ಟು ತನ್ನ ಅಂಘ್ರಿಯದಾ 1 ಪತಿತರೊಳು ಪತಿತ ಅಧಮಾ|ಅಮೂಲ್ಯ| ಪತಿಹೀನ ಮೂಢ ಪರಮಾ| ಸುತ್ತ-ಭಕುತಿ ಮಾಡಲರಿಯೆ|ಚತೆರ ಸಂ| ಸ್ಕøತ ಮಾತನಾಡಲರಿಯೇ| ಗತಿಗೈದರೊಂದೊಂದು ವೃತದಿ ಮೊದಲಾದವರು| ಕ್ಷಿತಿಯೊಳಗೆ ಎನ್ನಂಥ ಶೂನ್ನರಾರಮ್ಮ 2 ನೆಲಿಗೆ ಮುಯ್ಯಕ ಮುಯ್ಯವು|ಈ ತೆರದಿ| ಸಲೆ ನಡೆತಿ ಉಂಟು ಕೆಲವು| ಕೊಳದೆ ಕೊಡುವವರಿಂದಿಗೆ|ಆರಿಲ್ಲಾ| ನಳಿನಜೇಂದ್ರಾದ್ಯರೊಳಗೇ ಒಲಿದು ಮಹೀಪತಿ ಸುತನ ಕರವಿಡಿದು ತನ್ನ| ದಾಸರ ದಾಸ ದಾಸನೆನಿಸಿದ ಬಿರದಿಗಿಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅಹುದಹುದೊ ಭಕುತಭಮಾನಿ ನೀನಹುದೋ ಪ ಮಹ ಭಕ್ತಿಯಿಂ ನಿಮ್ಮ ಭಜಿಪ ಜನರಿಗೊದಗಿ ಬಹ ದು:ಖ ಪರಿಹರಿಸಿ ಸಹಾಯದಿಂ ಕಾಯುವಿ ಅ.ಪ ಮೂರು ಜಗಕೆ ಆಧಾರ ಮಾಧವನೆಂದು ಸಾರಿಭಜಿಪರ ಕಷ್ಟ ದೂರಮಾಡುವಿ ನೀ1 ಹರಿಸರ್ವೋತ್ತಮನೆಂದು ಸ್ಮರಿಪರ ಜರಾಮರಣ ತರಿದು ಪರಿಭವಶರಧಿ ಕರುಣದಿಂ ಗೆಲಿಸುವ 2 ಭಕ್ತರ ಸೌಭಾಗ್ಯ ಸತ್ಯ ಶ್ರೀರಾಮನೆಂದು ನಿತ್ಯದಿ ನೆನೆವರ್ಗೆ ಮುಕ್ತಿ ನೀಡುವಿ ನೀ 3
--------------
ರಾಮದಾಸರು
ಆ. ಶ್ರೀಹರಿಯ ಸ್ತುತಿ ಅಂಗಾರವನೆ ನೀಡು ಯನ್ನಂತರಂಗದ ಧೊರಿಯೇ ಪ ಅಮಂಗಳಗಳ ನೀಡುವೋ ಪರಮನೀಚ ಅಂಗನಿಯಳಿಗೆ ಅ.ಪ. ಮಂಗಳಾತ್ಮಜ ನಿನ್ನ ಅನುಗಾಲ ಕಂಗಳಿಂದಲಿ ನೋಡಿ ಸುಖಿಸುವೋಡಿಂಗನಾ ಭಂಗಪಡಿಸುತಿಹಳಿ 1 ಪರಮ ಅದ್ಭುತ ಮೂಗುತಿಯೆ ನಿನ್ನ ಅದ್ಭುತ-ಚರಿಯವ ತೋರು ಭೂತನಾಥಾ 2 ಭಕ್ತವತ್ಸಲನೆಂಬ ಬಿರುದು ಬೇಕಾದರೆ ನಂಬಿದ ಭಕುತರನು ಪಾಲಿಸಿ ಬಿರುದು ಪಡಿಯೋ 3 ಶಕುತಿ ಇಲ್ಲದ ಕಾರಣದಿ ವಿಷಕೂಪದೊಳು ಬಿದ್ದು ಘನ ಪಾಪಕೊಳಗಾದೆನೋ ವಿಷಕಂಠನೇ 4 ಹಂಸರೂಢನಾದ ದಾಸ ನಿನ್ನ ದಾಸರನು ಕ್ಲೇಶಪಡಿಸುವರ ಧ್ವಂಸಗೈಯೋ ತಂದೆವರದಗೋಪಾಲನಭಜಕಾ 5
--------------
ತಂದೆವರದಗೋಪಾಲವಿಠಲರು
ಆತ್ಮನಿವೇದನಾಸ್ತುತಿಗಳು ಸನ್ನುತ ವನಜಭವಾನುತ ಪ ಮುನಿಜನವಂದಿತ ಅನಘ ವಿರಾಜಿತ ಅ.ಪ ಭಕುತಿಯಲ್ಲವೆ ಜೀಯ ಮುಕುತಿಗೊಂಡಿಹನಯ್ಯ ವಿಕಳನಾ ಮುನಿಗೇಯ ಸುಕವಿಪೂಜಿತಕಾಯ 1 ಮರೆಯಬೇಡವೋ ಯನ್ನ ಗರುಡಗಮನ ನಿನ್ನ ಚರಣ ಸೇವಕರನ್ನ ನಿರುತನೆನೆವೆ ಮುನ್ನ 2 ನಡುಗಡಲಿನೊಳಿಹೆ ತಡಬಡಿಸುತಲಿಹೆ ಪಿಡಿಯಲು ತೃಣವಿಲ್ಲ ನುಡಿವರು ಗತಿಯಿಲ್ಲ 3 ತಾಮಸನಯ್ಯ ಬೇಡ ನೀ ಮನಸೋಲಬೇಡ ಪಾಮರ ವರದನೆ | ರಾಮದಾಸಾರ್ಚಿತನೆ4 ಮಾಂಗಿರಿವರವಾಸ ರಂಗನಾಥನೆ ಶ್ರೀಶಾ ಹಿಂಗದೆ ಯನ್ನಂತರಂಗದೆ ನಿಲೊ ಈಶಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಆತ್ಮನಿವೇದನೆ ಅಚಿಂತ್ಯಾದ್ಭುತ ಮಹಿಮ ಈ ಸಚರಾಚರದೊಳು ಪ್ರಚುರನಾಗಿಹೆ ದೇವಾ ಮುಚುಕುಂದವರದಾ ಪ ಅಚಲಭಕುತಿಯು ನಿನ್ನ ಚರಣದಿ ಕಿಂಚಿತಾದರೂ ಪ್ರಚುರಮಾಡಿಸು ಅತಿಚಂಚಲನು ಬಲು ವಂಚಕನು ನಾ ಅನು- ಚಿತೋಚಿತ ಕರ್ಮವರಿಯೆನೋ ಅ.ಪ ವಿಪಿನವಾಸದಿ ಎನಗೆ ವಿಪರೀತವನು ತೋರಿ ಅಪರಾಧವೆಣಿಸದೆ ಪಾಲಿಸಿದೇ ಕೃಪಣವತ್ಸಲ ನೀನೇ ಕೃಪೆಮಾಡಿ ಸ್ವಪನದಿ ಅಪರಿಮಿತದ ವಿಶ್ವರೂಪವ ನೀ ತೋರ್ದೆ ಅಪರಾಧಿ ನಾನಹುದೋ ಸ್ವಾಮಿ ಅಪವರ್ಗಪ್ರದನು ನೀನು ಸಫಲಗೊಳಿಸಿದೆ ಎನ್ನ ಮನದನು- ತಾಪವನು ಪರಿಹರಿಸಿ ಕಾಯ್ದೆ ನಿನ್ನಡಿದಾವರೆಯ ನಂಬಿದೆನೋ ಶ್ರೀ ಪರಮಹಂಸರಿಂದ ನುಡಿಸಿದ ರಹಸ್ಯಗಳು ಅದುಏನೋ ಶ್ರೀ ಪುರುಷೋತ್ತಮನೆ ನೀನೆನ್ನಭಯಹಸ್ತದಿ ಕರೆದ ಪರಿಯೇನೋ ಅದನೊಂದನರಿಯೆನೊ ಈಪರಿಯ ಕರಚರಣದಲಿ ಚರಿಸಿದ ಅನುಪಮ ಕ್ರಿಯೆಯ ನೋಡಿ ಮನದೊಳು ಸುಪುತಕಾಲದಿ ತೈಜಸನೆ ನೀನೆನ್ನ ಪುಳುಕಾಂಕಿತನ ಮಾಡಿದೇ 1 ಅಮಿತ ಕಾರ್ಯವನೆಸಗೀ ಬಲು ಯಾತನೆಗೊಂಡು ಇಳೆಯೊಳು ಬಾಳೀ ದು- ರ್ಬಲನಾಗಿದ್ದರು ಎನ್ನ ಛಲವು ತೊಲಗಲಿಲ್ಲ ಜಲಜನಾಭನೆ ನೀನೆ ಕರುಣಿಸಿ ಸಲಹದಿರ್ದೊಡೆ ಪ್ರ- ಬಲರೆನ್ನನು ಕವಿದು ಮನಚಂಚಲವ ಪುಟ್ಟಿಸೀ ವಲೀಮುಖನಂತಾಡಿಸುವರೋ ಕಲಿಮಲವನ್ನೆ ಪರಿಹರಿಸುವುದೋ ಮನದಿ ಎಡೆಯು ದುರ್ಲಭವೋ ಒಲುಮೆಯಿಂದಲಿ ಸಾಧಿಸಲು ಎಲ್ಲೆಡೆಯ ಸರ್ವತಂತ್ರ ಸ್ವಾತಂತ್ರ್ಯ ನಿನ್ನದೋ ಭೋ ಜಗತ್ಪತೇ ಕಾಲನಾಮಕ ನೀನೆ ಆಪತ್ಕಾಲಬಾಂಧವವೆಂದು ನಂಬಿದೆ ಜಾಲಮಾಡದೆ ಎನ್ನ ಜೀವಿತದಲ್ಪಕಾಲದಿ ಕರುಣೆ ತೋರೈ2 ತುಷ್ಟನೆಂತಾಗುವೆಯೊ ಭ್ರಷ್ಟಪಾತಕಿ ನಾನು ಕಷ್ಟವಲ್ಲವೋ ನಿನಗೆ ಶ್ರೇಷ್ಟಮೂರುತಿಯೆ ಇಷ್ಟಮೂರುತಿಯೆಂದು ಇಷ್ಟು ನುಡಿದೆನೊ ಸಾಷ್ಟಾಂಗ ನಿನ್ನೊಳು ಇರಲೋ ಇಷ್ಟೇ ಎನ್ನದೊ ದೇವಾ ಕಷ್ಟಕಷ್ಟವೊ ಬೆಟ್ಟದೊಡೆಯ ಕೊಟ್ಟುದಷ್ಟು ನಿನ್ನದಯ್ಯಾ ಇಷ್ಟೆಬೇಡುವೆ ಎನಗೆ ಎ- ಳ್ಳಷ್ಟು ಭಕುತಿಯ ಕೊಡದಿರುವೆಯಾ ಸೃಷ್ಟಿಸ್ಥಿತಿಲಯನಿಯಮನಾದ್ಯಷ್ಟ ಕತೃತ್ವವು ನಿನ್ನದೊ ಅಷ್ಟಾಂಗಯೋಗದಿ ತುಷ್ಟಪಡಿಸೆ ತನುಮನೋಧಿಷ್ಟಾನವು ನಿನ್ನದೊ ಶ್ರೇಷ್ಠಮೂರುತಿ ಸುಲಭದಲಿ ನೀ ದೃಷ್ಟಿಗೋಚರವಾಗುವುದು ಇನ್ನೆಂತೋ ಹಾ ಕಷ್ಟಕಷ್ಟವೋ ಸೃಷ್ಟಿಯೊಳು ನಾನೆಷ್ಟರವ ನಿನ್ನಿಷ್ಟಬಂದಂತಾಗಲಿ ಭವ- ಶ್ರೀ ವೇಂಕಟೇಶ ಉರಗಾದ್ರಿವಾಸವಿಠಲ 3
--------------
ಉರಗಾದ್ರಿವಾಸವಿಠಲದಾಸರು
ಆತ್ಮನಿವೇದನೆ ಆವಗತಿ ಎನಗೆ ವೈಕುಂಠಪತಿಯೆ | ಕಾವ ಕರುಣಿಯೆ ಸರ್ವದೇವರ ದೇವ ಪ ಉದಯದಲಿ ಎದ್ದು ನಿನ್ನ ನಾಮವೆನ್ನದೆ | ಉದರಕಿನ್ನೇನು ಮಾಡಲಿ ಎನ್ನುತಾ | ಕÀದಗಳಾ ಸರಸುತ್ತ ಕಂಡಲ್ಲಿ ತಿರುಗಿದೆ | ಮದ ಗರ್ವದಲಿ ಬಾಳ್ವ ಮನುಜ ಶಿರೋಮಣಿಗೆ 1 ಧನವ ಘಳಿಸವ ವಾತ್ಸಲ್ಯವಲ್ಲದೆ ಸಾ | ಧನಕೆ ಒಮ್ಮೆ ಮನಸ್ಸು ಎರಗಲಿಲ್ಲಾ | ಮನುಜರೊಳಗೆ ಖ್ಯಾತಿಯಾಗುವೆನೆಂಬೊ | ವೇ | ದನೆ ಮಿಗಿಲಲ್ಲದೆ ಭಕುತಿ ಮತ್ತಿಲ್ಲ 2 ಒಬ್ಬರಕಿಂತಲಧಿಕನಾಗುವೆನೆಂದು | ಉಬ್ಬಿ ಪರರಾ ಸೇವೆಯನು ಮಾಡುವೆ | ಹಬ್ಬಿದ ಪಾಪದ ಸರವಿಗೆ ಉರುಲು ಬಿದ್ದು | ಸುಬ್ಬ್ಬಿದ ಸುಕೃತವ ಕಳಕೊಂಡೆನಯ್ಯಾ 3 ಪೂರ್ವದಲಿ ಉಂಡ ದು:ಖಗಳೆಲ್ಲ ಮರೆದು | ಸರ್ವದಾ ಗರ್ವದಲಿ ಸಜ್ಜನರ ಕೆಡನುಡಿದು | ಉರ್ವಿಯೊಳು ಬಲು ಬಲವಂತನೆನಸೀ | ಸರ್ವದಾ ಸರ್ವ ನರಕಂಗಳಲಿ ಬಿದ್ದು ಹೊರಳಿದೆನು4 ಇನ್ನಾದರೂ ದುರ್ಬುದ್ಧಿಯನ್ನು ಬಿಡಿಸಿ | ಕರವ ಬಿಡದೆ | ಪತಿ ವಿಜಯವಿಠ್ಠಲರೇಯಾ | ಎನ್ನ ಭಾವವು ನಿನ್ನದಲ್ಲವೇನಯ್ಯಾ5
--------------
ವಿಜಯದಾಸ
ಆತ್ಮನಿವೇದನೆ ಇಂದೀವರಾಕ್ಷ ಬಾ ಮುಕುಂದ ಮರಹರ ಗೋವಿಂದಾ ಸುಂದರಾಂಗನೆ ಬಂದು ರಕ್ಷಿಸೋ ಚೆನ್ನಿಗರ ಚಂದಾ ಪ ತಂದೆ ತಾಯಿ ಬಂಧುಬಳಗ ಇಂದೆನಗೆ ನೀನೇ ಚಂದದೆನ್ಮನ ಮಂದಿರದಿ ನೀ ನಿಂದಿರು ದಯಾಮಯನೆ 1 ನಿನ್ನ ಪಾದವನ್ನು ಪಿಡಿದನೆನ್ನ ರಕ್ಷಿಸೋ ಸನ್ನುತ ವಿಚ್ಛಿನ್ನ ಭಕುತರನ್ನು ಸೇರಿಸಿಕೋ 2 ಬೆರಸ ಬ್ಯಾಡೆನ್ನರಸ ನಿನ್ನ ಸ್ಮರಿಸದಿರ್ಪರಾ ಶಿರಿವರ ನರಸಿಂಹವಿಠ್ಠಲ ಪೊರೆಯೋ ಭೌಮಾ 3
--------------
ನರಸಿಂಹವಿಠಲರು
ಆತ್ಮನಿವೇದನೆಯ ಕೀರ್ತನೆಗಳು ಆತನೆಯನ್ನ ತಾತನು ಮೆರೆದಾತನೆಯನ್ನ ತಾತನು ಪ ತಂದಿನ ಅಗಲಿದ ಕಂದ ಕಾನನದೊಳು ಬಂದು ಅಂಗುಟ ಊರಿನಿಂದುತ್ವರಾ ಇಂದಿರೇಶ ಭವಬಂಧ ಮೋಚಕ ಪೊರೆಯಂದೆನೆ ಧೃವನಿಗೆ ಚಿರಪದವಿ ಕೊಟ್ಟಾತನೆಯನ್ನ ತಾತನು 1 ದುರುಳತನಪರಿಹರಿಸ ಬೇಕೆನೆ ಮಾನವ ಪರಮಕರುಣಿ ಮುರಹರನೆ ತಡಿಯದಲೆ ಪೊರೆಯನೆ ತರುಣಿಯ ಮೊರೆ ಕೇಳಿದಂಥಾತನೆ 2 ಶಿರಿಗೋವಿಂದ ವಿಠಲ ವೇದ ವಂದಿತ ಪತಿ ಹರಿಪರನೆನ್ನುತ ಪರಮ ಭಕುತಿಯಿಂದ ಸ್ಮರಿಸುವವರ ಕರಪಿಡಿಯಲೋಸುಗ ತನ್ನ ಕರಚಾಚಿಕೊಂಡು ನಿಂತಾತನೆ 3
--------------
ಅಸ್ಕಿಹಾಳ ಗೋವಿಂದ
ಆತ್ಮನಿವೇದನೆಯ ಹಾಡುಗಳು ಡಂಭಕದ ಭಕುತಿಯನು ಬಿಡು ಕಂಡ್ಯ ಮನವೆ ಪ ಅಂಬುಜಾಕ್ಷನು ಒಲಿಯ ಅನಂತ ಕಾಲಕ್ಕು ಅ.ಪ. ಬಹಿರ ಅಂಗಡಿ ಹೂಡಿ ಜನರ ವಂಚಿಸಿದರೆಅಹಿಕ ಫಲವಲ್ಲದೆ ಮೋಕ್ಷವುಂಟೆ ?ವಿಹಿತಾ ವಿಹಿತವ ತಿಳಿದು ಸತ್ಕರ್ಮ ಕಿಂಚಿತು ಮಾಡೆದಹಿಸುವುದು ಅಘರಾಶಿ ಅಹಿಶಾಯಿ ಒಲಿವ 1 ವರ ವೈಷ್ಣವರು ಬಂದು ನಿಲಲು ವಂದಿಸದಲೆಹರಿ ಪೂಜೆ ಮಾಳ್ಪೆನೆಂದು ಕುಳಿತುಕೊಂಬೆಅರಿಯದ ಊರೊಳಗೆ ಅಗಸರ ಮಾಳಿಯೇಹಿರಿಯ ಮುತ್ತೈದೆಯು ಎಂದು ಕರೆಸುವಂತೆ 2 ಜಪವ ಮಾಡುವೆನೆಂದು ಮುಸುಕನಿಟ್ಟು ಕುಳಿತುತಪಿಸುವೆ ಒಳಗೆ ನೀ ಧನದಾಸೆಯಿಂದೆಕುಪಿತ ಬುದ್ಧಿಯ ಬಿಟ್ಟು ಮೋಹನ್ನ ವಿಠ್ಠಲನಗುಪಿತ ಮಾರ್ಗದಿ ಭಜಿಸಿ ಸುಪಥವನುಸರಿಸೆ 3
--------------
ಮೋಹನದಾಸರು