ಒಟ್ಟು 176 ಕಡೆಗಳಲ್ಲಿ , 54 ದಾಸರು , 140 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರಮ್ಮಾ ಬಾರಮ್ಮಾ ಭಾಗ್ಯದನಿಧಿಯೇ ತೋರಮ್ಮಾ ತೋರಮ್ಮಾ ಕರುಣಾನಿಧಿಯೇ ಪ. ಬಾರಮ್ಮಾ ಮಹಲಕ್ಷ್ಮಿ ತೋರುತ ಕರುಣವ ಬೀರುತ ತವಕದಿ ಸೇರುತ ಪತಿಸಹ ಅ.ಪ. ಶ್ರೀ ರಮಾದೇವಿ ಇನ್ನಾರು ಸಮನಾಗರೇ ಭೂ ರಮೇಶನ ಸೇವೆಗೆ ನಿಲ್ಲಲು ಬಾರಮ್ಮಾ ಭಕ್ತರುದ್ಧಾರ ಮಾಡಲು ಎಲ್ಲಾ ಕಾರಳು ನೀನಾಗಿ ವಾರುಧಿಶಯನಗೆ ಸೇವಿಸಲು ಘೋರತರ ಸಂಸಾರ ಸಾಗರ ಪಾರುಗಾಣಿಪ ಹರಿಯು ನಿನ್ನೊಳು ಸೇರಿಯಿರುತಿಹನೇ ತೋರಿ ಭಕ್ತರಿಗೆ ಚಾರುಕಮಲ ಕರಾರವಿಂದದಿ ಧೀರೆಯೆತ್ತುಪಕಾರ ಮಾಡಲು ವಾರಿಜಾಕ್ಷಿಯೆ ಸಾರುತೀಗಲೆ 1 ಪುಲ್ಲಲೋಚನೆ ನಿನ್ನ ಗಲ್ಲ ಮಿಂಚಿನ ಸೊಬ ಗೆಲ್ಲ ನೋಡುತ ನಿನ್ನ ಒಡನಾಡುವ ಪಲ್ಲವಾಧರೆ ನಿನ್ನ ವಲ್ಲಭ ಹರಿಯಲ್ಲಿ ಎಲ್ಲ ಭಕ್ತರ ಮನಸಲ್ಲ ಅರುಹು ತಾಯೆ ನಿಲ್ಲದೆಲೆ ಕಾನಲ್ಲಿ ಇಹ ಹರಿ ಎಲ್ಲಿ ಭಕ್ತರು ಕರೆ ದಲ್ಲಿ ಬರುತಿಹನೆ ಮಲ್ಲಮರ್ಧನ ಶ್ರೀ ನಲ್ಲ ಕೃಷ್ಣನು ಚೆಲ್ಲಿ ಕರುಣವ ಬಲ್ಲೆ ನಿನಪತಿ ಗುಣಗಳನೆಲ್ಲ ಕಾಯೆ 2 ರಂಗನರ್ಧಾಂಗಿಯೆ ಮಂಗಳ ಮೂರುತಿ ನಿ ನ್ನಂಗಜನಯ್ಯನ ಕಾಣೆ ಕಾಯೆ ಗಂಗಜನಕ ಸಹ ಸರ್ವರಂಗದೊಳಿದ್ದು ನೀ ರಂಗನ ಲೀಲೆಯತಿಸಂಭ್ರಮದಲಿ ನೋಳ್ಪೆ ತುಂಬುರು ನಾರದರು ಪಾಡಲು ರಂಭೆ ಊರ್ವಶಿ ನಾಟ್ಯವಾಡಲು ಸಂಭ್ರಮದಿ ಶ್ರೀ ಶ್ರೀನಿವಾಸನ್ನ ಇಂಬತೋರಿಸೇ ಅಂಬುಜಾಕ್ಷಿಯೇ ಬೆಂಬಿಡದೇ ಎನ್ನ ನಂಬಿರುವೇ ನಿನ್ನ ಕಂಬುಕಂಧರೆ ಕುಂಭಿಣೀಪತಿ ಸಹಿತ ಬೇಗನೆ 3
--------------
ಸರಸ್ವತಿ ಬಾಯಿ
ಬಾರಯ್ಯ ಕೃಷ್ಣ ಬಾರೈ ಬಾಹದಿದ್ದಡೆಕಾರುಣ್ಯನಿಧಿಯೆಂಬ ಕಥೆಯ ಅ-ದಾರು ಬಣ್ಣಿಪರು ವೇದಾಂತದೇವಿಯರೆಮ್ಮದೂರುವರೀಗೆ ಪ. ಕುಂಜರವರದ ನೀಲಾಂಜನವರ್ಣ ನೀಕಂಜನೇತ್ರನೆ ಕಾಮನಯ್ಯಮಂಜುಳಮೂರ್ತಿ ಮನೋಹರಕೀರ್ತಿ ಪ್ರ-ಭಂಜನನೊಡೆಯ ಬಾರೊ 1 ಮಂದರಗಂಧದ ಮಂದಮಾರುತ ಬಂದಚಂದಿರಮುಡಿದ ಚದುರಬಂದಕಂದರ್ಪನರವಿಂದನೆಂಬ ಕಣೆಯ ತೊಟ್ಟ ಮಂದರಧರನೆ ಬಾರೊ2 ನೋಡುವೆ ನುಡಿಸುವೆ ಪಾಡುವೆ ಬಯಕೆಯಬೇಡುವೆ ಹಯವದನನಮಾಡುವೆ ಪೂಜೆಯ ಕೂಡುವೆ ನಿನ್ನೊಡ-ನಾಡುವೆನೊ ಬೇಗನೆ ಕಾಡದೆ ಬೇಗ ಬಾರೊ 3
--------------
ವಾದಿರಾಜ
ಬಾರೆ ನಮ್ಮನಿತನಕ ಭಾಗ್ಯದ ದೇವಿ ಬಾರೆ ನಮ್ಮನಿತನಕ ಪ ಬಾರೆ ನಮ್ಮನಿತನಕ ಬಹಳ ಕರುಣದಿಂದ ಜೋಡಿಸಿ ಕರಗಳ ಎರಗುವೆ ಚರಣಕೆ ಅ.ಪ. ಹರಡಿ ಕಂಕಣ ದುಂಡು ಕರದಲ್ಲಿ ಹೊಳೆಯುತಸರಗಿ ಸರವು ಚಂದ್ರಹಾರಗಳಲೆಯುತ1 ಜರದ ಪೀತಾಂಬರ ನಿರಿಗೆಗಳೆಲೆಯುತತರಳನ ಮ್ಯಾಲೆ ತಾಯಿ ಕರುಣವಿಟ್ಟು ಬೇಗನೆ2 ಇಂದು ನಮ್ಮನಿತನಕ 3
--------------
ಇಂದಿರೇಶರು
ಬಾರೆ ಬೇಗನೆ ವಾರಿಜಾಮುಖಿ ಚಾರುವೇದಕೆ ನೀ ಬಾ ಬೇಗನೆ ಪ ಕನಕಾಂಬರವನುಟ್ಟು ‌ಘನಕಂಚುಕವ ತೊಟ್ಟು ಹಣೆಗೆ ತಿಲಕವಿಟ್ಟು ವನಜಾಜಿ ಮಲ್ಲಿಗೆಯಾ ಮುಡಿಯುತ ನೀ ಬೇಗನೆ ಬಾ 1 ಲುಲ್ಲ ಪೈಜಣದಿ ಘಿಲ್ಲು ಘಿಲುರೆನುತಲಿ ನಿಲ್ಲದೆ ಉಲ್ಲಾಸದೀಗ | ಬೇಗ ಫುಲ್ಲನಯನೆ ಬಾ 2 ಕಾಮನ ಶಿರೋಮಣಿ ಕಾಮನ ಕರುಣಿ ಶಾಮಸುಂದರನ ರಾಣಿ ನೀ ಬೇಗೆನ ಪ್ರೇಮದಿಂದಲಿ ಬಾ 3
--------------
ಶಾಮಸುಂದರ ವಿಠಲ
ಬಾರೆಲೋ ಬೇಗನೆ ಭಾರತೀಪತಿ ಪ್ರಿಯ ಸಾರುತ ಬೇಗ ಶ್ರೀ ನಾರಾಯಣ ಪ. ನಾರದಾದಿ ವಂದ್ಯ ಪಾರುಗಾಣಿಸೆ ಭವ ಗಾರು ಮಾಡದೆ ಶ್ರೀಶ ಸರ್ವೇಶ ಅ.ಪ. ಸುಮನಸರೊಡೆಯನೆ ನೀನಾಗಮಿಸಲು ಸಕಲವು ಸುಗಮವಹುದೆ ಕಮಲೆಯ ಪ್ರೀಯನೆ ನಿನ್ನಾಗಮನವನೆ ಬಯಸುವೆ 1 ಭಕ್ತರ ಕಾಯುವ ಯುಕ್ತಿ ನಿನಗೆ ಸರಿ ಭಕ್ತವತ್ಸಲನೆಂಬೊ ಬಿರುದಿನ ದೇವ ಶಕ್ತಿ ಸ್ವರೂಪನೆ ಅಶಕ್ತರ ಪೊರೆವಾ ಸಕ್ತಿಯ ತೋರಿಸೆ ಭಕ್ತರಿದ್ದೆಡೆಗೆ 2 ಎನ್ನಪರಾಧ ಎಣಿಸಲೆನ್ನಳವೆ ಪನ್ನಗಾದ್ರಿನಿವಾಸ ಕೃಪೆತೋರೊ ಸನ್ನುತಚರಿತ ನಿನ್ನ ಪೊರತು ಎನ ಗನ್ಯರ ಕಾಣೆನಾ ಶ್ರೀ ಶ್ರೀನಿವಾಸ ದೊರೆ 3
--------------
ಸರಸ್ವತಿ ಬಾಯಿ
ಬಾರೊ ಶ್ರೀವೆಂಕಟರಮಣ ತವಪಾ- ದಾರಾಧಕರನು ಪೊರೆಯಲು ಕರುಣಾಪೂರ್ಣ ಪ ಬಾರೋ ನಮಿಸುವೆ ಪೂರ್ಣ ಕೃಷ್ಣಾ ತೀರದಲಿ ಮಾಂಡವ್ಯ ಋಷಿಗಳ ಘೋರ ತಪಸಿಗೆ ಒಲಿದು ಗುಡೆಬಲ್ಲೂರು ಮಂದಿರನೆಂದು ಕರೆಸುತ ಅ.ಪ ಎಲ್ಲ ಕಡೆಗೆ ನೆಲೆಸಿರುವ ಸಿರಿ ನಲ್ಲನೊಲಿಸಲು ತಪವನು ಗೈವ ಬಲ್ಲಿದ ಮಾಂಡವ್ಯರಿರವ ಕಂಡು ಗೊಲ್ಲರು ಮಾಡಿದರನು ದಿನ ಶೇವಾ ಪುಲ್ಲನಾಭನು ದರುಶನವ ಮುನಿ ವಲ್ಲಭಗೆ ತೋರಿಸಲು ಬೇಡಿದ ಗೊಲ್ಲರೆನ್ನಯ ಭಕುತರವರಿಂದಲ್ಲಿ ಪೂಜೆಯಗೊಳ್ವದೆಂದನು 1 ಬಾರೊ ಬೇಗನೆ ದ್ವಿಜರಾಜ ಧ್ವಜ ವೇರಿ ಪೊರೆದೆಯೊ ಬಂದು ಕರಿಯೆ ಕರಿ ರಾಜ ತೋರೋ ಚವತರಣ ಸರೋಜಯುಗ್ಮ ಸಾರಿ ಭಜಿಸುವ ಭಕುತರ ಕಲ್ಪ ಭೂಜ ಮಾರಜನಕನೆ ಚಾರುಕನಕ ಕಿ ರೀಟ ಕುಂಡಲಹಾರಪದಕ ಕೇಯೂರ ಸಾಲಂ- ಕಾರ ವಪು ಶೃಂಗಾರದಲಿ ರಥವೇರಿ ಮೆರೆಯುತ 2 ವೇದವೇದ್ಯನೆ ನಿನ್ನ ಪ್ರೇಮಾ ಪಡೆದ ಪಾದ ಮಹಿಮೆಯ ವರ್ಣಿಸಿದ ದೇವ ಶರ್ಮಾ ಬೋಧಾದಿ ಸದ್ಗುಣಧಾಮ ಪಾಹಿ ಮೇದಿನಿ ವಿಬುಧ ಪೂಜಿತ ಪೂರ್ಣಕಾಮ ಮೇದಿನಿಯೊಳು ಶ್ರೀದ ನಿನ್ನಯ ಪಾದಯುಗಳವ ಕಂಡು ಹರುಷದಿ ಪಾದುಕೆಯ ರಚಿಸಿದಗೆ ಒಲಿದ ಅಗಾಧ ಮಹಿಮನೆ ಮೋದಗರೆಯಲು 3 ಒಂದಿನ ನಿಶಿಯೊಳುತ್ಸವದಿ ದಣಿ ದಂದು ಮಲಗಿರಲರ್ಚಕರು ದೇವಾಲಯದಿ ಬಂದು ಚೋರರು ಅತಿಜವದಿ ನಿನಗೆ ಪೊಂದಿಸಿದೊಡವೆ ಗಳನು ಚೌರ್ಯತನದಿ ಮಂದ ಮತಿಗಳು ಒಯ್ಯುತಿರೆ ಖಳ ವೃಂದಕಂಗಳು ಪೋಗೆ ತುತಿಸಲು ಚಂದದಿಂ ಬರೆ ಹೇಮನಾಮವ ಕುಂದದಲೆ ಮಾಡಿಸಿದರಾಕ್ಷಣ 4 ನೀರಜಾಸನ ಮುಖ್ಯ ತ್ರಿದಶ ಗಣದಿಂ- ಪಂಕಜ ಭಕ್ತಪೋಷ ಸೂರಿಜನರ ಸಹವಾಸ ಕೊಡು ಧಾರುಣಿಯೊಳು ಕೃಷ್ಣ ತೀರನಿವಾಸ ಬಾರೊ ನಿನ್ನನು ಶೇರಿದವರW ವಾರಿವಾಹ ಸಮೀರ ಕಾರ್ಪರ ನಾರ ಶಿಂಹಾತ್ಮಕನೆ ಯನ್ನಯ ಭವ ಭಯ ದೂರಮಾಡಲು 5
--------------
ಕಾರ್ಪರ ನರಹರಿದಾಸರು
ಬಾರೋ ಬಾರೋ ಸುಂದರನೆ ಬರ ಹೇಳಿದಳೊ ನಿನ್ನ ರಮಣಿ ಪ ಶುಕಪಿಕರವದಿಂದ ವಿಕಳಿತಳಾಗಿ ಧೈರ್ಯ ಕಕವಿಕಳಾಗಿಹಳಿವಳು ನೀ ಬೇಗನೆ 1 ಸಾರ ಸುಗುಣೆ ನಿನ್ನ ದಾರಿಯ ನೋಡಿ ನೋಡಿ ಸರಸಿಜಮುಖಿ ನೀ ಪೋಗಿ ಬಾರೆಂದಳು 2 ಶ್ರೀ ವಾಸುದೇವವಿಠಲ ನಿನ್ನಯ ಸಖಿ ಭಾವಜನ ರೂಪವ ತೋರು ತೋರಿಸೆಂದಳು 3
--------------
ವ್ಯಾಸತತ್ವಜ್ಞದಾಸರು
ಬಾರೋ ಬೇಗನೆ ರಾಮಾ ನೀ ಬಾ ಪ ಏಕೆ ಪಂತರ ಮನೆಯೊಳು ನೀರ ತಂದೆ | ಲೋಕದೊಳಗೆ ನಿನ್ನ ಮಹಿಮೆಗೆ ಕುಂದೇ1 ಅಂದು ಕಬೀರನ ಸತಿಗಾಗಿ ಹಿಂದೆ |ಛಂದಾಗಿ ಕೊತವಾಲನಾಗಿ ಬಂದೆ 2 ಗುರು ಭವತಾರಕ ಎನ್ನ ತಂದೆ |ಆರು ಮುನಿದರೂ ಏನಿಲ್ಲ ಮುಂದೆ 3
--------------
ಭಾವತರಕರು
ಬಾರೋ ಬೇಗನೆ ಶ್ರೀಧರ ಗುಣಾಕರ ಪ ಬಾರೋ ಬೇಗನೆ ಪಾದವಾರಿಜಕೆರಗುವೆ ಚಾರು ಪರಿಯಂಕಕ್ಕೆಅ.ಪ ಶೌರಿ ಅಗ್ರಜನಾಗಿ ಕ್ರೂರರ ಸದೆದು ಭೂ ಭಾರವನಿಳುಹಿದ ಶೌರ್ಯದ ಮಂಚಕೆ1 ರಾಮನ ಶೇವಿಸಿ ಪ್ರೇಮವನು ಪಡೆದಂಥ ಸೌಮಿತ್ರಿಯೆಂಬ ಸುನಾಮದ ಹಾಸಿಗೆಗೆ 2 ಸಾಸಿರವದನದಿ ಶ್ರೀಶನೆ ತವಗುಣ ಲೇಶ ವರ್ಣಿಸುವಂಥ ಭಾಸುರ ತಲ್ಪಕೆ 3 ಇಂದಿರದೇವಿಯು ನಿಂದಿರುವಳು ತವ ಸುಂದರ ಚರಣಾರವಿಂದವ ತೋರಿಸು 4 ಶರಣರ ಪೊರೆವ ಕಾರ್ಪರನರಶಿಂಹನೆ ಹರಗೆ ಭೂಷಣವಾದ ಉರಗಪರ್ಯಂಕಕೆ5
--------------
ಕಾರ್ಪರ ನರಹರಿದಾಸರು
ಬಾಲಕೃಷ್ಣ ನಡಿ ಬೇಗನೆ ಪೋಗೋಣ ವೃಂದಾವನ ಪ ಪಾಡೋಣ ಯಶೋದೆಯ ಕಂದನ ಅ.ಪ. ಎಲ್ಲ ಗೋಪೇರು ಮನಿಯಲ್ಲಿ ನಿಲ್ಲದೆ ಅವ-ನಲ್ಲಿ ನಿಂತಿಹರು ನೋಡೋಣ ನಡಿ 1 ಮುರಳಿಗಾನವ ಕೇಳಿ ಮರುಳಾಗಿದೆ ಮನಸ್ಥಿರವ ಪೊಂದದು ಬಿಡುಮೌನ ನಡಿ 2 ಇಂದು ಸ್ಮರ ಬಾಣ ನಡಿ 3 ಆರು ವಂದಿಸಲೇನು ಆರು ನಿಂದಿಸಲೇನು ನೀರಜಾಕ್ಷನ ನೋಡೋಣ ನಡಿ 4 ಭವ ಧ್ಯಾನ ನಡಿ 5
--------------
ಇಂದಿರೇಶರು
ಬಿಡು ಬಿಡು ಮನುಜಾ ಜಡದಭಿಮಾನ ಪಡೆ ಗುರುವಿನಲಿ ಸ್ವಾತ್ಮದ ಜ್ಞಾನಾ ಪ ಈ ಸುಖದುಃಖದ ಬಡಿದಾಟದಲಿ ಗಾಸಿಯಾಗುತಲಿ ಸಾಯುವದೇ ದಿಟ ಕ್ಲೇಶವ ನೀಗುವಿ ನಿನ್ನ ನೀ ತಿಳಿವೊಡೆ 1 ಮರಳಿ ದೇಹ ಪಡೆಯದ ದಿವ್ಯ ಬೋಧ ಪರಮಶಾಂತಿ ದೊರಕಿಸುವ ಪ್ರಮೋದ ದುರುಳಸಂಸ್ಕøತಿಯ ಪಾಶದ ಛೇದ ಮರೆಯದೆ ಮಾಳ್ಪುದು ಸ್ವಾತ್ಮದ ಶೋಧ 2 ಘಟ ಮರಣಕೆ ಶಿಲುಕಿದಾದರೂ ಈ ಘಟದಲಿ ನೀ ಅಮರನೆ ಇರುವೀ ಬೇಗನೆ ಜೀವನ್ಮುಕುತಿಯ ಪಡೆಯೈ ಯೋಗಿ ಶಂಕರನ ಸದ್ಬೋಧದಲಿ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಬಿಡ್ವು-ದುತ್ತ ಮವು ಪ ಹೋದಯೋಚನೆ ಮಾಡಲು ಮನದಲ್ಲಿ ಅತಿಶಯವೇನಲ್ಲಿ ಫಲವೇನಿಲ್ಲಾ ಬಹು ಭಾದಕ ವಂದೆ ಬುದ್ಧಿಯು ತಿಳಿಯದೆ ಸುಲಭದಿಂದಲಿ ಮುನಿವಂದ್ಯನ ಸ್ತುತಿಯ ಮಾಡಿದಲ್ಲಿ ಖನಿಯಂತೆ ಭಾಗ್ಯವು ಬೇಗನೆ ಕೊಡುವನು---ಸ್ಥಿರವಲ್ಲಿ 1 ಹೊಟ್ಟಿಯ ದೆಸೆಯಿಂದಾ ಕೃಷ್ಣನ ಚರಣಾರವ ಕ್ರಿಯದಲಿ ಪೂಜಿಸಿ ನಿಷ್ಟವಾಗು---- ಕಷ್ಟವೆಲ್ಲ ಕಳೆದು ಕರುಣಿಸಿ ಶೀಘ್ರದಿ ಕಾಯುವ ಗೋವಿಂದ 2 ಕೂಡಿ ಪುಣ್ಯವು ಕಳೆದು ಪಾಪಕೆ ಹೋಗಬೇಡಾ ಮಂqಲದೊಡೆಯನ ಮಹಿಮ ವುಳ್ಳ ದಾಸರ ಮನ್ನಿಸದಿರ ಬೇಡಾ -------- ಪಾದ ಬಿಡಬೇಡಾ 3
--------------
ಹೆನ್ನೆರಂಗದಾಸರು
ಬಿದ್ದ ಹುಣ್ಣು ಮಾಯವಲ್ಲದವ್ವಾ ಹ್ಯಾಂಗೆ ಸಹಿಸಲಸಾಧ್ಯ ಬೇನೆ ನಿದ್ರೆ ಬರದವ್ವಾ ಪ ಬಿದ್ದ ಹುಣ್ಣು ಮಾಯವಲ್ಲದು ಮುದ್ದು ಮುಖ ನಿನ್ನಪಾದ ಪದ್ಮಕೆ ಬಿದ್ದು ಬೇಡುವೆ ಸದ್ದು ಮಾಡದೆ ಅಬ್ದಿಶಯನನೆಂಬ್ವೈದ್ಯನ್ನ್ಹಿಡಿತಾ ಅ.ಪ ಮುತ್ಯ ಅಜ್ಜರನಳೀತು ಯೀ ಹುಣ್ಣು ಮತ್ತು ಎನ್ನ ಹೆತ್ತ ತಾತ ಮಾತಾ ಪಿತರನು ಹತ್ತಿಕೊಂಡು ಭ್ರಾತೃ ಬಂಧುವನು ಗೊತ್ತಿಗ್ಹಚ್ಚಿತು ಎತ್ತಪೋದರೊ ಪತ್ತೆಗಾಣೆನು ಅತ್ತು ಅತ್ತು ಇದರ ಬೇನೆಗೆ ಸತ್ತು ಸತ್ತು ಹೋದರೆಲ್ಲರು ಪುತ್ರ ಮಿತ್ರ ಕÀ ಳತ್ರರೆಲ್ಲರ ವ್ಯರ್ಥಕೊಲ್ಲಿ ಬೆನ್ಹತ್ತಿದೆನ್ನಗೆ 1 ಎಷ್ಟು ಬಂಧುಬಳಗವನೀ ಹುಣ್ಣು ನುಂಗಿಬಿಟ್ಟಿದೆ ಇಷ್ಟು ಖೂನಕ್ಕುಳಿಸಿಲ್ಲೋರ್ವರನು ಶಿಷ್ಟಜನರಿಗೆ ಮೃತ್ಯು ಕಾಣ್ಹುಣ್ಣು ಬಿಟ್ಟಿಲ್ಲಾರನು ಎಷ್ಟು ಪೇಳಲಿ ನಷ್ಟಸುದ್ದಿಯನು ದುಷ್ಟಶಿಷ್ಟರೆಂಬರೆಲ್ಲರ ಕಟ್ಟಿ ಮುರಿದು ಮುಟ್ಟಿಗಿಯಮಾಡಿ ಮೊಟ್ಟೆಕಟ್ಟಿ ಕೊಟ್ಟು ಮೃತ್ವಿಗೆ ಕಟ್ಟಕಡಿಗೆ ಬೆನ್ನಟ್ಟಿದೆನಗೆ 2 ಕುಂತೆನೆಂದರೆ ಕುಂದ್ರಗೊಡದಮ್ಮ ಸಂತಜನರೊಳು ನಿಂತೆನೆಂದರೆ ನಿಂದ್ರ ಗೊಡದಮ್ಮ ಸಂತಸೆಂಬುದು ಇನಿತು ಇಲ್ಲಮ್ಮ ಅಂತರಂಗದಿ ನಿಂತು ಸುಡುವುದು ತಾಳಲೆಂತಮ್ಮ ಅಂತ:ಕರಣದಿ ಪೋಗಿ ಎನ್ನಯ ಅಂತ್ಯಕ್ವೈದ್ಯನಾದಂಥ ಪ್ರಾಣದ ಕಾಂತ ಶ್ರೀರಾಮನನ್ನು ಕರೆತಂದು ಕಾಂತೆ ಈ ಹುಣ್ಣು ಮಾಯ್ಸೆ ಬೇಗನೆ 3
--------------
ರಾಮದಾಸರು
ಬೇಗನೆ ಕರೆತಾರೇ ಸಖಿಯೇ [ಬೆಗನೆಕರೆತಾರೆ] ಪ ನಾಗಶಯನನವ ಕೂಗದೆ ಬಾರನೆ ಅ.ಪ ಪೂತನಿ ಶಿಶುಗಳ ಫಾತಿಸುತಿಹಳೆಂಬ ಮಾತನವಗೆ ಪೇಳೆ ಭೀತಿಯತೋರಿ ಆತುರದಿಂದವ ಐತರುವನೆ ಸಖಿ ಪ್ರೀತಿಯೊಳೀವೆನೀ ರತುನದ ಹಾರವ 1 ಕರಿ ಧ್ರುವ ಪ್ರಹ್ಲಾದ ತರುಣಿ ಪಾಂಚಾಲಿ ಮೊರೆಯಿಡುವುದ ಹೇಳೆ ಭರದಲಿ ಬರುವ ಉರಗನ ಗರಳದಿ ಕರುತುರು ನೋಯುವ ಪರಿಯ ಬಿತ್ತರಿಸಿ | ಮುರಳೀಧರಗೆ 2 ಸಂಗಡ ಬರದಿರೆ ಭಂಗಿಸುವರು ಗೋ ಪಾಂಗನೆಯರು ಎಂದು ರಂಗಗೆ ಹೇಳೇ ಇಂಗಿತಜ್ಞನು ನಮ್ಮ ಮಾಂಗಿರಿಯರಸನು ಸಂಗಡ ಬರುವನು ಸಂದೇಹವಿಲ್ಲ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಗನೆ ದಯಮಾಡೊ ಸಾಗರ ನಿಲಯ ನಾಗಶಯನ ನೀನು ಹ್ಯಾಗೆ ಮಹ ಕರುಣಾಳು ಪ ಭಕ್ತರ ದುರ್ಭವ ಕತ್ತರಿಸದೆ ಇಡೀ ಭಕ್ತರ ಬೆಂಬಲೆಂಬೋಕ್ತಿ ಸತ್ಯವೇನು 1 ಪಾದ ನುತಿಸಲು ಕಾಯದಾದಿ ನುತ ಪೋಷನೆಂಬ ಮಹ ಸ್ಮøತಿವಾಕ್ಯ ಸರಿಯೇನೋ 2 ಶ್ರೀಶ ಶ್ರೀರಾಮ ನಿನ್ನದಾಸರ ನೊರೆದಿಹಿ ದಾಸರ ಪ್ರಾಣನೆಂಬುವಾಚ ಲೇಸೇನೆಲೋ 3
--------------
ರಾಮದಾಸರು