ಒಟ್ಟು 88 ಕಡೆಗಳಲ್ಲಿ , 36 ದಾಸರು , 82 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂದಿಯಗೊಡವೆ ಇನ್ನೇನು ಮಗಳೆ |ಮುಂದೆ ನೋಡಿ ಹಂಜಿ ನೂಲವ್ವ............ ಪ.ಕಣ್ಣ ಮುಂದಿನ ಕಸವನು ತೆಗೆದು |ಸಣ್ಣಗೆ ನೀ ನೂಲವ್ವ............... ಅಪವಸುಧೆಯ ದೊಡ್ಡ ಮಣೆಯಮಾಡಿ |ಶಶಿರವಿಗಳೆರಡು ಕಂಬವ ಹೂಡಿ ||ಆ ಸಿರಿರಂಗರ ಎರಡು ಚಕ್ರವ ಮಾಡಿ |ದರ್ಶನವೆಂಬುವ ನುಲಿಯನು ಬಿಗಿದು 1ಪರಬ್ರಹ್ಮನಅಳವು ಮಾಡಿ |ಕುರುಡು ನಾಶಿಕ ಬೆನಕದಿ ತಿಕ್ಕಿ ||ಹರಿ ನೀನೆ ಎಂಬ ದಾರವಕಟ್ಟಿ |ವಿರತಿವಿಚಾರದ ಬೆಲ್ಲಗಳಿಕ್ಕಿ2ಜಾÕನವೆಂಬುವ ಕದರನ್ನಿಕ್ಕಿ |ಮಾನಮದವೆಂಬ ಹಂಜಿಯ ಹಿಡಿದು ||ಧ್ಯಾನವೆಂಬ ಎಳೆಯನು ತೆಗೆದು |ಮೌನದಿಂದಲಿ ನೂಲವ್ವ 3ಕಕ್ಕುಲಾತಿ ಕಾಂಕ್ಷೆಗಳೆಂಬ |ಸಿಕ್ಕುದೊಡಕುಗಳನೆ ಬಿಡಿಸಿ ||ಒಕ್ಕುಡಿತೆಯ ಮಾಡಿದ ಮನದಿ |ಕುಕ್ಕಡಿನೂಲು ಕೂಡಿ ಹಾಕಮ್ಮ 4ಇಪ್ಪತ್ತೊಂದು ಸಾವಿರದ ಮೇ -ಲಿಪ್ಪ ನೂರು ಎಳೆಯನು ಹೊಡೆದು ||ತಪ್ಪದೆ ಹುಂಜವಕಟ್ಟಿ ನೀನು |ಒಪ್ಪದಿ ಸೀಳು ಇಳುವಮ್ಮ 5ಸದ್ಯದಿ ನೀ ಜಾಡರಲ್ಲಿ |ಸಿದ್ಧಬದ್ಧ ಸೀಳುಗಳ ಹಾಕಿ ||ವಿದ್ಯೆಯೆಂಬುವ ಹಚ್ಚಡವನ್ನು |ಬುದ್ಧಿಯಿಂದಲಿ ನೇಯಿಸಮ್ಮ 6ಒಪ್ಪುವಾತ್ಮ ಪರಮಾತ್ಮನೆಂಬ |ಒಪ್ಪ ಎರಡು ಹೋಳುಗಳಹಚ್ಚಿ ||ತಪ್ಪದೆ ಪುರಂದರವಿಠಲನ ಪಾದಕೆ |ಒಪ್ಪಿಸಿ ಕಾಲವ ಕಳೆಯಮ್ಮ 7
--------------
ಪುರಂದರದಾಸರು
ಮಾಯೆಎನ್ನ ಕಾಯವನ್ನುಪಾಯದಿಂದ ಮೋಹಿಸಿ |ಬಾಯ ಮುಚ್ಚಿ ಕೊಲ್ಲುತಿಹಳು ಕಾಯೊ ಲಕ್ಷ್ಮೀರಮಣನೆ ಪಮಾತೆ-ಪಿತರ ವಿಷಯದಿಂದ ಶ್ವೇತಬಿಂದು ಬೀಳಲಾಗಿ |ಕೀತ ತತ್ತಿ ಬಲಿದು ಮಾಸಚೀಲದೊಳಗೆ ಬೆಳೆದೆನು ||ರಕ್ತಗೂಡಿ ಬಸಿರೊಳೊಂಬತ್ತು ತಿಂಗಳಿದ್ದೆ ನಾನು |ಸತ್ತು ಮತ್ತೆ ಹುಟ್ಟ ಹೋಗಲಾರೆ ಲಕ್ಷ್ಮೀರಮಣನೆ 1ಎಲವು ಕಂಬಮಾಡಿ ನರದ ಬಳ್ಳಿಯಲ್ಲಿ ಬಿಗಿದು ಬಿಗಿದು |ಒಳಗೆ ರಕ್ತದಿಂದ ಮೆತ್ತಿ ಹೊಸೆ ಪಾಪದಿಂದ ನಿಂದೆ ||ನೆಲೆಯ ಮನೆಯ ಮಾಡಿ ಚರ್ಮಹೊಲಿzಯ ಹೊದಿಕೆ ಹೊದಿಸಿದಂಥ |ಹೊಲೆಯ ಗೂಡಿನಲ್ಲಿ ಜನಿಸಲಾರೆ ಲಕ್ಷ್ಮೀರಮಣನೆ 2ಎನ್ನ ಸತಿಯು ಎನ್ನ ಸುತರು ಎನ್ನ ಬಂಧು - ಬಳಗವು |ಎನ್ನ ಸಾಕಿ ಸಲಹು ಎಂದು ಹರಿದು ತಿಂಬರು ||ಎನ್ನ ತನುವ ಜವನು ಬಂದು ಎಳೆದುಕೊಂಡು ಒಯ್ಯುವಾಗ |ಬೆನ್ನಬಪ್ಪರಾರ ಕಾಣೆ ಚೆನ್ನ ಲಕ್ಷ್ಮೀರಮಣನೇ 3ಇರುವೆ ಮೊದಲು ಆನೆ ಕಡೆಯು ಬಸಿರೊಳು ಬಂದೆ ನಾ |ಹರಿದು ಪಾಪಕರ್ಮದಿಂದೆ ತೊಪಳಲಿಬಳಲಿ ನೊಂದೆ ನಾ ||ಬಿರುಗಾಳಿಗೆ ಸಿಕ್ಕ ಮರದ ತರಗೆಲೆಯಂತುದುರಿ ನಾ |ಮರಳಿ ಮರಳಿ ಸತ್ತು ಹುಟ್ಟಲಾರೆ ಲಕ್ಷ್ಮೀರಮಣನೆ 4ಲಕ್ಷ ಜೀವರಾಶಿಗಳನು ಕುಕ್ಷಿಯೊಳಗೆ ಇರಿಸಿ ನಿನ್ನ |ಅಕ್ಷಯ- ಅನಂತ ನನ್ನನೇಕೆ ಹೊರಗೆ ಮಾಡಿದೆ ||ಈಕ್ಷಿಸುತಿರು ಎನ್ನ ನೀನು ಕುಕ್ಷಿಯೊಳಗೆ ಇಂಬನಿತ್ತು |ರಕ್ಷಿಸಯ್ಯ ಲಕ್ಷೀಪತಿಪುರಂದರವಿಠಲನೆ5
--------------
ಪುರಂದರದಾಸರು
ಯದುನಂದನನ ನೋಡುವ - ಬಾರೆ ಲತಾಂಗಿ |ಹದಿನಾಲ್ಕು ಜಗವನ್ನು ಪೊರೆವ - ನೀಲಘನಾಂಗನ ಪಬಿಗಿದುಟ್ಟ ಕನಕಾಂಬರ - ಕಾಂಚಿಯದಾಮ|ನಗೆಯರಳ ಧರಿಸಿದವನ |ಅಗಣಿತಗುಣನಿಧಿ ಜಗವ ಮೋಹಿಪ ಕೃಷ್ಣನ1ಸಣ್ಣ ಪೊಂಗಳಲೂದುತ - ವನ್ಯದಳಾಕ್ಷ |ಕಣ್ಣ ಸನ್ನೆಯ ಮಾಡುತ ||ಚಿಣ್ಣರ ಒಡಗೂಡಿ ಚಿಗಿದುಬಾಹಕೃಷ್ಣನ2ಮಂದಹಾಸ ಮುಖಾಂಬುಜ - ಪೊಂದಿದಂಥ |ಗಂಧ-ಕಸ್ತೂರಿ ತಿಲಕಾ |ಬಂದ ನಮ್ಮ ಪುರಂದರವಿಠಲ ಇಂದಿರೆಯರಸನ 3
--------------
ಪುರಂದರದಾಸರು
ರಂಗ ಕೊಳಲನೂದಲಾಗ |ಮಂಗಳಮಯವಾಯ್ತುಧರೆ-ಜ -ಪನಂಗಳು ಚೈತನ್ಯ ಮರೆದು |ರಂಗಧ್ಯಾನಪರರಾದರು ಅ.ಪಬಾಡಿದ ಮಾಮರಗಳು ಗೊನೆಯೊಡೆದವು |ತೀಡುತ ಮಾರುತ ಮಂದಗತಿಗೊಯ್ಯೆ ||ಬಾಡಿದ ಬರಲು ಫಲದ ಗೊಂಚಲು |ಪಾಡಲೊಲ್ಲವಳಿಕುಲಗಳು ||ಹೇಡಿಗೊಂಡವು ಜಕ್ಕವಕ್ಕಿ ಗಿಳಿ ಮಾ-|ತಾಡದೆ ಕಳೆಗುಂದಿದವು ಕೋಗಿಲೆ ||ಓಡಾಟ ವೈರಾಟ ಬಿಟ್ಟು ಖಗಮೃಗ |ಗಾಢ ನಿದ್ರಾವಶವಾದವು 1ಕೆಳಗಿನುದಕ ಉಬ್ಬೇರಿ ಬಂದುವು |ತುಳುಕಿ ಚೆಲ್ಲಾಡಿ ನಿಂದಳು ಯಮುನೆ ||ಮಳೆಯ ಮೋಡೊಡ್ಡಿ ಮೇಘಾಳಿ ಧಾರಿಟ್ಟುವು |ಕಲುಕರಗಿ ಕರಗಿ ನೀರಾದುವು ||ನಳಿನಚಂಪಕನಾಗಪುನ್ನಾಗಪಾ-|ಟಲ ಸೇವಂತಿಗೆ ಕುಂದ-ಮೊಲ್ಲೆ ಮಲ್ಲಿಗೆ ಬ-||ಕುಲ ಮಾಲತಿ ಜಾಜಿ ಪರಿಮಳಗೂಡಿ |ನೀಲಾಂಗನಂಘ್ರಿಗೆ ನೆರೆದುವು 2ಕೆಚ್ಚಲು ಬಿಗಿದು ತೊರೆದ ಮೊಲೆಯೊಳು |ವತ್ಸದೊಡಲಾಸೆಜರಿದುಎಳೆಹಲ್ಲ||ಕಚ್ಚದಲ್ಲಿಗಲ್ಲಿ ನಿಂದುವು ತಮ್ಮಯ |ಪುಚ್ಚವ ನೆಗಹಿ ನೀಂಟಿಸಿ ||ಅಚ್ಯುತನಾಕೃತಿ ನೋಡಲು ಸುರರಿಗೆ |ಅಚ್ಚರಿಯಾಯಿತು ಆವು ಕಂಡಾನಂದ ||ಪೆಚ್ಚಿ ಮುಕುಂದನ ಲೀಲಾವಿನೋದಕೆ |ಮೆಚ್ಚಿ ಕುಸುಮವ ಸುರಿದರು 3ಮುದ್ದು ಮೋಹನನ ಮಂಜುಳ ಸಂಗೀತ |ಸದ್ದನಾಲಿಸಿ ಗೋಪಾಂಗನೆಯರೆಲ್ಲ ||ಬುದ್ಧಿ ಸೂರಾಡಿ ತಮ್ಮಾಲಯವನೆ ಬಿಟ್ಟು |ಎದ್ದು ಪರವಶರಾದರು ||ಸಿದ್ದ ಮುನಿಜನರಿದ್ದ ಸಮಾಧಿಯಿಂ-|ದೆದ್ದೆದ್ದು ಕುಣಿದೆದ್ದರು ಎದುರಾಗಿ ||ಗದ್ದುಗೆಯರಸನ ಒಲಿಸಿಕೊಂಡರು |ಗೆದ್ದರು ಭವದ ಸಮುದ್ರವನು 4ಶ್ರೀಮನೋಹರ ಗೋಪಾಲ ಮೂರುತಿ |ಆ ಮಧು ಕುಂಜ ವನದಿ ತ್ರಿಭಂಗಿಯಲಿ ||ಹೇಮಾಂಬರವುಟ್ಟು ಗೀರುಗಂಧ ಕಸ್ತೂರಿ |ನಾಮ ಮುಕುಟದ ಬೆಳಕಿನಲಿ ||ದಾಮವನಮಾಲೆ ಶ್ರೀವತ್ಸಕೌಸ್ತುಭ|ಸ್ವಾಮಿ ಪುರಂದರವಿಠಲರಾಯನ |ರಾಮಶ್ರಿ-ಗುಂಡಶ್ರಿ ಮೇಘರಂಜನೆ ಪಾಡಿ |ಸಾಮಗಾನಪ್ರಿಯ ನಮೊ ಎಂದರು 5
--------------
ಪುರಂದರದಾಸರು
ಸಂಕ್ಷಿಪ್ತ ವಿರಾಟಪರ್ವಕೇಳು ಜನಮೇಜಯರಾಜ ಭೂಮಿ-ಪಾಲ ಪಾಂಡವರ ಸತ್ಕಥೆಯ ಪ.ಶ್ರೀಲಲಾಮನ ನೆನೆದುಭೂರಿವ-ನಾಳಿಯನು ಸಂಚರಿಸಿ ಸಜ್ಜನಕೇಳಿಯಲಿ ವನವಾಸದವಧಿಯಕಾಲವನು ಕಳೆಕಳೆದು ಬಂದರು ಅ.ಪ.ದರ್ವೀಧರಹಸ್ತನಾಗಿ ಮಹಾಪರ್ವತದಂತುರೆ ಮಸಗಿನಿರ್ವಹಿಸಿ ಸೂದತ್ವವನು ಸಲೆಗರ್ವಿತಾಧಮ ಕೀಚಕನ ಕುಲಸರ್ವವನು ಸಂಹರಿಪ ಭೀಮ ಪೆ-ಸರ್ವಡೆದ ಗುರುವರ್ಯ ಬಂದನು 1ಕಡುಗಲಿ ಕಲಿಮಲಧ್ವಂಸ ಎದ್ದುನಡೆದು ಬಂದನು ಪರಮಹಂಸನಿಡುಕಿ ಮನದಿ ವಿರಾಟರಾಯನಪೊಡವಿಗಿಡೆ ಪದ ಕೀಚಕಾಖ್ಯನಎಡದ ಭುಜ ಕಂಪಿಸಿತು ಮೂಜಗದೊಡೆಯನುಡುಪತಿಕುಲಶಿಖಾಮಣಿ 2ಗಂಗಾದಿ ನದಿಗಳ ತೀರ ಪಟ್ಟಣಂಗಳ ಗೈದ ಸಂಚಾರತುಂಗಬಲ ಮಲ್ಲರುಗಳನು ಸಲೆಸಂಘಟಿಸಿ ಜೀಮೂತವೀರಪ್ಪಸಂಗದಲಿ ವೈರಾಟಪುರ ರಾಜಾಂಗಣಕೆ ಭದ್ರಾಂಗ ಬಂದನು 3ಇಂತು ಮಲ್ಲರನೆಲ್ಲ ಸದೆದು ಬಲವಂತರಿರಲು ನೃಪಗೊಲಿದುಸಂತಸವ ಬಡಿಸುತ್ತಲಿರಲ್ವಾಕುಂತಿತನಯರು ಹರಿಯ ನಾಮವಚಿಂತಿಸುತ ದಶಮಾಸ ಕಳೆದಾನಂತರದ ವೃತ್ತಾಂತವೆಲ್ಲವ 4ಕಥೆಯಂತೆ ಹಿಂದೆ ರಾವಣನ ಕೆಟ್ಟಗತಿಗನುಚರ ಕೀಚಕನಸ್ಥಿತಿಯು ದ್ರುಪದಜೆಗಾದಮಾನಚ್ಯುತಿಗೆ ಕಾರಣನಾದ ಜಡ ದು-ರ್ಮತಿ ಖಳಾಧಮನೊಂದು ದಿನನೃಪಸತಿಸಭೆಗೆ ಅತಿ ಹಿತದಿ ಬಂದನು 5ಪಾಪಿ ಕೀಚಕನಿಗಿಂತುಸುರಿ ದ್ರುಪದಭೂಪಾಲಕನ ಕಿಶೋರಿಶ್ರೀಪತಿಯ ನಾಮವನು ಸ್ಮರಿಸುತ-ಲಾ ಪತಿವ್ರತೆ ತೊಲಗಲಂಗಜತಾಪತಪ್ತಾಂತಃಕರಣನಾ ಪರಿಯ ಮತಿ ವ್ಯಾಪಿಸಿದನು 6ಲಾಲಿಸಿ ಮಾಲಿನಿವಚನ ತೋಷತಾಳಿದ ದುರ್ಗುಣಸದನಕಾಲಪಾಶದಿ ಬಿಗಿವಡೆದು ಹೇ-ರಾಳ ಮುದಕೀಲಾಲ ಸಲೆ ಕ-ಲ್ಲೋಲಜಾಲದಿ ಮುಳುಗಿ ನರ್ತನಶಾಲೆಗಾಗಿ ಕರಾಳ ಬಂದನು 7ಮಥಿಸಿ ಕೀಚಕನ ಮಂಟಪದಿ ದ್ರುಪದಸುತೆಗೆ ತೋರಿಸಲತಿ ಮುದದಿಸತಿಶಿರೋಮಣಿ ಕಂಡು ಮನದೊಳ-ಗತುಳ ಹರುಷವನಾಂತು ಸರ್ವೋನ್ನತಭುಜನ ಚುಂಬಿಸಿದಳುಪತಿವ್ರತೆಯರ ಶಿರೋರತುನೆ ಪಾವನೆ 8ಇತ್ತ ವಿರಾಟನಗರದ ಸರ್ವವೃತ್ತಾಂತವೆಲ್ಲವ ತಿಳಿದಧೂರ್ತದುರ್ಯೋಧನ ದುರಾಗ್ರಹಚಿತ್ತಗ್ರಹಿಸಿದ ಕಾರ್ಯಕಾರಣವೃತ್ತಿಯಲ್ಲಿ ಪಾಂಡವರು ನಿಜವೆಂ-ದಾಪ್ತಜನರೊಳು ವಿಸ್ತರಿಸಿದನು 9ಸುರನದೀಸುತಕರ್ಣದ್ರೋಣ ಕೃಪಾದ್ಯರು ಕೂಡಿ ಕುಜನಪ್ರವೀಣಪೊರಟ ಪರಮೋತ್ಸಾಹ ಸಾಹಸಭರತಿ ಕೌರವರಾಯ ಮತ್ಸ್ಯನಪುರವರ ಸಮೀಪದಿ ಸುಶರ್ಮನಕರೆದೊರೆದ ಭೂವರ ನಿರ್ಧರ 10ನುಡಿಯ ಕೇಳುತಲಿ ಸುಶರ್ಮ ನಿಜಪಡೆಯ ನೆರಹಿ ವೈರಿವರ್ಮದೃಢಕರಿಸಿ ದಿನಮಣಿಯು ಪಶ್ಚಿಮ-ಕಡಲ ಸಾರುವ ಸಮಯ ಗೋವ್ಗಳಪಿಡಿದು ಗೋಪರ ಕೆಡಹಿ ಬೊಬ್ಬಿ-ಟ್ಟೊಡನೊಡನೆ ಪಡಿಬಲವನರಸಿದ 11ಹಾರಿಸಿದನು ರಥ ಪಾರ್ಥನರನಾರಿವೇಷದ ಪುರುಷಾರ್ಥತೋರಿಸುವೆನೆಂಬುತ್ಸಾಹದೊಳುಬ್ಬೇರಿ ಮನದೊಳು ಕೃಷ್ಣನಂಘ್ರಿಸ-ರೋರುಹಕೆ ಮಣಿದುತ್ತರನ ಸಹಸೇರಿ ನಗರದ್ವಾರ ದಾಟಿದ 12ಭೀತಿಯ ಬಿಡು ಬಾರೆಂದು ಪುರುಹೂತಸುತನು ಎಳತಂದುಘಾತಿಸುವೆ ರಿಪುಬಲವನೆಂದು ವ-ರೂಥದಲಿ ಕುಳ್ಳಿರಿಸಿ ನೃಪತನುಜಾತಸಹ ಪಿತೃವನದ ಮಧ್ಯ ಶ-ಮೀತರುವಿನೆಡೆಗೋತು ಬಂದರು 13ಇಂತು ತಿಳಿಸುತಲರ್ಜುನನು ಬಲವಂತನು ಧನುಶರಗಳನುತಾಂ ತವಕದಿಂ ಧರಿಸಿವಿಜಯಮ-ಹಾಂತ ವೀರಾವೇಶಭೂಷಣವಾಂತು ಶಂಖನಿನಾದದಿಂರಿಪುತಿಂಥಿಣಿಯ ಭಯಭ್ರಾಂತಗೊಳಿಸಿದ 14ಹೂಡಿ ಬಾಣವನುರ್ಜುನನು ಚೆಂ-ಡಾಡಿದ ರಿಪುಬಲವನ್ನುಮೂಢ ದುರ್ಯೋಧನನ ಕಣೆಗಳಜೋಡಣೆಗಳಿಂ ಬಿಗಿದು ತನ್ನೋಶಮಾಡಿಕೊಂಡನು ಗೋಪಗೋವ್ಗಳನಾಡಲೇನದ ಪ್ರೌಢತನವನು 15
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸಾರಿಗೆಯ ಮಾಡೋಣ ಸಜ್ಜನರು ಬನ್ನಿರೋನಾರಾಯಣನ ದಿವ್ಯನಾಮ ಭಾರಿ ಕೊಂಬ ಬನ್ನಿರೋ ಪ.ಹೃದಯವೆಂಬ ಚೀಲದೊಳಗೆ ಹರಿಯ ನಾಮ ಹೊನ್ನಹಾಕಿತುದಿ ನಾಲಿಗೆಯಿಂದ ತೆಗದು ವೆಚ್ಚವನ್ನು ಮಾಡಿರೊ 1ಙ್ಞÕನವೆಂಬ ಎತ್ತಿನಲ್ಲಿ ಕರುಣವೆಂಬ ಗೋಣಿಹಾಕಿದಾನ - ಧರ್ಮವೆಂಬ ದವಸ ಸರಕುಗಳ ತುಂಬಿರೊ 2ನೇಮ - ನಿತ್ಯವೆಂಬ ಗಟ್ಟಿ ನಡುವಿನಲ್ಲಿ ಬಿಗಿದು ಸುತ್ತಿಪ್ರೇಮವೆಂಬ ಚೊಕ್ಕ ಬುತ್ತಿ ಸೆರಗಿನಲ್ಲಿ ಕಟ್ಟಿರೋ 3ಕಾವಲಿಗರೈವರನ್ನು ಕಾಣದಂತೆ ಟಕ್ಕುದೋರಿಭಾವವೆಂಬ ಮಾರ್ಗದಲ್ಲಿ ಬೇಗ ಬೇಗ ಬನ್ನಿರೊ 4
--------------
ಪುರಂದರದಾಸರು
ಹಿಂದಿನ ಪುಣ್ಯ ಫಲವೆಂತೊಇಂದಿರೇಶಾನಂದದ ಲೀಲೆ ಅರುಹಿದ ಪ.ಚಿತ್ರವಿಚಿತ್ರ ಮಹಿಮೆಯ ತೋರುತಖಳದೈತ್ಯರನೆಲ್ಲ ಮಡುಹಿದದೈತ್ಯರನೆಲ್ಲ ಮಡುಹಿ ಬಳಲ್ದನೆಂದುಕಸ್ತೂರಿ ತೈಲವೆರಸಿ ತಂದು 1ಶಂಕಿನಿ ಪದ್ಮಿನಿಯರೊಂದಾಗಿ ಕೃಷ್ಣನಪಂಕಜಾಸನದಲಿ ಕುಳ್ಳಿರಿಸಿಪಂಕಜಾಸನದಲಿ ಕುಳ್ಳಿರಿಸಿ ತಮ್ಮ ಒಲ್ವಕಂಕಣಗೈಯ ಮೌಳಿಯೊಳಿಟ್ಟು 2ಈರೇಳು ಲೋಕದ ದೊರೆಯಾಗು ಭಕುತರಸಿರಿಯಾಗು ದಿತಿಜರರಿಯಾಗುಸಿರಿಯಾಗು ಭಕ್ತರ ದಿತಿಜಾರಿಯಾಗೆನುತಹರಸಿದರರ್ಥಿ ಮಿಗಿಲಾಗಿ 3ಕುಂಭಕುಚದ ಕಾಮಿನಿಯರು ಹರುಷದಿಅಂಬುಜಾಕ್ಷನ ಪೂಸಿ ಕಿರುಬೆಮರಿಅಂಬುಜಾಕ್ಷನ ಪೂಸಿ ಕಿರುಬೆಮರಿ ದಣಿಯದೆ ಕದಂಬ ಕಡಿದಟಕಾಳಿಯ ತಂದು 4ವಿಕ್ರಮಾನ್ವಿವತವಾದವ್ಯಾಕೃತ ಗಾತ್ರಕೆಅಕ್ಕರಿಂದೆ ತೈಲನಾಶನವಅಕ್ಕರಿಂದಲಿ ತೈಲನಾಶನವ ಪೂಸಿ ಜಗುಳಲುಘಕ್ಕನಂಬರವ ಬಿಗಿದುಟ್ಟ 5ಹದವಾದ ಬಿಸಿನೀರ ಪೊಂಬಂಡೆಯೊಳುತುಂಬಿಪದುಮಗಂಧೆಯರು ನೀರೆರೆದರುಪದುಮಗಂಧೆಯರು ನೀರೆರೆವ ಸಂಭ್ರಮಕ್ಕೆಮುದದಿಸುರರುಹೂಮಳೆಗರೆದರು6ಮುಂಬರಿಯುತ ಬಾಲೆಯರುತಕದಿಂದಅಂಬುಧಾರೆಯ ನಿಲ್ಲಗುಡದೆರೆದುಅಂಬುಧಾರೆಯ ನಿಲ್ಲಗುಡದೆರೆದುಜಾಂಬೂನದಾಂಬರವುಡಿಸಿ ಕರೆತಂದು 7ಚಿತ್ರಮಂಟಪಕೆ ನವರತ್ನ ತೆತ್ತಿಸಿದ ಕಂಭಕಸ್ತೂರಿ ಕಾರಣೆ ರಚನೆಯಕಸ್ತೂರಿ ಕಾರಣೆ ರಚನೆಯ ಮಧ್ಯದಿಮುತ್ತಿನ ಹಸೆಯೊಳು ಕುಳ್ಳಿರಿಸಿ 8ನೀಲಮಾಣಿಕಮೋಘದಿಂದಲೊಪ್ಪುವ ಪದಕಲೋಲನೇತ್ರೆಯರಳವಡಿಸಿದರುಲೋಲನೇತ್ರೆಯರು ಅಳವಡಿಸಿ ಅಂಗುಲಿಗೆಲ್ಲ ಮುದ್ರಿಕೆನಿಟ್ಟು ನಲಿದರು 9ಮುಕುಟಕೌಸ್ತುಭಮಣಿಯುಕುತ ಭೂಷಣವಿಟ್ಟುರುಕುಮಿಣಿ ಸತ್ಯರೆಡಬಲದಿರುಕುಮಿಣಿ ಸತ್ಯರೆಡಬಲದಿ ಕುಳ್ಳಿರೆನಿತ್ಯಮುಕುತಗಾರತಿಯ ಬೆಳಗಲು 10ಚಿನ್ನದ ಹರಿವಾಣದಿ ರನ್ನದಾರತಿಯಿಟ್ಟುಕನ್ನೇರು ಕಿರುನಗೆ ಬೀರಿದರುಕನ್ನೇರು ಕಿರುನಗೆ ಬಿರಿಯುತ ಪಣೆಯೊಳುಪೊನ್ನಿನಾಕ್ಷತೆಯಿಟ್ಟು ಲಲಿತವ 11ಜಯ ರಾಮ ತ್ರೈಧಾಮ ಜಯ ಜೀಮೂತಶಾಮಜಯ ಪೂರ್ಣಕಾಮ ಸಾಸಿರನಾಮಜಯ ಪೂರ್ಣಕಾಮ ಸಾಸಿರನಾಮನೆಂದುಭಯರಹಿತಗಾರತಿಯ ಬೆಳಗಿದರು 12ಚಿತ್ತಜನಯ್ಯಗೆ ಚಿನುಮಯ ದೇಹಗೆಉತ್ತಮಗುಣಗಣ ಭರಿತಗೆಉತ್ತಮಗುಣಗಣ ಭರಿತಗೆ ಪರಮಪವಿತ್ರೇರಾರತಿಯ ಬೆಳಗಿದರು 13ಪನ್ನಗಾದ್ರಿವಾಸ ಪ್ರಸನ್ನವೆಂಕಟೇಶಕನ್ನೆ ಲಕ್ಷ್ಮಿಯ ಕೂಡಿ ಆರೋಗಣೆಯಕನ್ನೆ ಲಕ್ಷ್ಮಿಯ ಕೂಡ ಆರೋಗಣೆಯ ಮಾಡಿತನ್ನ ಭಕ್ತರಿಗೆಲ್ಲ ಸುಖಪ್ರೀತ 14
--------------
ಪ್ರಸನ್ನವೆಂಕಟದಾಸರು