ಒಟ್ಟು 88 ಕಡೆಗಳಲ್ಲಿ , 35 ದಾಸರು , 78 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೆರಗ ಬಿಡಯ್ಯ ಕೃಷ್ಣ - ಕರೆಯಲು ಪೋಪೆನು |ಕರುಗಳು ಹಸಿದಿವೆ ಕರುಣಿಗಳರಸನೆ ಪಕೆನೆಮೊಸರನೆ ಕಡೆದು ನಿನಗೀವೆ ಬೆಣ್ಣೆಯ |ಗೊನೆಯ ಬಾಳೆಯ ಹಣ್ಣ ತಿನಲು ಕೊಡುವೆ ||ನೆನೆಗಡಲೆ ಕೊಬ್ಬರಿ ನಿನಗೆ ಮೆಲಲಿಕ್ಕುವೆ |ತನಯರೊಡನೆ ಆಡಕಳುಹುವೆ ರಂಗಯ್ಯ 1ಗೋವಳರೆಲ್ಲ ಬಂದು ಬಾಗಿಲೊಳಗೆನಿಂದು|ಗೋವುಗಳನು ಬಿಡಲು ಸಾರುತಿಹರು ||ನೋವುಗೊಳಿಸಬೇಡ ಪರರ ಮಕ್ಕಳ ನೀನು |ಭಾವಜನಯ್ಯನೆ ಲಾಲಿಸೀ ನುಡಿಯನು 2ಶರಧಿಯ ತಡಿಯಲಿ ನೆರೆದಿಪ್ಪ ಸತಿಯರ |ಪರಿಪರಿ ವಸ್ತ್ರವ ಸೆಳೆಯಬೇಡ ||ನೆರೆಮನೆ ಹೊರೆಮನೆ ಕರುಗಳ ಬಿಡಬೇಡ |ಸುರರಿಗೊಡೆಯ ನಮ್ಮ ಪುರಂದರವಿಠಲ 3
--------------
ಪುರಂದರದಾಸರು
ಹಂಚಿನ ಇದಿರಲಿ ಹಲ್ಲನು ತೆಗೆಯಲುಮಿಂಚುವ ಕನ್ನಡಿಯಾದೀತೆ ? ಪ.ಮಿಂಚಿನ ಬೆಳಕಲಿ ದಾರಿಯ ನಡೆದರೆಮುಂಚುವ ಊರಿಗೆ ಮುಟ್ಟೀತೆ ? ಅಪಬಾಲರ ಭಾಷೆಯ ನಂಬಿ ನಡೆದರೆಶೀಲದ ಕೆಲಸಗಳಾದೀತೆ ?ಜೋಲುವ ಹೋತಿನ ಮೊಲೆಗಳ ಹಿಂಡಲುಹಾಲಿನ ಹನಿಯದು ಹೊರಟೀತೆ ?ಕಾಲುವೆ ಬಚ್ಚಲಕುಣಿ ನೀರಿಗೆ -ಘನಬಾಳೆಯ ತೋಟವು ಆದೀತೆ ?ಮೇಲುಬಣ್ಣಾದಾ ಆಲದ ಹಣ್ಣುನಾಲಿಗೆಸವಿಯನು ಕೊಟ್ಟೀತೆ ? 1ಭಾಷೆಯ ನುಡಿಗಳಿಗಾಸೆ ಮಾಡೆ ಮನದಾಸೆಯ ಕಾರ್ಯಗಳಾದೀತೆ ?ದೋಸೆಯ ಛಿದ್ರದಿ ಆರಿಸೆ ಕಾಳಿನರಾಶಿಯು ಹಸನವು ಆದೀತೆ ?ಕಾಸಿ ಕಬ್ಬಿಣವ ಗಟ್ಟಿ ಕೂಡಿಟ್ಟರೆಮಾಸದ ಮನೆ ಬದುಕಾದೀತೆ ?ಕಾಸಾರದೆದುರಿಗೆ ಹರಿಕಥೆ ಹೇಳ್ದರೆಸೋಸಿ ಕೇಳ್ದು ತಲೆದೂಗೀತೆ ? 2ಮಿಥ್ಯಾವಚನಿಯ ಮಾತನು ನಂಬಲುಹೊತ್ತಿಗೆ ಅದು ಬಂದೊದಗೀತೆ ?ಸತ್ತವನೆದುರಿಗೆ ಸುತ್ತಲು ಕುಳಿತುಅತ್ತರೆ ಆ ಹೆಣ ಕೇಳೀತೆ ?ನಿತ್ಯನಪುಂಸಕನೈದಲು ತರುಣಿಗೆಚಿತ್ತ ಸುಖವು ಸೂರಾದೀತೆ ?ಕುತ್ತಿಗೆಗೊಯ್ಕನ ಕಾಲು ಹಿಡಿದರೆಹತ್ಯದೊಳ್ಹೇಸಿಕೆಹುಟ್ಟೀತೆ ?3ಬೋರಗಲ್ಲಿನ ಮುಂದೆ ಬಡತನ ಹೇಳಲುಸಾರಸುಖಕ್ಕನುವಾದೀತೆ ?ಚೋರನು ಚಂದ್ರಗೆ ಕೈಮರೆ ಮಾಡಲುಚೌರ್ಯಕೆ ಕತ್ತಲು ಒದಗೀತೆ ?ನೀರಿಲ್ಲದ ಕೆರೆಯೊಳಗೆ ಮತ್ಸ್ಯದಾಹಾರಿಗೆ ಮೀನವು ದೊರಕೀತೆಕಾರಣವಿಲ್ಲದ ಲೌಕಿಕ ಕಥೆಯಿಂಘೋರನರಕ ಭಯ ತಪ್ಪೀತೆ ?4ಬೆಟ್ಟಕೆ ಕಲ್ಲನು ಹೊತ್ತೊಯ್ದೊಗೆಯಲುಹೊಟ್ಟೆಗೆಓದನ ಸಿಕ್ಕಿತೆ ?ಹುಟ್ಟು ಬಂಜೆಗೆ ಹಡೆಯುವ ವ್ಯಥೆ ಹೇಳಲುಹೊಟ್ಟೆಯಲಿ ಕಳವಳ ಹುಟ್ಟೀತೆ ?ಕೆಟ್ಟ ಬಯಸುವರಿಗೆ ಮೃಷ್ಟಾನ್ನವುಣಿಸಲುಕೆಟ್ಟ ಮಾತು ಅದು ಬಿಟ್ಟೀತೆ?ದಿಟ್ಟ ಪುರಂದರವಿಠಲರಾಯನಬಿಟ್ಟರೆ ಸದ್ಗತಿಯಾದೀತೆ? 5
--------------
ಪುರಂದರದಾಸರು
ಹಣ್ಣು ಕೊಂಬುವ ಬನ್ನಿರಿ ಹರಿದಾಸರುಹಣ್ಣು ಕೊಂಬುವ ಬನ್ನಿರಿ ಪ.ಚೆನ್ನ ಬಾಲಕೃಷ್ಣನೆಂಬಕನ್ನೆಗೊನೆಬಾಳೆಹಣ್ಣು ಅಪಸುತ್ತೇಳು ಲೋಕದಿಸುರರು ಬಿತ್ತಿದ ಹಣ್ಣುಭಕ್ತರ ಬಾಯೊಳು ನೆನೆವ ಹಣ್ಣುಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆನಿತ್ಯಮಾಧವನೆಂಬ ಅಚ್ಚಮಾವಿನ ಹಣ್ಣು1ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣುನಿಜಮುನಿಗಳಿಗೆ ತೋರಿಸಿದ ಹಣ್ಣುತ್ರಿಜಗವಂದಿತ ಪಾಲ್ಗಡಲೊಡೆಯನೆ ಹಣ್ಣುಸುಜನಭಕ್ತರೆಲ್ಲಕೊಳ್ಳಬನ್ನಿರಿ ಹಣ್ಣು2ತುರವ ಕಾಯ್ದ ಹಣ್ಣು ಉರಗನ ತುಳಿದಾ ಹಣ್ಣುಕರೆದರೆ ಕಂಬದೊಳು ಓಯೆಂಬ ಹಣ್ಣುಮರುಗುವ ಧೃವನಿಗೆ ಪಟ್ಟಗಟ್ಟಿದ ಹಣ್ಣು
--------------
ಪುರಂದರದಾಸರು