ಒಟ್ಟು 79 ಕಡೆಗಳಲ್ಲಿ , 35 ದಾಸರು , 77 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೆ ನೀನಲ್ಲದಾರ ಕಾಣೆ ಕಾಯ್ವರಮರೆ ಹೊಕ್ಕವರ ಭಯ ಪರಿಹಾರವನು ಮಾಡಿ ಪಶಿವಭಕ್ತಾಗ್ರಣಿ ಬಾಹ್ರ್ಯದ್ರಥ ಗಂಜಾಲೆಮಜಾ ನಿ- |ನ್ನವನಿಂದಳಿಸಿದೆ, ಬಾಣನ ಬಾಗಿಲೂ ||ಭವಕಾಯ್ದಿರಲು ನೀ ತೋಳ್ಗಳನು ಛೇದಿಸುವಾಗ |ಲವಮಾತ್ರ ಪ್ರತಿಕೂಲನಾಗಲಿಲ್ಲ ಶಂಕರನು 1ಹರಿಯೆಂದುದಕೆ ತಾಳದಲೆ ಬಾಧಿಸುತಲಿರೆ |ತರಳನ ಮೊರೆಕೇಳಿಕಂಭದಿಂದ ||ಉರಿಯುಗುಳುತ ಬಂದು ಖಳನುದರವ ಬಗೆದು |ಶರಣ ಪಾಲಕನೆಂಬ ಬಿರುದು ದಕ್ಕಿಸಿಕೊಂಡೆ 2ಸ್ಥಾಣುವಿನವರಬಲದಿಂದಮರರ ಕಾಡೆ |ದಾನವಾನ್ವಯ ಕೊಂದೆ ಭಸ್ಮಾಸು- ||ರನು ಪಾಣಿಯ ತಲೆಯೊಳಿಡುವೆನೆಂಬೊ ಭರದಿ ಬರಲು |ಪ್ರಾಣೇಶ ವಿಠಲ ನೀ ಶಂಕರನನುಳುಹಿದಿ 3
--------------
ಪ್ರಾಣೇಶದಾಸರು
ಹೇಳಬಾರದೆ ಬುದ್ಧಿಯ - ಮಗನ ಊರ-|ಗೂಳಿಯ ಮಾಡಿದೆನೆ ? ಪಮೇಳದಿ ಓರಗೆಯವರ ಕೂಡಿಕೊಂಡು |ಹಾಳು ಮಾಡುತಾನೆ ಗೋವಳಗೇರಿಯ ಅ.ಪಅಟ್ಟದ ಮೇಲಿಟ್ಟಹ - ಚೆಟ್ಟಿಗೆ ಹಾಲು |ಬಟ್ಟನಿಕ್ಕಿ ಚೀಪುವ ||ದುಷ್ಟತನವ ಮಾಡಬೇಡ ಅಯ್ಯಾ ಎನೆ |ಕಷ್ಟವೇನೆಂಬೆ ಮುದ್ದಿಟ್ಟು ಓಡಿ ಪೋದ 1ಮೊಸರ ಮಥಿಸುತಿರಲು - ಬಂದು ಕುಳಿತ |ಹಸುಗೂಸು ಎನುತಿದ್ದೆನೆ ||ಕುಸುಮನಾಭನು ತನ್ನ ವಶವಾಗು ಎನುತಲಿ |ವಸನೆತೆಗೆದು ಮೊಲೆ ಪಿಡಿದು ಹೋದ ಮೇಲೆ 2ಬೆಣ್ಣೆಯ ಕಂಡರಂತೂ - ಅದರರೂಪ |ಕಣ್ಣಿಗೆ ತೋರನಲೆ ||ಸಣ್ಣವನೆಂದು ಬಗೆದು ನಾ ಕರೆದರೆ |ಬಣ್ಣದ ಮಾತಾಡಿ ಬಾ ಎಂದು ಕರೆವನು 3ಉಡುವ ಸೀರೆಯ ಕಳೆದು - ತಡಿಯಲಿಟ್ಟು |ಮಡುವಿನೊಳ್ ಮೈದೊಳೆಯೆ ||ದಡದಡ ಬಂದೊಯ್ದು ಕಡಹದ ಮರವೇರಿ |ಕೊಡು ಕೃಷ್ಣ ಎನುತಿರೆ ಪಿಡಿ ಜೋಡು ಕೈಯೆಂಬ 4ಎಷ್ಟು ಹೇಳಲಿ ನಿನಗೆ - ಯಶೋದೆ ಒಂ-|ದಿಷ್ಟು ಕರುಣವಿಲ್ಲವೆ |ಸೃಷ್ಟಿಗೊಡೆಯ ನಮ್ಮಪುರಂದರವಿಠಲ-------------------------- 5
--------------
ಪುರಂದರದಾಸರು