ಒಟ್ಟು 201 ಕಡೆಗಳಲ್ಲಿ , 62 ದಾಸರು , 196 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಶುಪತಿ ಬಂದ ಆನಂದದಿಂದ ಪ ಶಶಿಧರ ಶಂಕರ ಸುರಗಂಗಾಧರ ಅಸಮ ಸುಶೋಭಿತ ಜಟಾಜೂಟಧರ ಅ.ಪ ಕರÀದಿ ಧರಿಸಿದ ಡಮರುಗ ತ್ರಿಶೂಲ | ಸುಂದರವಾದ ವರಸಾರಂಗ ಸರಸಿಜಭವ ಕಪಾಲ | ಕೊರಳಲಿ ನೋಡೆ ಧರಿಸಿದ ಬಹುಪರಿ ರುಂಡಮಾಲಾ | ಕಿಡಿಗಣ್ಣಿನ ಫಾಲಾ ಗರಳಕಂಠ ಕರಿವರ ಚರ್ಮಾಂಬರ ಸ್ಮರ ಮದಪರಿಹರ 1 ರಜತಾಚಲ ಮಂದಿರವಾಸ | ಮಹೇಶ ಶಿವಕೃತ್ತಿವಾಸ ಭುಜಗಭೂಷಣ ಶೋಭಿತ ವರವೇಷ | ಭಕ್ತರ ಪೋಷ ಗಜಮುಖ ಜನಕ ಭೂತ ಗಣೇಶ ಪಾಪೌಘ ವಿನಾಶ ಕುಜನಾವಳಿ ಮದಗಜ ಮೃಗರಾಜನು ಸುಜನಜಾಲ ಪಂಕಜಹಿತ ದಿನಮಣಿ 2 ಸುರವರನಮಿತಚರಣನು ಬಂದ | ಶೋಭಿತವಾದ ಪರಿಪರಿ ಚಿತ್ರ ಭೂಷಣನು ಬಂದ | ಕೋರಿದವರ ಕರೆದೀವ ಕರುಣಾಭರಣನು ಬಂದ | ತಾನೊಲವಿಂದ ಚರಣ ಶರಣರಘ ಪರಿಹರಗೈಸುವ ಪುರಹರ ಶಂಕರ 3
--------------
ವರಾವಾಣಿರಾಮರಾಯದಾಸರು
ಪಾದ | ಲೇಸಾಗಿ ಭಜಿಸಲುಕೇಶವ ನೊಲುಮೆಗೆ ಅವಕಾಶವೊ ಪ ಆಸದಾಶಿವ ವಂದ್ಯ ಶ್ರೀಶನ ಪದ ಪದುಮಸೂಸಿ ಸೇವಿಸುವಂಥ ದೈಶಿಕರೊಡೆಯರ ಅ.ಪ. ಯತಿವರ ಬ್ರಹ್ಮಣ್ಯ ವರದಿಂದುದ್ಭವ ವಸುಮತಿಯ ಸ್ಪರ್ಶದ ಮುನ್ನ ಕನಕಪಾತ್ರ ಧೃತನೆ |ಮತಿವಂತನೆನಿಸುತಬ್ಬೂರೊಳು ನೆಲೆಸುತ್ತಯತಿಯಾಗಿ ಮೆರೆದೆ ಬ್ರಹ್ಮಣ್ಯರ ಕರಜನೆ 1 ಶ್ರೀಪಾದರಾಯರಲ್ಲೋದಿ ಸುಧಾದಿಯಆ ಪಂಪಾ ಕ್ಷೇತ್ರವ ಪ್ರಾಪಿಸಿ ನೆಲಿಸೀ |ತಾಪಸೀಗಳು ವಿಜಯೀಂದ್ರ ವಾದಿರಾಜಗಾಪಾರ ಮಹಿಮನ ತತ್ವಗಳೊರೆದಂಥ 2 ವಿದ್ಯಾನಗರಿಯ ಭವ್ಯ ಗದ್ದುಗೆಯನೆ ಯೇರ್ದತಿದ್ದೀದ ಪೃಥುವೀಪ ಕುಹುಯೋಗವಾ |ಮಧ್ವ ಸಮಯ ವರ ದುಗ್ದಾಭ್ಧಿ ಪೂರ್ಣೇಂದುಅದ್ವೈತ ತಮಸೂರ್ಯ ವರ ಚಂದ್ರಿಕಾಚಾರ್ಯ 3 ಮಾಯಾ ಸಮಯ ಮದಕರಿಗೆ ಕಂಠೀರವನ್ಯಾಯಾಮೃತವು ತರ್ಕ ತಾಂಡವ ರಚಿಸೀ |ಮಾಯಾ ಮತಂಗಳ ಛೇದಿಸಿ ಬಹುವಿಧರಾಯ ಕೃಷ್ಣನೆ ಪರಾತ್ಪರನೆಂದು ಪೇಳಿದ 4 ಮಾಸ ಫಾಲ್ಗುಣ ವದ್ಯಎರಡೆರಡನೆ ದಿನವು ಶನಿವಾರದೋಳ್ ವರ ಗುರು ಗೋವಿಂದ ವಿಠಲ ಧ್ಯಾನಾನಂದ ಪರನಾಗಿ ತನು ಕಳೆದ ನವ ವೃಂದಾವನದೊಳು 5
--------------
ಗುರುಗೋವಿಂದವಿಠಲರು
ಪಾದ ಚಿಂತನವು ಕ್ಷಣದಲಿ ಶೋಧಿಪುದು ಮತಿಯ ತಾರಕ ಪ ಮೋದತೀರ್ಥರ ಭೇದಮತ ಅನು ವಾದ ಮಾಡಿದ ಶ್ರೀಜಯತೀರ್ಥರ ಅ.ಪ ಈ ಜಗದೊಳಗಿನ ರಾಜಕೀಯದ ಸೋಜಿಗ ಜೀವನವನೆ ತೊರೆದು ರಾಜೀವೋದ್ಭವನಯ್ಯನ ಚರಣಾಂ ಬೋಜ ನಿರತ ಯತಿರಾಜರ ತಾರಕ 1 ಕಾಕುಮತಗಳನೇಕಗಳನು ನಿ ರಾಕರಿಪ ಗ್ರಂಥಗಳನು ರಚಿಸಿ ಲೋಕೋತ್ತರನಿಗೆ ನ್ಯಾಯಸುಧೆಯಭಿ ಷೇಕವ ಮಾಡಿದ ಟೀಕಾಚಾರ್ಯರ 2 ವಿಧಿ ಫಾ ಲಾಕ್ಷನುತ ಶ್ರೀಕೃಷ್ಣನ ಪೂಜಕ ದುಷ್ಟ ಪಕ್ಷ ನಿರಾಸದಲಿ ಅತಿ ದಕ್ಷ ದೀಕ್ಷ ಅಕ್ಷೋಭ್ಯರ ಕುವರರ 3
--------------
ವಿದ್ಯಾಪ್ರಸನ್ನತೀರ್ಥರು
ಪಾದುಕವೇ ಗುರು ಪಾದುಕವೇ | ಪಾದುಕವೇ ಗತಿ ದಾಯಕವೇ ಪ ಕಲ್ಪತರು ಬೇಡಿದಲ್ಪವ ಕೊಡುವದು | ಕಲ್ಪಿಸದೀವುದ ಕಲ್ಪಿತ ಫಲಗಳ 1 ದಾರುಶಿಲೆಯ ವಂದವಾರಿಸ ಲರಿಯದು | ತೋರುವಫಾದ್ರಿ ವಿದಾರಿಸಿ ನೂಕುವಾ 2 ತಂದೆ ಮಹೀಪತಿ ದ್ವಂದ್ವ ಪಾದಕ ಹೊಂದಿ | ವಂದ್ಯ ಸರ್ವರಿಗಾಗಿ ನಂದನ ಸಲಹುವ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಿಸಗಸ್ತ್ಯ ಪುರವಾಸಾ ಸಂತತ ಲೇಸಾ ಲಾಲಿಸೋ ಭಾರತೀಶಾ ಪ ಪದ್ಯ ನಿತ್ಯ ನಿರ್ಧೂತಮಾಯಾ ಕವಿಜನ ವರಗೇಯಾ, ಕಾಮಿತಾರ್ಥಾಭಿಧೀಯಾ ದಿವಿಭುವಿ ನಿಜಗೇಯಾ, ನೀತ ಸದ್ಭಕ್ತ ಪ್ರೀಯಾ ತ್ರಿವಿಧಜನ್ವ ಸುಕಾಯಾ ನಿಲಯ ವಾಙ್ಮನೋ ಪ್ರೀಯಾ ನಿಗಮ ವಂದಿತ ಮುಖ್ಯಗುಣಧಾಮಾ ಸ್ವಾಶ್ರಿತಪ್ರೇಮಾತೋಷಿತ ಶ್ರೀರಾಮಾ ಜಗಕೆ ಜೀವನÀನಾದ ಹನುಮಾ ಕಾಮದ ಭೀಮಾ ಮೋಕ್ಷದ ಮಧ್ವನಾಮಾ ಮುಗಿವೆ ಕರದ್ವಯ ನಿಮಗಯ್ಯಾ ನಮೋ ನತಜೀಯಾ ಸಂತತ ಪಿಡಿ ಕೈಯಾ 1 ಪದ್ಯ ಜಲರುಹಭವಪೋತಾ ಭೂತನಾಥೈಕತಾತಾ ಸುಲಲಿತಜನದಾತಾ ಶುದ್ಧಸತ್ತಾ ್ವಧಿನಾಥಾ ಕಲಿಮಲ ಪ್ರವೀಫಾತಾ ವಿಶ್ವಕೋಶವ್ಯತೀತಾ ವಿಲುಲಿತ ದಿತಿಜಾತಾ ಧೂತ ಸರ್ವತ್ರಾಭೀತಾ ಪದ ಏಕವಿಂಶತಿ ಸಹಸ್ರ ಷಟ್‍ಶತಾ ಜಪಮಾಡುತಾ ತ್ರಿವಿಧರೊಳಿರುತ ಎಕೋ ನಾರಾಯಣನುತ್ತಮಾ ಸರ್ವ ಸುರೋತ್ತಮ ಜೀವಗಣವೆಂಬೋದು ಅಥವಾ ಎಕೋ ಭಾವಭಕ್ತಿವಿಜ್ಞಾನಾ ಭವದೊಳು ಜ್ಞಾನಾ ಕಲ್ಪಿಸಿ ಅಜ್ಞಾನಾ ಏಕವಾಗಿತ್ತು ಸತ್ವರಾ ಭವದಿಂದ ಮುಕ್ತರಾ ಮಾಡುವಿ ಸತ್ವರಾ 2 ಪದ್ಯ ಶ್ರುತಿತತಿಸ್ಮøತಿವೇದ್ಯಾ ಸೂತ್ರನಾಮಾಮರಾದ್ಯಾ ವಿತತವಿಮಲಗಾತ್ರಾ, ವೀಶಶೇಷತ್ರಿನೇತ್ರಾ ಶತಮಖ ಮುಖಧ್ಯಾತಾ, ಧೀತವೇದಾಂತಜಾತಾ ಪದ ವಿಶ್ವೇಶ ವಿಶ್ವಾಂತರಾತುಮಾ ಚಿÉಚ್ಛುಕಾತುಮಾ ಸರ್ವಜೀವರುತ್ತಮಾ ವಿಶ್ವಾಸದಿಂದಲಿ ತವಪಾದಾ ಮೋದ ದಾಯಕ ಮುಕ್ತಿಫಲದಾ ವಿಶ್ವನಾಟಕ ವಿಷ್ಣುಪದ ಭಕ್ತಾ ಸಜ್ಜನಸಕ್ತ ಪಾಲಿಸು ನಿನ ಭಕ್ತಾ ವಿಶ್ವೇಶÀ ಗುರುಜಗನ್ನಾಥ ಮೋದ 3
--------------
ಗುರುಜಗನ್ನಾಥದಾಸರು
ಪಾಲಿಸಯ್ಯಾ ಫಣಿಗಿರಿವಾಸಜೀಯಾ ಪ. ಪಾಲಿಸೈ ಪಾಲಾಬ್ಧಿಶಾಯಿ ಸುಳೀನೀರದನಿಭಶರೀರ ಶ್ರೀ ಕಾಲ ಕಾಮಿತಫಲಪ್ರದಾಯಕ ಅ.ಪ. ಮುನ್ನ ಮಾಡಿದ ಕರ್ಮದಿಂದಲಿ ಬನ್ನಪಟ್ಟೆನು ಶ್ರೀಹರಿ ಇನ್ನು ನಿನ್ನಯ ಚರಣಯುಗವನು ನಿರ್ಣಯದಿ ನಂಬಿದ ಪರಿ ಉನ್ನತೋನ್ನತವಪ್ಪ ತೆರದಲಿ ಮನ್ನಿಪುದು ನೀ ಕೃಪೆದೋರಿ ಬನ್ನ ಪಡುವುದು ಸಾಕು ಸಂತತ ನಿನ್ನನೆ ನೆರೆನಂಬಿದೆನು ಹರಿ 1 ವಾತಪಿತ್ತಕಫಾದಿ ರೋಗದ ವ್ರಾತದಿಂದ ಬಲು ನೊಂದೆನು ಧಾತುಬಲವತಿ ತಗ್ಗಿ ಉಷ್ಣೋಪೇತದಿಂದಲಿ ಬೆಂದೆನು ಚಾತುರ್ಥಿಕ ಜ್ವರಾತಿಶಯದಲಿ ಶೀತಸ್ಥಾನದಿ ನಿಂದೆನು ಈ ತೆರದ ಕಷ್ಟಗಳು ಬಾರದ ರೀತಿಯಲಿ ಪರಿಹರಿಸು ಸಂತತ 2 ನಿನ್ನನೆ ಮರೆಹೋಗುವ ತೆರದಲಿ ನಿನ್ನ ಸ್ಮರಣೆಯ ಮಾಡುವ ನಿನ್ನ ಭಕ್ತರ ಮೇಳದಲಿ ಸಂಪನ್ನನಾಗುತ ಕೂಡುವ ನಿನ್ನ ಮೂರ್ತಿಯ ನೊಡುವದು ಮತ್ತೆನ್ನ ಕಾಮಿತ ಬೇಡುವ ನಿನ್ನನೇ ಧ್ಯಾನಿಸುವ ಮತಿಸಂಪನ್ನವನು ನೀನಿತ್ತು ಕರುಣದಿ3 ಮಾರುತಿಯ ಚರಣಾರವಿಂದದದಿ ಸೇರಿ ನಿನ್ನನು ಧರೆಯಲಿ ಭೂರಿ ಮಹಿಮೆಯ ವರ್ಣಿಸುವ ಸಾಕಾರ ಮತಿಯನು ಎನ್ನಲಿ ಪ್ರೇರಿಸುತ ಕರುಣಾರಸಾಮೃತ ಬೀರಿ ಭೀತಿಯ ಪರಿಹರಿಸುತ್ತಲಿ4 ಕೊಂಚ ಧನವನು ಕೊಟ್ಟು ಎನಗೆ ಪ್ರಪಂಚವಹ ಗೃಹ ಗೈದಿಸಿ ಮುಂಚೆಮಾಡಿದ ಪಾಪವನು ನಿರ್ಲಚದಿಂದಲೆ ಛೇದಿಸಿ ಮಿಂಚಿಯೆನ್ನೊಳು ಮೋದಿಸಿ ಪಂಚಬಾಣನ ಪಿತನೆ ಮಂಗಳ ವಾಂಛಿತವನೆನಗಿತ್ತು ವಿಭವದಿ5 ಕಷ್ಟದಲಿ ನಿನ್ನ ಧ್ಯಾನ ಬಾರದು ತುಷ್ಟಿಯಲಿ ನಾ ಧ್ಯಾನಿಪೆ ಇಷ್ಟವೇ ನೀನಿತ್ತೆಯಾದರೆ ಕಷ್ಟಗಳ ನಾ ದೂಷಿಪೆ ಶ್ರೇಷ್ಠ ಕಾರ್ಕಳ ಪುರದಿ ಭಕ್ತರ ಒಟ್ಟುಗೂಡುತ ತೋಷಿಪೆ ಭ್ರಷ್ಟಲೋಭದ ಬಂಧುಗಳು ಎನ್ನೊಳಿಷ್ಟವಾಗುವ ತೆರದಿ ದ್ರವ್ಯವ6 ಕಾಲಭೈರವ ಪೇಳಿದಂದದಿ ನಾಲಿಗೆಯೊಳು ತಪ್ಪು ನೋಡದೆ ಪಾಲಿಸುತ ಇಷ್ಟಾರ್ಥವನು ಕೈ ಮೇಳವಿಸು ತಪ್ಪು ನೋಡದೆ ನೀಲಗಿರಿ ಸಮನಾಗಿ ಕಾರ್ಕಳದಾಲಯವ ನೀ ಮಾಡಿದೆ ಪಡುತಿರುಪತಿ ಪುರೇಶನೆ 7
--------------
ತುಪಾಕಿ ವೆಂಕಟರಮಣಾಚಾರ್ಯ
ಪಾಲಿಸು ಪರಮೇಶ | ಪಾಪ ವಿನಾಶ ಪ ಫಾಲನಯನ ತ್ರಿಶೂಲಧರ ಕರು ಣಾಲವಾಲ ವಿಶಾಲ ಮಹಿಮನೆ ಕಾಲಕಾಲ ಕಪಾಲಧರ ಸುರ ಜಾಲನುತ ಪದ ಶೈಲಜಾವರ ಅ.ಪ. ಶಂಕರ ಶಶಿಶೇಖರ | ಸದಾಶಿವ ಸಂಕಟಹರ ಈಶ್ವರ | ವರದಾನ ಶೂರ ಶಂಕೆಯಿಲ್ಲದೆ ತ್ವತದಾಂಬುಜ ಪಂಕ ಕಳೆವ ಅಕ ಳಂಕ ಮತಿಯನು ಕರುಣಿಸುವ ಮೀ ನಾಂಕ ಮದಹರ ಮೃಡಸುರೇಶ್ವರ 1 ಗಜ ಚರ್ಮಾಂಬರಧರನೆ | ಗೌರೀವರನೆ ಅಜಸುತಾಧ್ವರ ಹರನೆ | ಪ್ರಣಿತಾರ್ಥಿಹರನೆ ನಿಜಪದಾಂಬುಜ ಪೂಜೆ ಮಾಡುವ ಸುಜನ ಮನ ಅಂಬುಜ ದಿವಾಕರ ಭಂಜನ ಭುಜಗಭೂಷಣ ನಿಜ ಚರಣ ಪಂಕಜವ ತೋರಿಸಿ..... 2 ಹರಿನೀಲನಿಭಕಂಧರ | ಮುಪ್ಪುರಹರ ಶರಣಜನ ಮಂದಾರ | ಕೈಲಾಸಮಂದಿರ ವರ ವಿನಾಯಕ ಜನಕ ಜಾಹ್ನವಿ ಧರನೇ ಕರುಣಾಭರಣ ಪಾವನಕರಿಗಿರೀಶನ ಪರಮಪ್ರಿಯ ಹರಿ..... 3
--------------
ವರಾವಾಣಿರಾಮರಾಯದಾಸರು
ಪಾಲಿಸು ಪರಮೇಶ್ವರಿ ಅಂಬಾ ಪ ಶ್ರೀಲಲಿತೇ ಗೌರಿ ಶೌರಿಸಹೋದರಿ ಫಾಲಾಕ್ಷಸಹಚರಿ ಬಾಲೇಂದುಶೇಖರಿ ಅ.ಪ ಭ್ರಮರಾಂಬೆ ದುರಿತಾರಿ ಹಿಮವಂತ ಸುಕುಮಾರಿ ಹೇಮಾಂಬರಧಾರಿ ಜಗದೀಶ್ವರೀ ಜಂಭಾರಿ ವಿನುತೆ ಮಾಹೇಶ್ವರಿ ಶ್ರೀಮಾಂಗಿರೀನಾಥ ಪ್ರೇಮಾಂಬುಲಹರೀ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಿಸು ಪಾಲಿಸು ಪಾರ್ವತಿ ತನಯನೆ ಫಾಲಚಂದ್ರಯುತನೆ ಕಾಲ ಸಂಭಾವನಲೋಲುಪ ವಾರಿಜಾಸ್ಯನುತನೆ ಪ ಸುಜನ ಗಜವದನಾ ಸುರಕುವಲಯ ದಿನಕರ ಧೂರ್ಜಟಿಸುತ ಗಣಪ 1 ಕಾಮಿತ ಫಲಗಳ ಪಡೆಯಲು ಸುಜನರು ನೇಮದಿ ಪೂಜಿಪರು ಸಾಮಜ ವದನನೆ ಭಕ್ತರಭೀಷ್ಟವÀ ಪ್ರೇಮದಿ ಕರುಣಿಸುತ 2 ಗಾನಲೋಲ ವರತಾಂಡವ ಪ್ರೀತನೆ ಕೋಮಲಾಂಗ ಸತತಂ ಧೇನುನಗರ ಸಂರಕ್ಷಣ ದಕ್ಷನೆ ಸಾನುರಾಗದಲನಿಶಂ 3 ಇಂದ್ರಾದಿ ದಿವಿಜರೆಲ್ಲ ಕುಂದುತ್ತ ದೈತ್ಯ ಭಯದಿಂ ಸುಂದರಿ ನಿನ್ನ ಭಜಿಸೆ ನಿಂದೆಲ್ಲರನ್ನು ಪೊರೆದೆÀ 4 ಕಮಲಾಕ್ಷಿ ವಿಮಲಪಾಣಿ ಕಮಲಾಪ್ತ ಮುಖ್ಯರಮಣೆ ಸುಮಶೋಭಮಾನವೇಣಿ ಕಮನೀಯ ದಿವ್ಯಪಾಣಿ 5 ಶಾಕಿನಿರೂಪೆ ದೇವಿ ಲೋಕೈಕ ವೀರ್ಯ ಧೈರ್ಯ ಬೇಕಾದ ವರಗಳಿತ್ತು ಶ್ರೀಕಾರ ಶಕ್ತಿಯೆನ್ನ 6 ಜ್ಞಾನವು ಮೌನ ಜಯವುಂ ಧ್ಯಾನ ಸುಮಂಗಲತ್ವಂಮಾನ ಸುಪುತ್ರ ಹಿತಮಂ ಧೇನು ಪುರೀಶೆ ಕೊಟ್ಟು 7
--------------
ಬೇಟೆರಾಯ ದೀಕ್ಷಿತರು
ಪಾಲಿಸೆನ್ನ ಪಾರ್ವತೀಶ ಫಾಲಲೋಚನ ಲಾಲಿಸೆನ್ನ ನುತಿಯ ದೇವ ಕಾಲಕಂಧರ ಪ ಪುಲ್ಲನಯನ ಚಲ್ವವದನ ಮಲ್ಲಿಕಾರ್ಚಿತ ಬಿಲ್ವ ಪಲ್ಲವಾದಿಪ್ರಿಯನೆ ಶೈಲಜಾಪತೆ 1 ವಿನುತ ಪಂಕಜಪ್ರಿಯ ಸಂಕಟಾದ್ರಿ ದೇವರಾಜ ಲೋಕಪಾಲಕ 2 ಪಾಹಿ ಪಾಹಿ ಕಾಲಕಾಲ ಮೋಹನಾಶಕ ಸ್ನೇಹದಿಂದಲೆನ್ನ ಬಿಡದೆ ವಾಮದೇವನೆ 3 ಧಾನವಾಂತಕಾದಿ ಹೃದಯ ಜೀವ ರೂಪನೆ ಕಮಲ ಭಾನುರೂಪನೆ 4
--------------
ಬೇಟೆರಾಯ ದೀಕ್ಷಿತರು
ಪಾಲಿಸೆನ್ನ ಪಾಲಿಸೋ ಎನ್ನಾ ಪ ಪಾಲಿಸೆನ್ನ ಗುರು ಫಾಲನಯನಾಸುರಪಾಲನ ಪಿತ ಶ್ರೀ ಪಾರ್ವತಿರಮಣಅ.ಪ. ಲಿಂಗವೇರಿ ಸುರರಂಗದಿ ಚರಿಸುವ ಶಿರಿರಂಗನ ಪದ ಪವನನ ಭೃಂಗಾ 1 ಕವಿ ವಿನುತ ಪರರಾಳಿಯ ಪ್ರಿಯಬಾಲಾ 2 ನವಿಲನೇರಿ ಬರುತಿಪ್ಪನ ಪಿತತಂದೆವರದಗೋಪಾಲವಿಠಲನ ಆಪ್ತಾ 3
--------------
ತಂದೆವರದಗೋಪಾಲವಿಠಲರು
ಪಾಲಿಸೆನ್ನ ಫಾಲಲೋಚನಾ ನಂದೀಶವಾಹನಾ ಪ ಸದನ ಅ.ಪ ನಾಗಭೂಷಣ ದನುಜಹರಣ ದಿವಿಜಶರಣ ಭೂತಗಣ ಭೋಗಿಶಯನ ಸಿರಿಯ ರಮಣ ವಿಮಲಚರಣ ಸೇವೆಯಿತ್ತು 1 ಮದನವೈರಿ ದುರಿತಹಾರಿ ಶಶಿಜಟಾಜೂಟಧಾರಿ ಮ ಮ ದೇವ ಮಾಂಗಿರಿರಂಗ ಚರಣಯುಗವ ತೋರಿ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಿಸೆನ್ನನು ಜಾನಕೀ ಅರವಿಂದ ನಾಯಕಿ ಪ. ಫಾಲಲೋಚನನುತೆ ತ್ರೈಲೊಕ್ಯ ವಿಖ್ಯಾತೆ ಬಾಲಾರ್ಕದ್ಯುತಿ ಭಾಸುರಾನನೆ ನೀಲಾಳಕೆ ನಿತ್ಯನಿರ್ಮಲೆ ಅ.ಪ. ಜನನಿಯಲ್ಲವೆ ನೀನು ತನುಭವರೊಳು ಇನಿತು ನಿರ್ದಯವೇನು ಮನಕೆ ತಾರಲು ನೀನಾಕ್ಷಣದೊಳೇ ದೀನನಂ ಅನಘ ಸಂಪದವಿತ್ತು ಮೆರೆಯಿಪ ಘನತೆಯಾಂತವಳಲ್ಲವೇನು 1 ಬಾಗುತೆ ಶಿರವಿಳೆಗೆ ಬೇಡುವ ಬಗೆ ಕೂಗು ಬೀಳದೆ ಕಿವಿಗೆ ಭಾಗವತಾರ್ಚಿತೆ ಭಾರ್ಗವೀ ನಾಮಖ್ಯಾತೆ ಬೇಗೆಯೆಲ್ಲವ ಪರಿದು ಯೆನ್ನ ರಾಗದಿಂದಲಿ ನೋಡು ಭರದಲಿ 2 ನೀನಲ್ಲದನ್ಯರಂ ಕಾಣೆನು ಹಿತರಂ ಮಾನಿತ ಗುಣಯುತರಂ ಆನತರಾಗುವ ಸೂನೃತವ್ರತಿಗಳಿ ಗಾನಂದವಿತ್ತು ಪೊರೆವ ದಾನಿ ಶೇಷಗಿರೀಶರಮಣಿ 3
--------------
ನಂಜನಗೂಡು ತಿರುಮಲಾಂಬಾ
ಪಾಲಿಸೆನ್ನನು ನಿರುತ ಪವನರಾಯ | ಫಾಲಲೋಚನ ನಮಿತ ಪಾವನ್ನಕಾಯ ಪ ಅಭಿನಮಿಸಿ ಭಜಿಪರಿಗೆ ಉಭಯ ಕಷ್ಟವ ಕಳೆದಿ | ಶುಭವಿಭವನೆಗರಿದು ಪೊರಿಯುವಲ್ಲಿ | ಪ್ರಭುವನಧಿ ನಿನ್ನಂಥ ಪ್ರಬಲ ಪ್ರಭುಗಳ ಕಾಣಿ ಸನ್ನುತ ಮಹಿಮ ಅಭಿಗಾರಪುರವಾಸ 1 ನಿನ್ನನೆ ನೆರೆನಂಬಿ ನಿನ್ನನೆ ಧ್ಯಾನಿಸುತ ನಿನ್ನ ಸನ್ನಿಧಿಯಲ್ಲಿ ನೆಲೆಸಿಪ್ಪೆ ನಾ | ಬಿನ್ನಪವ ಲಾಲಿಸಿ ಬನ್ನಗಳ ಪರಿಹರಿಸಿ ನಿನ್ನೊಡೆಯನಂಘ್ರಿಯಲಿ ಘನ್ನ ಭಕುತಿಯ ಕೊಟ್ಟು 2 ಭೂಮಿಜಾತೆಯ ರಮಣ ಶಾಮಸುಂದರ | ಬದರಿ ಧಾಮ ಮೂರುತಿತ್ರಯ ಪ್ರೇಮ ಪಾತ್ರ | ಕಾಮಿತಪ್ರದ ಹನುಮ ಭೀಮ ಗುರುಸುಖತೀರ್ಥ ಯಾಮ ಯಾಮಕೆ ಹರಿಯ ನಾಮ ಜಿಂಹ್ವೆಯೊಳಿಟ್ಟು 3
--------------
ಶಾಮಸುಂದರ ವಿಠಲ
ಪಾಲಿಸೆನ್ನನು ಪಂಪಾಕ್ಷೇತ್ರವಾಸ ಫಾಲಲೋಚನ ಶಂಭೋ ವ್ಯೋಮಕೇಶ ಪ ನೀಲ ಲೋಹಿತ ವೀತ | ಚೈಲ ಭೂಷಿತ ಭಸಿತ ಕಾಲಾರಿ ಶಿವ ದ್ರೌಣಿ | ಶೂಲ ಪಾಣಿ || ಕಾಲ ಕೂಟವ ಮೆದ್ದು ಕೊಂಡ ಮೇತೌಷಧವನಿತ್ತು 1 ವ್ಯಾಧರೂಪದಿ ರಣದಿ ಕಾದು ಪಾರ್ಥಗೆ ಸೋತು ನೀದಯದಿ ದಿವ್ಯಾಸ್ತ್ರ ಕರುಣಿಸಿದೆಯೋ ಮೇದಿನೀಶಗೆ ಶಾಸ್ತ್ರ ಬೋಧಿಸಿದ ಮುನಿವರ್ಯ ವೇದನಂದನ ನಿನ್ನ ಪಾದಕ್ಕೆ ನಮಿಸುವೆನು 2 ಕಾಮಾರಿ ಸುಪವಿತ್ರ | ಸೋಮಾರ್ಕಶಿಖಿ ನೇತ್ರ ಶಾಮಸುಂದರವಿಠಲ ಸ್ವಾಮಿ ಮಿತ್ರ ಭೀಮ ಪಾವನಗಾತ್ರ ಪ್ರೇಮಾಬ್ಧಿ ಸುಚರಿತ್ರ ಕಳತ್ರ | ಮಹಿಮ ಚಿತ್ರಾ 3
--------------
ಶಾಮಸುಂದರ ವಿಠಲ