ಒಟ್ಟು 88 ಕಡೆಗಳಲ್ಲಿ , 24 ದಾಸರು , 83 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಗವಿತ್ತು ಸಲಹೋ ರಾಯಾ ಸುಖ ಸಂಗಿಗಳಾ ಪ ಸದಾಶಿವ ಶರಣರ ಕರುಣ ಕವಚ ತೊಡಿಸಿ ಜೀಯಾ ಅ.ಪ. ನೀಲಕಂಧರಧರ ರುಂಡಮಾಲೆ ಕುಂಡಾಲ ಚರ್ಮ ಪೆತ್ತವನಪ್ರೀಯಾಮುಗಿದೆನೋ ಕರಮುಗಿದು ಕಳೆಯೊ ತಾಪತ್ರಯ 1 ಮದ್ದು ಹಾಕಿ ಮಣಿಸೋ ಮತ್ತೆ ಮಧ್ವಚಾಲನ ಪಾಲಿಸೋ ತವ ಶುದ್ಧಮತದೊಳಗಾಡಿಸೋ ಗುರುಮಧ್ವರಾಜ ತವದಾಸನೆನಿಸೊ2 ಶತ ಪತ್ರಾರಿಯ ಥಂಪನ ಸುತನೋ ಮತ್ತೆ ಶತ್ರಾನುಜನೆನಿಸುವನೊಪಾಶುಧರಿಪಾಗ್ರಜನೊ ಮತ್ತೆ ಪಶುವೇರುವನ ತಂದೆವರದಗೋಪಾಲ ವಿಠ್ಠಲನ ಭಜಿಸುವನೋ 3
--------------
ತಂದೆವರದಗೋಪಾಲವಿಠಲರು
ಸಂತರಾ ಕೂಡ ಬಾರದೇ | ಏ ಮನುಜಾ ಪ ಸಂತರಾ ಕೂಡಲಾಗೀ | ಭ್ರಾಂತತನವು ಹೋಗಿ | ಅಂತರ ಸುಖದೋರದೇ 1 ಭೃಂಗಿ ಕೀಟಕ ಕೂಡೀ | ಸಂಗದಿ ಧ್ಯಾನ ಮಾಡಿ | ಭೃಂಗಿ ತಾನಾಗಿ ಹಾರದೇ 2 ಗುರು ಮಹಿಪತಿ ಪ್ರೀಯಾ | ದೊರೆವನು ನಿನ್ನಕೈಯ್ಯಾ | ಮರಳುತನವ ಸೇರದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸರ್ಪಾದ್ರಿ ವಾಸ ವಿಠಲ | ಅರ್ಪಿಸುವೆನಿವಳಾ ಪ ಶೂರ್ಪಕರ್ಣನ ಪಿತಗೆ | ಸಖ ನೆನಿಪ ಹರಿಯೇ ಅ.ಪ. ನೊಂದು ಸಂಸಾರದಲಿ | ಬಂಧನವ ಕಳೆಯಲ್ಕೆನಂದ ನಂದನನನ್ನು | ವಂದಿಸುತ ಬಹಳಾಕಂದರ್ಪನುಪಟಳವೇ | ಛಂದದಿಂ ದೂರಿರಿಸಿನಂದಾದ್ರಿ ನಿಯಲ ತವ | ಪಾದಕಾಂಕ್ಷಿಪಳಾ 1 ಪಾದ | ಶತಪತ್ರಕೀವಾ 2 ಪತಿ ಪ್ರೀಯಾ 3 ಪತಿ ಕರ್ಮ | ತುಂಬಿಸೆಂದಿವಳಲ್ಲಿಪೊಂಬಸಿರ ವಂದ್ಯ ಮ | ದ್ಭಿಂಭ ಪ್ರಾರ್ಥಿಸುವೆ 4 ಭಾವದ್ರವ್ಯ ಕ್ರಿಯವು | ಈ ವಿಧಾದ್ವೈತತ್ರಯತೀವ್ರುಪಾಸನೆ ಪಲಿಸಿ | ಹೃದ್ಗುಹದಿ ನಿನ್ನಾಆವ ತವ ಭವ್ಯ ಸ | ದ್ರೂಪ ತೋರಿಸು ಎಂದುಓವಿ ಪ್ರಾರ್ಥಿಪೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸಲಹು ಶ್ರೀ ಗುರುರಾಯಾ | ಸಲಹು ಬುಧ ಜನಪ್ರೀಯಾ | ಸಲಹೆನ್ನ ಪರಮ ಗೇಹ್ಯಾ ಪ ಚಿಕ್ಕವನು ನಾ ಮೊದಲು | ಸೊಕ್ಕಿ ಭವಸುಳಿಯೊಳಗೆ | ಸಿಕ್ಕಿ ಬಹು ನೊಂದೆನೆಂದು | ಹೊಕ್ಕೆ ಮೊರೆ ನಿನ್ನ ಹಿಂದಿಕ್ಕಿಕೋ ದಯದಿಂದ | ಮಕ್ಕಳಂದದಲಿ ಚೆನ್ನಾಗೆನ್ನಾ 1 ಪಿಂತಿನಾ ಭವಣೆಗಳು | ಎಂತಾದರಾಗಲೀ | ಶಾಂತ ಮೂರುತಿಯೇ ಎನ್ನಾ | ಅಂತರಂಗದಲಿನ್ನು ನಿಂತು ನಿನ್ನಯ ರೂಪ | ಸಂತತವಾಗಿ ದೋರೋ ಬೀರೋ 2 ಅನ್ಯಪಥಕೆಳಿಸಿದಾ ಘನ್ನ ತಪ್ಪವ ಕ್ಷಮಿಸಿ | ನಿನ್ನ ಪದಯುಗಳ ದೋರಿ | ಸನ್ನುತವೆ ಮಹಿಪತಿ ಚಿನ್ನ ಕೃಷ್ಣನ ಸ್ವಾಮಿ | ಇನ್ನಾರೆ ದಯಮಾಡೋ ನೋಡೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸೋಜೀಗ ರೊಳಗತಿ ಸೋಜೀಗ ರಾಘವೇಂದ್ರಾ ಗುರು ಪ ಸೋಜೀಗ ವಲ್ಲವೆ ರಾಜಾ ಗುರುವು ನೀನು ನೈಜ ರೂಪದಿ ಬಂದು ಮಾಜಾದೆ ಪೊರೆವುದು ಅ.ಪ ಬೆಂಬಲ ನಿನಗೆಂದು ಸ್ತಂಭದಿ ಹರಿ ಬಂದ ಇಂಬು ಪಾಲಿಸು ಗುರುವೇ ನಂಬೀದ ಜನಗಣ ಡಿಂಭದಿ ನೀ ಮೂಡಿ ಅಂಬಕ ದೊಳು ಕಂಡೇ 1 ಇಲ್ಲ ಹರಿಯು ಎಂಬ ಕ್ಷುಲ್ಲ ಸಂಶಯ ವೆಂಬ ಹಲ್ಲು ಮುರಿದು ಭಕ್ತರಲ್ಲಿ ತುಂಬುವೆ ಭಕ್ತಿ ಇಲ್ಲದಿರಲು ನೀನು ಕಳ್ಳ ಕಲಿಯು ಜಗ ವೆಲ್ಲ ತುಂಬುತ ಶೃತಿ ಸುಳ್ಳು ಎನಿಸುತಿದ್ದಾ 2 ನಿರುತ ನೀಡುತ ಹರಿಕೆ ಕರೆದು ಪೊರೆವೆ ಜನರ ಸರಿಯು ಕಾಣೆನು ನಿನಗೆ ಹರಿಯ ಕಿಂಕರ ಶರಣು ಮರುತ ದೇವನ ಮತ ಮೆರೆಸಿ ಕುಣಿಸುತ್ತಿರುವೆ ಶರಣ ಜನರ ಪೊರೆವ ಪರಮಾಪ್ತ ಸಿದ್ಧವೋ 3 ಹುಣ್ಣು ಅಳಿಸಿ ಭಕ್ತಿ ಹಣ್ಣು ತಿನ್ನಿಸಿ ಜ್ಞಾನ ಕಣ್ಣು ಪಾಲಿಪ ಗುರು ಮಣ್ಣು ಗೂಡಿಸೊ ಭವವ ಸಣ್ಣವರೆಮ್ಮ ಶಂಕು ಕರ್ಣನೆ ಸಲಹೈಯ್ಯ ಗಣ್ಯರೊಳಗೆ ಗಣ್ಯ ಪೂರ್ಣ ಪ್ರಜ್ಞರ ಪ್ರೀಯಾ 4 ಹಿಂದೆ ಹೋಯಿತು ಹೊತ್ತು ಮುಂದೆ ಕಾದಿದೆ ಮೃತ್ಯು ಇಂದು ಭಾರವ ಪೊತ್ತು ಕಂದರೆಮ್ಮನು ಕಾಯೋ ಇಂದ್ರ ತಾತನ ಹೃದಯ ಮಂದೀರದಲಿ ನಲಿವ ಇಂದಿರೇಶ ಕೃಷ್ಣವಿಠಲ ರಾಯನ ತೋರು 5
--------------
ಕೃಷ್ಣವಿಠಲದಾಸರು
ಸ್ಮರಿಸುವೆನು ಗುರುರಾಯ ವರಮಂತ್ರ ಪುರಾಧಿಪ ಪೊರೆಯೊ ಎನ್ನನು ಜೀಯಾ ತವ ಮಹಿಮ ವರ್ಣಿಸ ಲರಿಯ ಮುರಹರಪ್ರೀಯಾ ಅಧ ಮಾಧಮನ ಮಮ ಪರಿಯ ನೀ ಬಲ್ಲೆಯ್ಯಾ ತೋರಯ್ಯಾ ದಯ ವರದ ಚರಿತೆಯ ಅರುಹುವದಕೆ ಪರವಾಕ್ಯರಣಿಯನು ಪಾಲಿಸಿ ನಿರುತ ಹರಿಗುರು ಚರಣದಲಿ ರತಿ ತ್ವರಿತ ಕರುಣಿಸು ರಾಘವೇಂದ್ರನೆ ಪ ಹಿಂದೆ ಕೃತಯುಗದಲಿ ಪ್ರಹ್ಲಾದ ನಾಮದಿ ತಂದೆ ಹಿರಣ್ಯಾಕ್ಷನಲಿ ಸರ್ವೋತ್ತಮನು ಹರಿ ದ್ವಂದ್ವ ಕರ್ಮವನಲಿ ಅರ್ಪಿಸಲು ಮಹದಾ ನಂದ ಪೊಂದುವರಲ್ಲಿ ಎಂದು ಪೇಳುತಿರೆ ಮಂದ ದೈತ್ಯವನಂದ ಮಾತಿಗೆ ಬಂಧನಾದಿಗ ಳಿಂದ ಶಿಕ್ಷಿಸೆ ಬಂದ ದುರಿತವನಂದು ಕಳೆದಾ ಕಂದನನು ಹರಿಪೊರೆಯೆ ದಿತಿಜನು ಒಂದೂ ತಿಳಿಯದೆ ಮಂದಿರ ಗೋವಿಂನೆಲ್ಲಿಹ ನೆಂದು ಕೇಳುತ ಮಂದರರೋದ್ಧಾರ ನಿಲ್ಲದಿಹ ಸ್ಥಳ ವಂದೂ ಇಲ್ಲವೂ ಎಂಂದು ಸಾರಿದೆ ತಂದು ತೋರಿಸು ಸ್ತಂಭದಲಿ ತವ ಇಂದಿರಾಪತಿಯೆಂದು ಗರ್ಜಿಸೆ ಕಂದನಾಡಿದ ಮಾತುಗಳನು ನಿಜ ವೆಂದು ನರಹರಿ ಪೊರೆದೆ 1 ಶ್ರೀಶನಾಜ್ಞೆಯ ವಹಿಸಿ ದ್ವಿತೀಯಾವತಾರದಿ ವ್ಯಾಸರಾಯನು ಎನಿಸಿ ಬ್ರಹ್ಮಣ್ಯರÀಲಿ ಸ ನ್ಯಾಸವನು ಸ್ವೀಕರಿಸಿ ಸರ್ವಜ್ಞ ಶಾಸ್ತ್ರಾಭ್ಯಾಸವನು ಪೂರೈಸಿ ವ್ಯಾಸತ್ರಯ ರಚಿಸಿ ದೇಶದೇಶಗಳನ್ನು ಚರಿಸುತ ಆ ಸಮಸ್ತ ಕುವಾದಿಗಳ ಮತ ನಾಶಗೊಳಿಸಿ ರ ಮೇಶ ಶ್ರೀ ವೆಂಕಟೇಶನನು ಬಹುದಿನವು ಪೋಜಿಸಿ ವಾಸಿಸುತ ಗಜರಾಮ ಪುರಧಾಧೀಶರಾಯನ ಕುಹಯೋಗವ ಪುರಂದರ ದಾಸರಿಂದೊಡಗೂಡಿ ಕೃಷ್ಣನುಪಾಸನೆಯ ಭಕ್ತಿಯಲಿ ಗೈಯುತ ವಾಸುದೇವನ ಶಿಲ್ಪ ಶಾಸ್ತ್ರದ ಶಾಸನಕೆ ಪ್ರತಿಯಾಗಿ ನಿಲ್ಲಿಸಿ ತೋಷಿಸಿದ ಸೌಭಾಗ್ಯ ವೈಭವ 2 ಪದುವ ಸಂಭವ ಜಾತ ಶ್ರೀ ರಾಘವೇಂದ್ರ ಸು ಪದವ ಪಡೆದ ಪ್ರಖ್ಯಾತ ಜಯತೀರ್ಥ ಮುನಿಕೃತ ಸುಧೆಗೆ ಪರಿಮುಳ ಗ್ರಂಧ ರಚಿಸಿ ಮೆರೆದಾತ ಬಧಿರ ಮೂಕಾಂಧ ವ್ಯಂಗ್ಯರು ವಿಧ ವಿಧಿದ ಘನರೋಗಗ್ರಸ್ತರು ಸದಯ ನೀಗತಿಯೆಂದು ಸೇವಿಸೆ ತ್ರಿದಶ ಭೂರುಹದಂತೆ ಸಲಹುವಿ ಕುಧರ ತೀರದಿ ಮೂಲ ರಘುಪತಿ ಪದವ ಪೂಜಿಸುತಲಿ ಸಜೀವದಿ ಮುದದಿ ವೃಂದಾವನ ಪ್ರವೇಶಿಸಿ ಪದುಮನಾಭ ಶ್ರೀ ಶಾಮಸುಂದರ ಮಧು ವಿರೋಧಿಯನು ಧ್ಯಾನಿಸುತ ಶಿರಿ ಸದನನು ವಲಿಸುತ್ತ ಕರುಣಾ ನಿಧಿಯು ಭಜಕರ ಪೊರೆವ ಮಹಿಮೆಯ 3
--------------
ಶಾಮಸುಂದರ ವಿಠಲ
ಹ್ಯಾಂಗೆ ನಿಮ್ಮ ಚರಣಾ | ಕಾಂಬೆನೊಯೋಗಿ ಜನರ ಶರಣಾ ಪ ನಾಗಶಯನ ಭವಸಾಗರ ಮಮತೆಯನೀಗಿ ನಿರುತ ಅನುರಾಗದಿಂದ ಪೊರೆ ಅ.ಪ. ವ್ಯರ್ಥವಾಯಿತಲ್ಲಾ | ಜನ್ಮವು | ಸಾರ್ಥಕಾಗಲಿಲ್ಲಾಮುಕ್ತಿ ಬಯಸಲಿಲ್ಲಾ | ಜ್ಞಾನ ವಿ | ರಕ್ತಿಯು ಮೊದಲಿಲ್ಲಎತ್ತ ತಿಳಿಯದೇ ಸುತ್ತಿ ಭವದೊಳುನ್ಮತ್ತ ನಡತೆಯಲಿ ಹೊತ್ತು ಕಳೆದ ಪೊರೆ 1 ಮಾಯ ಬಿಡದು ಹರಿಯೇ | ಮುಂದೆ ಉಪಾಯವೇನು ದೊರೆಯೇ ||ಧೇಯ ನಿಮ್ಮನು ಮರೆಯೇ | ಅನ್ಯ ಸಹಾಯವು ನಾನರಿಯೇ ||ಕಾಯಜ ಪಿತ ಕಮಲಾಯತ ಲೋಚನಮಾಯವ ಬಿಡಿಸಯ್ಯ ನ್ಯಾಯದಿಂದ ಹರಿ 2 ವಾಕು ಪಾಲಿಸೊ ಹರೆ 3 ಮಲ್ಲಮರ್ದನ ಕೃಷ್ಣ 4 ವ್ಯಾಸವಿಠಲರಾಯಾ | ಮನದಭಿಲಾಷೆ ಸಲ್ಲಿಸಯ್ಯಾ ||ದಾಸನೆಂದು ಕಯ್ಯಾ | ಪಿಡಿದುಪೋಷಿಸುವುದು ಪ್ರೀಯಾ ||ಶ್ರೀಶನೆಂದು ನಿನ್ನ ಸೇರಿದೆನೋ ಪರದೇಶಿಯೆಂದು ಉದಾಸೀನ ಮಾಡದೆ 5
--------------
ವ್ಯಾಸವಿಠ್ಠಲರು
ಶಂಕರಾಚಾರ್ಯರ ಸ್ತುತಿಸ್ವಾಮಿ ಶಂಕರನೆ ಆಚಾರ್ಯನಮಾಮಿಪಂಕಜಚರಣಕ್ಕೆ ಗುರುವರ್ಯಪ.ಸುರ ಮುನಿಗಳ ಮೊರೆಯಾಕೇಳಿಧರಣಿಯೊಳುದಿಸಿದ ಗಿರಿಜೆಯ ಪ್ರೀಯಾವರಅದ್ವೈತಪದ್ಧತಿಯಾಯೋಗಿವರನೆ ಬೋಧಿಸಿ ಮೋಕ್ಷ ಬೀಜ ಬಿತ್ತಿದೆಯಾ 1ನಿರ್ಮಲ ಜ್ಞಾನ ಸುದೀಪ ಸೋಹಂಬ್ರಹ್ಮಾನೇ ಎಂಬ ಸುಜ್ಞಾನವ ತೋರ್ಪಬ್ರಹ್ಮಾನಂದನಿಷ್ಟಾಪಗುರುಲಕ್ಷ್ಮೀನಾರಾಯಣ ರೂಡ ನಿರ್ಲೇಪ 2
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ