ಒಟ್ಟು 88 ಕಡೆಗಳಲ್ಲಿ , 44 ದಾಸರು , 82 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಖ್ಯ ಪ್ರಾಣನೆ ಕೈಯ ಮುಗಿದು ಬೇಡುವೆನಯ್ಯಭಕ್ತಿಪಾಲಿಸು ಹರಿಯ ಪಾದಬಳಿಯನಿನ್ನ ಮತ ಪೊಂದಿಸು ನಿನ್ನ ಚಿಹ್ನೆಯ ಧರಿಸುನೀನು ಪಿಡಿಯಲು ಹರಿಯು ತಾನು ಪಿಡಿವನುನವವಿಧ ನೀನು ಮುಖ್ಯಾಭಿಮಾನಿ
--------------
ಗೋಪಾಲದಾಸರು
ಲಕ್ಷ್ಮೀದೇವಿನೀನನ್ನ ಹೇಳಬಾರದೇನೆ ತಾಯಿನಿನನ್ನವಾನರವಂದಿತ ಶ್ರೀನಿವಾಸಗೆ ಬುದ್ಧಿ ಪಶ್ರೀನಿಧಿಪರನೆಂದು ನಂಬಿ ಬಂದ ಬಡಪ್ರಾಣಿಯ ಪೊರೆಯಂದು ಜಾನಕಿ ದೇವಿಯೇ 1ಮೊರೆ ಹೊಕ್ಕವರಕರಪಿಡಿವನೆಂಬೊ ಘನಾಬರದು ಉಳಿಸಿಕೊ ಎಂದ್ಹರುಷದಿ ಸಿರಿದೇವಿ 2ಉರಗಶಾಯಿ ಶಿರಿಗೋವಿಂದ ವಿಠಲ ತುರುಗಗ್ರೀವನರಹರಿಗೆ ತ್ವರಿತದಲ್ಲಿ 3
--------------
ಸಿರಿಗೋವಿಂದವಿಠಲ
ವಿಧಾತೃದೇವತೆಗಳೂ ವಿಷ್ಣುವಿನ ಹಿಂದೆ |ಇದಕೆ ತಪ್ಪಿದರೆ ಫಣಿಫಣವ ಪಿಡಿವೆ ಪ.ಸಕಲ ತೀರ್ಥಗಳೆಲ್ಲ ಸಾಲಗ್ರಾಮದ ಹಿಂದೆ |ಪ್ರಕಟಗ್ರಂಥಗಳೆಲ್ಲ ಭಾರತದ ಹಿಂದೆ ||ಸಕಲ ವೃಕ್ಷಗಳೆಲ್ಲ ಶ್ರೀ ತುಳಸಿಯ ಹಿಂದೆ |ಸಕಲ ಪರ್ವತಗಳು ಮೇರುವಿನ ಹಿಂದೆ 1ಮತಗಳೆಲ್ಲವು ಮಧ್ವಮತದ ಸಾರದ ಹಿಂದೆ |ಇತರ ವರ್ಣಗಳೆಲ್ಲ ವಿಪ್ರರ ಹಿಂದೆ ||ವ್ರತಗಳೆಲ್ಲವು ಹರಿಯ ದಿನದ ವ್ರತದ ಹಿಂದೆ |ಅತಿಶಯದ ದಾನಗಳು ಅನ್ನದಾನದ ಹಿಂದೆ 2ಉತ್ತಮಗುಣಗಳೆಲ್ಲ ಉದಾರತ್ವದ ಹಿಂದೆ |ಮತ್ತೆ ಕರ್ಮಗಳು ಮಜ್ಜನದ ಹಿಂದೆ ||ಪೃಥ್ವಿಯೊಳಗೆ ನಮ್ಮ ಪುರಂದರವಿಠಲನ |ಭಕ್ತವತ್ಸಲನೆಂಬ ನಾಮವೇ ಮುಂದೆ 3
--------------
ಪುರಂದರದಾಸರು
ವೃಂದಾವನದೇವಿ ನಮೋನಮೋ-ಚೆಲ್ವ-|ಮಂದರಧರನ ಮನಃ ಪ್ರಿಯಳೆ ಪನಿನ್ನ ಸೇವಿಸಿ ಉದಕವನು ಎರೆಯಲು |ಮುನ್ನ ಮಾಡಿದ ಪಾಪವಳಿಯುವುದು ||ಎನ್ನ ಇಪ್ಪತ್ತೊಂದು ಕುಲದವರಿಗೆ ಎಲ್ಲ |ಉನ್ನತ ವೈಕುಂಠಪದವೀವಳೆ 1ಒಂದೊಂದು ದಳದಲಿ ಒಂದೊಂದು ಮೂರುತಿ |ಸಂದಣಿನೆವೆ ಬಹು ಗುಪಿತದಲಿ ||ಬಂದು ಕುಂಕುಮ ಶಂಖಚಕ್ರವಿರಿಸಿದರೆ |ತಂದೆ ನಾರಾಯಣ ಕರೆದೊಯ್ಯುವ 2ಹರಿಗೆ ಅರ್ಪಿಸಿದ ತುಳಸಿ ನಿರ್ಮಾಲ್ಯವ |ಕೊರಳೊಳು ಧರಿಸಿ ಕರ್ಣದೊಳಿಟ್ಟರೆ ||ದುರಿತರಾಶಿಗಳೆಲ್ಲ ಅಂಜಿ ಓಡುವುವು ಶ್ರೀ-|ಹರಿಯು ತನ್ನವರೆಂದು ಕೈಪಿಡಿವ 3ಹತ್ತು ಪ್ರದಕ್ಷಿಣಿ ಹತ್ತು ವಂದನೆ ಮಾಡೆ |ಉತ್ತಮ ವೈಕುಂಠ ಪದವೀವಳು ||ಭಕ್ತಿಯಿಂದಲಿ ಬಂದು ಕೈಮುಗಿದವರನು |ಕರ್ತೃನಾರಾಯಣ ಕರೆದೊಯ್ವನು 4ಆವಾವ ಪರಿಯಲಿ ಸೇವೆಯ ಮಾಡಲು |ಪಾವನ ವೈಕುಂಠಪದವೀವಳೆ ||ದೇವ ಶ್ರೀಪುರಂದರವಿಠಲರಾಯನ |ದೇವಿ ನಿನ್ನ ಮುಟ್ಟಿತ್ರಾಹಿಎಂಬೆ5
--------------
ಪುರಂದರದಾಸರು
ಶ್ರೀ ವರದೇಂದ್ರರು93ರಥವಾನೇರಿದಾ ಯತಿಕುಲನಾಥಾ ಸದ್ಗುಣ ವಿಖ್ಯಾತಾ ಪವಿತತಸುಮಹಿಮಾ-ನತ- ಜನ-ತತಿ- ಕೃತxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಸ್ತುತಿಗೆ ಒಲಿವ - ಯತಿ ವರದೇಂದ್ರಾ ಅ.ಪಪತಿತಾ ಪಾವನ ತಾನೆನಿಸುತ ಮೆರವಾ -ಅತಿಹಿತದಲಿ ಭಕುತರ ಕರಪಿಡಿವಾ -ನುತಿಸುವ ಜನ-ತತಿ- ಗತಿಹಿತದಲಿ ಸೂ-ಪಥವ ತೋರಿಸಿ ಸ -ದ್ಗತಿಯ ನೀಡುವೆನೆಂದು 1ದಶಮತಿಸಮಯಾಖ್ಯಾಭ್ಧಿಶಶಾಂಕಾ- ತಾನಿಹನಕಳಂಕವಸುಧೀಂದ್ರರಕರ- ಬಿಸಜೋದ್ಭವ ತಾವಸುಧಿಯನಾಳುವ - ಕುಸುಮದಳಾಂಬಕ 2ಧಾತಾಂಶರಿಂದಲಿ ತಾನುದ್ಭವಿಸೀ - ಸದ್ಗುರುವರನೆನಿಸಿಧೂತ - ಪಾಪಾತ್ಮಕನು ತಾನಾಗೀ - ಶ್ರೀಹರಿಗೆ ಬೇಕಾಗಿಪ್ರೀತಿಲಿ ಭಜಿಸುತ - ದೂತರ ಪೊರೆವಾ 3
--------------
ಗುರುಜಗನ್ನಾಥದಾಸರು
ಸಣ್ಣವನ ಮತವಲ್ಲ ಸಾರಿ ಹೇಳಮ್ಮ |ಕಣ್ಣ ಮುಚ್ಚಿ ಆಡುವಾಗಕಾಕುಮಾಡಲೇತಕಮ್ಮಪಮೊಸರ ಕದ್ದರೆ ನಾವು ಮೊರೆಯಿಡ ಬಂದುದಿಲ್ಲ |ಪೊಸ ಕುಚಗಳ ಮುಟ್ಟಿ ಪೊಗಲೀಸನಮ್ಮ ||ಹಸು ಮಗನರಿಯದೆ ಆವಾಗಲೂ ಪಿಡಿವ |ಬಸುರುಹಬಿ ಮೊಗ್ಗೆಯೆಂದು ಪಿಡಿದಡೇನಾಯ್ತಮ್ಮ 1ನವನೀತಬೇಡಿದರೆ ನಾವೇನೆಂಬುದಿಲ್ಲ |ಯುವತಿಯರಧರವ ಬೇಡಬೇಕೆ? ||ಅವನಾವಾಗಲೂ ಮೆಲ್ವ ಆಲದ ಪಣ್ಣೆಂದು |ಸವಿಗಂಡು ಬೇಡಿದರೆ ಸಾಧಿಸಲೇತಕಮ್ಮ 2ಭೂಮಿಗೆ ಲಂಡನು ನಮ್ಮ ಪುರುಷರಿಲ್ಲದ ವೇಳೆ |ಕಾಮಿನೆ ಗಂಡನಂದದಿ ಕರೆಯುತೈದಾನೆ ||ಪ್ರೇಮದಿ ಪುರಂದರವಿಠಲನ ನೆನೆದರೆ |ಕಾಮಿನಿಯರಿಗೆ ಕಲ್ಪವೃಕ್ಷ ಕೈಸೇರುವಂತೆ 3
--------------
ಪುರಂದರದಾಸರು
ಹೇಗೆ ಮಾಡಲಿ ಮಗುವಿಗೇನಾಯಿತೊ - ಇದರ - |ಆಗಮವ ಬಲ್ಲವರು ತಿಳಿದೆಲ್ಲ ಪೇಳಿ ಪ.ತೂಗಿ ಮಲಗಿಸೆ ಕಣ್ಣ ಮುಚ್ಚಲೊಲ್ಲನು, ಬೆನ್ನ - |ಮೇಗೆ ಬುಗುಟಿಯು, ಎದೆಯು ಕಲ್ಲಾಗಿದೆ |ರೋಗವನೆ ಕಾಣೆ ದಾಡೆಯಲಿ ನೀರಿಳಿಯುತಿದೆ |ಕೂಗುವ ಧ್ವನಿಯೊಮ್ಮೆ ಕುಂದಲಿಲ್ಲ 1ಖಂಡಸಕ್ಕರೆ ಹಣ್ಣ ಕೊಟ್ಟರೊಲ್ಲದೆ ಮಣ್ಣ |ಹೆಂಡೆಯನು ಬೇಡಿ ತಾ ಪಿಡಿವ ಕೊಡಲಿ ||ಮಂಡೆ ಜಡೆಗಟ್ಟಿಹುದು ಮಾಡಲಿನ್ನೇನಿದಕೆ |ಹಿಂಡುಸತಿಯರ ದೃಷ್ಟಿ ಘುನವಾಯಿತೇನೊ2ಮೊಲೆಯನುಂಬಾಗ ಮೈಯಂಬರವನೊದೆಯುತಿದೆ |ಕಲಕಿತದಲಿ ಎನ್ನ ಕೊಲುವುದೇಕೋ ||ತಿಳಿದಿದರ ನೆಲೆಯನರಿತವರನೊಬ್ಬರ ಕಾಣೆ |ಚೆಲುವಸಿರಿಪುರಂದರವಿಠಲ ತಾ ಬಲ್ಲ3
--------------
ಪುರಂದರದಾಸರು