ಶ್ರೀನುತ ಕರವರ ಗೀತಾವಾದಿ ಪರಮ ದಯಾಳು ಗುರೋ ಪ
ಜಲಚರರೂಪದಿ ವೇದವ ತಂದಿರೆ ಮತ್ಸ್ಯನೆನಿಸಿದೆಯೋ
ಬಲವಂತನೆನಿಸಿಯದ್ರಿಯ ನೆತ್ತಿದಿ ಬಲುಘನ ಕಚ್ಛಪಾದಿ
ನೆಲಸಿದ ಭೂಗೋಲವನಾಸದಿ ಭಲೆ ವರಾಹವತಾರಿ
ಸ್ಮರಿಸಲು ತಕ್ಷಣದಿ 1
ವಟುವಾಗಿ ಬಲಿಯನ್ನಿಳಿಗೊತ್ತೀದಿ ದಟಹರ ವಾಮನನಹುದೋ
ಹಟದಿ ಮಾತೆಯ ಶಿರವಾರಿಸಿದಿ ಭಟ ಪರಶುರಾಮ ನೀನು
ಕುಟಿಲ ದುಶ್ಶಾಸನ ಧ್ವಂಸಗೈದಿ ಪಟು ರಾಮನೆನಿಸಿದೆಯೋ
ಶಠರ ಸಂಹರಿಲು ಶ್ರೀ ಕೃಷ್ಣನೆನಿಸಿದಿ ನಿಟ್ಟಿಪುದೀಗೆನ್ನ ಕೃಪಾನಿಧಿ 2
ತರುಣಿ ವೃಂದದ ವ್ರತವನ್ನಳಿದಿ ಪರಮ ಬೌದ್ಧನಹುದೋ
ಕರದ ಖಡ್ಗದಿ ದನುಜರನಳಿಸಿ ವರ ಕಲ್ಕಿರೂಪ ನೀನು
ಪರಬ್ರಹ್ಮ ಪುಟ್ಟುವಿ ಜವದಿ ಪೊರೆಯುವಿ ನುತಿಪರನಾ
ಕಾರುಣ್ಯನಿಧಿ 3