ನರಕಾಂತಕ ವರದೇವನೆ ಕರುಣಾಕರ ಗೋವಿಂದಾ ಪ
ಮರೆವೆಯೇತಕೋ ಲೋಲ ಬಾರೋ ಬಾರೋ ಗಾನಲೋಲ ಅ.ಪ
ಪರಿಪರಿಯಾ ಜನುಮಾಂತರ
ಸರಣಿಯೊಳಾನು ಜನಿಸಿ
ಸೊರಗಿ ಸೊರಗಿ ಮರುಗಿ ತಿರುಗಿದೆ 1
ನೆಲೆಸಲಿಕೆ ಸ್ಥಳವು ಇಲ್ಲವೋ
[ಕಲಿ]ಕಾಲಪಾಶ ಬದ್ಧನಾದೆನೊ 2
ಜನುಮಕೋಟಿಯೊಳಾದು ಪೋಪುದು
ನಾಮ ಸ್ಮರಣೆಯೊಂದಿರಲೋ 3
ರಾಮದಾಸವಿನುತ ಕೇಶವಾ [ಉದ್ಧರಿಸೋ]
ಆವ ಸುಖವು ಬೇಡವೆನಗೆ ಜೀವ ಪೋಗುವಂದು ನಿನ್ನ
ಸೇವೆಗೈವ ವರವು ಸಾಕೆಲೈ ಮಾವಿನಕೆರೆಯರಸ 5