ದೇವ ದೇವ ದೇವ ದಿವಿಜರೊಡಿಯನೆ
ಭಾವ ಪೂರ್ವಕ ವಿಧದಿ ಭಜಿಸುವೆನು ನಾನು ಪ
ನಂದಗೋಪಿಯ ಕಂದನಾದ ಸುಂದರಾಂಗನೆ
ಸಿಂಧುಶಯನ ಮಂದರಧರ ಇಂದಿರೇಶನೆ
ಎಂದು ನಿನ್ನ ಪೊಂದಿದವರನಂದ ಪೊರೆವನೆ 1
ಹೆಂಗಳೆರ ಸಂಗವುಳ್ಳ ಮಂಗಳಾಂಗನೆ
ಶೃಂಗಾರಾಂಗ ರಮಾಸಂಗವುಳ್ಳ ರಂಗನೆ
ಗಂಗಾಜನಕ ನೀರಜಾಂಬಕ ಗಾನಲೋಲನೆ
ಮಂಗಳಕರದಿಂದ ಲಭಯಂಗಳೀವನೆ 2
ರನ್ನೆ ಸೀತೆಯನ್ನು ವೈದವನ್ನ ತರಿದನೆ
ನಿನ್ನವರಿವರೆನ್ನುವವರನ್ನು ಕಾಯ್ವನೆ
ಪನ್ನಗಶಯನನಾದ ಚೆನ್ನ ನೀವನೆ
ಘನ್ನ ' ಶ್ರೀ ಹೆನ್ನೆವಿಠಲ’ ನನ್ನ ಕಾರುಣಿ 3