ಒಟ್ಟು 88 ಕಡೆಗಳಲ್ಲಿ , 35 ದಾಸರು , 86 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಲಿಯಯ್ಯಾ ರಂಗ ಒಲಿಯಯ್ಯಾನೆಲೆಗಾಣದಭವಜಲದೊಳು ಮುಳುಗುವೆಪ.ಮಾಯದ ಕೈಯಲಿ ಮೇಲೆ ಮೇಲೆ ಸುತ್ತಿಆಯಾಸಬಡುತಿದೆ ಪ್ರಾಣದಾತಬಾಯೆತ್ತಿ ಗೋವಿಂದ ಹರಿಯೆನ್ನಲೀಸದುಕಾಯೊ ದಯಾಳು ಕರಿವರದ ಕೃಷ್ಣ 1ಮನ ನೀರಾನೆಯ ಕಟ್ಟಿನೊಳಗೆ ಸಿಕ್ಕಿಕ್ಷಣ ಕ್ಷಣ ದೈನ್ಯದಿ ಒರಲುತಿದೆತನತನಗೆಳೆದು ದಣಿಸುವ ಇಂದ್ರಿಯ ಜಂತುಮುನಿಸೇವ್ಯ ನಿನ್ನೂಳಿಗಕ್ಕೆ ದೂರಾದೆ ಕೃಷ್ಣ 2ಬುದ್ಧಿ ತಪ್ಪಿದವಗೆ ಅಬದ್ಧ ನಡೆವವಗೆಶುದ್ಧ ಕಾರಣ ದಿವ್ಯನಾಮವಲ್ಲವೆಉದ್ಧರಿಸು ಬೇಗ ಪ್ರಸನ್ವ್ವೆಂಕಟ ಕೃಷ್ಣತಿದ್ದಿಟ್ಟುಕೊಳ್ಳೊ ನಿನ್ನವಗೆ ನಿರ್ಣಯ ನೀನೆ 3
--------------
ಪ್ರಸನ್ನವೆಂಕಟದಾಸರು
ಕೇಳೆಗೋಪಿಗೋಪಾಲ ಮಾಡಿದ ಬಲು |ದಾಳಿಯ ಗೋಕುಲದಿ ಪತಾಳೆಲಾರೆವೆ ತವಕದಲಿ ಕಂದಗೆ ಬುದ್ಧಿ |ಹೇಳೆ ಕೃಷ್ಣವ ಕರೆದು ಅ.ಪಸರಿರಾತ್ರಿಯೊಳು ಸರಸರನೆ ಮನೆಗೆ ಬಂದು |ಸುರಿದು ಪಾಲ್ಪೆಣ್ಣೆಗಳ ||ಉರೋಜಗಳಿಗೆಕರಸರಿಸಿ ಕಣ್ಗಳನು |ತೆರೆದು ನೋಡುವನೆ ನಮ್ಮ 1ಗಂಡನು ಮನೆಯೊಳಗಿರಲು ಬಂದು ಕೃಷ್ಣ |ಭಂಡ ಮಾತುಗಳ ಬಹು ||ತುಂಟತನದಲಾಡಿಉದ್ದಂಡಕಠಿಣಕಾಯ |ದುಂಡುಕುಚವ ಪಿಡಿದ 2_______ವದ ಮೇಲಿರಲು ತಾ |ಸೀರೆಯ ಸೆಳೆವ ನೋಡೆ ||ಆರಿವರೆಂದು ವಿಚಾರಿಸಿ ನೋಡಲು |ಮೋರೆಯ ಬಾಗಿದನೆ 3ಕೇರಿಯೊಳಗೆದಧಿಮಾರುತಿರಲು ಕೃಷ್ಣ |ಸಾರಿ ಬಂದು ಮೊಸರ ||ಸೂರೆಗೊಂಡು ಪರನಾರಿಯರ ನೆರೆದು ತಾ |ಘೋರರೂಪದಿ ಮೆರೆದ 4ಆಡಲೇತಕೆ ನಮ್ಮ ಬಾಗಿಲಂಗಳದೊಳು |ಬೇಡುವ ಜಲ ದೈನ್ಯದಿ ||ನೀಡುವೆ ಜಲ ಜಲಜಾಕ್ಷ ಬಾಬಾ ಎನೆ |ಮಾಡುವರತಿಎಂಬನೆ5ಹುಡುಗನೆಂದು ಕೈಯ ಪಿಡಿಯ ಪೋಗಲು ನಮ್ಮ |ಉಡೆಮುಡಿ ಪಿಡಿದ ನೋಡೆ ||ಪಡೆದವಳಿಗೆ ಪೇಳುವೆ ನಡೆ ಎನೆ ಮಚ್ಚ |ಕೊಡಲಿ ತೋರುವನೆಗೋಪಿ6ಮಡದಿಯರೆಲ್ಲರು ಮಿಯುತಲಿರೆ ಮೈ |ಉಡುಗೆಯ ತೆಗೆದುಕೊಂಡು ||ಸಡಗರದಲಿ ಬೇಡಿಕೊಳ್ಳೆ ವಸ್ತ್ರಗಳನು |ಕೊಡದೆ ಅಡವಿಗೆ ನಡೆದ 7ಬೆಣ್ಣೆಯ ತಿಂದು ತಮ್ಮಣ್ಣಗೆ ತಾ ಕೊಟ್ಟು |ಚಿಣ್ಣರ ಬಡಿವ ನೋಡೆ ||ಬಣ್ಣಿಸಿ ನಮ್ಮ ಬಾಯಿಗೆ ಬೆಣ್ಣೆ ತೊಡೆಯುತ |ಬೆಣ್ಣೆಯ ತಿಂದಿರೆಂಬ 8ಏಣಲೋಚನೆ ಸರ್ಪವೇಣಿ ನಮ್ಮ ಮನೆ |ಓಣಿಯೊಳಗೆ ಪೋಗುತ ||ಕಾಣದಂತೆ ಚಕ್ರಪಾಣಿ ನಮ್ಮೊಳು ತನ್ನ |ತ್ರಾಣವ ತೋರಿದನೆ 9ಪದುಮನಾಭನು ಪುರದ ಚದುರಿಯರಿಗೆ ತಾನು |ಮದನಶಾಸ್ತ್ರವ ಪೇಳುತ ||ಮುದದೊಳಗಿರಲವರೊಡೆಯ ಬರಲು ಕೃಷ್ಣ |ಕುದುರೆಯ ನೇರಿದನೆ 10ಎಷ್ಟುಪದ್ರವ ಕೊಟ್ಟರು ಗೋಕುಲದೊಳು |ಬಿಟ್ಟವನಿರಲಾರೆವೆ ||ಸೃಷ್ಠಿಯೊಳಗೆ ಸರ್ವಾಭಿಷ್ಟದ ಪುರಂದರ-|ವಿಠಲ ಸಲಹುವನೆ 11
--------------
ಪುರಂದರದಾಸರು
ಚಿಂತೆಯ ಪರಿಹರಿಸೊ ತಿಮ್ಮಯ್ಯಚಿಂತಾಯಕಕಂತುಕಮಲೆಯ ರಾಯಪ.ಸಾಧ್ಯವಲ್ಲದುದನ್ನು ಹಂಬಲಿಸಿಬುದ್ಧಿಭ್ರಾಂತಿಲಿ ಬಲು ಸುಖ ಬಯಸಿಕದ್ದ ಕಳ್ಳನಂತೆ ವೃಥಾ ಕುದಿದೆಮದ್ದು ಮೆದ್ದಿಲಿಯಂತೆ ಬಳಲಿದೆ 1ತಿಳಿದು ಮಾಯದ ಬಲೆಗೆ ಮೈಗೊಟ್ಟೆಬೆಲೆಗಟ್ಟಿ ವೃಥಾ ಹುಚ್ಚು ದೈನ್ಯಬಟ್ಟೆಆಲಿಸಿ ಮೋಕ್ಷದ ನೆಲೆಯ ಕೇಳದೆ ನಾಕಳವಳಗೊಂಬೆ ಕರುಣಾಸಂಪನ್ನ 2ಚಿಂತೆಗೆ ಚಿಂತೆ ಸಹಾಯವಾಗಿಅಂತರಂಗದಕ್ಲೇಶಹೇಸಿತು ಬಾಗಿಶಾಂತಮೂರ್ತಿ ಪ್ರಸನ್ವೆಂಕಟೇಶ ಏಕಾಂತದಾಸರ ನೆಳಲನೆ ತೋರಿಸೊ 3
--------------
ಪ್ರಸನ್ನವೆಂಕಟದಾಸರು
ದೃಷ್ಟಿ ನಿನ್ನ ಪಾದದಲ್ಲಿ ನೆಡುವ ಹಾಗೆ - ಧರೆಯದುಷ್ಟ ಜನರ ಸಂಗಗಳನು ಬಿಡುವ ಹಾಗೆ ಪ.ಕೆಟ್ಟ ಮಾತ ಕಿವಿಯಿಂದ ಕೇಳದ ಹಾಗೆ ಮನವಕಟ್ಟು ಸದಾ ನಿನ್ನ ಧ್ಯಾನ ಬಿಡದ ಹಾಗೆ ಅಪದೃಷ್ಟನಾಗಿ ಕೈಯನೆತ್ತಿ ಕೊಡುವ ಹಾಗೆ ಶ್ರೀಕೃಷ್ಣ ನಿನ್ನ ಪೂಜೆಯನ್ನು ಮಾಡುವ ಹಾಗೆ ||ಭ್ರಷ್ಟನಾಗಿ ನಾಲ್ವರೊಳು ತಿರುಗದ ಹಾಗೆ ಬಲುಶಿಷ್ಟ ಜನರ ಸೇವೆಯನು ಮಾಡುವ ಹಾಗೆ 1ಪುಟ್ಟಿಸಿದ ತಾಯಿ - ತಂದೆಯಲ್ಲವೆ ನೀನು - ಒಂದುಹೊಟ್ಟೆಗಾಗಿ ದೈನ್ಯ ಪಡಬೇಕೇ ನಾನು ||ಪಟ್ಟೆ -ಪಟ್ಟಾವಳಿ ಬೇಡಲಿಲ್ಲ ನಾನು ಎನ್ನಗುಟ್ಟು ಅಭಿಮಾನಗಳ ಕಾಯೋ ನೀನು2ನಟ್ಟನಡು ನೀರೊಳೀಸಲಾರೆ ನಾನು ಎತ್ತಿಕಟ್ಟೆಯ ಸೇರಿಸಬೇಕಯ್ಯ ನೀನು ||ಬೆಟ್ಟದಷ್ಟು ಪಾಪ ಹೊತ್ತಿರುವೆ ನಾನು ಅದನುಸುಟ್ಟು ಬಿಡುಪುರಂದರ ವಿಠಲ ನೀನು3
--------------
ಪುರಂದರದಾಸರು
ನಂಬಬೇಡ ನಾರಿಯರನುಹಂಬಲಿಸಿ ಹಾರಯಿಸಬೇಡಅಂಬುಜಾಕ್ಷಿಯರೊಲುಮೆ ಬಯಲುಡಂಬಕವೆಂದು ತಿಳಿಯಿರೊ ಪ.ನೋಟವೆಲ್ಲ ಪುಸಿಯು - ಸತಿಯರಾಟವೆಲ್ಲ ಸಂಚು - ಸನ್ನೆಕೂಟವೆಲ್ಲ ಗನ್ನ - ಘಾತುಕನೋಟವೆಲ್ಲ ವಂಚನೆವಾತಬದ್ಧ ಹೆಂಗಳಲ್ಲಿಕೋಟಲೆಗೊಂಡು ತಿರುಗಬೇಡಮಾಟಗಾತಿಯರೊಲುಮೆ ಬಯಲುಬೂಟಕವೆಂದು ತಿಳಿಯಿರೊ 1ಸೋತನೆಂದು ವಿಟಗೆ ದೈನ್ಯಮಾತನಾಡಿ ಮರುಳಗೊಳಸಿಕಾತರವ ಹುಟ್ಟಿಸಿ ಆವನಮಾತೆ - ಪಿತರ ತೊಲಗಿಸಿಪ್ರೀತಿ ಬಡಿಸಿ ಹಣವ ಸೆಳೆದುರೀತಿಗೆಡಿಸಿ ಕಡೆಯಲವನಕೋತಿಯಂತೆ ಮಾಡಿ ಬಿಡುವಚಾತಿಕಾರ್ತಿ ಹೆಂಗಳೆಯರ 2ಧರೆಯ ಜನರ ಮೋಹಕೆಳಸಿಭರದಿ ನೆಟ್ಟು ಕೆಡಲುಬೇಡಎರೆಳೆಂಗಳ ಹೆಂಗಳೊಲುಮೆಗುರುಳೆ ನೀರ ಮೇಲಿನಮರೆಯಬೇಡ ಗುರುಮಂತ್ರವಸ್ಥಿರವಿಲ್ಲದ ಜನ್ಮದಲ್ಲಿಕರುಣನಿಧಿ ಪುರಂದರವಿಠಲನಚರಣಸ್ಮರಣೆ ಮಾಡಿರೊ3
--------------
ಪುರಂದರದಾಸರು
ನೀನೆ ರಕ್ಷಿಸೋ ಎನ್ನ ಓ ಶ್ರೀನಿವಾಸದಾನವಾಂತಕ ದೀನಪಾಲ ಲಕ್ಷ್ಮೀಶಾ ಪಮೌನಿ ಹೃದಯಾ ಸುಮವಾಸಾ ಸರ್ವೇಶಾಮೌನದಿಂದಿರಲೇನೋ ಕಾಣೆ ವಿಶೇಷಾಮೌನ ಮಂತ್ರವು ಸ್ನಾನಾ ಧ್ಯಾನಾವನರಿಯೆದೈನ್ಯ ಭಕ್ತಿಯೊಳ್ ಬೇಡಿಕೊಂಬೆ ಶ್ರೀಹರಿಯೆ 1ಲೋಕನಾಥನೆಜವಶೋಕವಿಹಾರಾಏಕರೂಪನೆ ಸರ್ವ ಲೋಕ ಸಂಚಾರಾನಾಕಸುಖವ ನಾನು ಬಯಸುವನಲ್ಲಬೇಕಾದ ಸೌಭಾಗ್ಯವೆನಗಿತ್ತೆ ಎಲ್ಲಾ 2ಮಂದರೋದ್ಧರ ಅರವಿಂದ ಲೋಚನನೇಇಂದಿರೆಯರಸ ಮುಕುಂದ ಮಾಧವನೇವಂದಿಸೂವೆನು ದಂದಶೂಕ ಶಯನನೇಸುಂದರಮೂರ್ತಿ ಗೋವಿಂದದಾಸನನೇ 3
--------------
ಗೋವಿಂದದಾಸ
ನೋಡೊ ನೋಡೊ ರಂಗ ತನ್ನಖೋಡಿತನ ಬಿಡದೋಡು ಚಿತ್ತವು ಪ.ಎಳೆ ಎಳೆದು ನಾನೆ ಬಳಲಿದೆ ತಾ ತನ್ನತಿಳಿದ ಕಡೆಯಲಿ ಸುಳಿದಾಡಿತುಒಲಿದು ಭಕುತಿಯ ಬಲಿದಿರೆಂದರೆಛಲದಿ ಶುಭಮಾರ್ಗ ಕೊಳದು ದಾತಾರ 1ಕ್ಷಣದೊಳಾರೆ ನಾರಾಯಣ ದಾಮೋದರಮುನಿಧ್ಯೇಯನೆ ನಿನ್ನ ನೆನೆದಾಡದೆಹಣಿದಾಡೆನ್ನೊಳು ಒಣ ಧ್ಯಾನಿಸುತಿದೆಜನದೂಷಣದೊಳು ದಣಿದಾಡುತಿದೆ 2ಇನ್ನಾವಗೆ ಪೇಳಲೆನ್ನ ಒಡಲ ಮಾತಎನ್ನ ಒಡೆಯ ಪಾವನ್ನಕಾಯ ಪ್ರಸನ್ನ ವೆಂಕಟರನ್ನ ಒಲಿಯೊ ನೀಅನ್ಯ ವಿಷಯಕೆ ದೈನ್ಯವಾಗಿದೆ 3
--------------
ಪ್ರಸನ್ನವೆಂಕಟದಾಸರು
ಬೆದರದಿರೊ ಬೋವು ಬರಲಿಲ್ಲ ನಿನ್ನಮೃದುಲ ಸವಿ ತೊದಲು ಮಾತಾಡೊ ಬಾಲ ಪ.ಕಣ್ಣೆವೆಯಿಕ್ಕದೆ ನೋಡಬ್ಯಾಡನಿನ್ನ ಮೈಮರವಿಟ್ಟಾಡ ಬ್ಯಾಡಗುನ್ನಗನ್ಯೆಳೆದಂಬೆಗಾಲಿಕ್ಕಬ್ಯಾಡಹೊನ್ನೋಲೆ ಕೆಂಪೇರೆ ಹುಯಿಲಿಡಬ್ಯಾಡ 1ನೆಲವಿದು ದೈನ್ಯವ ಬಿಡಬ್ಯಾಡಕೊಲ್ಲುವರ್ಯಾರಿಲ್ಲ ಕೊಲೆಗಂಜಬ್ಯಾಡನಲವ ಬಿಟ್ಟಡವಿಯನೈದ ಬ್ಯಾಡಕಳವಲಿ ಹುದುಗಿಕೊಂಡಿರಬ್ಯಾಡ 2ಹುಸಿಗೆ ಬೇಸರಬ್ಯಾಡ ಕೃಷ್ಣಮ್ಮಹೊಸ ಕಲ್ಕ್ಯಾಟಬ್ಯಾಡ ನಮ್ಮಮ್ಮಪ್ರಸನ್ನವೆಂಕಟಪತಿ ಪರಬೊಮ್ಮ ನಿನ್ನಕುಶಲಕ್ಕೇನೇನುಪಾಯವಿಲ್ಲಮ್ಮಾ 3
--------------
ಪ್ರಸನ್ನವೆಂಕಟದಾಸರು
ಮನವೆ ಚಂಚಲ ಮತಿಯ ಬಿಡು - ನಮ್ಮ |ವನಜನಾಭನ ಪಾದಭಜನೆಯಮಾಡುಪ.ಬಡಮನುಜಗೆ ಬಾಯಬಿಡುವ ದೈನ್ಯದಲವನ |ಅಡಿಗಳಿಗೆರಗಲು ಕೊಡುವನೇನೊ ||ಕಡಲಶಯನ ಜಗದೊಡೆಯನ ನೆನೆಯಕ್ಕೆ - |ಪಿಡಿದು ತಾ ಸಲಹುವ ಬಿಡದಲೆಅನುಗಾಲ1ಬಲ್ಲಿದ ಭಕುತರ ಬಲ್ಲವ ಬಹುಸಿರಿ |ಯುಳ್ಳ ಕರುಣಿ ಲಕ್ಷ್ಮೀನಲ್ಲನಿರೆ ||ಕ್ಷುಲ್ಲಕರನು ಕಾಯಸಲ್ಲದೆಂದೆಂದಿಗುನಿಲ್ಲು ಹರಿಯ ಪಾದದಲ್ಲಿ ತಲ್ಲಣಿಸದೆ 2ಮುಗಿಲು ಮೇಲದೆಗಡೆ ಅಗಣಿತವಾದಾಪ - |ತ್ತುಗಳು ಬಂದಡರಲು ನಗುತಲಿರು ||ಜಗದಧೀಶನ ಮಹಿಮೆಗೆ ನಮೋ ನಮೋ ಎಂದು |ಪೊಗಳುತ ಬಾಳು ನೀ ಅಘಗಳ ಗಣಿಸದೆ 3ಆವಾವ ಕಾಲಕೆ ದೇವನಿಚ್ಛೆಯಿಂದ |ಆವಾವುದು ಬರೆ ನಿಜಸುಖವೆನ್ನು ||ಶ್ರೀವರ ಅನಾದಿಜೀವರ ಕ್ಲಪ್ತದಂತೆ |ಈವನು ನಿಜಸ್ವಭಾವ ಬಿಡದೆನಿತ್ಯ4ಕೇಶವಾಚ್ಯುತ ಶ್ರೀನಿವಾಸ ಮುರಾರೇ |ದೋಷರಹಿತ ದೀನ ಪೋಷಕನೆನ್ನು ||ಮೋಸಗೊಳಿಪ ಭವಪಾಶವ ಖಂಡಿಪ |ಶ್ರೀಶ ಪುರಂದರವಿಠಲನು ಜಗಕಿರೆ 5
--------------
ಪುರಂದರದಾಸರು
ರಾಮ ಗೋವಿಂದ ಸೀತಾ - ರಾಮ ಗೋವಿಂದ ಪ.ತೃಪ್ತಿಯಹುದೆ ಹೆತ್ತ ತಾಯಿ ಇಕ್ಕದನಕಭಕ್ತಿಯಹುದೆ ಭಕ್ತಜನರ ಸಲಹದನಕಮುಕ್ತಿಯಹುದೆ ಭಾವಶುದ್ದಿ ಇಲ್ಲದನಕಚಿತ್ತಶುಧ್ಧಿ ಆತ್ಮನಿಜವು ತಿಳಿಯದನಕ 1ಓದಲೇಕೊ ಮನದಿ ಜ್ಞಾನವಿಲ್ಲದನಕಭೇದವೇಕೊ ಗತಿಯುಗಮನ ತಿಳಿಯದನಕಕಾದಲೇಕೊ ಭುಜದಿ ಶಕ್ತಿಯಿಲ್ಲದನಕವಾದವೇಕೊಶ್ರುತಿ- ಶಾಸ್ತ್ರ ತಿಳಿಯದನಕ2ನಳನವಿದ್ದರೇನು ತುಂಬಿಯೊದಗದನಕದಳವು ಇದ್ದರೇನು ಧೈರ್ಯಕೊಡದನಕಲಲನೆಯಿದ್ದರೇನು ಪುತ್ರರಿಲ್ಲದನಕಚೆಲುವನಾದರೇನುವಿದ್ಯೆಕಲಿಯದನಕ3ಮನವಿದ್ದೇಕೊಶುಕ - ಪಿಕವಿಲ್ಲದನಕತನುವಿದ್ದೇಕೊ ಪರಹಿತಕೆ ಬಾರದನಕಮನೆಯಿದ್ದೇಕೊ ಅತಿಥಿಯೊಬ್ಬರಿಲ್ಲದನಕಧನವಿದ್ದರೇನು ದಾನ - ಧರ್ಮಕ್ಕೊದಗದನಕ 4ಹರಿಯ ಚಿಂತೆಯಿರಲು ಅನ್ಯ ಚಿಂತೆಯೇತಕೊಹರಿಯ ಧ್ಯಾನವಿರಲು ಅನ್ಯ ಧ್ಯಾನವೇತಕೊಸಿರಿ ಪುರಂದರವಿಠಲನಿರಲು ಭಯವು ಏತಕೊಹರಿಯ ಒಲಿದ ಮನುಜನಿಗೆ ದೈನ್ಯವೇತಕೊ 5
--------------
ಪುರಂದರದಾಸರು
ಹರಿಪದಯುಗಲವನಿತ್ಯ ನೆನೆದವೆಗೆ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಪರಮಪದವಿಯೇ ಸಾಕ್ಷಿ ||ಹರಿ -ಗುರು ದೂಷಣ ಮಾಡಿದ ಮನುಜಗೆ |ನರಕರೌರವವೆ ಸಾಕ್ಷಿ ಪ.ಕಡುಭಕ್ತಿಯಲಿ ಕೃಷ್ಣನÀ ನೆನೆದರೆ |ನಡೆಯಲಿ ಸತ್ಯವೆ ಸಾಕ್ಷಿ ||ದೃಡ ಭಕುತಿಯಿಂದ ಉಣಬಡಿಸಿದವಗೆ |ಷಡುರಸಾನ್ನವೇ ಸಾಕ್ಷಿ 1ತಾನೊಂದುಂಡು ಪರರಿಗೊಂದಿಕ್ಕುವಗೆ |ಗುಲ್ಮರೋಗವೇ ಸಾಕ್ಷಿ ||ಹೀನನಾಗಿ ಹಿರಿಯರನು ದೂಷಿಪಗೆ |ಹೀನ ನರಕವೇ ಸಾಕ್ಷಿ 2ಕನ್ಯಾದಾನವ ಮಾಡಿದವಗೆ ದಿವ್ಯ |ಹೆಣ್ಣಿನ ಭೋಗವೆ ಸಾಕ್ಷಿ ||ಕನ್ಯಾದಾನವ ಮಾಡದ ಮನುಜಗೆ |ಹೆಣ್ಣಿನ ದೈನ್ಯವೇ ಸಾಕ್ಷಿ 3ಅನ್ನದಾನ ಮಾಡಿದ ಮನುಜಗೆ ದಿ - |ವ್ಯಾನ್ನವನುಂಬುದೆ ಸಾಕ್ಷಿ ||ಅನ್ನದಾನ ಮಾಡದ ಮನುಜಗೆ ತಿರಿ -ದುಣ್ಣುತಿರುವುದೇ ಸಾಕ್ಷಿ 4ಕ್ಷೇತ್ರದಾನ ಮಾಡಿದ ಮನುಜಗೆ ಏತ - |ಛತ್ರವನಾಳ್ವುವದೆ ಸಾಕ್ಷಿ ||ಪಾತ್ರವರಿತು ಧರ್ಮಮಾಡಿದವಗೆ ಸತ್ -ಪುತ್ರರಾಗುವುದೆ ಸಾಕ್ಷಿ 5ಕಂಡ ಪುರುಷರಿಗೆ ಕಣ್ಣಿಡುವ ನಾರಿಗೆ |ಗಂಡನು ಕೇಳುವುದೆ ಸಾಕ್ಷಿ ||ಪುಂಡನಾಗಿ ಪರಸ್ತ್ರೀಯರ ಸೇರುವಗೆ |ಹೆಂಡಿರ ಕಳೆವುದೆ ಸಾಕ್ಷಿ 6ಭಕ್ತಿಯರಿಯದ ಅಧಮನಿಗೊಂದು |ಕತ್ತಲಮನೆಯೇ ಸಾಕ್ಷಿ ||ಮುಕ್ತಿಪಡೆವುದಕೆ ಪುರಂದರವಿಠಲನ |ಭಕ್ತನಾಗುವದೆ ಸಾಕ್ಷಿ 7
--------------
ಪುರಂದರದಾಸರು