ಪಚ್ಚೆಯು ಬಂತೀಗ-ಶ್ರೀಪುಲಿಗಿರಿ ಪಚ್ಚೆಯ ನೋಡಿ ಬೇಗ ಪ
ಮುಚ್ಚುಮರೆಯಿಲ್ಲದಚ್ಚುತ ನೆಂಬುವ ಅ.ಪ
ಕೈಗೆ ಸಿಕ್ಕುವದಲ್ಲವೈತ-ಕ್ಕಡಿಯಲ್ಲಿ-ತೂ ಗಿನೋಡುವದಲ್ಲವೈ
ಯೋಗಿ ಹೃದಯದಲ್ಲಿ
ಭಾಗವತರೊಳನುರಾಗದಿಮೆರೆಯುವ 1
ಬೆಲೆಯ ಕಟ್ಟುವದಲ್ಲವೈ ಈ ಪಚ್ಚೆಯ ನೆಲೆಯಕಂಡವರಿಲ್ಲವೈ
ನಲಿದು ಧ್ಯಾನಿಪರಿಗೆ-ಒಲಿದು ತೋರುವ ದಿವ್ಯ
ಜಲಧರವರ್ಣದ ಜಲಜಾಕ್ಷನೆಂಬುವ 2
ಗಿರಿಯೊಳು ನೆಲೆಯಾಗಿಹ
ವರದವಿಠಲ ಧೊರೆವರದನೆಂದೆಸರಾದ 3