ಜಗದೊಳು ಬಂದೀ ಜಗವೇನು ಕಂಡೀ
ಜಗದ ಮಾಯೆಗೆ ಸಿಲ್ಕಿ ಬಗೆ ತಿಳಿಯದ್ಹೋದಿ ಪ
ಉನ್ನತ ಜನುಮ ಅನ್ಯಥಾ ಕಳೆದಿ
ಉಣ್ಣೆ ಕೆಚ್ಚಲೊಳೀದ್ರ್ಹಾಲುಣ್ಣದಂತಾದಿ 1
ವಿಮಲ ಸುಖದೆಬಂದಿ ಶ್ರಮಗೆಟ್ಟು ನಡೆದಿ
ಕಮಲದಡಿಯ ಕಪ್ಪೆ ಬಂಡು ಕುಡೀದ್ಹಾಗಾದಿ 2
ಎಂಥ ಸಮಯ ಇದರಂತರರಿಯದ್ಹೋದಿ
ಅಂತರಾತ್ಮನ ಕಾಣದಂತಕಗೀಡಾದಿ 3
ನಿಜವಬಯಸಿಬಂದಿ ನಿಜತಿಳಿಯದ್ಹೋದಿ
ಮಾಜುವುದುದಕೆ ಬರಿದೆ ಗಿಜಿಗಿಜಿಯಾದಿ 4
ಕಲ್ಪದ್ರುವದಿ ನಿಂದಿ ಅಲ್ಪರಿಗಾಲ್ಪರಿದಿ
ಕಲ್ಪಿತವನು ಪೂರಮಾಳ್ಪ ರಾಮನ ಮರೆದಿ 5