ನಿಗಮ ಸನ್ನುತ ಪ
ವೀತ ಶೋಕ ಭಯ ವಿದೂರ
ಮದನ ಜನಕ ಅ.ಪ.
ಆದಿಮಧ್ಯಾಂತರಹಿತ - ವೇದ ಪೀಠನ ಜನಕನೀತ
ಅಚ್ಯುತ ಅಪ್ರಮೇಯ ಅಮರವಂದಿತ 1
ನಿತ್ಯತೃಪ್ತ ನಿಖಿಲವ್ಯಾಪ್ತ ಸತ್ಯಸಂಕಲ್ಪ ಸ್ವರತ
ಹಸ್ತಿವರದನಾದಪರ ವಸ್ತುವೆನಿಸಿದ ಖ್ಯಾತ 2
ಸೃಷ್ಟಿಸ್ಥಿತಿಲಯಾದಿಕರ್ತ, ದುಷ್ಟದಮನ ಗೈಯುತಲೀತ
ಕೃಷ್ಣರೂಪದಿಂದಲೆಸೆವ ಶ್ರೇಷ್ಠದೈವ ಶ್ರೀ ಕರಿಗಿರೀಶ 3