ಏನೆಂದು ಬಣ್ಣಿಪೆನು-ಶ್ರೀಗುರುವರನ
ನಾನಾಮಹಿಮೆಗಳನು ಪ
ಸಾನುರಾಗದಿ ಸಕಲ ತೀರ್ಥಕ್ಷೇತ್ರವ ಚರಿಸಿ
ಶ್ರೀನಿವಾಸನ ದಯದಿ ದೀನರನುದ್ಧರಿಸಿದ ಅ.ಪ
ತೀರ್ಥಕ್ಷೇತ್ರದ ಮಹಿಮೆ ತೀರ್ಥಪ್ರಬಂಧದೊಳ್
ಕೀರ್ತಿಸಿ ಕವಿತಾ ಚಾತುರ್ಯವ ಪ್ರಕಟಿಸಿದ 1
ಕುಂಡಲೀಗಿರಿಯನು ಮಂಡಿಯಿಂದಲೇರಿ ಉ
ದ್ದಂಡಗಂಡಕ ಶಿಲೆಯ ಹಾರ ಶ್ರೀಹರಿಗಿತ್ತ 2
ಕುಂಭಕೋಣೆಯಲಿದ್ದ ಡಾಂಭಿಕ ಪಂಡಿತ
ಜಂಬೂಕಗಳ ಗೆದ್ದ ಕುಂಭಿಣೀಸುರ ಸಿಂಹ 3
ಮಾಘಕಾವ್ಯವ ಮೀರ್ದ ಆಮೋದ ಸುಂದರವಾದ
ಶ್ಲಾಘ್ಯ ಶ್ರೀ ರುಕ್ಮಿಣೀಶ ವಿಜಯವೆಂದೆನಿಸಿದ 4
ಘನ ಕಾವ್ಯವ ರಚಿಸಿ ಪುಣ್ಯ ಪತ್ತನದಿ ವಿ
ದ್ವನ್ಮಣಿಗಳಿಂದ ಮಾನ್ಯತೆ ಪಡೆದುದು 5
ತುಂಗ ಕರ್ಣಾಟಕ ನೃಪನ ಸಭೆಯೊಳು ಪ್ರ
ಸಂಗಾಭರಣವೆಂಬ ಬಿರುದು ಪಡೆದ ಖ್ಯಾತಿ 6
ಪಾದ ಭೃಂಗ ಶ್ರೀ
ಗುರುವಾದಿರಾಜರ ಪರಿಪರಿ ಚರಿತೆಯಾ 7