ಒಟ್ಟು 182 ಕಡೆಗಳಲ್ಲಿ , 42 ದಾಸರು , 163 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣಮತ ನರಸಿಂಹ | ವಿಠಲ ಪೊರೆ ಇವಳಾ ಪ ಜ್ಞಾನಗಮ್ಯನೆ ದೇವ | ಅನ್ನಂತ ಮಹಿಮಾ ಅ.ಪ. ಹಿಂದಿನದ ಸತ್ಸುಕೃತ | ದಿಂದ ವೈಷ್ಣವಪತಿಯಪೊಂದಿಹಳೊ ದೇವೇಶ | ಮಂದರೋದ್ಧಾರಿ |ಚೆಂದುಳ್ಳ ಮಧ್ವಮತ | ಸಂಧಾನ ತಿಳಿಯಲ್ಕೆ |ಇಂದೀವರಾಕ್ಷ ಹರಿ | ಚೋದಿಸೋ ಇವಳಾ 1 ಬೋಧ ಬೋಧ ದೊರಕಿಸುದೇವಆದಿ ಮೂರುತಿ ಹರಿಯೆ | ಬಾದರಾಯಣನೆ2 ಪತಿಸುತರು ಹತರಲ್ಲಿ | ವ್ಯಾಪ್ತನಾಗಿಹ ನಿನ್ನಸ್ಥಿತಿಗತಿಯನೇ ತಿಳಿದು | ಚಿಂತಿಸುವ ಪರಿಯಾಹಿತದಿಂದ ತಿಳಿಸುತ್ತ | ಸಾಧನ ಸುಸತ್ಪಥದಿರತಿಯನೆ ಕೊಟ್ಟಿವಳ | ಉದ್ದರಿಸೋ ದೇವಾ 3 ತೊಡರು ಬರಲಿ | ಅಡವಿಯಲಿ ತಾನಿರಲಿಮೃಡನುತನೆ ನಿನ್ನ ಸ್ಮøತಿ | ಬಿಡದಲೇ ಕೊಟ್ಟುಕಡು ಗುಂಭ ಸಂಸ್ಕøತಿಯ | ಮಡುವಿನಿಂದಡಬಾಕಿಬಿಡದಿವಳ ಪೊರೆಯುವುದು | ಕಡುದಯಾ ಪೂರ್ಣ4 ಗುರುಭಕ್ತಿ ಹರಿಭಕ್ತಿ | ವೈರಾಗ್ಯ ಭಾಗ್ಯದಲಿಪರಮರತಿಯನೆ ಕೊಟ್ಟು | ಹರಿ ಸ್ಮರಣೆಯೆಂಬಾವರವಜ್ರ ಕವಚವನೆ | ತೊಡಿಸೆಂದು ಪ್ರಾರ್ಥಿಸುವೆಮರುತಾಂತರಾತ್ಮಗುರು | ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ಬಂದದೊಂದು ಚೆಂದ ಸಾಲದೆ ಗೋಪಿಯ ಕಂದ ಪ ವಿಕಟ ಪೂತನಿಯ ಕೊಂದುಶಕಟಾಸುರನ ಪಾದದಿ ತುಳಿದುಧಿಕಿಟ ಧಿಕಿಟ ಎನ್ನುತಲಿಕುಕಿಲಿರಿದು ಕುಣಿಯುತ ಮನೆಗೆ 1 ಗೋವರ್ಧನ ಪರ್ವತವನೆತ್ತಿಗೋವುಗಳ ಕಾಯ್ದು ತನ್ನಮಾವ ಕಂಸನ ಕೊಂದುಕಾವನ ಜನಕ ಪಾಡುತ ಮನೆಗೆ 2 ಫಾಲನೇತ್ರ ಚಂದ್ರಶೇಖರನಸುಲಭದಿಂದ ಬಾಧೆಯ ಬಿಡಿಸಿಪಾಲಿಸುವ ಕರುಣದಿಂದಬೇಲಾಪುರದ ಚೆನ್ನಕೇಶವ3
--------------
ಕನಕದಾಸ
ಬಂದವನಾರಯ್ಯ ನೀನು ಒಂದಿನ ರಾತ್ರಿಲಿ ನಂದನಂದನು|ಹೊರಗಿಂದಲಿ ಬರಲು|ಚೆಂದದಿ ರುಕ್ಷಿಣಿ ಮನದೊಳರಿತು ನುಡಿ|ಎಂದಳು ಸರಸದಲಿ ಈಗ|ನೀನು- ಪ ಇರುಳುಮಧ್ಯದಲಿ ಧೀರತನದಲಿ| ಸಾರಿಸಾರಿಕದನೋತ್ತುತಲಿ| ಧ್ವನಿಯ ದೋರದೆ ಗುರುತವ ಮರೆಯಿಸಿ| ದ್ವಾರದಿಸುಳಿವವನು|ನೀನು 1 ಅಡಿಯಿಡದೆವೆ ಮೈ ಅಡಗಿಸಿಕೊಂಡು| ದೃಢದಲಿ ಅಬಲೆಯಕಂಡು| ಎಡಬಲನೊಡದೆ ಬಾಯ್ದೆರೆದು ಬೇಡುವ| ಪೊಡವಿಹಾರುವನೇನೋ|ನೀನು.....2 ಕೊರಳಗೊಯ್ಕನೋ ವನಚಾರಕನೋ| ತುರುಗಳ ಕಾಯ್ವವನೋ| ಮರುಳು ಮಾಡಿ ನಾರಿಯರ ಠಕ್ಕಿಸಿ| ದುರುಳವಾಜಿಯನೇರಿಪನೋ|ನೀನು....3 ಎಂದಮಾನಿನಿ ನುಡಿ ಬೆಡುಗವ ಕೇಳಿ| ನಿಂದಹರುಷ ತಾಳಿ| ಬಂದೆನಾ ಗುರುಮಹಿಪತಿ ಪ್ರಭು ಎನಲೋಡಿ| ಬಂದೆರಗಿದಳೀಗ|ನೀನು...... 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಂದೆ ಬಂದೆ ಸ್ವಾಮಿಯೆ ಬಂದೆ ಬಂದೆ ಪ. ಬಂದೆ ಬಂದೆ ಗೋವಿಂದ ಗೋವಳ ಬಾಂಧವ ಭಕ್ತವತ್ಸಲಇಂದಿರೇಶ ಶ್ರೀ ವೆಂಕಟ ನಿನ್ನ ಸಂದರುಶದಕೆ ಸಾಗಿ ನಾನಿಲ್ಲಿ ಅ.ಪ. ನಡೆದು ನಡೆಸುತ ನುಡಿದು ನುಡಿಸುತಅಡಿಗಡಿಗೆ ಕಾಪಾಡುತಒಡನೆ ಆಡುತ ಬಿಡದೆ ಕ್ಷಣವನುಸಡಗರದಿ ಕರೆತರಲು ನಾನಿಲ್ಲಿ 1 ಆಪ್ತ ಅನಿಮಿತ್ತ ವ್ಯಾಪ್ತ ಸರ್ವತ್ರಗುಪ್ತ ಗುಣಗಣಪೂರ್ಣನೆಪ್ರಾಪ್ತ ನೀನೆನಗಾಗಬೇಕೆಂದುವ್ಯಾಪ್ತಿ ನಿನ್ನದು ಹುಡುಕುತಲಿ ನಾ2 ಒಂದು ರೂಪದಿ ನಿಂದು ಎನ್ನಲ್ಲಿಚೆಂದದಿಂ ಕರೆತಂದೆ ಇಲ್ಲಿಒಂದರಿಯೆ ನಿನ್ನ ವಂದಿಸುವ ಬಗೆಬಂದೊದಗೊ ನೀನೆನ್ನ ವದನಕೆ 3 ಬಂದೆ ಬಂದೆ ನೀ ಬಂದಂತೆ ಕರ-ತಂದುದಕೆ ಫಲ ನೀನೆ ಬಲ್ಲೆಸಂದರುಶನ ನಿನಗೆ ನೀ ಮಾಳ್ಪಂದವನು ನೋಳ್ಪಾತುರದಿ ನಾ 4 ಏನು ಕೊಡಲಿಲ್ಲ ಏನು ಬೇಡಲಿಲ್ಲಏನು ಪಡೆಯಲೊ ಕರುಣಿಯೆನೀನು ಕೊಟ್ಟ ಸ್ವಾತಂತ್ರ್ಯದ ಫಲನಿನಗೆ ಅರ್ಪಿಸಬೇಕೆನುತ ಇಲ್ಲಿ 5 ರಕ್ಷಶಿಕ್ಷಕ ಮೋಕ್ಷದಾಯಕಸೂಕ್ಷ್ಮ ಘನ ಮಹಾವ್ಯಾಪಕಕುಕ್ಷಿಯೊಳು ಜಗದ್ಭರಿತ ಪೂರಿತಅಕ್ಷಯಫಲದಾಯಕ 6 ನಮೋ ನಮೋ ನಾಗಾರಿವಾಹನನಮೋ ನಮೋ ಸುರಸುಪ್ರಸನ್ನನೆನಮೋ ನಮೋ ಗೋಪಾಲವಿಠಲನಮಿಪ ಭಕ್ತರ ಸಲಹುವನೆಂದು 7
--------------
ಗೋಪಾಲದಾಸರು
ಬಾ ಬಾ ರಾಘವ ಬಾ ವೀರ ರಾಘವ ಪ ಮತ್ಸ್ಯರೂಪನಾಗಿ ಹೆಚ್ಚಿದ ದೈತ್ಯನ ಇಚ್ಛೆಯಿಂದಲಿ ಕೊಂದ ಅಚ್ಯುತರಾಯನೆ 1 ಕೂರ್ಮರೂಪನಾಗಿ ಅಮರರಿಗೊಲಿದು ನೀ ಕಾಮಜನಕ ಸುಪ್ರೇಮಾವನಿತ್ಯಂತೆ4 2 ವರಹರೂಪನಾಗಿ ಧರಣಿಯ ಚೋರನ ಶಿರವ ತಂದು ನೀ ಜಗವ ಪೊರೆದ್ಯಂತೆ 3 ದುರುಳ ರಕ್ಕಸನ ಕರುಳ ತೆಗೆದು ನಿನ್ನ ಕೊರಳೊಳಗಿಟ್ಯಂತೆ 4 ಚೆಲುವತನದಿ ಪೋಗಿ ಬಲಿಯದಾನವ ಬೇಡಿ ಕಲುಷ ಹರಿಸಿ ಅವನ ಪಾತಾಳಕ್ಕೊತ್ತಿದ್ಯಂತೆ 5 ಕೊಡಲಿಯ ಪಿಡಿಯುತ ದುಗುಡ ರಾಯರುಗಳ ಸೊ ಗಡು ಮುರಿದು ನೀ ಸಡಗರ ಪಟ್ಯಂತೆ 6 ಸೀತೆಗೋಸ್ಕರ ಪೋಗಿ ಸೇತುವೆಯನೆ ಕಟ್ಟಿ ಭೂತ ರಾವಣನ ಖ್ಯಾತಿಯಿಂದಲಿ ಕೊಂದ 7 ವಾರಿಜಾಕ್ಷಿಯರ ಕೂಡಿ ನೀರಾಟದೊಳು ಪೊಕ್ಕು ನೀರೆಯರ1 ಮನ ಅಪಹಾರಮಾಡಿದ ಕೃಷ್ಣ 8 ಚಿತ್ತಜಪಿತ ನೀನು ಬತ್ತಲೆಯೊಳು ಬಂದು ಉತ್ತಮ ಸ್ತ್ರೀಯರ ವ್ರತಗಳಳಿದ್ಯಂತೆ 9 ಸುಂದರ ವಾಜಿಯ ಚೆಂದಾದಿಂದೇರುತ ಮಂದಗಮನೆಯರ ನಂದವಳಿದ್ಯಂತೆ 10 ದೋಷರಹಿತ ನಮ್ಮ ಶೇಷವಿಠ್ಠಲನೆ ಬ್ಯಾಸರವಿಲ್ಲದೆ ಪೋಷಿಸಿ ಸಲಹಲು 11
--------------
ಬಾಗೇಪಲ್ಲಿ ಶೇಷದಾಸರು
ಬಾರಯ್ಯ ಯದುಕುಲತಿಲಕ ತೋರಯ್ಯ ನಿನ್ನ ಮುದ್ದು ಮುಖವಓರಂತೆ ಮುದ್ದಿಸಿ ಯಶೋದೆ ಕುಮಾರನೆ ಬಾರೆಂದಳೈಪ. ಅಂದವಾದ ನಿನ್ನ ಮುದ್ದುಮುಖದ ಚೆಂದವನ್ನು ತಾ ನೋಡಿಕಂದಿಕುಂದಿ ಇಂದಿರೆಯು ಮರುಳಾಗಿ ಕಂದ ನಿನ್ನ ಪೊಂದೇನೆಂದಳೈ 1 ಕೃಷ್ಣ ನಿನ್ನ ಮಕ್ಕಳಾಟಿಕೆ ಶ್ರೇಷ್ಠರಿಗೆ ಮೋಹನವಾಯಿತುದುಷ್ಟಮತಮಾತಂಗಕ್ಕೆ ಅಟ್ಟುವೊ ಸಿಂಹದ ಮರಿಯೆ2 ಇಂಥ ಹಯವದನನ ಇಂಥ ದೇವರ ನಾ ಕಾಣೆಪಂಥವೇನೊ ಎನ್ನ ಕೂಡೆ ದಿನಮಣಿ ತಿಂತಿಣಿಯೆ ಬಾರೆಂದಳೈ3
--------------
ವಾದಿರಾಜ
ಬಾರೈ ನಿನ್ನ ಮುದ್ದು ಮೊಗವನು ತೋರೈ ಯದುಕುತಿಲಕ ಎಂ-ದೋರಂತೆ ಮುದ್ದಿಸಿ ಯಶೋದೆÉ ಕುಮಾರನ ಬಾಯೆಂದಳೈ ಪ. ಥೈ ಥೈ ಥೈ ಥೈ ಥೈಯಿಥೈಯಿ ಥೈಯಿ ಥೈಯಿ ಥೈಯಿಥೈ ಥೈ ಥೈಯೆಂದು ಕೃಷ್ಣನ ಪಾಡಿದಳೆ1 ಕೃಷ್ಣ ನಿನ್ನ ಮಕ್ಕಳಾಟಿಕೆ ಕಷ್ಟರಿಗೆ ಕಾಲಕೂಟವಾಯಿತುದುಷ್ಟದೈತ್ಯ ಮತ್ತ ಮಾತಂಗಗಳಟ್ಟುವ ಸಿಂಹದ ಮರಿಯೆ 2 ದೀಪ್ತೋಷ್ಣ ಕಿರಣನು ಬರೆ ಕತ್ತಲೆಯತ್ತಲೆ ಪೋಪುದುಮತ್ತಿತ್ತ ಸುತ್ತಮುತ್ತಸುಳಿವುದೆ ಚಿತ್ತಜನ ಪೆತ್ತ ಹರಿಯೆ 3 ಚೆಂದದ ನಿನ್ನ ಚೆಲ್ವ ಸಿರಿಮೊಗದಂದವನು ತನಗಿಲ್ಲವೆಂದುಕಂದಿಕುಂದಿದಳಿಂದಿರೆ ಮರುಳಾಗಿ ಕಂದ ನಿನ್ನ ಹೊಂದಿ ನಿಂದಳೊ 4 ಇಂಥ ಸಿರಿಹಯವದನ ನಿನ್ನಂಥದೇವನು ದಾವನುಪಂಥವೇ ನಿನ್ನಗೂಡೆ ಗುಣಮಣಿತಿಂತಿಣಿಯಂತೆ ನೀನು 5
--------------
ವಾದಿರಾಜ
ಬಾರೈ ಭೂಶಿರಿವರ ವೆಂಕಟದೊರೆಯೇ | ಕರಿವರದ ಶ್ರೀ ಹರಿಯೇ | ದೋರೈ ಶ್ರೀಕರ ಶುಭಸುರ ಕುಲದೊರೆಯೇ | ಪರತರ ನರಹರಿಯೇ ಪ ಅರುಣಾ ವಾರಿಜಪರಿಚರಣಾ | ಚರಣಾ ಶರಣಾಗತ ಕರುಣಾ | ಕರುಣಾ ಕೋಟ್ಯರುಣಪತಿಯ ಹಿಮಕಿರಣಾ | ಕಿರಣ್ಹೊಳೆವ ಸುವರಣಾ | ವರಣಾ ಪೀತಾಂಬರ ಮಂದರೋದ್ದರಣಾ | ಧರಣಾಗತ ಕರುಣಾ | ಕರುಣಿಸೋ ನಿರುತರ ಕೌಸ್ತುಭಾಭರಣಾ | ಮೊರೆ ಹೋಗುವೆನು ಶರಣಾ 1 ಮಂಗಳ ಮಹಿಮಶಯನ ಭೂಜಂಗಾ | ಜಂಗಮಾ ಅಂತರಂಗಾ | ರಂಗಾ ಲೀಲಾವಿಗ್ರಹ ತುರಂಗಾ | ವಿಹಂಗ | ಶುಭ ಅಂಗಾ | ಅಂಗಾ ಜಯಸು ಸಂಗಾ | ಸಂಗಾರಹಿತ ದೇವತೆಗಳ ಶೃಂಗಾ ಭವ ಭಂಗಾ 2 ಸುಂದರಿಂದಿರಾ ರಮಣಾನಂದಾ | ನಂದ ಗೋವೃಂದಾ | ವೃಂದಾರ ಕಾದಿಹ ರಕ್ಷಕಚಂದಾ | ಚೆಂದದಿ ಆನಂದಾ | ನಂದಾ ಸುನಂದ ನಮಿತ ಪದದ್ವಂದ್ವಾ | ದ್ವಂದ್ವಾ ಮುಕ್ಕುಂದಾ | ಕುಂದರ ವದನಾ ಗುರುಕೃಷ್ಣನ ಕಂದಾ | ನೊಡೆಯ ಗೋವಿಂದಾ 3 ಅಂಕಿತ-ಗುರುಕೃಷ್ಣ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾಲಕೃಷ್ಣ ಏನು ಮೋದವೊ ವೇಣು ಬಾಲಕೃಷ್ಣಾನೀನು ಮಲಗಿ ತೊಡಿಯೊಳು ಗಾನ ಕೇಳಿದೆಯೋ ಪ ವ್ಯಾಳರಾಜ ಚರಿತೆ ಪೇಳುತಿರಲು ಒಬ್ಬಲೋಲ ಕಣ್ಣು ತೆರೆದು ಕೇಳಿದೆಯೋ ಕೂಸೇ 1 ಹಿಂದೆ ಎರಡು ಕಾಲು ಮುಂದೆ ಎರಡು ಕರವುಪೊಂದಿ ತೊಡಿಯಲಿ ಗಾನ ಚೆಂದ ಕೇಳಿದೆಯೋ2 ಇಂದಿರೇಶನ ಪೂಜಾಕಾಲದಲ್ಲಿನಂದತನಯ ಪದವ ಬಂದು ಕೇಳಿದೆಯೋ 3
--------------
ಇಂದಿರೇಶರು
ಬೇಡಿದರೆ ನೀಡುವುದೇನು ಹಿರಿದೆ ಗೋವಿಂದ ಬೇಡದೆ ನೀಡೆ ನಿನ್ನಂತಸ್ತಿಗತಿಚೆಂದ ಪ ನೀಡುವನು ನೀನಿರಲು ಬೇಡಿಕೆಗೆ ಕೊನೆಯುಂಟೆ ಬೇಡಿ ಬೇಸತ್ತರೂ ಆಸೆಯಿಂಗುವುದುಂಟೆ ಬೇಡಿದಮಣಿ ನೂರುಜನುಮ ಸಾಕಹುದುಂಟೆ ಬೇಡದೇ ಭಜಿಪವಗೆ ಹುಟ್ಟು ಸಾವುಗಳುಂಟೆ 1 ಹಿಂದೆ ನೀನಿತ್ತುದನು ಇಂದುಣುತಲಿಹೆವಯ್ಯ ಮುಂದೆ ನಾನುಣಲೇನು ಬೇಡವಯ್ಯ ಸಂದಿರ್ಪುವೈ ಸಾಲಸೋಲಂಗಳೇನಯ್ಯ ಮುಂದೇನು ಬೇಡ ಮಾಂಗಿರಿವಾಸ ರಂಗಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಗವಂತನ ಸಂಕೀರ್ತನೆ ಗೋಪಿ ಚೆಂದವೇನೇನಿನ್ನ ಮಗನ ದುಡುಕು - ಚೆಂದವೇನೇ ಪ ಚೆಂದದಿಂದಲಿ ಅರವಿಂದಾಕ್ಷ ಬೆಣ್ಣೆಯ ತಿಂದು ಬೇಗದಿ ಕೃಷ್ಣ ಬಂದೋಡಿ ನಿಂತನೆ 1 ಸದ್ದು ಮಾಡದೆ ಪಾಲು ಕದ್ದು ನಮ್ಮನೆಯೊಳಗಿದ್ದ ಸ್ತ್ರೀಯರನೆಲ್ಲ ಮುದ್ದಾಡಿ ಪೋದನೆ 2 ಪಾದ ಸೇರಿದೆ ನಾನೀಗ 3
--------------
ವೆಂಕಟೇಶವಿಟ್ಠಲ
ಭಾಸ್ಕರಗುರುದಯ ಭಾಸುತದೆ ವಿಜಯ ಧ್ರುವ ಕಂಗಳಿಗೆದುರಿಟ್ಟಾನಂದ ಮಂಗಳಕರದೋರುತಲ್ಯದೆ ಚೆಂದ ಸಂಗ ತೋರಿತು ನಿಜವಂದ ಹಿಂಗಿಸಿ ಭವಬಂಧ 1 ಮನಸಿಗೆ ತೋರಿತು ಊರ್ಜಿತ ನೆನೆವಿಗೆ ಕೈಗೊಟ್ಟಿತು ಆಯತ ಜನವನದೊಳುಗುದಿತಾ ಘನವೆ ಸಾಕ್ಷಾತ 2 ಸೋಹ್ಯದೋರಿ ಸಮರಸ ಸಾಹ್ಯಮಾಡಿದ ಸರ್ವೇಶಮಹಿಪತಿಗಿದೆ ಸಂತೋಷ ಇಹಪರ ಉಲ್ಲಾಸ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭೂಮ ಇಡುಬಾರೆ ದ್ರುಪದರಾಯನರಸಿ ಭೀಮಧರ್ಮಾರ್ಜುನ ನಕುಲ ಸಾದೇವ ದ್ರೌಪದಿ ಕುಳಿತ ಎಲೆಗೆ ಪ ಮಂಡಿಗೆ ಗುಳ್ಳೋರಿಗೆಯು ಬುಂದ್ಯ ಚಕ್ಕುಲಿ ಕರ್ಜಿಕಾಯಿ ಚೆಂದದ ಶಾಲ್ಯಾನ್ನ ಶಾವಿಗೆಫೇಣಿಗಳು ಎಣ್ಣೋರಿಗೆಯು1 ಹಪ್ಪಳ ಸಂಡಿಗೆಯು ಶಾವಿಗೆ ಬಟ್ಟಿವಿ ಮಾಲತಿಯು ಗೌಲಿ ಬಟ್ಟಲೋಳ್ ತುಂಬಿಟ್ಟು ಪರಡಿ ಪಾಯಸಘೃತ ಸಕ್ಕರೆಯು 2 ಕುಸುಮ ಮಲ್ಲಿಗೆ ಮುಡಿದು ನಡೆದು ಬಂದು ಭೀಮೇಶಕೃಷ್ಣ ಸಖರ್ಹೊಂದಿ ಕುಳಿತರು ಕೃಷ್ಣೆಸಹಿತ3
--------------
ಹರಪನಹಳ್ಳಿಭೀಮವ್ವ
ಮನ ಬಲಿಯದನಕ ಅನುಕೂಲಾಗದನುಭವ ಧ್ರುವ ಮನವೇ ಮರೆಯ ಮಾಡೇದೆ ನೆನವಿಗೆ ತಾಂ ತಂದು ತೋರದೆ ಹೆಣ್ಣ ಹೊನ್ನದಾಶೆ ಹಚ್ಚ್ಯಾದೆ ಘನತನಗರಸದೆ 1 ಹುಚ್ಚಮಾಡಿಬಿಟ್ಟದೆ ಎಚ್ಚರ ಎಡಿಯಗೊಡದೆ ಕಚ್ಚಿ ವಿಷಯಕೆ ಬಿದ್ದದೆ ಬೆಚ್ಚಿ ಬೆದರದೆ 2 ಮನಸಿಗೆ ಮನಸಿನಿಂದ ಅನುಭವವಾಗಬೇಕಾನಂದ ಘನ ಗುರುವಿನ ಕೃಪೆಯಿಂದ ಮನ ಬಲಿವುದು ಚೆಂದ 3 ಮನೋನ್ಮನವಾಗಿ ತಾ ಘನ ಬೆರೆದು ಸ್ವಹಿತ ಙÁ್ಞನಕಿದೇ ತಾ ಸನ್ಮತ ಮುನಿಜನರ ಸುಪಥ 4 ಮನಬಲಿದು ನೀ ನೋಡೋ ಘನಸುಖ ಮಹಿಪತಿಗೊಡೊ ಅನುಭವಾಮೃತ ಸೂರ್ಯಾಡೊ ಅನುಮಾನೀಡ್ಯಾಡೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಹಿಮೆಯನಾರು ಬಲ್ಲರುನಹಿಪ್ರತಿಯೆಂದು ನಿನ್ನ ಪಾಡುವರಲ್ಲದೆ ರಂಗ ನಿನ್ನ ಪ. ವಾಮನನಾಗಿ ಬಂದು ಬಲೀಂದ್ರನಿಗೆ ಸಂದಸೀಮೆಯನೆಲ್ಲವ ಸಲೆವಿಟ್ಟ ತ್ರಿವಿಕ್ರಮ ನಿನ್ನಸಾಮಥ್ರ್ಯವ ಶ್ರುತಿಗಳು ಪೇಳೆ ಉಗುರ್ಗೊನೆಆ ಮಹಾ ಬೊಮ್ಮಾಂಡವ ಸೀಳೆ ದೇವೇಂದ್ರನುಸಾಮ್ರಾಜ್ಯದಿ ಸುಖದಿಂ ಬಾಳೆ ಕೃಷ್ಣ ನಿನ್ನ1 ಇಂದ್ರ ಕೋಪಿಸಿ ಮಳೆಗರೆಯಲು ನಿನ್ನತಂದೆ ತಾಯಿ ಬಂಧು ಬಳಗಂಗಳೆಲ್ಲ ಕಂಗೆಡಲುಅಂದು ಬಲುಗಿರಿಯನೆತ್ತಿ ಗೋ ಗೋಪಾಲರವೃಂದದ ಭಯವ ನುಗ್ಗೊತ್ತಿ ಪಾಲಿಸಿದೆಚೆಂದದಿ ನಿನ್ನಯ ಸಂಪತ್ತಿ ಕೃಷ್ಣ ನಿನ್ನ2 ಇಂದು ಮಧ್ವಮುನೀಂದ್ರಗೊಲಿದು ಕಡುಕೃಪೆಯಿಂದತÀಂದೆ ಹಯವದನ ಮುಕುಂದ ಉಡುಪಿನೊಳಗೆನಿಂದು ಸದಾ ಪೂಜಿಸಿಕೊಂಡೆ ನಿನ್ನ ಮುಂದೆನಂದಾದೀಪಗಳನು ಕಂಡೆ ಭಕ್ಷ್ಯಭೋಜ್ಯಕಂದಮೂಲ ಫಲಂಗಳುಂಡೆ ಕೃಷ್ಣ ನಿನ್ನ 3
--------------
ವಾದಿರಾಜ