ಎಲ್ಲಿರುವೇನೋ ಮಾರುತಿ ಸುವ್ರತಿ
ಎಲ್ಲಿರುವನೇನೋ ಮಾರುತಿ ಪ.
ಎಲ್ಲಾ ಕಡೆಯಲ್ಲಿ ವ್ಯಾಪ್ತಿ
ಯುಳ್ಳವ ಭಾರತೀಪತಿ ಅ.ಪ.
ನಿತ್ಯ ರಾಮಪದೈಕಾಸಕ್ತಿ-
ಚಿತ್ತನು ಸದಾ ಜಾಗರ್ತಿ
ಧೂರ್ತರಿಪುದಲ್ಲಣ ಜೀ-
ವೋತ್ತಮ ವಿಚಿತ್ರಗತಿ 1
ಪ್ರಾಣಸಮಾನ ಸಂಪ್ರೀತಿ
ಜ್ಞಾನಪೂರ್ವಕ ಸದ್ಭಕ್ತಿ-
ವಾನ ವಾನರೇಂದ್ರ ಸುಪ-
ರ್ವಾಣಕುಲಚಕ್ರವರ್ತಿ 2
ಲಕ್ಷುಮಿನಾರಾಯಣನ
ಪಕ್ಟ್ರೆಕಧೃತಿ ಸುಮತಿ
ಅಕ್ಷೀಣ ತ್ರಾಣದ ನಿರ-
ಪೇಕ್ಷ ಲಕ್ಷಣಮೂರುತಿ 3