ಪಾಲಿಸೈ ರಮಾರಮಣನೆ ಎನ್ನ
ನೀಲಮೇಘ ಶ್ಯಾಮನೆ ಪ
ಪಾಲಿಸಿ ಜಗಲೀಲೆ ತೋರಿದಿ
ಪಾಲಭಕ್ತ ಭವಮೂಲಪರಿಹರ ಅ.ಪ
ಜಾಳು ಸಂಸಾರೆಂಬೊಸಂಕೋಲೆ
ಕಾಲಿಗೆ ತೊಡರಿ ಎನ್ನನು
ಕೀಳನೆನಿಸಿತ್ತು ಶೀಲ ಕೆಡಿಸಿ
ಬಾಳಿ ಫಲವಿಲ್ಲ ತಾಳೆನಭವ 1
ನಾಶವಾಗುವ ದೇಹಧರಿಸಿ
ನಾಶನಾಲೋಚನೆಯ ಸ್ಮರಿಸಿ
ಏಸು ರೀತಿಲಿ ಘಾಸಿಯಾದೆ ಭವ
ಪಾಶದ ಬಾಧೆ ಸಹಿಸೆನಭವ 2
ತಂದೆ ಶ್ರೀರಾಮ ಮಂದಮತಿತನ
ದಿಂದ ಕಂದನುಮಾಡಿದ
ಒಂದು ದೋಷಗಣಿಸದಲೆ ದಯದಿಂ
ಬಂಧದಿಂದ ಮುಕ್ತಿ ಹೊಂದಿಸಭವ 3