ಒಟ್ಟು 141 ಕಡೆಗಳಲ್ಲಿ , 40 ದಾಸರು , 122 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನವ ಸಿಂಗನ ಪಾಡಿರೈ ಪ ಇಂಗಡಲಜೆಪತಿ | ಮಂಗಳ ಚರಿತ ಭು ಜಂಗಶಾಯಿ ಶುಭಾಂಗ ಅ.ಪ ಲಾಲಿಸಿ ದೇವ | ಮಹಾನುಭಾವ | ಅವತರಿಸಿದನು ಅಸುರಾಂತಕ | ಪ್ರೇಮದಲಿ ಗೋಕುಲದಲ್ಲಿ | ವಿಧಿ ಕುಲ ಜಾತ 1 ತಂದೆ ತಾಯ್ಗಳ ಬಂಧನ ಬಿಡಿಸಿದ ಧೀರ | ಭಕ್ತಮಂದಾರ | ಒಂದೆ ಬೆರಳಲಿ ಗೋವರ್ಧನ ಶೈಲವನು | ತಾ ಧರಿಸಿದನು ಮದವನು ಮುರಿದ | ಮೋದವಗರೆವ ಕರವ | ಕರುಣದಿ ಪಿಡಿವ 2 ಶ್ವೇತ ವಾಹನ ಸೂತ ಕಾಮಜನಕ ಸತ್ಯಭಾಮೆ ರಮಣ ಗೋಪಾಲ | ಸ್ವಾಮಿ ಕುಲಾಲ ಭೀಮಗೊಲಿದ ನಿಸ್ಸೀಮ ಮಹಿಮಾ ಶ್ರೀ ಗೌರಿ | ಮಾತುಳವೈರಿ ಹೇಮಾಂಬರಧರ ಶಾಮಸುಂದರ ವಿಠಲ | ಧೃತವನಮಾಲ3
--------------
ಶಾಮಸುಂದರ ವಿಠಲ
ಮೊಸರ್ಬೇಕ್ ಮೊಸರು ಧೇಂಡಿಯ ಮೊಸರು ಪ ಕರಣೆಯೆಂದ್ಹೆಸರು ಕೇಳ್ಬೇಡಿ ಕೊಸರು ಅ.ಪ ಗೋಕುಲದಲಿ ಶ್ರೀಕೃಷ್ಣನು ತಾನೆ ಆಕಳಮಂದೆಯ ಹೊಂದಿರುತಾನೆ ಆ ಕರುಣಾನಿಧಿ ಕಳಿಸಿರುತಾನೆ ಬೇಕಾದರೆ ಬನ್ನಿ ನಾ ಇಕ್ಕುತ್ತೇನೆ 1 ಎಳಗಂದಿಯಲ್ಲವು ತಿಳಿಗಟ್ಟುವುದಿಲ್ಲ ಕೊಳೆಯಿಲ್ಲವು ಈ ಬಿಳಿಮೊಸರಿನಲಿ ತಿಳಿಯ ವೈರಾಗ್ಯ ಭಕ್ತಿಗಳುಳ್ಳ ಜನಕೆ ಗೆಳೆಯ ಶ್ರೀ ಕೃಷ್ಣನು ಕಳಸಿದನಮ್ಮ 2 ಬಿಂದು ಮಾತ್ರದಿ ನಿಜಾನಂದವ ಕೊಡುವುದು ಬಿಂದಿಗೆ ತಂಬಿಗೆ ತರಬೇಡಿರಮ್ಮ ಮಂದ ಜನರು ತಾವರಿಯರು ಇದನು ತಂದೆ ಪ್ರಸನ್ನನ ಪರಮ ಪ್ರಸಾದವ 3
--------------
ವಿದ್ಯಾಪ್ರಸನ್ನತೀರ್ಥರು
ಯಾಕೆ ಮಲಗಿದೆಯೊ ಶ್ರೀಕಾಂತ ದ್ವಾರಕಾವಾಸ ಸೂರ್ಯ ಉದಯಾಯಿತು ಗೋಕುಲದೊಳಗಿದ್ದ ಗೋಮಕ್ಕಳೆಲ್ಲ ಧ್ವಜ- ರೇಖಾ ಚರಣಕಮಲಕೆರಗಿ ಕರೆಯುತಲಾಗ ಪ ಅಂಬುಧಿ ಒಳಗಾಡಿ ತಂದು ವೇದವನು ಕೊಡು ಮಂದರೋದ್ಧಾರ ಸುರರಿಗೆ ಸುಧೆಯ ನೀಡು ತಂದು ದಾಡಿಂದ ಧರೆಯನು ಹರವಿ ಧರಾಪತಿಯೆ ಕೊಂದು ರಕ್ಕಸನ ನಂದನಗೆ ದಯಮಾಡದಲೆ 1 ಬೇಡಿ ದಾನವ ಭುವನ ಮಾಡಿದೆಲೆ ಮೂರ್ಹೆಜ್ಜೆ ಆಡಿದ್ವಚÀನವ ನಡೆಸುತಾರಣ್ಯವಾಸದಲಿ ಆದಿಲಕ್ಷ್ಮಿಯನೆ ಕದ್ದಸುರನ್ನ ಸಂಹರನೆ 2 ಗೊಲ್ಲ ಸತಿಯರ ಕೂಡ ಸಲ್ಲಾಪ ಸಾಲದಲೆ ಎಲ್ಲ ತ್ರಿಪುರರ ಸತಿಯರಲ್ಲಿ ಪೋಗುವರೆ ಎಲ್ಲಿ ಓಡ್ಯಾಡಿದ್ಹೇಳಿಲ್ಲಿ ವಾರಿಧಿಶಯನ 3
--------------
ಹರಪನಹಳ್ಳಿಭೀಮವ್ವ
ಯಾದವಗಿರಿವಾಸನಹುದೋ ಶ್ರೀ ನಾರಸಿಂಹಆದಿನಾರಾಯಣ ಅಚ್ಯುತನಹುದೊ ಪ ಪಾವಕ ಮೂರ್ತಿಕಳ್ಳ ದೈತ್ಯರ ಸಂಹಾರವ ಮಾಡಿದೆನಳಿನೋದ್ಭವನಯ್ಯ ಅಮರ ಚೆನ್ನಿಗರಾಯ 1 ಕಾಯ ಬೇಕೆಂದುನಟಿಸಿ ಕಂಬದಿ ಮೂಡಿ ನಗುವ ಭಕ್ತನ ನೋಡಿಸಟೆಯಲ್ಲ ಅಜಾಂಡಗಳೊಡೆವಂತೆ ಘರ್ಜಿಸೆಕುಟಿಲ ದಾನವನೋಡುವುದ ಕಂಡು ಎಳೆತಂದುಚಿಟಿಚಿಟಿ ಚಿಟಿರೆನ್ನಲು ಉಗುರಲಿ ಸೀಳಿಪುಟನೆಗೆದ ಪಾದದಲಿ ಬಲಿಯ ತಲೆಯನು ಮೆಟ್ಟಿ ನಟನೆಯಾಡುವ ವಿದ್ಯೆಯನೆಲ್ಲಿ ಕಲಿತೆಯೊ ಕಪಟನಾಟಕ ಸೂತ್ರಧಾರಿ ನೀನಹುದು ಕ್ಷತ್ರಿಯರಚಟುಲ ಛಲದಿ ಒಗೆದು ಕರುಳ ಬಗೆದು ತುಳಿದ-ದಟರನು ಸಂಹರಿಸಿದ ಚೆಲುವರಾಯ 2 ಅಂದು ಕೌಸಲ್ಯಾ ಗರ್ಭ ಚಂದ್ರಮನಾಗಿ ಬೆಳಗಿಕೊಂದೆ ರಾವಣ ಕುಂಭಕರ್ಣಾದಿಗಳನೆಲ್ಲಇಂದಿರೇಶನೆ ನಿನ್ನ ನಂಬಿದ ವಿಭೀಷಣನಿಗೆಎಂದಿಗೂ ಪಾರವಿಲ್ಲದ ಪದವಿಯನಿತ್ತೆಕಂದನಾಗಿ ಜನಿಸಿ ವಸುದೇವ ದೇವಕಿಯರಿಗೆನಂದಗೋಕುಲದೊಳು ನಿಂದ ಕಂಸನ ಕೊಂದೆಚಂದಿರನ ನೆರೆಪೋಲ್ವ ಉನ್ನತೋನ್ನತನಾಗಿಕೊಂದು ತ್ರಿಪುರಾಸುರರ ಅವರ ಸತಿಯರ ಕೆಡೆಸಿಒಂದೆ ನೆಗೆತಕೆ ನೆಗೆವ ಅಶ್ವವನೇರಿದೆ ವ-ಸುಂಧರೆಯ ಮೇಲೆ ಲೀಲೆಯಾಡುತ ಕೃತಯುಗದಿನಿಂದು ಯಾದವಗಿರಿಯ ಮೇಲೆ ತ್ರೇತಾಯುಗದಿಬಂದು ರಾಮನೆನಿಸಿಕೊಂಡೆ ದ್ವಾಪರ ಯುಗದಿಬಂದು ಕೃಷ್ಣನೆನಸಿಕೊಂಡೆ ಕಲಿಯುಗದೊಳುನಿಂದು ಚೆಲುವ ಚೆನ್ನಿಗರಾಯನಾದೆ ವರನಂದಿಯ ಚಂದದಿಂ ರಕ್ಷಿಸಿದೆ ಎನ್ನ ಕಾಯೊಇಂದಿರಾಪ್ರಿಯ ಬಾಡದಾದಿಕೇಶವ ರಾಯ3
--------------
ಕನಕದಾಸ
ಯಾರವನು ಹೊರಗೆನಿಂತ ಬಾರಾನ್ಯಾಕವನು ಪ ನೀರಮುಳುಗಿ ಬಂದು ಘೋರಪರ್ವತ ತಂದು ಧಾರುಣಿಯನು ಕದ್ದ ದನುಜನ ಕೊಂದು ನರಹರಿ ರೂಪದಿ ತರಳಗೊಲಿದುಪುಟ್ಟ ಚರಣದಿಂ ಧರಣಿಯನಳೆದ ಮಹಾತ್ಮನೋ 1 ಕೊಡಲಿಯ ಪಿಡಿದು ತಾ ಬಿಡದೆ ಕ್ಷತ್ರಿಯರನ್ನು ಮಡುಹಿ ಬಂದವನಿವನೇನೋ ಮಡದಿಗಾಗಿ ದೊಡ್ಡಅಡವಿಯೊಳು ಮನೆಕಟ್ಟಿ ಬಿಡದೆ ಗೋಕುಲದಲ್ಲಿ ನೆಲೆಸಿರುವಾತನೋ 2 ಬೆತ್ತಲೆ ನಿಂತ್ಹತ್ತಿ ಮತ್ತೆಕುದುರೆಯ ಚಿತ್ತಬಂದಂತೆ ತಾ ತಿರುಗುವನೋ ಉತ್ತಮನಾದ ಶ್ರೀ ಪ್ರಾಣನಾಥವಿಠಲನು ಎತ್ತನೋಡಿದರು ಸುತ್ತುತ್ತಲಿರುವನು 3
--------------
ಬಾಗೇಪಲ್ಲಿ ಶೇಷದಾಸರು
ಯಾವದು ಸುಖವೇ ಮತ್ಯಾನಂದವೇ ಪ ಈ ಉಡುಪಿಯ ಯಾತ್ರೆ ಮಾಡಿದ ಮನುಜಗೆ ಅ.ಪ. ಮನದಲಪೇಕ್ಷಿಸೆ ಅವನಿಗೆ ಹದಿನಾಲ್ಕು ಕನಕನ ಚಿತ್ತನಾಗಿ ಗೋಕುಲದಿಂದ ಸ ಜ್ಜನ ಮಾರ್ಗದಲಿ ಗುಣವಂತನೆನಿಸಿಕೊಂಬ 1 ಒಂದು ಹೆಜ್ಜೆಯನಿಟ್ಟು ಸಾಗಿ ಬರುತಲಿರೆ ಅಂದೆ ಸುರರೊಳು ಗಣನೆ ಎನ್ನೆ ಒಂದಕ್ಕೆ ನೂರಾರು ಯಾಗ ಮಾಡಿದ ಫಲ ತಂದು ಕೊಡುವ ಅಜನಾದಿಕಲ್ಪ ಪರಿಯಂತ2 ಅರ್ಧ ಮಾರ್ಗದಿ ಬರಲು ಬಂದು ನಿಲ್ಲಲು ಅವರ ಸಾಗರದಿ ಕೋಟಿ ಸ್ನಾನ ಮಾಡಲು ಊಧ್ವರೇತಸ್ಥನಾಗಿರ್ದ ಫಲವಕ್ಕೆ ಪರಿಯಂತ 3 ಸನ್ನುತ ಸಾಧನವನು ಮಾಡಲು ಸನ್ನುತರ ತೆಗೆದು ಜ್ಞಾನ ಭಕುತಿ ಸಂ ಪನ್ನವಿರಕುತಿಗೆ ಯತಿಗಾದಿ ಮುಖನಾದ4 ಕರವ ಜೋಡಿಸಿ ನಿಂದು ದೃಷ್ಟಿಯಿಂದಲಿ ನೋಡಿದವನೆ ಮುಕ್ತಾ ಮುಟ್ಟಿ ಭಜಿಸುವರ ಸತ್ಪುಣ್ಯ ವಿಜಯವಿಠ್ಠಲನಾತನೆ ಬಲ್ಲ ಅರುಹಲಳವಲ್ಲ 5
--------------
ವಿಜಯದಾಸ
ರಂಗ ಬಂದಾ ನಮ್ಮ ಭಂಗಿಸಿ ಕಾಳಿಯ ಫಣಿಯಲಿಂದು ಪ ವಿಷಧರನುರಿಯಿಂದ ನಿಸಿದಿನಿ ಕುದಿಯುತಿಹ | ವಿಷಮಡುವನೆ ಪೊಕ್ಕು ಕುಶಲದಿಂದಲಿ ರಂಗ ಬಂದಾ 1 ಉರಗೇಂದ್ರ ಬಂದನದಿ ಶರೀರ ಬೆಳಿಸಿ ತನ್ನ | ಬಿರಿವಂತವನತನು ಹರಿಸಿ ಮದವಾ2 ನೂರೊಂದು ಹೆಡೆಗಳ ಚರಣದಲೊತ್ತಿ ತುಳಿದು | ಸುರರಾ ಗೀತದಿ ನೃತ್ಯ ಚರಿತವ ದೋರಿ 3 ಸತಿಯರ ಮೊರೆಕೇಳಿ ಪತಿದಾನವನೆ ಕೊಟ್ಟು | ಕ್ಷಿತಿಯೊಳು ಗೋಕುಲದುನ್ನತ ಭಾಗ್ಯದಲಿ 4 ತಂದೆ ಮಹಿಪತಿ ನಂದನ ಪ್ರಭು ಸ್ವಾ | ನಂದವ ಸುರನರ ವೃಂದಕ ಬೀರಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಲಾಲಿ ಆಡಿದ ರಂಗ ಲಾಲಿ ಆಡಿದ ಪ. ಬಾಲೆ ರುಕ್ಮಿಣಿ ದೇವೇರೊಡನೆ ಮೂರು ಲೋಕನಾಳ್ವ ದೊರೆಯುಅ.ಪ. ಸಾಧು ಮಚ್ಚಕಚ್ಚಪರೂಪನಾಗಿ ಭೇದಿಸಿ ತಮನ ಕೊಂದುವೇದವನ್ನು ಮಗನಿಗಿತ್ತು ಭೂದೇವಿಯರೊಡನೆ ಕೃಷ್ಣ 1 ಅಮೃತ ಬಡಿಸಿ ಸತ್ಯಭಾಮೆಯರೊಡನೆ ಕೃಷ್ಣ2 ವರಾಹ ರೂಪನಾಗಿ ಆದಿ ಹಿರಣ್ಯಕನ ಕೊಂದುಮೇದಿನಿಯ ಮೇಲಕೆ ತಂದು ರಾಧೆಯೊಡನೆ ನಗುತ ಕೃಷ್ಣ 3 ಪುಟ್ಟಬಾಲನ ನುಡಿಯ ಕೇಳಿ ಕೆಟ್ಟ ಕಶ್ಯಪನುದರ ಸೀಳಿಅಷ್ಟಮಂಗಳವಾದ್ಯವಾಗಲು ಅಷ್ಟ ಸ್ತ್ರೀಯರೊಡನೆ ಕೃಷ್ಣ 4 ಸುರರು ಲಕುಮಿಯೊಡನೆ ನಗುತ ಕೃಷ್ಣ 5 ಯುದ್ಧದಲಿ ಕೊಡಲಿ ಪಿಡಿದು ಗುದ್ದಿ ಕ್ಷತ್ರೇರ ಶಿರವ ತರಿದುಗೆದ್ದ ಸಿಂಹನೆನಿಸಿಕೊಂಡು ಪದ್ಮಾವತಿಯ ಕೂಡೆ ಕೃಷ್ಣ 6 ಸೇತುಬಂಧನವನ್ನೆ ಮಾಡಿ ಧೂರ್ತರಾವಣನ್ನ ಕೊಂದುಖ್ಯಾತಿಪಡೆದು ಪುರಕೆ ಬಂದು ಸೀತೆಯೊಡನೆ ರಾಮಚಂದ್ರ 7 ಒಂದು ಏಳು ಎಂಟುಸಾವಿರ ಇಂದುಮುಖಿಯರನ್ನು ಕೂಡಿಮಂದಮಾರುತ ಚಂದ್ರ ಬರಲು ನಂದಗೋಕುಲದ ದೊರೆಯು 8 ಅಂಬರವ ತೊರೆದು ದಿಗಂಬರÀ ವೇಷವನ್ನೆ ಧರಿಸಿಮಂಗಳಾಂಗ ಮಾರಜನಕ ರಂಗನಾಯಕಿಯೊಡನೆ ಕೃಷ್ಣ9 ಅಚ್ಚಮುತ್ತಿನಾಭರಣವಿಟ್ಟು ಲಕ್ಷವಿಲ್ಲದೆ ಹಯವನೇರಿಭಕುತರಿಗೆ ಅಭಯಕೊಡುತ ಭಕ್ತವತ್ಸಲ ಹಯವದನ 10
--------------
ವಾದಿರಾಜ
ಲಾಲಿ ಶ್ರೀ ಕೃಷ್ಣ ಬಾಲ ಲಾಲಿ ನಂದ ಯಶೋದೆ ಲೀಲ ವೇಣುಗೋಪಾಲ ಪ. ವಸುದೇವ ಸುತನಾಗಿ ಬಂದು ಎಸೆವೊ ಗೋಕುಲದಲಿ ನಿಂದು ಅಸುರಕುಲ ಸಂಹಾರಕೆಂದು ನಸುನಗುತ ಗೋಪಿಯರ ವಶವಾಗ್ವೆನೆಂದು 1 ಪುಟ್ಟಿದಾ ಶಿಶುವನ್ನೆ ನೋಡಿ ನಕ್ಷತ್ರ ರೋಹಿಣಿ ಎಂದು ತಿಳಿದು ಅಷ್ಟಜನ ಸಹಿತ ಗೋಕುಲದಿ ಸಂತುಷ್ಟಿಯೊಳು ನಾಮಕರಣವ ಮಾಡಿ ನಲಿದೂ 2 ವೇದ ಘೋಷಗಳಾಗುತಿರಲೂ ಆದಿ ಮೂರುತಿಗೆ ಮೋಹದಲಿ ಕೃಷ್ಣನೆಂದ್ಹೆಸರನಿಡಲೂ ಸಾದರದಿ ಗೋಪ ದಕ್ಷಿಣೆ ತಾಂಬೂಲ ಅಗಾಧದಲಿ ಬ್ರಾಹ್ಮಣರಿಗೆ ಕೊಟ್ಟು ನಲಿದೂ 3 ಚತುರ ವೇದದ ನಾಲ್ಕು ಸರಪಣಿಯ ಹೂಡಿ ಚತುರ ದಿಕ್ಕನೆ ನಾಲ್ಕು ಚೌಕ ತೊಟ್ಟಿಲನೆ ಕಟ್ಟಿ ಚತುರ್ಮುಖನಯ್ಯನ ತೊಟ್ಟಿಲೊಳಗಿಟ್ಟು ಅತಿಶಯದಿ ನಾರಿಯರು ತೂಗಿದರು ಹರಿಯಾ ಲಾಲಿ4 ಮಚ್ಛಕೂರ್ಮನೆ ವರಹ ಲಾಲಿ ತುಚ್ಛ ದೈತ್ಯನ ಕೊಂದ ನರಹರಿಯೆ ಲಾಲಿ ಅಚ್ಚವಾಮನ ಭಾರ್ಗವ ಕೃಷ್ಣ ಲಾಲಿ ಸಚ್ಚ ಬೌದ್ಯಕ ಶ್ರೀ ಶ್ರೀನಿವಾಸನೆ ಲಾಲಿ 5
--------------
ಸರಸ್ವತಿ ಬಾಯಿ
ವಾಹನ ನರಜನ ಪ್ರೇಮಾ | ಹರಿ ಸಾರ್ವಭೌಮ ಪ ಯೋಗಿ ಮಧ್ವಮತದಾಗಮ ವಂದಿತಭಾಗವತಾಗ್ರಣಿ ಶ್ರೀಗುರುಗಳ ಕೈ ಅ.ಪ. ಪ್ರಳಯ ಕಾಲದಲಿ ಹರಿ ನೀನಂದು | ಶ್ರೀ ಭೂ ದುರ್ಗಾತ್ಮಕಜಲದಾಲದೆಲೆಯಲಿ ತೊಟ್ಟಿಲಲಂದೂ | ಕತ್ತಲೆಯೊಳಗಂದೂಎಲ್ಲಾ ಜೀವರ ಪೊಕ್ಕಳ ಎಡಬಲ ತಂದೂ | ದೀನ ಜನರ ಬಂಧೂ ||ಥಳಥಳ ಪೊಳೆಯುವ ಮಣಿಯ ತೊಟ್ಟಿಲೊಳುಲಲನೆ ಸಹಿತ ಎಡಬಲ ವೈಭೋಗದಿ 1 ಗೋಕುಲದೊಳೊ ಗೋಪಿಯರಿಂದ ತೂಗಿಸಿಕೊಂಡುಸಾಕಾಗಲಿಲ್ಲೇ ಎಲೊ ಮುಕುಂದ | ಕೌಸಲ್ಯಾದೇವಿಯುಬೇಕೆಂದು ಮುದ್ದಿಸಿ ಮೋಹದಲಿಂದಾ | ಆದ ಕಾರಣದಿಂದಾ ||ಏಕ ಮನಸಿನಲಿ ಈ ಪರಮುನಿಪಗೆಬೇಕೆಂದೊಲಿದು ಪರಾಕನು ಕೊಳ್ಳುತ 2 ಮೋದ | ಸತ್ಯಬೋಧಾರ್ಯರ ||ಮತಿಗೆ ನೀ ಮರುಳಾದೆ ಮಧುಸೂದನನೆ ಪತಿತ ಪಾವನನೆ ವ್ಯಾಸ ವಿಠಲ ನೀನೇ 3
--------------
ವ್ಯಾಸವಿಠ್ಠಲರು
ವಿಜಯವಿಠ್ಠಲ ಶ್ರೀ ವಿಜಯವಿಠ್ಠಲ ಪ ವನಚರ ನಗಧರ ಅವನಿಯ ಉದ್ಧಾರ ಕಾನನ ವೇಗದಿ ಭು- ವನ ದಾನದ ನೆವನನು ಮಾಡಿ ಗಂಗೆಯ ಹ - ವಣದಿ ಪಡದೋ ಶ್ರೀ ವಿಜಯವಿಠ್ಠಲಾ 1 ಛಲದಿಂದ ಕುಲ ಕೋಲಾಹಲ ಮಾಡಿಸಿ ನೀ ತರಿದೆ ಬಾಲೆಯರ ಬಾಲರ ಬಿಡದೆ ಸುಲಭದಿ ಕರ್ಣಗೆ ಒಲಿದು ಪೇಳಿದೆ ಆ ಸುಲಲಿತಾ ಭಾರ್ಗವ ವಿಜಯವಿಠ್ಠಲ2 ಶತಮಖರಿಪು ಲೋಕಪಿತನೊರವಿನಿಂದಲಿ ಖತಿ ಸಕಲರಿಗೆ ನೀವು ತರಿದಿರಲು ಪತಿತಪಾವನ ರಾಮ ಅತಿ ವೇಗ ದನುಜನ ಹತವ ಮಾಡಿದೆಯೊ ಶ್ರೀ ವಿಜಯವಿಠ್ಠಲ3 ಬಕಮುಖ ದನುಜರ ಹಕ್ಕಲಗೊಳಿಸಿ ಬಲು ಯುಕುತಿಯಿಂದಲಿ ಭಕುತರ ಪೊರದೆ ವಿಕಸಿತ ಕಮಲನಯನ ಕಂಜನಾಭನೆ ಸಕಲ ಸುರರ ಪಾಲ ವಿಜಯವಿಠ್ಠಲಾ 4 ರಕ್ಕಸ ಮರ್ದನ ದಿಕ್ಕು ಮೋಹಿಪ ಕೃಷ್ಣ ರುಕ್ಮಿಣಿ ಪತಿಯಾದಾ ಚಕ್ರಪಾಣಿ ಉಕ್ಕಿದ ಮಗಧನ ಸೊಕ್ಕು ಮುರಿದು ಕಪಿ ರೆಕ್ಕ ಆಳ್ವನಿಗೆ ಒಲಿದೆ ವಿಜಯವಿಠ್ಠಲಾ 5 ಘನವಾದ ವಿಶ್ವರೂಪವ ತೋರಿದೆ ದಿನಮಣಿ ಕೋಟಿ ಅಧಿಕ ಕಾಂತಿ ನರಹರಿ ವನಜ ಸಂಭವನಯ್ಯ ವಿಜಯವಿಠ್ಠಲಾ 6 ವನಿತೆಯರ ವ್ರತ ಭಂಗವ ಮಾಡಿ ದಾನವರ ಮೋಹಿಸಿದೆಯೊ ಪವನನೊಡಿಯಾ ಉನುಮತ ಜನ ಕುಲ ಸನುಮತ ಶಾಸ್ತ್ರವ ವ- ದನದಲಿ ಮೆದ್ದಿಯೊ ವಿಜಯವಿಠ್ಠಲಾ 7 ರಜೋತಮ ಗುಣವನು ಭುಂಜಿಸುತ ವ್ರಜ ಭೂಮಿ ನಿಜವಾಗಿ ವ್ಯಾಪಿಸಿರೆ ಸುಜನಪಾಲ ನೀನು ವದಗಿ ವಾಜಿಯನೇರಿ ಭಜನಗೈಸಿದ ವೇಗ ವಿಜಯವಿಠ್ಠಲಾ 8 ಗೋಕುಲದಲಿ ಅನೇಕ ಲೀಲೆಯ ತೋರಿ ಬೇಕಾದ ವರ ಪುಂಡರೀಕಗಿತ್ತೆ ಸಾಕಾರ ಗುಣ ಪೂರ್ಣ ವೇಣುಗೋಪಾಲ ವಿ ವೇಕವ ಕೊಟ್ಟ ಕಾಯನ್ನ ವಿಜಯವಿಠ್ಠಲಾ9
--------------
ವಿಜಯದಾಸ
ಶ್ರೀ ಕೃಷ್ಣನಾ ಚರಣಾ ನಂಬಿ ಭಜಿಸುವುದು ಬಲು ಲೇಸು ಪ ಭಾವನೆ ದೇವಕಿ ಉದರದಿ ಬಂದಾ| ದೇವ ಹೃದಯ ಗೋಕುಲದಲಿ ಬೆಳೆದಾ| ಅವಿದ್ಯ ಪೂತನಿಯನು ಕೊಂದಾ 1 ಭವರೂಪದ ಸಗಟಾಸೂರನೊದೆದಾ| ಅವಗುಣಿಬಕ ಕೇಶಾದ್ಯರ ತರಿದಾ| ಅವಿವೇಕಿ ಕಾಳಿಂಗನ ತುಳಿದಾ 2 ಭಕ್ತಿಯ ಗೋರಸ ಕಳವಿಲಿ ಸುರಿದಾ| ಮುಕ್ತಾಂಗದ ಗೋಪೀಜನ ನೆರೆದಾ| ಸಕ್ತಿಯ ಗೋವರೋಳು ನಲಿದಾ3 ಭ್ರಾಂತಿಯ ಹಮ್ಮಿನ ಕಂಸನ ಬಡಿದಾ| ಸ್ವಾಂತ ಸುಖ ದ್ವಾರಕೆಯಲಿ ನಿಂದಾ| ಶಾಂತಿಯ ರುಕ್ಮಿಣಿ ಕೈವಿಡಿದಾ 4 ತಂದೆ ಮಹಿಪತಿ ಗುರುವಾದಾ ಕಂದುದ್ಧವನನು ತೋರಿಸಿ ಹೊರೆದಾ| ಛಂದದಿ ಪಾದುಕವಿತ್ತನು ಪದದಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಧೀರೇಂದ್ರರು ಚಾರು ನಿಮ್ಮಯ ಚರಣತೋರಿಸುದ್ಧರಿಸಬೇಕೊ ಪ. ಆರು ಇವನೆಂದು ನೀವ್ ಗಾರುಮಾಡದಲೆನ್ನ ಸಾನುರಾಗದಿ ಪೊರೆಯಬೇಕೊ ಸ್ವಾಮಿ ಅ.ಪ. ವರದಾ ತೀರದಿ ನಿಂದು ವರ ಕೊಡಿವೀಯೆಂದು ಘನಗರ್ವ ನಿನಗ್ಯಾತಕೊಸುರಪತಿಯ ಬಲದಲ್ಲಿ ಇಹೆನೆಂದು ನೀ ಬಲು ಜರಿದು ನೋಡಲಿ ಬ್ಯಾಡವೊಆರುಗತಿಯಿಲ್ಲವೆಂದೀರ ನಿನ್ನೆಡೆ ಬರಲು ಏರಿ ಕೂಡ್ರುವುದುಚಿತವೇಸಾರಿ ಹೇಳುವೆ ನಿನಗೆ ಚೋರದಾಸನು ನಾನು ಘೋರರೂಪದಿ ಬಂದು ತೋರೋ ಸ್ವಾಮಿ 1 ರಘುಕುಲತಿಲಕನ ಭಕ್ತಿಪಾಶದಿ ಕಟ್ಟಿಚಕ್ರವರ್ತಿಯೆನಿಸಿ ಗೋಕುಲದ ಗೊಲ್ಲನ ಯುಕುತಿಯಲಿ ನೀನೊಲಿಸಿದ್ಯೊಶಕ್ತಿಯಿಂ ಕಲಿಯುಗದಿ ಧೀರೇಂದ್ರ ಪೆಸರಿನಿಂ ದುರಿತಗಳ ಕಳೆಯುವಿಯೊಧಿಃಕರಿಸಿ ವಾದಿಗಳ ದೇಶದೊಳ್ ಚರಿಸಿದ ವಸುಧೀಂದ್ರ ಸಂಜಾತ ಪೊರೆಯೆ ಸ್ವಾಮೀ 2 ಹೆಣ್ಣಿನಾಶೆಗೆ ಬಿದ್ದು ಹೊನ್ನು ಸ್ಥಿರವೆಂದು ನಾ ಮಣ್ಣುಪಾಲಾದೆನೊತನುವು ತನ್ನದು ಎಂಬ ಭಿನ್ನ ಜ್ಞಾನವನೇ ಹೊಡೆದೋಡಿಸೆಮಾನ್ಯವಂತರ ಸಂಗ ಇನ್ನು ಮೇಲಾದರೂ ದಯಪಾಲಿಸೊಘನ್ನ ಮಹಿಮಾ ತಂದೆವರದವಿಠಲನಲ್ಲಿ ಜ್ಞಾನದಿಂ ಭಕ್ತಿ ವ್ಯೆರಾಗ್ಯವನೆ ಈಯೋಸ್ವಾಮಿ 3
--------------
ಸಿರಿಗುರುತಂದೆವರದವಿಠಲರು
ಶ್ರೀಕರಮಾಗಿಹ ಗೋಕುಲದಲಿ ಕರು ಣಾಕರ ಕೃಷ್ಣನು ನೆಲೆಸಿರಲು ಸಿರಿ ತಾ [ಕರೆಯುವ] ಹರ್ಷದೊಳು 1 ಲಾವಣ್ಯಕೆ ಮೋಹಿಸಿ ಮನದಿ ಭಾವಜನಸ್ತ್ರದ ಬಾಧೆಯಿಂದ ಪತಿ ಭಾವದಿ ನೋಡುತ ಭರದಿ 2 ಕಾಮಿಸಿ ಕಾಡಲು ಕಾಕುತ್ಸ್ಥನು ಬಲ ರಾಮ ಸಹಜನವತಾರದಲಿ ಕಾಮಿತವಹದೆನೆ ಕಾಮಿನಿ ರಾಧಾ ನಾಮದಿ ಜನಿಸಿರೆ ಗೋಕುಲದಿ 3 ಒಂದಾನೊಂದಿನನಂದಾದಿಗಳಾ ನಂದಾನ್ವಿತಮತಿವೃತ್ತಿಯಲಿ ಒಂದಾಗಿ ಧರಾವೃಂದಾರಕರನು ವಿಂದಾರಾಧಿಪ ಭಕ್ತಿಯಲಿ 4 ನಂದನದಂತಿಹ ವನದೆಡೆಗೆ ಬಂಧುಗಳೊಂದಿಗೆ ಬಂಡಿಯನೇರಿ ಮು ಕುಂದನ ಧ್ಯಾನಿಸುತಡಿಗಡಿಗೆ 5 ಅಲ್ಲಿಗೆ ಭೂಸುರರೆಲ್ಲ ಬರಲು ಮಿತಿ ಯಿಲ್ಲದೆ ಗೋಧನ ದಾನದಲಿ ಬಲ್ಲಿದ ಭೋಜನದಲ್ಲಿ ದಣಿಸಿ ಸುಖ ದಲ್ಲಿರುತಿರಲಾ ಸಮಯದಲಿ 6 ಅಸ್ತಮಹೀಧರ ಮಸ್ತಕವನು ಸುಜ ನಸ್ತುತ ದಿನಕರನೈದಿರಲು ನಿಸ್ತುಲಮದಿ ಸಮಸ್ತರ ದೃಷ್ಟಿಗಳ ಸ್ತಗೊಳಿಸೆ ಜನ ಭಯಗೊಳಲು7 ನೆಂದು ರಾಧೆಯ ತಾ ನೋಡಿ ಎಂದರೆ ಬಂದಳು ನಗೆಗೂಡಿ 8 ಕಂದ ಬಾರೋ ಗೋವಿಂದ ಬಾ ಯದು ನಂದನ ಬಾ ಕಮಲಾಸನನ ನಂದವ ತೋರುವೆ ಶಶಿವದನಾ 9 ನೋಡಿಸುವೆನು ನೀನೊಲಿದುದನು ಬೇಡ ನಿನ್ನನೆ ಕೂಡಿಹೆನು 10 ರಾಧೆಯ ನುಡಿಗಳನಾದರಿಸುತ ಮಧು ಸೂದನ ತನ್ನಯ ಮನದೊಳಗೆ ಮೋದಚರಿತ್ರನು ಕಾಮಿನಿಗೆ 11 ಮುತ್ತನಿತ್ತು ಬಲು ಮುದ್ದಿಸಿ ಬಾಲಕ ನೆತ್ತಿಕೊಂಡು ಬಲು ಸಡಗರದಿ ನರ್ಥಿಗೆ ಸೊಕ್ಕುವ ಕಾತರದಿ 12 ಕರುಣನಾದೊಡೀಗಲೆ ಬೆರೆದು ಹರುಷದಿ ಬರುತಿರ್ದಳು ನಲಿದು 13
--------------
ವೆಂಕಟವರದಾರ್ಯರು
ಶ್ರೀನಿವಾಸನೆ ನಿನ್ನ ಧ್ಯಾನದಲಿ ನಾನಿದ್ದೆ ಕರವ ಪಿಡಿದೆ ಪ ಭಾನುಶತತೇಜ ನಿನ್ನಾನನಾಬ್ಜದ ಮಧುವ ಪಾನ ಮಾಡುತ ತೃಪ್ತಿ ಕಾಣದಿರುವೆ ಅ.ಪ ಕಾಮನಂತಹ ರೂಪ ಸೋಮನಂತಹ ಕಾಂತಿ ರಾಮನಂತಹ ಸತ್ಯ ಧರ್ಮ ನಡತೆ ಈ ಮಹಾ ಸುಗುಣಶಾಲಿಯು ನೀನು ನಿನ್ನಯ ಪ್ರೇಮವನು ಕಾಮಿಸುವ ಹಸುಳೆ ನಾನು 1 ಗಂಧ ಫಲಪುಷ್ಪ ತಾಂಬೂಲಗಳನು ಅಂದದ ಹೇಮದ ತಬಕದಲ್ಲಿ ತಂದು ಕೊಡುವೆನು ಪ್ರೇಮ ಕಾಣಿಕೆಯನು ಮಂದಹಾಸದಿ ನಿನ್ನ ಪಾಂಗದಿಂದ ನೋಡೋ 2 ಒಂದು ದಿನ ಕನಸಿನಲಿ ಕಂಡೆನಚ್ಚರಿ ದೃಶ್ಯ ಮುಂದೆ ನಿಂತಳು ಯುವತಿ ನಸುನಗುತಲಿ ಗಂಧ ತಾಂಬೂಲ ಫಲಪುಷ್ಪ ಪರಿಮಳದ್ರವ್ಯ ತಂದಿಹಳು ಚಿನ್ಮಯದ ತವಕದಲ್ಲ್ಲಿ ಕಂದನಿದ ನಿನಗಾಗಿ ತಂದಿರುವೆನೆಂದು ಮೃದು ಮಂದಹಾಸದಿ ತಲೆಯ ಸವರಿ ನುಡಿಯೆ ಸುಂದರಿಯೆ ನೀನಾರು ಬಂಧುವರ್ಗಗಳಲ್ಲಿ ಹಿಂದೆ ನಾ ನೋಡಿಲ್ಲವೆಂದು ನುಡಿಯೆ ನಂದಗೋಕುಲದಲ್ಲಿ ನಂದನಕುಮಾರನಿಗೆ ಅಂದ ರಾಣಿಯು ನಾನು ಸತ್ಯಭಾಮೆ ಇಂದ್ರದೇವನ ದಿವ್ಯ ನಂದನವನದಿಂದ ತಂದಿರುವೆ ನಿನ್ನ ವರಕುಲವನರಿತು ಸುಂದರಾಂಗನ ಸೇರಿ ಸುಖಪಡುವ ಸೌಭಾಗ್ಯ ಮುಂದಿಹುದು ನಿನಗೆ ಬಲು ತ್ವರಿತದಲ್ಲಿ ಅಂದು ನೀ ಈ ಸ್ವರ್ಣಮಯ ತವÀಕದಲ್ಲಿರುವ ಗಂಧ ಪುಷ್ಪಾದಿಗಳ ಫಲವನರಿವೆ ಚಂದದಲಿ ದಾಂಪತ್ಯ ಸುಖಶಾಂತಿ ಪಡೆಯುವೆ ಕಂದ ನೀ ಸ್ವೀಕರಿಸು ಪೋಗಿ ಬರುವೆ ಎಂದು ನುಡಿಯಲು ತರುಣಿ ಎಚ್ಚರಿತೆನು ಶುಭ ಸುದ್ದಿಯು ತಂದಿರುವೆ ತಬಕವ ಪ್ರಸನ್ನ ವದನ
--------------
ವಿದ್ಯಾಪ್ರಸನ್ನತೀರ್ಥರು