ಕಾರ್ತಿಕೇಯನ ಮಾಡೋ ನೀ ಧ್ಯಾನ ಪ
ನೀರಜ ನಯನನ ತಾರಕ ಮಂತ್ರನ ಮಾಡೋ ನೀ ಧ್ಯಾನ 1
ನಿಗಮಗಳಿಗೆಟಕದ | ಜಗದೇಕ ದೇವನ ಅಗಣಿತಮಹಿಮನ | ಮಾಡೋ ನೀ ಧ್ಯಾನ 2
ನಿತ್ಯಾನಂದನ | ಭೃತ್ಯರ ಪೊರೆವನ ಸತ್ಯ ಸ್ವರೂಪನ | ಮಾಡೋ ನೀ ಧ್ಯಾನ 3
ದುಷ್ಟ ಖಳರ ಎದೆ | ಮೆಟ್ಟಿ ಶಿಕ್ಷಿಸುವನ ಕುಷ್ಠ ವಿನಾಶನ | ಮಾಡೋ ನೀ ಧ್ಯಾನ 4
ದಾಸರ ಕಾವ ಪಾವಂ | ಜೇಶನ ಸ್ಕಂದನ ಭೂಸುರ ಪ್ರೀಯನ | ಮಾಡೋ ನೀ ಧ್ಯಾನ 5