ಕಾಖಂಡಕಿ ಪ್ರಸನ್ನ ವೆಂಕಟದಾಸರು
ಸಿರಿ ಪ್ರಸನ್ನವೆಂಕಟನ್ನನಿರುತ ಸ್ಮರಿಪ ಕಾಖಂಡಿಕಿ ವೆಂಕಪ್ಪನವರ ಚರಣವನೆ ನೆನೆವನೆ ಧನ್ಯಾಮಾನ್ಯ ಪ
ಮರುತ ಮತಾಬ್ಧಿ ಮರಕತ ಭೂಸುರಜನ್ಮ ಧರನಾಗಿಭೂಮಿಯೊಳುದಿಸಲುತರುಳತ್ವ ಕಳೆದು ತರುಣತನ ಬರಲಿನ್ನು ಅರಿವ ಕಾಣದೆ ಇರುತಿರಲುಹರಿನಾಮಾವಳಿಗಳು ಬರೆದು ಓದುವ ಭಾಗ್ಯ ಅರಿವೆನೆಂದರೆ ಬಾರದಿರಲುತೊರೆದು ಮನೆಯವರ ಗಿರಿಯಾತ್ರೆ ಮಾಳ್ಪರನನುಸರಿಸಿ ತೆರಳಿಬರುತಿರಲು 1
ವರಾಹ ಮೂರ್ತಿಯನೆ ಕಂಡಾಲಸವ ಮಾಡದಲೆಚೆನ್ನಾಗಿಝಷಕೇತು ಜನಕನ ಪುಟ್ಟಿಸಿದ ಕಾರಣವೇನು ಉಸಿರೆಂದು ಚರಣಕ್ಕೆಬಾಗಿ 2
ವಂದಿಸಿದ ಕ್ಷಣ ಸ್ವಪ್ನದಿ ಪ್ರಸನ್ನವೆಂಕಟನೆಂದು ಬರೆಯೆ ನಾಲಿಗೆಲಿನಂದದಿಂದೆಚ್ಚೆತ್ತು ಜ್ಞಾನವುದಿಸೆ ಮುಕುಂದನ ಕಂಡು ಎದೆಯಲಿಚಂದ ಚಂದದಿ ಪೊಗಳುತ್ತ ಕಂಗಳಿಂದಾ ನಂದಬಾಷ್ಪ ಸುರಿಸುತಲಿಇಂದು ಧನ್ಯನಾದೆನೆಂದು ತೋಷಾಬ್ಧಿಯ ಹೊಂದಿ ಹರಿಯಾಜ್ಞೆಯಲಿತೆರಳಿ 3
ಭಾಗವತ ಪೂರ್ವಾರ್ಧಕನ್ನಡದಿಮತಿಪೂರ್ವಕ ರಚಿಸುತಾನಂದವು ತುಳುಕು ತಿಹುದು ಕವಿತೆಯಲಿನುತಿಸಿ ದುರ್ಮತ ನಿರಾಕರಿಸಿ ಬಾಳಿ ಬಲು ಕುಲ ತತಿ ಶುದ್ಧಮಾಳ್ಪರು ಹರಿಪುರವಹೊಂದಿ 4
ಕಲಿಕಾಲದಿ ನರಹರಿ ನಾಮ ಸ್ಮರಣೆಯು ಮುಖದಿಂದ ಬರುವುದು ಅತ್ಯಸಾಧ್ಯಲಲಿತಕವನದಿ ತುತಿಸೆ ರಮಾಪತಿವಿಠಲನು ಒಲಿವನು ಇದು ಸತ್ಯಹಲವು ಮಾತೇಕಿವರು ಸುರರೇ ಸರಿ ನರರಲ್ಲ ಇದು ಸಿದ್ಧವೇ ಸಿದ್ಧಛಲದಿ ಮನುಜನೆಂಬಧಮನು ಹರಿಯಾಜ್ಞೆಯಲಿ ಬಲು ಬಲು ನರಕದೊಳು ಬೇಳುವುದುರಾದ್ಧ 5