ಮೋದ ಪ್ರದ ನರಹರಿ | ವಿಠಲ ಪೊರೆ ಇವಳಾ ಪ
ಪಾದ್ಯ ಪ್ರ | ಹ್ಲಾದ ರಕ್ಷಕನೇ ಅ.ಪ.
ನೀನೇವೆ ಗತಿಯೆಂದು | ಆನೇಕ ವಿಧ ನಿನ್ನಸಾನುರಾಗದಿ ಪೊಗಳ್ವ | ಮಾನುನೀ ಮಣಿಗೇಜ್ಞಾನೋದಯವ ಗೈದು | ಕಾಣಿಸೋ ಸದ್ಗತಿಯಮಾನ ಮಾನ್ಯದ ಹರಿಯೆ | ಆನತೇಷ್ಟದನೇ 1
ಜೀವ ಅಸ್ವಾಂತಂತ್ರ | ದೇವ ನಿಜ ಸ್ವಾತಂತ್ರಈ ವಿಧದ ಸುಜ್ಞಾನ | ಓದಿ ಪಾಲಿಸುತಾ |ಕೇವಲಾನಂದ ಮಯ | ದೇವ ತವ ಸೇವೆಯನುಭಾವ ಭಕ್ತಿಯಲಿಂದ | ಗೈದ ಮನನೀಯೋ2
ನೆರೆಹೊರೆಯ ಜನರೇನು | ಮರಳಿ ಬಹು ಬಾಂಧವರುಹರಿ ನಿನ್ನ ಪರಿವಾರ | ಸರಿಯೆಂಬ ಮತಿಯಾಕರುಣಿಸುತ ತರಳೆಗೇ | ಪರುಷಾರ್ಥ ಸಾಧನದಪರಿಯನರುಹುತ ಪೊರೆಯೊ | ವರಲಕ್ಷ್ಮಿ ಪತಿಯೇ 3
ಸಾಧನ ಸುಜೀವಿಗಳ | ಕಾದು ಬಾಯ್ದೆರೆಯುತಿರೆಮೋದ ಬಡಿಸುವುದು ಚಿತ್ | ಸಾಧು ಜನವಂದ್ಯಾಮೋದ ಮುನಿ ಪಾದಾಬ್ಜ | ಆದರದಿ ವಂದಿಪಳೋಹೇ ದಯಾಂಬುಧೆ ಮನದಿ | ಮೈದೊರೊ ಹರಿಯೇ 4
ಬೋವ ನೀನಾದೇನೀ ವೊಲಿಯಲಿನ್ನೇನು | ಆವುದಾಸಾಧ್ಯವೋಪೂವಿಲ್ಲನಯ್ಯ ಗುರು | ಗೋವಿಂದ ವಿಠಲಾ 5