ಬೇಡಿಕೊಂಬುವೆನಯ್ಯ ಬೇಗ ಬಾರಯ್ಯ
ಮಾಡು ಎನ್ನೊಳೂ ದಯ ಪಂಢರಿರಾಯ ಪ
ನಾಶನ ಜಗದೊಳಗೆ ಭಾಷಗಡಕನು ಆಗಿ
ಸಾಸಿರೊರುಷಿರ್ದೇನು ಹೇ ಈ ಜನುಮ
ಶೇಷನಯನನೆ ನಿನ್ನ ದಾಸನ ಅತಿಶಯ
ದೋಷವನು ಗಣಿಸದೆ ಪೋಷಿಸೈ ಈಶ 1
ಅರಿದರಿದು ಪತಂಗ ಉರಿಯೊಳಗೆ ಬೀಳ್ವಂತೆ
ಖರೆಯ ಈ ಸಂಸಾರ ಸ್ಥಿರವೆಂದು ನಂಬಿ
ಪರಿಪರಿಯ ಪಾಪಂಗಳಿರಯದೆ ಮಾಡಿ ನಾ
ನರಕಕ್ಕೆ ಗುರಿಯಾದೆ ಪೊರೆಯೊ ಶ್ರೀ ಹರಿಯೆ 2
ಸಿಂಧುಶಯನನೆ ಎನ್ನ ಮಂದಮತಿಯತನದ
ಲಿಂದ ಮಾಡಿದ ಪಾಪ ಚಿಂದಿಸೈ ಬೇಗ
ಹಿಂದಕಾದದ್ದಾಯ್ತು ಮುಂದೆ ಎನ್ನಯ ಬವಣಿ
ಚಂದಾಗಿ ತಿದ್ದಯ್ಯ ತಂದೆ ಶ್ರೀರಾಮ 3