ಒಟ್ಟು 90 ಕಡೆಗಳಲ್ಲಿ , 33 ದಾಸರು , 80 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಹಾದಾದಿದೇವ ನಮೋ ಮಹಾಮಹಿಮನೆ ನಮೋಪ್ರಹಲ್ಲಾದವರದ ಅಹೋಬಲ ನರಸಿಂಹ ಪ.ತರಣಿಗುಬ್ಬಸವಾಗೆ ತಾರಾಪತಿಯು ನಡುಗೆಸುರರು ಕಂಗೆಟ್ಟೋಡೆ ನಭವ ಬಿಟ್ಟು ||ತರುಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆಉರಿಯನುಗುಳುತ ಉದ್ಭವಿಸಿದೆಯೊ ನರಸಿಂಹ 1ಸಿಡಿಲಂತೆ ಗರ್ಜಿಸುತೆ ಕುಡಿಯ ನಾಲಗೆ ಚಾಚಿಅಡಿಗಡಿಗೆ ಹುಂಕರಿಸಿ ಕಡುಕೋಪದಿಂದ ||ಮುಡಿವಿಡಿದು ರಕ್ಕಸನ ಕೆಡವಿ ನಖದಿಂದೊತ್ತಿಬಿಡದೊಡಲ ಬಗೆದ ಕಡುಗಲಿ ನಾರಸಿಂಹ 2ಸರಸಿಜೋದ್ಭವ ಹರ ಪುರಂದರಾದಿ ಸಮಸ್ತಸುರರು ಅಂಬರದಿ ಪೂಮಳೆಗರೆಯಲುಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರನುಕರುಣಿಸುವ ಪುರಂದರವಿಠಲ ನಾರಸಿಂಹ 3
--------------
ಪುರಂದರದಾಸರು
ರಾಮ ರಾಮ ರಘುನಾಥನೆ ಸುರಸ್ತೋಮತಿಲಕ ವಿಶ್ವಕರ್ತನೆ ದಿವ್ಯಸ್ವಾಮಿ ಪುಷ್ಕರತೀರವಾಸನೆ ನನ್ನಸ್ವಾಮಿವರಾಹವೆಂಕಟೇಶನೆಪ.ಕಾಯೊ ಕಾಯೊ ಮಧುಮರ್ದನಭವಸಾಯಕದೂರ ಜನಾರ್ದನ ಯದುನಾಯಕಧೃತಗೋವರ್ಧನ ನಾರಾಯಣ ನಿಜಜನವರ್ಧನ 1ಹೊಂದಿದಭಟಕಲ್ಪವೃಕ್ಷನೆ ನನ್ನತಂದೆ ತಾಯಿ ವಿಶ್ವಕುಕ್ಷನೆಕ್ಷೀರಸಿಂಧುಮಂದಿರ ಅಧ್ಯಕ್ಷನೆ ನಿನ್ನಿಂದಾರುಗತಿ ಪದುಮಾಕ್ಷನೆ 2ಅಡಿಗಡಿಗೊದಗದ ತಪ್ಪನೆ ಇಕ್ಕಡಿಮಾಡುದೇವ ತಿಮ್ಮಪ್ಪನೆಮಾಯಾಸಡಕ ತಪ್ಪಿಸು ಸುಪ್ರದೀಪನೆನಿತ್ಯಬಿಡದೆ ಕ್ರೀಡಾದ್ರಿಯೊಳಿಪ್ಪನೆ 3ಲೇಶಭಕ್ತಿಗೆ ಮನ ಹಾರಿತು ವಿಷಯಾಸೆಯಟವಿಯನೆ ಸೇರಿತು ಈಹೇಸಿ ಚಂಚಲಚಿತ್ತ ಹೋರಿತು ತವದಾಸರ ಸಂಗಕೆ ಜಾರಿತು 4ಕುಸುಮಶರನಂತ:ತೇಜನೆ ಮಹಮಿಸುನಿವೆಟ್ಟದ ಕಲ್ಪಭೂಜನೆ ಅಜÕನಿಶಾಕುಲ ಉಡುಗಣರಾಜನೆ ಶ್ರೀಪ್ರಸನ್ವೆಂಕಟ ರಾಜಾಧಿರಾಜನೆ 5
--------------
ಪ್ರಸನ್ನವೆಂಕಟದಾಸರು
ವಿದುರನ ಭಾಗ್ಯವಿದು |ಪದುಮಜಾಂಡ ತಲೆದೂಗುತಲಿದೆ ಕೊ ಪಕುರುರಾಯನು ಖಳನನುಜನು ರವಿಜನು |ಗುರುಗಾಂಗೇಯರು ಎದುರಿರಲು ||ಹರಿಸಿ ರಥವ ನಡು ಬೀದಿಯಲ್ಲಿ ಬಹ |ಹರಿಯ ತಾನು ಕಂಡನು ಹರುಷದಲಿ 1ದಾರಿಯಲಿ ಬಹ ಮುರವೈರಿಯ ಕಾಣುತ |ಹಾರುತ ಚೀರುತ ಕುಣಿಯುತಲಿ ||ವಾರಿಧಾರೆಯನು ನೇತ್ರದಿ ಸುರಿಸುತ |ಬಾರಿಬಾರಿಗೆ ಹಿಗ್ಗುವ ಸುಖದಿ 2ಆಟಕೆ ಲೋಕಗಳೆಲ್ಲಾ ಸೃಜಿಸುವ |ನಾಟಕಧರ ತನ್ನ ಲೀಲೆಯಲಿ ||ನೀಟಾದವರ ಮನೆಗಳ ಜರೆದು |ಕುಟೀರದಲಿ ಬಂದುಹರಿ ಕುಳಿತ3ಅಡಿಗಡಿಗೆ ತನ್ನ ತನುಮನ ಹರಹಿ |ಅಡಗೆಡೆಯುತ ಬಲು ಗದ್ಗದದಿ ||ನುಡಿಗಳ ತೊದಲಿಸಿ ರೋಮವ ಪುಳಕಿಸಿ |ದುಡುದುಡು ಓಡುವ ದಶದಿಶೆಗೆ 4ಕಂಗಳುದಕದಿ ಪದಂಗಳ ತೊಳೆದು |ಗಂಧವ ಪೂಸಿದ ತನುಪೂರಸಿ ||ಮಂಗಳ ಮಹಿಮನ ಚರಣಕೆರಗಿ ಪು-ಷ್ಪಂಗಳಿಂದ ಪೂಜೆಯ ಮಾಡಿದನು 5ನೋಡಿದ ಭಕುತನ ಮನದ ಹವಣಿಕೆಯು |ಪಾಡುವ ಪೊಗಳುವ ಹರುಷದಲಿ ||ನೀಡಿದ ಕರದಲಿ ಬಿಗಿದಪ್ಪಿದ ಕೊಂ -ಡಾಡಿದ ಕರುಣದಿ ಜಗದೊಡೆಯ 6ಕ್ಷೀರವಾರಿಧಿ ಶಯನಗೆ ವಿದುರನು |ಕ್ಷೀರವನುಣ ಬಡಿಸಿದ ನೋಡಾ ||ವಾರಿಜನಾಭನು ಕರಸಂಪುಟದಲಿ |ಆರೋಗಣಿಸಿದ ಘನತೆಯನು 7ಒಂದು ಕುಡಿತೆ ಪಾಲುಹರಿ ತಾ ಸವಿದು |ಮುಂದಕೆ ನಡೆಸಿದ ಧರೆಮೇಲೆ ||ಇಂದಿರೆಯರಸನ ಚರಿತೆ ವಿಚಿತ್ರವು |ಚೆಂದದಿ ಹರಿದುದು ಬೀದಿಯಲಿ 8ಕರುಣಾಕರ ಸಿರಿಹರಿ ತನ್ನ ಭಕುತರ |ಪೊರೆವನುಅನುದಿನ ಆಯತದಿ ||ಸಿರಿಯ ಅರಸು ನಮ್ಮಪುರಂದರ ವಿಠಲನ |ಶರಣರು ಧನ್ಯರು ಮೇಲೆ 9
--------------
ಪುರಂದರದಾಸರು
ಶ್ರೀ ಮದಾನಂದ ತೀರ್ಥ ಹನುಮ | ಭೀಮನಿನ್ನ ಸಮಾನ ಪುರುಷರುಈ ಮೂಜಗದೊಳಿಲ್ಲವೆಂದು ಶ್ರೀ ರಾಮಸಹಭೋಜನವನೀಯನೆ? ಪಹರಿವಿರಿಂಚಿ ಸಹಾಯದಿಂದ | ಹರನುತ್ರಿಪುರವನಳಿಯಲಾಗ |ಬರಿದೆ ಕೊಂಡಾಡಿದರು ಸರ್ವರು |ಅರಿಯದೆಯೆ ನಿನ್ನ ಸಾಹಸ ||ಶರಧಿಲಂಘಿಸಿ ದಾನವರನು ತರೆದುಸೀತೆಗೆ ಉಂಗುರವಿತ್ತು |ಪುರವನುರುಹಿ ಹರಿಯಡಿಗೆ ಆಕುರುಹತಂದು ಮುಟ್ಟಿಸಿದೆಯೊ 1ಸಾಸಿರದ ತನ್ನ ಪೆಡೆಯ ನಡುವೆ | ಈಸುಸಚರಾಚರವನೆಲ್ಲ |ಸಾಸಿವೆಯಂದದಲಿ ಇಟ್ಟಾ | ಶೇಷನ-ಮೂಲರೂಪದ ||ಆ ಶಕುತಿಯನು ತೋರಿಸಲುದಶಾಸ್ಯನೆಳೆಯುವ ಸೌಮಿತ್ರಿಯನುದಾಶರಥಿಯ ಬಳಿಗೆ ತಂದು | ನೀ ಸಲಹಿದೆ ಜಗವರಿಯಲು 2ತನ್ನ ಜನನಿಯೊಬ್ಬಳಿಗೆಸುಪರ್ಣಬಳಲಿ ಸುಧೆಯ ತರಲುಇನ್ನು ಪೊಗಳುತಿಹುದು ಲೋಕ | ನಿನ್ನಂತೆ ದೂರದಲಿಹ ||ಉನ್ನತದ ಶತಯೋಜನಗಲದ | ಅನ್ಯರು ತರಲಾರದ ಸಂಜೀ |ವನ್ನ ಗಿರಿಯ ತಂದು ಕಪಿಗಳನ್ನು ಕಾಯ್ದೆ ತವಕದಿಂದ 3ಸಕಲ ಪ್ಲವಗನಿಕರ ರಾಮನ | ತ್ರಿಕರಣಸೇವೆಯನು ಮಾಡಿ |ಮುಕುತಿ ಬೇಡಲಿತ್ತು ನಿನಗೇನು | ಬೇಕೆಂದುಕೇಳಲು ನೀನು ನಾ ||ಲುಕು ಪುರುಷಾರ್ಥಗಳಜರಿದು| ಭಕುತಿಯಕೊಡು ಎನಲು ನವಕನಕದ ಮಾಲೆ ಕೊರಳಿಗಿಟ್ಟು ಜಾ | ನಕಿರಮಣನುನಿನ್ನ ಪೊಗಳಿದ 4ಶರಧಿಯ ಮಥನದೊಳುದಿಸಿದ |ಗರಳಜಗತ್ತನು ಅಂಜಿಸೆಸಿರಿಯರಸನ ಪೆರ್ಮೆಯಿಂದ | ಸುರಿದುಅದನು ಜೀರ್ಣಿಸಿಕೊಂಡ ||ಮಾರುತನವತಾರ ವೃಕೋ | ದರನೆ ನೀನು ಎಂದರಿಯದೆಮರುಳ ಕೌರವರಿಕ್ಕಿದ ವಿಷವ | ಭರದಿಉಂಡು ತೇಗಿದುದರಿದೆ ? 5ಅವನಿಭಾರಕೆ ಮುಖ್ಯರಾದ | ಕವುರವ ಕೀಚಕಾದಿಗಳನುಬವರಮುಖದಿ ನಗುತ ಗೆಲಿದು |ಹವಿಯ ಕೃಷ್ಣಾನಿಗರುಪಿಸಿದಿವಿಜರೆದುರುಗೊಳಲುಅವರ|ನವರತಾರತಮ್ಯದಿ ಮನ್ನಿಸಿ |ಪವನಲೋಕದೊಳು ಮೆರೆದೆ ದ್ರವುಪದಿಯ ಸಹಿತನಾಗಿ 6ಸುರಾಸುರರ ಸಂಗ್ರಾಮದಲಿ |ಅರಿವಿಪ್ರಚಿತ್ತಿಯ ನೀನು ಕೊಲ್ಲಲು |ವಿರಿಂಚಿ-ಹರರ ವರದಿಂದವನೆ |ಜರಾಸಂಧನಾಗಿ ಇಳೆಯೊಳು |ಅರಸುಗಳನು ಕಾಡಲವನ ಸರನೆ ಸೀಳಿ ಪಶುವಿನಂತೆಹರಿಗೆ ಅರ್ಪಿಸಲವನು ಸಕಲಾ | ಧ್ವರಕ್ಕಿಂತಲು ತೃಪ್ತನಾದ 7ನಡುಮನೆಯೆಂಬ ಸಾಧುದ್ವಿಜನ | ಮಡದಿಯಬಸಿರಿನಲಿ ಉದಿಸಿಕಡು ಕುಮತದ ಮಾಯಿಗಳನು | ಅಡಿಗಡಿಗೇ ಸಚ್ಛಾಸ್ತ್ರದಿ ||ತಡೆದು ಆನಂದ ಶುಭಗುಣಗಳ | ಕಡಲುಹರಿಸರ್ವೋತ್ತಮನೆಂದುಒಡಂಬಡಿಸಿ ಸ್ವಮತವನ್ನು | ಪೊಡವಿಯೊಳಗೆಸ್ಥಾಪಿಸಿದೆಯೊ ನೀ 8ಮರುತ ನಿನ್ನವತಾರ ತ್ರಯವ | ನರಿತುಭಜಿಪಗೆ ಶ್ವೇತದ್ವೀಪ |ದರುಶನವನೆ ಮಾಡಿಸಿ ಶ್ರೀ |ಪುರಂದರವಿಠಲೇಶನ |ಕರುಣಕಟಾಕ್ಷದಿಂದ ವೈಕುಂಠ ಪುರದಿ ಅನಂತಾಸನದಲಿ |ಪರಮಾನಂದವ ಪಡೆಸಿ ಹೊರೆವೆ |ಪರಿಪರಿಯ ಭೋಗಗಳನಿತ್ತು 9
--------------
ಪುರಂದರದಾಸರು
ಹೊಲೆಯ ಹೊಲತಿ ಇವರವರಲ್ಲಹೊಲಗೇರಿಯೊಳು ಹೊಲೆಯ ಹೊಲತಿಯಿಲ್ಲ ಪ.ಸತಿಯಳ ವಶನಾಗಿಜನನಿ - ಜನಕರಿಗೆಅತಿ ನಿಷ್ಟುರ ನುಡಿವವ ಹೊಲೆಯಸುತರ ಪಡೆದು ವಾರ್ಧಿಕ್ಯ ಮದವೇರಿಪತಿದ್ಟೇಷ ಮಾಡುವಳೆ ಹೊಲತಿ 1ಗುರುಗಳಲ್ಲಿ ವಿದ್ಯೆಗಳನು ಕಲಿತುಹಿರಿಯರ ಬಳಲಿಸುವವ ಹೊಲೆಯಪರಪುರಷಗೊಲಿದು ತನ್ನ ಪುರುಷನವಿರಸವ ಮಾಡುವ ಕುಲಕೇಡಿತೆ ಹೊಲತಿ 2ಒಡೆಯನನ್ನವನುಂಡು ಅಡಿಗಡಿಗೆ ಬಾಯ್ಬಿಡದೆ ತರ್ಕಿಸುವ ಜಡ ಹೊಲೆಯಬಡತನ ಬಂದರೆ ಪುರುಷನ ರಚ್ಚೆಗೆಬಿಡದೆ ತಹಳೆ ಶುದ್ಧ ಹೊಲತಿ 3ನೂರೊಂದು ಕುಲ ಕುಂಬಿಪಾಕಕಟ್ಟುವಪರನಾರಿಯಲ್ಲಿ ವೀರ್ಯವಿಟ್ಟವ ಹೊಲೆಯಆರೊಳು ಕಲಹಾಪಸ್ಮಾರಿ ದುರ್ಮುಖಿಯು - ಕಠೋರಕುಮತಿ ಶುದ್ಧ ಹೊಲತಿ 4ಅಜನುತ ಪುರಂದರವಿಠಲನ ದಾಸರಭಜನೆಯ ದಾರಿಯ ಬಿಟ್ಟವ ಹೊಲೆಯನಿಜವರ್ಯರಾದ ಸಜ್ಜನರ ಪಾದಪದ್ಮವಭಜಿಸದಿರುವಳೆ ಶುದ್ಧ ಹೊಲತಿ 5
--------------
ಪುರಂದರದಾಸರು