ಒಟ್ಟು 82 ಕಡೆಗಳಲ್ಲಿ , 31 ದಾಸರು , 81 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಸುದೇವ ನಿನ್ನವರ್ಮ ಕರ್ಮಂಗಳದೇಶ ದೇಶದೊಳು ಹೇಳಲೆ ? ಪಬೇಸರಿಯದೆ ಎನ್ನ ಹೃದಯ ಕಮಲದಲ್ಲಿವಾಸವಾಗಿ ಸುಮ್ಮನಿರುವೆಯೊ ? ಅ.ಪಮತ್ಸರೂಪನಾಗಿ ಮನಸು ಕಾಣಿಸಿಕೊಂಡು ಮಕ್ಕಳತಿದ್ದಿದ್ದು ಹೇಳಲೆ ?ಉತ್ಸಾಹದಿಂದ ನಿಗಮವ ತಂದು ಬ್ರಹ್ಮಗೆ ಮೆಚ್ಚಿಕೊಟ್ಟದ್ದು ನಾ ಹೇಳಲೆ 1ಕಡಗೋಲು ಮಂಡೆಯಂದದಿ ಕೈಕಾಲು ಮುದುಡಿಕೊಂಡದ್ದು ನಾ ಹೇಳಲೆ ?ಕಡಲೊಳಗಿಂದ ಪಾತಾಳಕೆ ಇಳಿದಿಳೆ ಪಡೆದಾತನ ಸುದ್ದಿ ಹೇಳಲೆ 2ಹುಚ್ಚುಮನಸುಮಾಡಿ ಕಚ್ಚುತ ಕೆದರುತ ರಚ್ಚೆಯಿಕ್ಕಿದಸುದ್ದಿ ಹೇಳಲೆ ?ಮುಚ್ಚಿದ ಭೂಮಿಯ ಹಲ್ಲಿಂದ ಕಿತ್ತಿದ ಹೆಚ್ಚುತನವ ನಾನು ಹೇಳಲೆ 3ಕಂದನ ಮಾತಿಗೆ ಕಡುಕೋಪದಿಂ ಬಂದು ಕಂಬವನೊಡೆದದ್ದು ಹೇಳಲೆ ?ಕುಂದದೆ ಹಿರಣ್ಯಕಶಿಪುವಿನುದರ ಸೀಳಿ ಕರುಳ್ಮಾಲೆಧರಿಸಿದ್ದು ಹೇಳಲೆ 4ಬಾಲನಾಗಿ ಬ್ರಹ್ಮಚಾರಿ ವೇಷವ ತೋರಿ ಬಲಿಯ ಬೇಡಿದುದನು ಹೇಳಲೆ ?ಲೀಲೆಯಿಂದಲಿ ಧರೆಯಈರಡಿ ಮಾಡಿದ ಜಾಲತನ್ವನುನಾನು ಹೇಳಲೆ5ಹೆಸರಿಲ್ಲದೆ ಹೋಗಿ ಹೆತ್ತತಾಯ್ ತಲೆಕುಟ್ಟಿ ಕೊಡಲಿಯ ಪಿಡಿದದ್ದು ಹೇಳಲೆ ?ಸೋಸಿ ದೈತ್ಯರನೆಲ್ಲ ರೋಸಿ ಪ್ರಾಣವ ಕೊಂಡ ದೋಷತನವ ನಾನು ಹೇಳಲೆ 6ತಾಯ ಮಾತನೆಕೇಳಿ ತಮ್ಮನ ಒಡಗೂಡಿಅಡವಿಯೊಳಿದ್ದುದು ಹೇಳಲೆ ?ಮಾಯಾಸೀತೆಗಾಗಿ ರಾವಣನನು ಕೊಂದು ಮಹಿಮೆಯ ನೆರೆದದ್ದು ಹೇಳಲೆ ? 7ತರಳತನದಲಿ ದುರುಳನಾಗಿ ಬಂದ ಒರಳೆಳೆತಂದದ್ದು ಹೇಳಲೆ(ಬೆರಳಿಂದ ಗಿರಿಯೆತ್ತಿ ಕಂಸನ ಕೊಂದ ಆ ) ದುರುಳತನದ ಸುದ್ದಿ ಹೇಳಲೆ 8.............................................................................................................................................................................. 9ರಾಯ ರಾವುತನಾಗಿ ರಾಯರ ಮನೆ ಪೊಕ್ಕು ಕಡುಗವ ಪಿಡಿದದ್ದು ಹೇಳಲೆ ?ಆಯತದಿಂದ ಕಲಿಯಲಿದ್ದು ಮನುಜರ ಮಾಯವ ತೋರಿದ್ದು ಹೇಳಲೆ 10ಧರೆಯೊಳಗಧಿಕವಾದ ಉರಗಗಿರಿಯಲ್ಲಿ ಸ್ಥಿರಿವಾಗಿನಿಂತದ್ದು ಹೇಳಲೆ ?ಕರುಣದಿಂ ಭಕುತರ ಪುರಂದರವಿಠಲನೆಂದು ನಾ ಹೇಳಲೆ 11 *
--------------
ಪುರಂದರದಾಸರು
ವೈರಾಗ್ಯದಾವಾಗ್ನಿ ಉರಿಯು ಛಟಿಛಟಿಸಿತುಸರ್ವಪ್ರಪಂಚವೆಲ್ಲವ ಅಟ್ಟಟ್ಟಿ ಸುಟ್ಟಿತುಪಸತಿಸುತರು ಎಂಬ ಹೆಮ್ಮರವೀಗ ಸುಟ್ಟವುಪಿತೃ ಮಾತೃವೆಂಬ ಪಲ್ಲವ ಕರಿಕಿಟ್ಟಿತುಹಿತವೆಂಬ ಬಳ್ಳಿಗಳು ಅನಿಲ ಪುಟ್ಟವಿಟ್ಟವುಅತಿಭಾಗ್ಯವೆಂದೆಂಬ ಸಿಂಗಾರ ಹೊಗೆಯಿಟ್ಟವು1ಏಸೋ ಬಂಧುಗಳೆಂಬ ಧ್ರುಮವು ಶಿಖಿಸೋಂಕಿದವುಕ್ಲೇಶವೆಂದೆಂಬ ಕರಡವು ಭುಗಿ ಭುಗಿ ಲೆಂದವುವಾಸಗಳೆಂದೆಂಬಕುಡಿಕಿಡಿಯಾಗಿ ಉದುರಿದವುಆಸೆ ಎಂಬ ಫಲ ವಹ್ನಿಗಾಹಾರವಾದವು2ಘನಭ್ರಾಂತಿ ಎಂಬ ಪಕ್ಷಿಗಳು ಹಾರಿಹೋದವುಮನೆಯೆಂಬ ಗೂಡುಗಳು ನಿಗಿನಿಗಿಯಾದವುಬಿನುಗುಚಿಂತೆ ಎಂಬ ಹರಿಣ ಮುಗ್ಗರಿಸಿದವುಮನಸಿಜನ ಕ್ರೋಧವೆಂಬ ಕಳ್ಳರು ಸತ್ತಿಹರು3ಅಷ್ಟಮದದಾನೆ ಎಂಬುವು ಅಡವಿಯ ಹಿಡಿದವುತುಚ್ಛವಿಷಯಗಳೆಂಬ ನರಿಗಳೋಡಿದವುದುಷ್ಟಗುಣವೆಂದೆಂಬ ದುರ್ಜನ ಮೃಗವು ಚಲ್ಲಿದವುಕಷ್ಟ ತಾಪತ್ರಯದ ಕತ್ತಲು ಹರಿಯಿತು4ಇಂತು ಪ್ರಪಂಚವೆಂಬೀ ವೈರಾಗ್ಯದಾವಾಗ್ನಿಯಂತೆ ಧಗಧಗನೆ ಝಗಝಗನೆ ಸುಡುತಲಿಚಿಂತಯಕ ಚಿದಾನಂದ ಉರಿಯು ಅಖಂಡವಾಗಿಶಾಂತರೆಂಬರ ಮುಕ್ತರುಗಳ ಮಾಡಿತ್ತು5
--------------
ಚಿದಾನಂದ ಅವಧೂತರು
ಶ್ರೀ ಪ್ರಾಣೇಶದಾಸರ ಸಂಪ್ರದಾಯದ ಹಾಡುಗಳು240ಶ್ರೀದೇವರ ವಿವಾಹ ಮಹೋತ್ಸವದ ಪದಗಳುಏನು ನೋಡಿತ್ತ ನೀ ವರಕೆ ಮಗಳಾ |ಹೀನವಳಿತೆನ್ನದಲೆ ತ್ವರದಿ ಜಲನಿಧಿಯೂ ಪಕಪ್ಪು ರೂಪವು ಇವನ ನೆಲಿ ಒಬ್ಬರರಿಯರೂ |ಸರ್ಪಶಯನನು ತಿರಿದುಕೊಂಡು ತಿಂಬಾ ||ಮುಪ್ಪಿನವ ಇವ ಹುಟ್ಟಿದುದನಾರು ಬಲ್ಲವರು |ತಪ್ಪಿ ಕೊಟ್ಟನೆ ಎಲ್ಲರನುಜರಿದುಹೀಂಗೇ 1ಕದ್ದು ಪೊಟ್ಟೆಯ ಪೊರೆವ ಎಂಜಲೆನ್ನದೆ ತಿಂಬ |ಹದ್ದನೇರುವ ಅಡವಿಯೊಳು ಚರಿಸುವಾ ||ಬುದ್ಧಿಹೀನರ ತೆರದಿ ಹಡದವಳ ಶಿರ ಕಡಿದ |ಸದ್ಯ ವಸನವ ಕಳದು ಬತ್ತಲಿರುವವಗೇ 2ಹೇಸಿಕಿಲ್ಲದೆ ಕರಳ ಮಾಲಿಕಿಯ ಹಾಕಿಹನು |ದೋಷಕಂಜನು ಜಾರತನವ ಮಾಳ್ಪಾ ||ದಾಸನಂದದಿ ಬಲಿಯ ಮನಿಯ ಬಾಗಿಲ ಕಾಯ್ದ |ಆ ಸವ್ಯಸಾಚಿ ತೇರಿಗೆ ಸೂತನಾದವಗೆ 3ಹೆಣ್ಣುಗಳ ಅಂಬರವ ಕೊಂಡು ಮರನೇರುವನು |ತನ್ನ ಮಕ್ಕಳ ತಾನೆ ಹತಗೈಸುವಾ ||ಮಣ್ಣನೂ ಬೆಂಕಿಯನು ತಿಂಬ ವಾವಿಯನರಿಯ |ತನ್ನ ಪುತ್ರರಿಗೆ ತನ್ನಯ ಮಕ್ಕಳಿತ್ತವಗೆ 4ಪ್ರಾಣೇಶ ವಿಠಲನಲ್ಲಿಹವಿಂಥ ಸುಗುಣಗಳು |ತಾನೊಂದು ಪೂರ್ತಿ ತಿಳಿಯನು ಸಮುದ್ರಾ ||ಶ್ರೀ ನಾರಿಯನು ಕೊಟ್ಟ ಅವನ ಬುದ್ಧಿಯೊ ಅಥವ |ಏನು ವ್ರತ ಸೇವಿಸಿದ್ದಳೊಕಮಲಮಂದಿರಿಯು 5
--------------
ಪ್ರಾಣೇಶದಾಸರು
ಸಜ್ಜನರ ನಡತಿದೊ ಶ್ರೀ |ಅರ್ಜುನ ಸಖನ ಪದಾಬ್ಜ ಭಜಿಸುವದೆ ಪಕುಹಕರ ಸಂಗವ ಮಾಡದೆಖೇಚರ|ವಹನನಾಳುಗಳ ಆಳಾಗೀ ||ಅಹರ್ನಿಶಿಯಲಿ ತತ್ವ ವಿಚಾರಿಸುತಲಿ |ಅಹಲ್ಲಾದವ ಮನದಲಿ ಬಿಡುತಿಪ್ಪುದೆ 1ನೀಚ ಸುರ ನರರ ಸೇವಿಸಿ ವರಶನ |ಯಾಚಿಸದೆ ಸ್ವಧರ್ಮವ ಬಿಡದೇ ||ಖೇಚರಜ ಮತವ ಪೊಂದಿಸು ಕರ್ಮಗ- |ಳಾಚರಿಸುತವಿಜ್ಞಾನಘಳಿಸುವದೆ 2ಪದ್ಮಜಮುಖರಿಗೆ ಕ್ಷಣ ಕ್ಷಣದಲಿ ಶಿರಿ |ಬುದ್ಧಿಯ ಪ್ರೇರಿಸುವಳು ಆರೇ ||ಪ್ರದ್ಯುಮ್ನನು ಮಾಡುವ ಲೀಲಿಯು ಬಳಿ |ಇದ್ದರು ಒಂದನು ಅರಿಯಳು ಎಂಬುದೆ 3ತತ್ವಭಿಮಾನಿಗಳೆಲ್ಲಸಮೀರಪ್ರ- |ವರ್ತಿಸಿದಂದದಿ ವರ್ತಿಪರೂ ||ಸತ್ಯವತಿ ಜಗತೊಬ್ಬನೆ ಅಚ್ಛಿನ್ |ಭೃತ್ಯಶಿವಾದ್ಯರು ಛಿನ್ನರು ಎಂಬುದೆ 4ಮೂಲದಲಿದ್ದ ಮಹತ್ಮಿ ನಿರುತ ಶ್ರೀ |ಲೋಲನ ಅವತಾರದೋಳುಂಟೂ ||ಕಾಳೀಶಗೆ ಕೊಂಡರೆ ಬರುತಿಪ್ಪುದು |ನೀಲಕಂಠ ಪ್ರಮುಖರಿಗಿಲ್ಲೆಂಬುದೆ 5ಚೇತನಚೇತನವಾದ ಜಗತ್ಯವು |ವಾತನಧೀನದೊಳಿರುತಿಹದೂ ||ಆತನು ರಮೆಯಧೀನವಳುಹರಿ|ದೂತಳೆಂದು ನಿಶ್ಚಯ ತಿಳಕೊಂಬುದೆ 6ಎಲ್ಲ ದಿವಿಜರವಲಕ್ಷಣ ಯುಕ್ತರು |ಬಲ್ಲಿದಹರಿಮಾರುತ ಮಾತ್ರಾ ||ಸಲ್ಲಕ್ಷಣರೆನುತಲಿ ತಿಳಿದು ಗಿರಿಜ |ವಲ್ಲಭಪ್ರಮುಖರಿಗೊಂದಿಸುತಿಪ್ಪುದೆ 7ಅಂಬುಜಭವ ಮೊದಲಾದವರಿಗೆ ಪೀ- |ತಾಂಬರತನ ಪೆಸರಿತ್ಯಹನೂ ||ಕಂಬಸದನ ತೊಲಿ ಜಂತಿಯು ಮಾಳಿಗಿ |ಎಂಬ ಶಬ್ದವಾಚ್ಯನುಹರಿಎಂಬುದೆ 8ಅರಸುಗಳಾದವರನುಗರ ಕೈಯಲಿ |ನರರ ಶೀಕ್ಷಿ ಮಾಡಿಸುವಂತೇ ||ಹರಿವಿಧಿಶಿವರೊಳು ತಾನಿಂತಾವಾಗ |ಮರಿಯಾದಿಗಳು ನಡಿಸುತಿಹ್ಯನೆಂಬುದೆ 9ಸೃಜಿಸುವ ಜನೊಳಿದ್ದು ಜಗವ ಪೊರವನು |ಭುಜಗಭೂಷಣನೊಳಿದ್ದು ಲಯಾ ||ದ್ವಿಜರೂಪಿಯೆ ಮಾಳ್ಪನು ಎಂತಿಳಿಯದ |ಕುಜನರು ನರಕವ ಐದುವರೆಂಬುದೆ 10ವಂದೊಂಧರಿ ನೇಮದಿ ಬಲ್ಲರು ಮರ |ಳೊಂದನರಿಯರಜಾದಿಗಳೂ ||ಮಂದರಧರಬಹು ಬಲ್ಲನು ಜೀವರ |ಬಂಧಕ ಶಕುತಿಯೊಳಿರಿಸಿಹನೆಂಬುದೆ 11ಜ್ಞಾನಾನಂದಾದಿ ಗುಣಭರಿತಹರಿ|ಹೀನತನವನೆಂದಿಗ್ಯು ಅರಿಯಾ ||ಕಾಣಿಸಿಕೊಳ್ಳನು ಎಂದಿಗು ಅಧಮರಿ- |ಗೇ ನಳಿನಾಕ್ಷನು ಎಂದುಚ್ಚರಿಪುದೆ 12ಝಷಮೊದಲಾದವತಾರವು ಮಿಥುನೀ |ದೆಶೆಯಿಂದಲಿ ಆಗಿಲ್ಲನಳಾ ||ಮಸಿಯಲು ಕಾಷ್ಠದಿ ತಾ ತೋರ್ವಂದದಿ |ವಸುದೇವಜನವ್ಯಕ್ತನು ಯಂದರಿವದೆ 13ಆಪಗ ವನಧಿಯನಳನಿಳಶಶಿರವಿ|ಈ ಪೊಡವೀವನನಿರಂತರದೀ ||ಶ್ರೀಪತಿಕಟ್ಟಲಿಯೊಳಗಿಹದೆಂದು ಪ- |ದೆ ಪದೆ ನೆನದು ಸುಖಬಡುತಲಿರುವುದೆ 14ನಿಶಿಯಲಿ ಕಂಡಿಹ ಸ್ವಪ್ನವು ನಿಶ್ಚಯ |ಅಸಮ ಸೃಜಿಸಿದ ಜಗತ್ಯವನೂ ||ಹುಸಿಎಂಬವ ಕುಲಭ್ರಷ್ಟನು ಎಂದಿಗು |ಹಸಗತಿ ಅವನಿಗೆ ಇಲ್ಲಿಲ್ಲೆಂಬುದೆ 15ಪ್ರಾಣಿಗಳೊಳಗಿದ್ದೆಲ್ಲ ಕೆಲಸವನು |ತಾನೆ ಮಾಡಿ ಮಾಡಿಸಿ ಫಲವಾ ||ಏನು ನೋಡೆ ನಿರ್ಮಲನಾಗಿಹಹರಿ|ಭಾನುಸಖ ಜಲದೊಳಿರುವಂತೆಂಬುದೆ16ತಾ ಬಂಧಿಸುತಿಹ ಸರ್ವ ಜಗತ್ಯವ |ನೂ ಬದ್ಧನು ಅಲ್ಲವು ಊರ್ಣಾ ||ನಾಭಿಯ ಜಾಲಿಯ ಹೊರಗಿರುವಂದದಿ |ಶ್ರೀ ಭಗವಂತನು ಇರುತಿಹನೆಂಬುದೆ17ಭಕ್ತಿಗೆ ಭೇದವು ಜ್ಞಾನಕೆ ಭೇದವು |ಮುಕ್ತಿಗೆ ಭೇದವು ಯಂತಿಳಿದೂ ||ಸುತ್ಪುರುಷರ ಸ್ನೇಹವ ಸಂಪಾದಿಸಿ |ಮತ್ತೊಂದೊಲ್ಲೆನು ಯಂದಿರುತಿಪ್ಪುದೆ 18ಸಾಧನತ್ರಯ ಫಲಗಳನು ವಿಚಾರಿಸಿ |ಮಾಧವನಗುಣಮಹತ್ಮಿಯನೂ ||ಸಾದರದಿಂ ಜ್ಞಾನಿಗಳ ಮುಖದಲಿ ದಿ- |ನೇ ದಿನೇಕೇಳಿವಿಜ್ಞಾನಘಳಿಸುವದೆ 19ಕಾಲಿಲ್ಲದೆ ನಡಿಯಲು ಬಲ್ಲನುಹರಿ|ಕೇಳುವ ಕಿಂವಿಯಿಲ್ಲದೆ ತನ್ನಾ ||ಲೀಲಿಯು ಹೀಂಗದೆ ಯಂದು ತಿಳಿಪುದಕೆ |ಈ ಲೋಕದಿಅಹಿಮಾಡಿಹನೆಂಬುದೆ 20ಚೇತನ ಕೃತ್ಯವ ಮಾಡುತಲಿಪ್ಪವ |ಚೇತನಗಳು ಚಿಂತಾಮಣಿ ದೇ- ||ವಾತರು ಸಂಜೀವನ ಪರ್ವತ ಶ್ರೀ-ನಾಥನ ಆಜÕವು ಯಿದು ಎಂದರಿವುದೆ 21ಸತ್ವಾದಿ ಗುಣರಹಿತ ಪರಮಾತ್ಮನು |ಚಿತ್ತು ಜ್ಞಾನಬಲ ಸುಖ ಪೂರ್ಣಾ ||ಮೃತ್ಯುಂಜಯಸಖಗುಣಶೂನ್ಯಂಬ ಪ್ರ- |ವರ್ತಕ ಹೀಗೆಂದೂ ತಿಳಿದೀಹದೆ 22ಯೇಸು ಯೇಸು ಕಲ್ಪಗಳಾದರು ಶ್ರೀ- |ವಾಸುಕಿಶಯನಗೆ ಎಂದೆಂದೂ ||ನಾಶವಿಲ್ಲ ವಿಶೋಕರು ಧರಿಯೊಳು |ಶ್ರೀಶನ ವ್ಯತಿರಿಕ್ತಾರಿಲ್ಲೆಂಬುದೆ 23ಬ್ರಹ್ಮಾದಿಗಳಿಗೆ ಜನಕನು ಶ್ರೀಪರ|ಬ್ರಹ್ಮಗೆ ಒಬ್ಬರು ಸರಿಯಿಲ್ಲಾ ||ಒಮ್ಮಿಗು ಅಧಿಕರು ಇಪ್ಪರೆ ಶೃತಿಯಲಿ |ಸಮ್ಮತವಾಗದೆ ಈ ನುಡಿಯಂಬುದೆ 24ಶತಸುಖಿ ವಿಧಿ, ಕೋಟಿ ಸುಖಿ ರಮಾ, ಪರಿ- |ಮಿತಯಿಲ್ಲದ ಸುಖಿ ಕೇಶವನೂ ||ಕ್ಷಿತಿಯೊಳು ಪರಮೇಶ್ವರನೈಶ್ವರ್ಯಕೆ |ಇತರರು ಆರುಂಟು ಸಮಾನೆಂಬುದೇ 25ತಾರಿಯು ಗಗನದೊಳೀಸವೆ ಯಂಬುದು |ಧಾರುಣಿಯೊಳಗೆಣಿಸಲಿ ಬಹುದೂ ||ನಾರಾಯಣನ ಮಹತ್ಮಿ ಗಣಣಿಯನು |ಆರಾರಿಲ್ಲವು ಬಲ್ಲವರೆಂಬುದೆ 26ವಿಶ್ವಾಸದಿ ದೂರ್ವಿಯ ದಳವಿತ್ತರೆ |ವಿಶ್ವಕುಟುಂಬಿಯು ಕೈಕೊಂಬಾ ||ಅಶ್ವಾದಿ ಮುಖದಿಂ ಪೂಜಿಸಲು ಅ |ವಿಶ್ವಾಸದವರು ಕೊಳ್ಳನು ಎಂಬುದೆ27ಗೋವಿಂದಗೆ ನಿಜ ನಾಮೆನಿಸುತಿಹವು |ಐವತ್ತೊಂದೂ ವರ್ಣಗಳೂ ||ಈ ವಿವರವು ತಿಳಿದೂ ನಿಂದಾಸ್ತುತಿಗಳು |ದೇವನ ಗುಣಕಥನಗಳೆಂದರಿವದೆ 28ದುರ್ಜನರಿಗೆ ಎಂದಿಗೂ ದಯಮಾಡನು |ನಿರ್ಜರೇಶ ಸಂತರಿಗೊಲಿವಾ ||ದುರ್ಜಯವಾದ ಮನಸು ನಿಶ್ಚೈಸುತ |ಅಬ್ಜದಳಾಕ್ಷನ ಒಲಿಸಿರೊ ಎಂಬುದೆ 29ಯಮ ನಿಯಮಾದಿಗಳಲಿ ದಾರಢ್ಯದಿ |ಕಮಲಾ ಸ್ವಸ್ತಿಕದಾಸನದೀ ||ಸಮಚಿತ್ತದಿ ರೇಚಕ ಪ್ರಮುಖದಲಿಂ |ಸಮಿರನ ಬಂಧಿಸಿ ಜಪವನು ಮಾಳ್ಪುದೆ 30ಸ್ವಾಗರ್ಭಕ ಆಗರ್ಭಕ ಎಂಬುವ |ಯೋಗದ ಲಕ್ಷಣ ತಿಳಕೊಂಡೂ ||ಮೂಗಿನ ತುದಿಯನೆ ಈಕ್ಷಿಸುತಲಿ ಶ್ರೀ |ಭಾಗೀರಥಿ ಪಿತನ ಸ್ಮರಿಸುತಿಪ್ಪುದೆ31ಅಂಗುಷ್ಠಾರಂಭಿಸಿ ಮಸ್ತಕತನ |ಕಂಗಜ ಜನಕನ ರೂಪವನೂ ||ಹಿಂಗದೆ ಧೇನಿಸಿ ಮೈರಧರುಷದಿ |ಕಂಗಳಿಂದುದಕ ಸೂಸುತಲಿಪ್ಪುದೆ 32ಈ ಕರ್ಮವ ಮಾಡಿದೆ ಯನಗೀಪರಿ|ಸಾಕಲ್ಲ್ಯೆವು ಆಯಿತು ಎಂದೂ ||ಲೋಕಕೆ ತಿಳಿಸದೆ ತನ್ನಯ ಭಾವವ |ಜೋಕಿಲಿ ಬಚ್ಚಿಟ್ಟೂಕೊಂಡಿರುವದೆ 33ಧ್ಯಾನಕೆ ಕುಳಿತರೆ ಮನ ಹರಿದೋಡಲು |ಜಾನಕಿರಮಣನ ಮೂರುತಿಯಾ ||ತಾನೀಕ್ಷಿಸುತಲಿ ಸರ್ವದ ತತ್ವದ |ರೇಣುದೊಳಗೆ ಮುಣಿ ಮುಣಿಗಿ ಯೇಳುವದೆ 34ಅಸುರರನಳಿಯಲು ಶಕ್ತನು ಶ್ರೀಹರಿ |ದಶರೂಪವ ತಾಳಿದನ್ಯಾಕೇ ||ವಸುಧಿಯೊಳಗೆ ಪಾಪಿಷ್ಠ ಜನರ ಮೋ- |ಹಿಸುವದಕೀಪರಿಲೀಲಗಳೆಂಬುದೆ 35ಅನ್ಯತ್ರದಿ ಇಂದ್ರಿಯಗಳ ಚಲಿಸದೆ |ತನ್ನೊಶದೊಳಗಿರಿಸನುದಿನದೀ ||ಪನ್ನಗಶಯನನ ಪೂಜಿಯ ಮಾಡುತ |ಧನ್ಯನು ಈ ನರನೆನಿಸುತಲಿಪ್ಪುದೆ 36ಕೋಪವ ಬಿಟ್ಟು ನಿರಂತರ ಜ್ಞಾನಿಗ- |ಳಾ ಪದ ಭಜಿಸುತ ಹರಿದಿನದೀ ||ಲೋಪವ ಮಾಡದೆ ನಿರ್ಜಲ ಜಾಗರ- |ವಾಪರಮಮುದದಿ ನಡಸುತಲಿಪ್ಪುದೆ 33ಋಣಕೆ ಕಾಳಕೂಟವ ಕುಡಿವಂತೆ ಮ- |ರಣದಂದದಿ ಸನ್ಮಾನಕ್ಕೇ ||ಕುಣುಪದಂತೆ ಪರಸ್ತ್ರೀ ನೋಡಲ್ ಭಯ |ವನು ಬಡುವನು ಬ್ರಾಹ್ಮಣನೆಂದರಿವದೆ 38ಶತಮಖನಿಗೆ ಈಶಬಲ ಅವಗೆ ಬಲ ಮ- |ರುತವಗೆ ಬಲಹರಿಅವಗೆಂದೂ ||ಇತರರ ಬಲ ಬೇಕಿಲ್ಲ ಸ್ವತಂತ್ರ |ಚ್ಯುತಸರ್ವಜÕ ಸುಗುಣ ಪೂರ್ಣೆಂಬುದೆ 39ಸಂಸಾರವ ಹೇಯಿಸಿಕೊಂಡಾವಗ |ಕಂಸಾಂತಕನೂಳಿಗವನ್ನೂ ||ಸಂಶಯವಿಲ್ಲದೆ ಮಾಡುತೊಂದಧಿಕ |ವಿಂಶತಿ ಕುಲ ಉದ್ಧಾರ ಮಾಡುವದೆ 40ಪ್ರಥಮ ವಯಸದಲಿ ವಿದ್ಯಾಭ್ಯಾಸವು |ದ್ವಿತಿಯದಲ್ಲಿ ಗೃಹಕರ್ಮವನೂ ||ತೃತಿಯದಿ ಸತ್ತೀಥ್ರ್ಯಾತ್ರಿಗಳನುಮಾ|ಡುತಲಲ್ಲೆಲ್ಲಿಹ ಮಹಿಮಿ ಕೇಳುವದು 41ಘೋರತರ ಕುಸಂಸಾರವೆಂಬ ಈ |ವಾರಿಧಿತ್ವರದಾಟುವದಕ್ಕೇ ||ಮಾರಮಣನ ನಾಮೋಚ್ಚಾರವೆ ನವ |ತಾರಕವೆಂದುಪದೇಶ ಮಾಡುವದೆ 42ಜಲದೊಳಗುದ್ಭವಿಸಿದ ಮುತ್ತುದಕ ಮ- |ರಳೆ ಹ್ಯಾಂಗಾಗದೊ ಅದರಂತೇ ||ಕಲಿಕ್ಯವತಾರನ ಶರಣರು ಎಂಬರು |ಇಳಿಯೊಳು ನರರೆಂದೆನಿಸಲು ಯಂಬುದೆ 43ದ್ವಾದಶ ನಾಮವ ಪಂಚಮುದ್ರಿಗಳು |ಆದರದಲಿ ಧರಿಸುತ ಪಂಚಾ ||ಭೇದವ ತಿಳಿದು ನಿರಂತರದಲಿ ದು- |ರ್ವಾದಿಗಳ ಮತವ ಹಳಿವುತಲಿಪ್ಪುದೆ 44ಮಧ್ವಮತದ ಸರಿ ಮತಗಳು ಸಪ್ತ ಸ- |ಮುದ್ರತನಕ ಹುಡುಕಿದರಿಲ್ಲಾ ||ಬುದ್ಧಿವಂತರೆಲ್ಲೀತನ ಸೇವಿಸಿ |ಸದ್ವೈಷ್ಣವರೆಂದೆನಿಸಿರೊ ಎಂಬುದೆ 45ಮಾತಾಪಿತೃರ ಆರಾಧನಿ ಬಲು |ಪ್ರೀತಿಲಿ ಮಾಡುತ ಭಾಸ್ಕರಗೇ ||ಪ್ರಾತರಾದಿ ಸಂಧ್ಯಾಘ್ರ್ಯವ ಕೊಡುತಲಿ |ಆ ತರುವಾಯ ಜಪಂಗಳ ಮಾಳ್ಪುದೆ 46ಗುರುಹಿರಿಯರ ಚರಣವ ವಂದಿಸುತಲಿ |ಪರರಿಗೆ ಉಪದ್ರವನು ಕೊಡದೇ ||ಮರುತಾಂತರ್ಗತನೋಲ್ಗವನಲ್ಲದೆ |ನರಸ್ತೋತ್ರವ ಸ್ವಪ್ನದಿ ಮಾಡದಿಹದೆ 47ನಡಿಯಲು ದಾರಿಯ ಮನಿಯೊಳಗಿದ್ದರು |ನುಡಿ ನುಡಿಗನಿರುದ್ಧನ ನೆನದೂ ||ಬಡವರೆ ಗೋಪಾಲನ ಹೊಂದಿದವರು |ಅಡವಿಯೊಳಿದ್ದರು ಧೊರಿಗಳೆ ಎಂಬುದೆ 48ಪರಮಾಣುಗಳೊಳು ತಾನಿಹ್ಯ ತನ್ನೊಳ- |ಗಿರಸಿಹನಗಣಿತ ಬೊಮ್ಮಾಂಡಾ ||ಶಿರಿಗೆಂದೆಂದಿಗಸದಳವು ತಿಳಿಯಲು |ಕರಿವರದಿಂಥ ಮಹತ್ಮನು ಎಂಬುದೆ 49ಹೊತ್ತರಾದಿನಿಶಿಪ್ರಹರಾಗುವನಕ |ಮೃತ್ತಿಕಿ ಶೌಚಾದಿ ಸುಕರ್ಮಾ ||ತತ್ತಲವಾಗದೆ ಶ್ರೀ ಮುದತೀರ್ಥರ |ಉಕ್ತ್ಯನುಸಾರಾಚರಿಸುತಲಿಪ್ಪುದೆ 50ಹಾನಿ ಲಾಭ ಜಯ ಅಪಜಯ ಮಾನಪ- |ಮಾನಸುಖಾಸುಖ ಸಮ ಮಾಡೀ ||ಈ ನರರಿಗೆ ತನ್ನಿಂಗಿತ ತೋರದೆ |ಪ್ರಾಣೇಶ ವಿಠಲನ ಕರುಣವ ಪಡೆವದೆ 51
--------------
ಪ್ರಾಣೇಶದಾಸರು
ಸಿಕ್ಕಿರೆನ್ನ ಕೈಗೀಗ ಇನ್ತಕ್ಕೊಳ್ಳಿ ಸೀರೆಯ ಬೇಗ | ಎಲೆ ಸಿಕ್ಕಿ ಪಬೀದಿಯೊಳಗೆ ನಿಮ್ಮ ಮೈಗೆ ಸರಿಸಿ ನಾ |ಹೋದರೆ ಮುಟ್ಟಿದನೆಂದು ||ಬೈದು ಯಶೋದೆಗೆ ಪೇಳಿ ಕೊಲ್ಲಿಸಿದ್ದ- |ಕ್ಕಾದುದು ನೋಡಿರಿ ಇಂದು1ಹುಡುಗರೊಡನೆ ನಾನಾಡುತ ಬಂದರೆ |ಬಡಿಯಲಿ ಹವಣಿಸಲಿಲ್ಲೇ ||ಕುಡಿಯಲು ಪಾಲ್ ಬಾಯ್ತೆರೆದು ಬೇಡಿದರೆ |ಕೊಡದಲೆ ನೂಕಿಸಲಿಲ್ಲೆ 2ಬಚ್ಚಲೊಳಗೆ ಮೈದೊಳೆವಲ್ಲಿಗೆ ಬಂದ |ನಚ್ಚುತನೆಂಬುವಿರಲ್ಲೇ ||ಬಚ್ಚದೆ ಬತ್ತಲೆ ಅಡವಿಯೊಳಿರುವದು |ಹೆಚ್ಚಿದು ಅಹ ಅಲ್ಲಲ್ಲೇ 3ಬೆಳ್ಳಕೆ ದಾರೋ ಕಾಣಿಸುತಿಹರು |ಇಲ್ಲಿಗೆ ಬಂದರೆ ಹೇಗೆ ||ಸುಳ್ಳಲ್ಲವೆ ನಿಮ್ಮಂಣರಾಣೆ |ಇನ್ನೆಲ್ಲಿಗೆ ಹೋಗುವಿರೀಗೆ 4ಒಂದೊಂದೇ ನಿಮ್ಮಾಟವು ಮನಸಿಗೆ |ತಂದರೆ ಕೋಪವು ಘನ್ನ ||ಇಂದಿರೇಶ ಪ್ರಾಣೇಶ ವಿಠಲ ಗತಿ- |ಯೆಂದಿರೆ ವಂದಿನಕನ್ನಾ5
--------------
ಪ್ರಾಣೇಶದಾಸರು
ಹಣ್ಣು ತಾ ಬೆಣ್ಣೆ ತಾರೆ - ಗೋಪಮ್ಮ-|ಹಣ್ಣು ತಾ ಬೆಣ್ಣೆ ತಾರೆ ಪಅಡವಿಯೊಳಗೆ ಅಸುರನ ಕೊಂದ ಕೈಗೆ |ಮಡುವಿನೊಳಗೆ ಮಕರನ ಸೀಳ್ದ ಕೈಗೆ ||ಪೊಡಿವಿಯೊಳಗೆ ಚೆಂಡನಾಡಿದ ಕೈಗೆ |ಸಡಗರದಲಿ ಭೂಮಿ ಬೇಡಿದ ಕೈಗೆ 1ಶಂಖ ಚಕ್ರಗಳ ಪಿಡಿದಂಥ ಕೈಗೆ |ಶಂಕೆಯಿಲ್ಲದೆ ಮಾವನ ಕೊಂದ ಕೈಗೆ ||ಬಿಂಕದಿಂದಲಿ ಕೊಳಲೂದುವ ಕೈಗೆ |ಪಂಕಜಮುಖಿಯರ ಕುಣಿಸುವ ಕೈಗೆ 2ದಿಟ್ಟತನದಲಿಬೆಟ್ಟವೆತ್ತಿದ ಕೈಗೆ|ಸೃಷ್ಟಿಯ ದಾನವ ಬೇಡಿದ ಕೈಗೆ ||ದುಷ್ಟಭೂಪರನೆಲ್ಲ ಮಡುಹಿದ ಕೈಗೆ |ಕೆಟ್ಟ ದಾನವರನು ಸದೆಬಡಿದ ಕೈಗೆ 3ಕಾಳಿಯ ಮಡುವನು ಕಲಕಿದ ಕೈಗೆ |ಸೋಳಸಾಸಿರ ಗೋಪಿಯರಾಳಿದ ಕೈಗೆ ||ಮೇಳದ ಭಕ್ತರುದ್ಧರಿಸುವ ಕೈಗೆ |ಏಳು ಗೂಳಿಯ ಗೆದ್ದ ಯದುಪನ ಕೈಗೆ 4ಬಿಲ್ಲು - ಬಾಣಗಳನು ಪಿಡಿದಂಥ ಕೈಗೆ |ಮಲ್ಲಸಾಧನೆಯನು ಮಾಡಿದ ಕೈಗೆ ||ಎಲ್ಲ ದೇವರದೇವ ರಂಗನ ಕೈಗೆ |ಬಲ್ಲಿದಪುರಂದರವಿಠಲನ ಕೈಗೆ5
--------------
ಪುರಂದರದಾಸರು