ಇಂದು ನಮ್ಮನಿಲಿ ಬ್ರಹ್ಮಾನಂದ
ತಂದೆ ಸದ್ಗುರು ಸ್ವಾಮಿ ಕೃಪೆಯಿಂದ ಧ್ರುವ
ವಸ್ತುದಯ ಬೀರುವಾನಂದ ಪ್ರಸ್ತ
ಹಸ್ತ ಬಂದವರಿಗೆ ಸಾಧ್ಯಸ್ತ
ಪ್ರಸ್ತ ಉಂಟಾಗಿದೆ ನೋಡಿ ಸಮಸ್ತ
ಸ್ವಸ್ತ ಚಿತ್ತಲುಣಬೇಕು ಪ್ರಶಸ್ತ 1
ಉಂಬುದಕನುಮಾನ ಮಾಡಬ್ಯಾಡಿ
ಕೊಂಬುದೆಲ್ಲ ಬಾಯಿದೆರೆದು ಬೇಡಿ
ತುಂಬಿತುಳುಕುತಲ್ಯಾನಂದ ನೋಡಿ
ಅಂಬುಜಾಕ್ಷನ ಸುಖಾಶ್ರಯ ಮಾಡಿ 2
ಸ್ವಾನುಭವದ ಪ್ರಸ್ತ ಸರ್ವಕಾಲ
ತಾನೆ ತಾನಾಗಿ ದೋರುತದಚಲ
ದೀನಮಹಿಪತಿಗಾನಂದ ಸುಕಾಲ
ಭಾನುಕೋಟಿತೇಜ ದಾಸಾನುಕೂಲ 3