ಒಟ್ಟು 37131 ಕಡೆಗಳಲ್ಲಿ , 139 ದಾಸರು , 11109 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸನ್ನುತ | ವಿಠಲ ಪೊರೆ ಇವಳಾ ಪ ಯಜನ ಯಜ್ಞಾಭಿದನೆ | ಗಜವರದ ಹರಿಯೇ ಅ.ಪ. ಗುರು ಹಿರಿಯರ ಸೇವೆ | ಈ ನೆರೆಮಾಳ್ವಳೇಕನ್ಯೆಕರ ಪಿಡಿದು ಪೊರೆ ಇವಳ | ಕಾರುಣ್ಯ ಸಿಂಧೋತರತಮಾತ್ಮಕ ಜ್ಞಾನ | ಮೂರೆರೆಡು ಭೇದಗಳಅರಿವಾಗುವಂತೆಸಗೊ | ಮರುತಾಂತರಾತ್ಮಾ 1 ದುರಿತ ರಾಶಿಗಳಳಿದು | ವರಸುವೈರಾಗ್ಯವನುಕರುಣಿಸುತ ಪೊರೆ ಇವಳ | ಧರೆಯಮರ ವಂದ್ಯಾಇರಿಸಿ ಸತ್ಸಂಗದಲಿ | ನೆರೆಸು ಸಾಧನಗೈಸೊಪರಮಾತ್ಮ ಪರಮೇಶ ಪರಿಪೂರ್ಣ ಹರಿಯೇ 2 ವನಧಿ ಉತ್ತರಿಸೊ | ಭವದೂರ ಹರಿಯೇಸವನತ್ರಯದಲಿ ನಿನ್ನ | ತವ ನಾಮ ಸ್ಮøತಿಯಿತ್ತುಅವನತಳ ಪೊರೆಯೊ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಸನ್ನುತ ವಿಠಲ | ಇವನ ಪೊರೆಯೋ ಪ ಅವಿಕಾರಿ ಆದ್ಯ ನಿರ | ವದ್ಯ ಎಲೊ ಹರಿಯೆ ಅ.ಪ. ತೈಜಸನೆ ನೀನಾಗಿ | ಮಾಜದಲ್ಯುಪದೇಶಯೋಜಿಸುವೆನೆಂದೆನುತ | ಪೇಳ್ದುದಕ್ಕಾಗೀಆರ್ಜವದ ಮನದಲ್ಲಿ | ಪ್ರಾರ್ಥಿಸಲು ಸ್ವಪ್ನದಲಿಯೋಚಿಸಿಹೆ ಅಂಕಿತವ | ಹೇ ನೈಜಮೂರ್ತೇ 1 ಚಿಣ್ಣನಿರುವನು ಇವನು | ಕಣ್ಣೆಗೆವೆಯಂದದಲಿಇನ್ನೀವನ ಕಾಯುವುದು | ಬನ್ನಬಡಿಸದಲೇಅನ್ನ ಆರೋಗ್ಯಕ್ಕೆ | ನಿನ್ನನೆ ಮೊರೆಯಿಡಲಿಅನ್ಯ ಹಂಬಲ ನೀಗೊ | ಪನ್ನಂಗ ಶಯನಾ 2 ತೊಡರು ಬರಲಿ | ಬಿಡದೆ ನಿನ್ನಂಘ್ರಿಯನುಧೃಡಭಕ್ತಿಯಿಂ ಸ್ಮರಿಪ | ಮುದ ಮನವ ನೀಯೋ |ಎಡಬಲದಿ ನೀನಾಗಿ | ಬಿಡದೆ ಬೆಂಬಲ ವಿರಲುಕಡು ಭವಾರ್ಣವವೆಲ್ಲ | ಅಡಿಯ ಪರಿಮಿತಿಯೋ 3 ಸಿರಿ ವಾಯು ಮೊದಲಾದಸುರರೆಲ್ಲ ಹರಿಯ ಕಿಂಕರರೆಂಬ ಮತಿಯಿತ್ತುಪೊರೆವುದಿವನನ ಎಂದು | ಹರಿಯೆ ಭಿನ್ನವಿಪೆ 4 ನಾಮ ಸ್ಮರಣೆ ಯೆಂಬ | ವಜ್ರಕವಚವ ತೊಡಿಸಿಈ ಮಹಾ ಕಲಿಯುಗದಿ | ಸಾಧನವ ಗೈಸೋಶ್ರೀ ಮನೋಹರ ಗುರು | ಗೋವಿಂದ ವಿಠಲಯ್ಯಈ ಮಹತ್ತುಪಕಾರ | ನಾ ಮರೆಯನಯ್ಯ 5
--------------
ಗುರುಗೋವಿಂದವಿಠಲರು
ಸನ್ನುತ ವಿಠಲ | ಕಾಪಾಡೊ ಇವನಾ ಪ ಭದ್ರಮೂರುತಿ ದೇವ | ಪ್ರಾರ್ಥಿಸುವೆ ಹರಿಯೇ ಅ.ಪ. ಸುವಿನೀತ ನಿಹನಿವನು | ಸುವಿವೇಕ ಕೊಟ್ಟಿವಗೆವಿವಿಧ ಭೋಗಗಳಿತ್ತು | ಕಾಪಾಡೊ ಹರಿಯೇ |ಅವನಿಸುರರಾ ಸೇವೆ | ಅವಿರತದಿ ದೊರಕಿಸುತಪವನಮತದಲಿ ಚರಿಪ | ಭಾಗ್ಯ ಕರುಣಿಸುತಾ 1 ತಂದೆ ತಾಯ್ಗಳಸೇವೆ | ಬಂದುರದಿ ಗೈವಂಥಬಂದೆ ಮನವನು ಇತ್ತು | ಕಾಪಾಡೊ ಹರಿಯೇಇಂದಿರಾ ರಮಣ ನೀ | ನಂಘ್ರಿ ಭಕ್ತಿಯನಿತ್ತುಛಂದದಲಿ ಸಾಧನವ | ನೀಗೈಸಬೇಕೊ 2 ಗುರುವಂತರಾತ್ಮ ಗುರು | ಗೋವಿಂದ ವಿಠಲನೆಶರಣು ಬಂದವ ನನ್ನ | ಕೈಯ ಬಿಡದೇತರತಮಜ್ಞಾನಾದಿ | ಅರಿವ ನೀ ಇತ್ತಿವಗೆಕರುಣದಿಂದ್ದುರಿಸೆ | ಪ್ರಾರ್ಥಿಸುವೆ ಹರಿಯೇ 3
--------------
ಗುರುಗೋವಿಂದವಿಠಲರು
ಸನ್ನುತ ವಿಠಲ | ಭಾರ್ಗವಿಯ ರಮಣಾ ಪ ಯೋಗ ಮಾರ್ಗದಲಿ ಹೃ | ದ್ರೋಗ ಹರಿಸಿವಗೇ ಅ.ಪ. ಮುಗ್ದ ತರಳನು ಇವಗೆ | ದಗ್ಧ ಪಾಪವ ಮಾಡಿಮಧ್ವ ಸಿದ್ಧಾಂತಗಳ | ಪಧತಿಯ ತಿಳಿಸೋ |ಕೃದ್ಧಖಳ ದುರ್ಯೋಗ | ವದ್ದು ಕಳೆದೂರಕ್ಕೆಬುದ್ಧಿ ಜನ ಸಂಯೋಗ | ಬದ್ಧವಾಗಲಿ ಇವಗೇ 1 ನಿತ್ಯ ಮಂಗಳನೇ 2 ಭಾವಿ ಬೊಮ್ಮರು ಹಾಗು | ಭಾವಿ ಮರುತರ ಕರುಣಭಾವುಕಗೆ ಇರುವುದನು | ಭಾವಿತವು ಅವಗೇಭಾವ ಉದ್ರೇಕ ಸ | ದ್ಭಾವ ಭಾವಿತ ನನ್ನನೀವೊಲಿದು ಕಾಯೊ | ಕೃಪಾವಲೋಕನದಿ3 ಹರಿ ನಿನ್ನ ವಾರ್ತೆಯಲಿ | ಇರಲಿ ರತಿ ಇವಗಿನ್ನುಗುರು ಹಿರಿಯರಾ ಸೇವೆ | ಪರಮ ಭಕುತಿಂದಾವಿರಚಿಸುವ ಸೌಭಾಗ್ಯ | ಕರುಣಿಪುದೊ ಶ್ರೀ ಹರಿಯೆಮರುತಾಂತರಾತ್ಮ ತವ | ಸ್ಮರಣೆ ಸುಖ ಕೊಡುತಾ 4 ಭವ | ರೋಗವನೆ ಪರಿಹರಿಸೋನಾಗೇಶ ಶಯ್ಯ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸನ್ನುತ ವಿಠಲಾ | ಹಿತದಿ ಪೊರೆ ಇವಳಾ ಪ ಮತಿವಂತಳೆಂದೆನಿಸಿ | ಅತಿಶಯದಿ ಹರಿಯೇ ಅ.ಪ. ಹರಿ ಗುರು ಸದ್ಭಕ್ತಿ | ನಿರುತ ಹಿರಿಯರ ಸೇವೆಗೆರಗಲೀಕೆಯ ಮನಸು | ಪರಮ ಪೂರುಷನೇ |ಪರಮಾತ್ಮ ಪರತತ್ವ | ದರಿವು ಆಗುತ ಭವದಪರಿಹರಕೆ ಮಾರ್ಗವನೆ | ತೋರೋ ಗುಣಪೂರ್ಣ 1 ಗಜ ಪಂಚಾಸ್ಯ | ಪರಮ ದಯ ಪೂರ್ಣಹರಿನಾಮ ನಿರುತದಲಿ | ಸ್ಮರಿಪ ಸೌಭಾಗ್ಯವನುಕರುಣಿಸುತ ಪೊರೆ ಇವಳಾ | ಮರುತಾಂತರಾತ್ಮ 2 ಪರಿ ಪರಿ ಪೋಷಿಸಿವಳಾ 3
--------------
ಗುರುಗೋವಿಂದವಿಠಲರು
ಸನ್ನುತ ಶ್ರೀರಾಮ ಪ ಭೂಲಲಾಮ ಪಾವನಕರ ನಾಮಾ ಕಾಲಕರ್ಮಕಾರಣ ಭವಭೀಮ ಅ.ಪ ಕುಶಿಕ ಮಹಾಧ್ವರ ರಕ್ಷಕ ನಾಮ ಸನ್ನುತ ರಾಮ ನಿಶಿಚರ ತಾಟಕಾ ಮರ್ದನ ರಾಮ 1 (ದೀನನೆನ್ನ ಕಾಯೊ ಶ್ರೀರಾಮ) 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸನ್ನುತ ಸತತ ಸದ್ಗುಣಪೂರ್ಣ ಪ್ರಥಮಾಂಗ ಸಂಪೂಜ್ಯ ಶರ್ವಮಿತ್ರ ಪ ಪ್ರತಿ ಪ್ರತಿ ಕ್ಷಣ ನಿನ್ನ ಪತಿತಪಾವನ ಪಾದ ಕ್ಕತಿ ದೈನ್ಯದಲ್ಲೆರಗಿ ಮೊರೆ ಇಡುವೆ ಪೊರೆಯೆಂದು ಅ.ಪ. ಕೋರಿದರೆ ಮನಕರಗಿ ಹಾರಿ ಬರುವಿಯೆಂದು ನಾರದರೆ ಮೊದಲಾದ ನಿಜಭಕ್ತರೆಲ್ಲ ಸಾರಿಹರು ಸರ್ವೇಶ ಸಾರತಮ ಸರ್ವರೊಳು ಘೋರ ಭವದಿಂದೆನ್ನ ಪೊರೆ ಎನಲು ಬರೆಯಂತೆ 1 ಕೃಪೆಯಿಂದ ನೀ ನೋಡೆ ಬ್ರಹ್ಮಾಂಡ ದೋಷಗಳು ಲುಪ್ತವಾಗುವುದಯ್ಯ ಒಂದೆ ಕ್ಷಣದಿ ನಿಪುಣನಾಗುವನವನು ಇಹಪರ ನಿಧಿ ಒದಗಿ ಅಪರಿಮಿತ ಸುಖ ಉಣುವ ಅಪ್ರತಿಮ ಕೀರ್ತಿಯು 2 ವಿಧಿ ಶಿವ ಶಕ್ತ ಸುರರಿಂದ ಸಂಸೇವ್ಯ ಜಯೇಶವಿಠಲ ಕೀರ್ತಿಪೂರ್ಣಾ ಪರಿ ದೋಷಗಳು ಪರಮ ಕೃಪೆ ವೀಕ್ಷಣದಿ ಪರಿಹರಿಸಿ ಬೆರೆ ಎನ್ನ ಪರಭಕ್ತಿ ನಿಧಿ ಇತ್ತು 3
--------------
ಜಯೇಶವಿಠಲ
ಸನ್ನುತ ನಮೋಸ್ತು ಜಗದಾಧಾರಾ ಪ ನಮೋಸ್ತು ಮೀನ ಶರೀರಾ ಅ.ಪ ನಮೋಸ್ತು ಕೌಸ್ತುಭಧರಾ ಕೂರ್ಮ ಶರೀರಾ 1 ಮೃಗೇಂದ್ರ ಸದ್ಯುಶಾ ಶ್ರೀಪತೇ ವರಾಹ ರೂಪ ನಮೋಸ್ತುತೇ 2 ತಲ್ಪ ವಿರಾಜಿತೇ ಸನ್ನುತ ನೃಸಿಂಹರೂಪ ನಮೋಸ್ತುತೇ 3 ಪುರಂದರ ಫಲಪ್ರದಾ ಸಕಲೇಷ್ಟದಾ ನಮೋಸ್ತು ವಾಮನ ಶ್ರೀಕರಾ4 ರಮಾಮನೋಹರ ಶ್ರೀಹರೇ ಭಂಜನ ನಮೋಸ್ತು ಪರಶುಧರಾಹರೇ 5 ಪ್ರದೀಪ ಹನುಮತ್ಸೇವಿತ ಭವ ವಿನಾಶ ಭೂಮಿಸುತಾನ್ವಿತಾ 6 ಕೃಪಾಕರಾ ಪಶುಪಾಲಕಾ ಪ್ರವೀಣ ಗೋಪಬಾಲಕಾ 7 ಪಿತಾಯ ವ್ರತ ನಿರ್ಮೂಲತೇ ಬುದ್ಧ ಶರೀರತೇ 8 ಧರ್ಮೋದ್ಧರಾಯ ತುರಂಗ ವಿರಾಜತೇ ಗಮನ ಸುರೇಶ ಕಲ್ಕಿ ಮಹಾತ್ಮತೇ 9 ಪರ್ವತಧರ ಧರಾಯ ನೃಸಿಂಹತೇ ಪ್ರಬುದ್ಧಕಲ್ಕಿ ದಿಶಾಕಲತೇ 10 ಶುಭಾಂಗ ಗರುಡ ತುರಂಗತೇ ನಾರಾಯಣಾಯ ಭಕ್ತೋದ್ಧಾರತೇ 11
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸನ್ನುತ ಪಾದ ಭಕುತಿಯ ಬಿತ್ತಿ 1ದೇಹವೆ ನಾನೆಂಬ ದೈನ್ಯವ ಬಿಡಿಸಿಸಾಹಸದಲಿ ಸಕಲ ಸಾಧನವ ತೊಡಿಸಿಮೋಹ ಮತ್ಸರವೆಂಬ ಮೋಸವ ಕೆಡಿಸಿಸೋಹಮೆಂಬರಿವಿನಲ್ಲಿ ಸೊಗಸಾಗಿ ನಡೆಸಿ 2ಕಾಲಕರ್ಮಂಗಳ ಮೂಲವ ಕಿತ್ತು ಗೋಪಾಲಾರ್ಯ ನಿಜಸುಖ ಶೀಲವನಿತ್ತುಮೇಲಾದ ಮುಕುತಿಯ ಕೀಲಕಳೆದೆತ್ತುಶ್ರೀಲಕ್ಷ್ಮಿಯರಸನೆ ಚಿತ್ತವನಿತ್ತು 3
--------------
ಗೋಪಾಲಾರ್ಯರು
ಸನ್ನುತೆ ಶಂಕರಿ ದೇವಿ ಪ ನಿನ್ನ ನಾಮಂಗಳನು ನುತಿಸುವೆ || ಎನ್ನುತೆರಗುವ ದೀನನೆನ್ನೊಳುಅ.ಪ. ಆದಿಮೊದಲು ಮಧು ಕೈಟಭರನು ಸೀಳಿ | ಮೇದಿನಿಯನು ಪೊರೆದವಳು | ದೇವಿ ಮೇದಿನಿಯನು ಪೊರೆದವಳು || ಕ್ರೋಧದಿಂದಲಿ ಮಹಿಷ ವದನನ | ಭೇದಿಸಿದೆ ನೀ ಧೂಮ್ರಲೋಚನ ಕಾದಿ ಗೆಲಿದಿಹ ದೇವಿ ಎನ್ನೊಳು 1 ರುಧಿರ ರುಧಿರವ ಹೀರುತಲಿ || ದೇವಿ | ರುಧಿರವ ಹೀರುತಲಿ || ಸದೆದು ಮಹಿಯೊಳು ಕೆಡುಹುತವನನು | ಪದುಮಲೋಚನೆ ದೇವಿ ಎನ್ನೊಳು 2 ಶುಂಭದೈತ್ಯರ ಮರ್ದಿಸಿದೆ ನೀ | ಮಣಿಯುವ ದೀನನೆನ್ನೊಳು 3 ಭ್ರಮರ ರೂಪದಿ | ಚರಣ ಸ್ಮರಿಸುವನಾಥನೆನ್ನೊಳು4 ನೆಷ್ಟೆಂದು ಸಹಿಸಲಿ ದೇವಿ | ನಾನಿ | ನ್ನೆಷ್ಟೆಂದು ಸಹಿಸಲಿ ದೇವಿ || ದುಷ್ಟನಾಶಿನಿ ಶಿಷ್ಟ ಪಾಲಿನಿ || ಅಷ್ಟವಿಧ ಸೌಭಾಗ್ಯದಾಯಿನಿ | ಭೀಷ್ಟವನುಕೊಡು ಎಂದು ಬೇಡುವೆ 5
--------------
ವೆಂಕಟ್‍ರಾವ್
ಸನ್ಮಾರ್ಗ ಸನ್ಮಾರ್ಗಯಿದು ಪ ಮನ್ಮಥ ಜನಕನ ಮನದಿ ಭಜಿಸುವುದು ಅ.ಪ ಕರ್ತ ನೀನು ಹರಿಭೃತ್ಯನಾನು ಯೆಂ- ದತ್ಯಂತ ಮನೋಹರುಷದಿ ಕುಣಿವದು 1 ಪದುಮ ನಾಭನಿಗೆ ಪೂಜೆಯೆಂದರಿವುದು 2 ಛಳಿಮಳೆಗಾಳಿ ಬಿಸಿಲುಗಳೊಳಗೆ ಶ್ರೀ ವಿಭೂತಿ ತಿಳಿಯುವುದು 3 ಕರೆಕರೆ ಸಂಸಾರದ ಭಾರದೆ ತಾ ಮರೆಯದೆ ನಿರತವು ಹರಿಗರ್ಪಿಸುವುದು 4 ಪಾಮರಜನದೊಳು ಸೇರದೆ ಶ್ರೀಗುರು- ರಾಮ ವಿಠ್ಠಲನ ನಾಮ ಜಪಿಸುವುದು 5
--------------
ಗುರುರಾಮವಿಠಲ
ಸನ್ಮಾರ್ಗಪಿಡಿದು ಸದ್ವಸ್ತಿಯೊಳು ಬೆರೆದಿಹ ಸದ್ಬ್ರಹ್ಮರಿಗೆ ನಮಸ್ಕಾರ 1 ಸದ್ಗುರು ಕೃಪೆಯಿಂದ ಸದ್ಗತಿಯ ಪಡೆದಿಹ ಸದ್ಭಕ್ತರಿಗೆ ನಮಸ್ಕಾರ 2 ಅಧ್ಯಾತ್ಮವಿದ್ಯ ಸಾದ್ಯ ಮಾಡಿಕೊಂಡಿಹ ಬುದ್ಧಿವಂತರಿಗೆ ನಮಸ್ಕಾರ 3 ಸಿದ್ಧಾಂತ ಅನುಭವದ ಸಾಧನವು ಬಲಿದಿಹ ಶುದ್ಧ ಬುದ್ಧರಿಗೆ ನಮಸ್ಕಾರ 4 ಇದೆ ನಿಜತಿಳಿದಿಹ ಸದ್ಬೋಧದಲ್ಲಿ ಪೂರ್ಣ ಸದ್ಭಾವಿಗಳಿಗೆ ನಮಸ್ಕಾರ 5 ಆದಿತತ್ವದ ನೆಲೆಯು ಭೇದಿಸಿ ಬೆರೆದಿಹ ಬುದ್ದಜನರಿಗೆ ನಮಸ್ಕಾರ 6 ಕ್ರೋಧ ಕಳೆದು ಸದಾ ಶಾಂತಪದಹೊಂದಿದ ಸಾಧುರಿಗೆ ನಮಸ್ಕಾರ 7 ಭಿನ್ನ ಭೇದವನಳಿದು ತನ್ನ ತಾ ತಿಳಿದ ಸುಜ್ಞಾನಿಗಳಿಗೆ ನಮಸ್ಕಾರ 8 ಮೇಲ್ಗಿರಿಯೊಳಗಿಪ್ಪ ಮೂಲಮೂರ್ತಿಯ ತಿಳಿವ ನೆಲೆವಂತರಿಗೆ ನಮಸ್ಕಾರ 9 ಮಾಯಮೋಹವನಳಿದು ಸೋಹ್ಯ ಸೊನ್ನೆಯ ತಿಳಿದ ಮಹಾಮಹಿಮರಿಗೆ ನಮಸ್ಕಾರ 10 ಆರುಮೂರನೆ ಗೆದ್ದು ಏರಿ ತ್ರಿಪುರ ದಾಟಿ ಮೀರಿಹರಿಗೆ ನಮಸ್ಕಾರ 11 ಮನಕರಗಿ ಘನ ಬೆರೆದು ತಾನೆ ತಾನಾಗಿಹ ಮೋನ ಮುಗ್ಧರಿಗೆ ನಮಸ್ಕಾರ 12 ತತ್ವಮಸಿ ಅರ್ಥದಿತ್ಯರ್ಥವನು ತಿಳಿದಿಹ ಮುಕ್ತಜನರಿಗೆ ನಮಸ್ಕಾರ 13 ತಾನರಿತು ಸುಖಿಯಾಗಿ ಇನ್ನೊಬ್ಬರಿಗೆ ಕಣ್ದೆರೆಸುತಿಹರಿಗೆ ನಮಸ್ಕಾರ 14 ತರಳ ಮಹಿಪತಿ ಹೊರೆವ ಅರುಹು ಕುರುಹವನಿತ್ತ ಗುರುಹಿರಿಯರಿಗೆ ನಮಸ್ಕಾರ 15
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂಪತ್ತು ನಿನಗಿಂದು ಪೊಸದಾಯಿತೆ | ಸಿಂಪಿನಲಿ ಪಾಲುಗುಡಿದದು ಮರದಿಯಾ ರಂಗ ಪ ಪಾಲು ಮೊಸರು ಕದ್ದು ಗೋವಳರೆಂಜಲನುಂಡು | ತಾಳ ಫಲಗಳ ಮೆದ್ದದು ಮರದಿಯಾ || ಕಾಲ ಕಾಲಕೆ ಇಲ್ಲಿ ಷಡುರಸಾಯನ ಸವಿದು | ಮೇಲಾಗಿ ಪೊಟ್ಟೆಯೆ ಪೊರೆವ ಅತಿಶಯವೇನು 1 ಕಂಡವರ ಕೈಯ್ಯ ಪಳ್ಳಿಯಲಿ ಹಳ ಹಳ ಎನಿಸಿ | ಕೊಂಡು ಭಂಡಾಗಿ ಇದ್ದದು ಮರದಿಯಾ || ವಾಹನ | ಕರ ಮುಗಿದು ಕೊಂಡಾಡುವ ಭರವೊ 2 ಮತಿಹೀನ ಖಳಗಂಜಿ ವನಧಿಯೊಳಗೆ ದ್ವಾರ | ವತಿಯಲ್ಲಿ ವಾಸವಾದದು ಮರದಿಯಾ || ಪ್ರತಿದಿವಸದಲ್ಲಿ ಸದ್ಭಕ್ತಿಯುಳ್ಳ ಶುದ್ಧ | ಯತಿಗಳಿಂದಲಿ ಪೂಜೆ ಕೈಗೊಂಬ ಸಂಭ್ರಮವೊ 3 ಈ ವೈವಸ್ವತ ಮನ್ವಂತರ ಉಳ್ಳತನಾಕಾ | ಕರ್ಮ ತಪ್ಪಲರಿಯದು || ಕೋವಿದರು ಪೇಳುವದು ಪುಸಿ ಎನ್ನದಿರು ದೇವ | ಈ ಉಡಪಿನ ಸ್ಥಾನ ನೆಚ್ಚಕೇನೊ ನಿನಗೆ 4 ಕ್ಲೇಶ ಕಳಿಯದಿರಲು | ಭಕುತವತ್ಸಲನೆಂಬ ಬಿರಿದು ಬರಿದೇ || ಮುಕುತೀಶ ಶಿರಿ ಕೃಷ್ಣ ವಿಜಯವಿಠ್ಠಲ | ವಿ |ರುಕತಿಯೆ ಇತ್ತರೆ ಕೀರ್ತಿ ಬಾಹದು ನಿನಗೆ 5
--------------
ವಿಜಯದಾಸ
ಸಪ್ತಕೋಟಿ ಮಹಾಮಂತ್ರಾರ್ಥ ಹೃದಯಾಬ್ಜ ಚಕ್ರಮಂಡಲದೊಳು ಪ್ರತಿಪಾದ್ಯ ಪ ಮುದದಿಂದ ಜ್ಞಾನೇಛ್ಛಾ ಕ್ರಿಯಾ ಶಕ್ತಿ ತ್ರಯಗಳು ತದಭಿಮಾನಿಗಳ ನೆನೆದುದಳದಿ ಸೂರ್ಯ ಕರಿ ಅಜ ರಥ ವೀಥಿಗಳಧಕರಿಸಿ ಅದರ ಮೇಲೊಂದು ಮಂಡಲ ನಿರ್ಮಿಸಿ ಷÀಟ್ಸರೋ- ಜದಳಗಳನೆ ರಚಿಸಿ ಇದರೋಳು ಪೂರ್ಣ ಜ್ಞಾನ್ವೆಶ್ವರ್ಯ ಪ್ರಭಾನಂದ ತೇಜ ಸತ್ಯಮೂರ್ತಿಗಳ್ಚಿಂತಿಸೀ ಮಾಸ ತಾರಾರಾಶಿಗಳ ಗುಣಿಸಿ ಬದಿಯಲಿ ಏಕಾ ಪಂಚಾಶದ್ವರ್ಣ ತಿಳಿಯೋದಿದು ವ್ಯಾಪ್ತಿ 1 ಮೇಲೊಂದು ಮಂಡಲದ ಅಷ್ಟದಳಗಳಲಿ ಅಷ್ಟ ಬೀಜಾಕ್ಷರಗಳನೆ ರಚಿಸೀ ಶನಿ ರಾಹು ಗುರು ಬುಧ ಶುಕ್ರ ಸೋಮ ಮಂಗಳ ಕೇತುಗಳ ನಿರ್ಮಿಸಿ ವಲಯದಿ ಪ್ರಣವದಷ್ಟಕ್ಷರಗಳ ನಿರ್ಮಿಸಿ ವಿಶ್ವಾದ್ಯಷ್ಟರೂಪನನೆ ಚಿಂತಿಸಿ ಅದರಿಂದಭಿವ್ಯಕ್ತ ವರ್ಣಗಳ್‍ಭಜಿಸೀ ವರ್ಗಕೆ ತತ್ವತನ್ಮಾನಿಗಳನೆ ಚಿಂತಿಸಿ ಅಷ್ಟಾಕ್ಷರಾತ್ಮಕನ ದೃಢಮನಸಿನಿಂದ ಸ್ತುತಿಸಿ ಇದು ವ್ಯಾಪ್ತಿ2 ಮೇಲೊಂದು ಮಂಡಲ ದ್ವಾದಶದಳದೊಳ್ ದ್ವಾದಶ ಬೀಜಾಕ್ಷರ ಕೇಶವಾದಿ ದ್ವಾದಶನಾಮ ವರ್ಣವಿಭಾಗವು ರಾಶಿಗಳ ವಿವರ ವಲಯದಿ ತಾರಾಯೋಗಗಳ್ವಿಸ್ತಾರ ಮೇಲ್ಮಂಡಲದೊಳು ಚತುರ್ವಿಂಶತಿ ಬೀಜಾಕ್ಷರ ಕೇಶವಾದಿನಾಮ ತಾರೆರಾಶಿಗಳೆಣಿಸೀ ಮೇಲೆ ಐವತ್ತೊಂದು ಅಜಾದಿಗಳ ಚಿಂತಿಸಿ ಅಲ್ಲಿಹ ಶ್ರೀ ವೇಂಕಟೇಶಾತ್ಮಕ ಶ್ರೀ ಉರಗಾದ್ರಿವಾಸವಿಠಲ 3
--------------
ಉರಗಾದ್ರಿವಾಸವಿಠಲದಾಸರು
ಸಂಪ್ರದಾಯ ಶೃಂಗಾರದಂಥ ಶುಭಾಂಗಿ ನೀ ಏಳು ಕಂಗಳ ನೋಟದ ಕಡು ಚೆಲ್ವೆ ನಿನ್ನ ಪಾ- ದಂಗಳಿಗೆರಗುವೆ ಎನುತ ಮಾಲಕ್ಷುಮಿ(ಯ?) ಅಂಗನೆಯರ್ಹಸೆಗೆ ಕರೆದರು 1 ಅಜನಜನಕನರಗಿಳಿಯೆ ನೀ ಏಳು ಪದಮನಾಭನ ಪಟ್ಟದರಸಿ ನೀ ಏಳು ತ್ರಿಜಗಭೂಷಿತನೆದೆ ಮ್ಯಾಲೆ ಹೊಂದಿರುವಂಥ ಮದಗಜಗಮನೆ ಮಾಲಕ್ಷ್ಮಿ ಬಾರೆನುತಲಿ ಮುದದಿಂದಲಿ ಹಸೆಗೆ ಕರೆದರು 2 ಸೋಮವದನೆ ಸುಗುಣೆ ಜಾಣೆ ನೀ ಏಳು ಕೋಮಲ ಕೋಕಿಲವಾಣಿ ನೀ ಏಳು ಹೇಮಮಾಣಿಕ್ಯ ನಾಗವೇಣಿಯೆ ನಮ್ಮ ಭೀಮೇಶಕೃಷ್ಣನ ನಿಜರಾಣಿ ಮಾಲಕ್ಷುಮಿ ಪಟ್ಟದರಾಣಿ ಬಾ ಹಸೆಗೆ ಕರೆದರು 3
--------------
ಹರಪನಹಳ್ಳಿಭೀಮವ್ವ