ಒಟ್ಟು 1938 ಕಡೆಗಳಲ್ಲಿ , 107 ದಾಸರು , 1583 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳವೆನ್ನಿರೆ ಮದನಗೋಪಾಲನಿಗೆ ಮಂಗಳವೆನ್ನಿರೆ ಮಾಧವಗೆ ಪ ಮಂಗಳವೆನ್ನಿರೆ ಮಾಮನೋಹರನಿಗೆ ಮಂಗಳವೆನ್ನಿರೆ ಮುರಹರಗೆ ಅ.ಪ ಭುವನಮೋಹನ ಶಾಮಲಸುಂದರಾಂಗಗೆ ಅಮಿತಪರಾಕ್ರಮ ಅಚ್ಚುತಗೆ ನವನವಲೀಲೆಯ ತೋರಿದ ದೇವಗೆ ಸುವಿನಯದಿಂದ ಶ್ರೀ ಶ್ರೀಧರಗೆ1 ಶಂಖು ಚಕ್ರಪೀತಾಂಬರಧಾರಿಗೆ ಬಿಂಕದಿಂದ ಮುರಳಿಯನೂದಿದಗೆ ಶಂಕರಾದಿ ಸುರಸೇವಿತಗೆ ನಿಷ್ಕ- ಳಂಕದಿ ಭಜಿಪರ ಪೊರೆದವಗೆ2 ಪರಿಪರಿ ವಿಧದಲಿ ಹರಿ ಸ್ಮರಣೆಯ ಮಾಡೆ ಪರಾಭವನಾಮ ಸಂವತ್ಸರದಿ ದುರಿತಗಳೆಲ್ಲವ ಪರಿಹರಿಸುತ ಕಾಯ್ವ ಸಿರಿವರ ಕಮಲನಾಭ ವಿಠ್ಠಲನಿಗೆ3
--------------
ನಿಡಗುರುಕಿ ಜೀವೂಬಾಯಿ
ಮಂಗಳಾಂಗ ಮನ್ನಿಸು ತಪ್ಪನು ರಂಗನಾಥ ರಕ್ಷಿಸೈ ತಂದೆ ಯೆನ್ನನು ಪ ಅಮಿತ ಕಮಲ ರವಿತನಾಗದ ಮನುಜನೇಕೆ1 ಕಣ್ಣು ಇಲ್ಲದ ರೂಪು ಯಾಕೆ | ರಂಗನಾಥ ಹೊನ್ನು ಇಲ್ಲದ ಬಾಳು ಯಾತಕೆ | ಮುನ್ನ ಮೂಗು ಇಲ್ಲದ ಮೊಗವು ಮಣ್ಣು ತಿಂದು ಹೋದರೇನು ಅಣ್ಣ ನಿನ್ನ ಭಕುತಿ ಇಲ್ಲದ ಸಣ್ಣ ಮನುಜ ಸತ್ತರೇನು 2 ದಾನವಿಲ್ಲದ ಧನವಿದೇತಕೆ | ರಂಗನಾಥ ಜ್ಞಾನವಿಲ್ಲದ ವಿದ್ಯೆ ಯಾತಕೆ ಆಣೆಯಿಲ್ಲದ ಅರಸು ತಾನು ಅಡವಿಪಾಲು ಆದರೇನು ದೀನಬಂಧು ನಿನ್ನ ನಂಬದ ಮಾನಹೀನ ಮನುಜನೇಕೆ 3 ಮಕ್ಕಳಿಲ್ಲದ ಮನೆಯು ಯಾತಕೆ | ರಂಗನಾಥ ಅಕ್ಕರಿಲ್ಲದ ಊಟ ಯಾತಕೆ ಸೊಕ್ಕಿ ನಡೆವ ಬಂಟನೇಕೆ ಮಿಕ್ಕು ಮೀರ್ವ ಶಿಷ್ಯನೇಕೆ ರಕ್ಕಸಾರಿ ನಿನ್ನ ಸೇರದ ಸೊಕ್ಕು ನರ ಜನ್ಮವೇಕೆ ? 4 ಕಾಕು ಮಾಡಿಯೆ ವೈಕುಂಠ ನಗರದೊಡೆಯ ನಾರಸಿಂಹ ಏಕಭಕ್ತಿಯಿಂದಲಿರುವೆ ಏಕೆ ಕೈಯ ಬಿಡುವೆ ದೊರೆಯೆ 5
--------------
ಅನ್ಯದಾಸರು
ಮಣಿಹಾರಮಂ ತೊರೆದು ದನುಜೇಶನಾಕರುಳ - ನಣಿಯ ರದಿ ಧರಿಸಿರ್ಪನÀನಘನಿವಗೆ ವರರತ್ನಹಾರಮಂ ಹರಿಸದಿಂದಳವಡಿಪೆ ನರಹರಿಯ ಕಂಧರಂ ಮೆರೆಯಲರರೆ ಜಪಸರವನಾಂತೆಸೆವ ಸುಪವಿತ್ರಗಿಂದಿಡುವೆ ವಿಪುಲ ಮುಕ್ತಾಸರವನುಪಮೆಮೀರೆ ಕಮನೀಯಗಾತ್ರಂಗೆ ರಮಣೀಯ ಶ್ಯಾಮಲಗೆ ಕಮಲಮಾಲೆಯನಲಂಕರಿಪೆನಿಂದು ಧುರಧೀರನಂ ವೀರ ಶೌರ್ಯನಿಧಿಯ ಸುರಾಳಿ ಸಮ್ಮೋದಕರನ ಶರಣಾಗತರಕ್ಷನ ನಮಿತಬಲನ ವರಶೇಷಗಿರೀಶನಂ ನಮಿಪೆನಿನ್ನು
--------------
ನಂಜನಗೂಡು ತಿರುಮಲಾಂಬಾ
ಮದನ ಜನಕ ಹೃದಯ ನಿಲಯಕೆ ಮುರವÀುಥನ ಪ ಆದರದಲಿ ಉಪಚರಿಸುವೆನು ಕಲಿ ಬಾಧೆಯ ಪರಿಹರಿಸೋ ಮಧುಸೂದನ ಅ.ಪ ಪೂರ್ಣಸದಾಗಣಿತೇಡ್ಯಗುಣಾನುಭ ವೈಕಶರೀರ ಕಲುಷದೂರ ಚೀರ್ಣ ಪುಣ್ಯಚಯದಿಂದ ಕರೆಯಲು ತ್ರಾಣವಿಹುದು ಮನ್ಮನದಲಿ ನೆಲಿಸೊ 1 ಶಮದಮಗಳನುಗ್ರಹಿಸುತ ಸಜ್ಜನ ಸಮಿತಿಯ ಸಹವಾಸವ ನೀಡೋ ಅಮಿತಪ್ರಮತಿಗಳ ಶಾಸ್ತ್ರಪ್ರವಚನದಿ ಮಮತೆಯ ಸ್ಥಿರಪಡಿಸೊ ಶೃತಿಪತೇ 2 ಗುರುಕರಣವು ನಿನ್ನನರಿಯಲು ಕಾರಣ ಶರಣಂಭವ ಸಂತತ ಹಿರಿಯರು ಮಾಡಿದ ಸಾಧನಗಳಿಗಿದು ಹಿರಿದಾಗುವುದೇ ಪ್ರಣತ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಮದನ ಜನಕ ಮುದ್ದುರಂಗ ನಿತ್ಯ ಹೃದಯದೊಳಗೆ ಭಜಿಸುವರಂತರಂಗ ಪ ಅಜ ಭವನ ಮಿತ್ರ ಸರ್ವೇಶ ನಿನ್ನ ಕ್ಲೇಶ ನಾಶ ಮಜಡ ನೆನಗೆ ನೀ ನುಡಿಸ ಕೊಡು ಸುಜನ ಸೇವಿತ ನರಹರಿ ಲಕ್ಷ್ಮೀಶ 1 ದಯವ ನೀ ಎನ್ನೊಳುಬೀರೋ ನಿನ್ನ ಸ್ವಯಂ ಮೂಲ ನಿಜದ ಮೂರ್ತಿಯನೀಗ ತೊರೋ ಭಯಗಳನೆಲ್ಲವ ತೋರೋ ಚೆಲ್ವ ನಯವಿದ ಸರ್ವ ಸದ್ಗುಣ ನಿಧಿ ಬಾರೋ 2 ಪರಮ ಪಾವನಮೂರ್ತಿ ನಿನ್ನ ಸಿರಿ ಚರಣ ಕೆರಗುವೆ ನಾ ಮುನ್ನ ಕರುಣದಿ ಸಲಹೋ ನೀ ಎನ್ನ ನಿತ್ಯ ಪೊರೆವ ಚಿಪ್ಪಳಿ ಗೋಪೀವರ ಸುಪ್ರಸನ್ನ 3
--------------
ಕವಿ ಪರಮದೇವದಾಸರು
ಮದನನಯ್ಯಾ ಮೋಹನ್ನರಾಯಾ ನೀ ಬಾರೋ |ಹದನದಿಂದ ಹೇಳಿದಳು ಮದಗಜಗಾಮಿನಿ ಪ ಕಾಣದೆ ನಿಲ್ಲಲಾರಳು | ಕನಸನಾದರೂ ಕಾಣಳು |ಗಾಢ ನಿದ್ರೆಯನರಿಯಳು | ಬೆಳಗಾದರೂ ಮರೆಯಳು 1 ನಿನ್ನ ಮೊನ್ನ ಬರದೆ ಹೋಗಿ | ಭಿನ್ನನುಸರದೆ ಬೆರಗಿ |ಸೊನ್ನೆಗಳ ಮಿತವೆಂದು | ಎನ್ನ ಕೂಡನಾಡಿದಳು 2 ಆವ ಮೋಹದ ಮಡದಿ | ನಿನ್ನಗಲಿಸಿದ್ದಾಳು |ರುಕ್ಮಭೂಷಾ ಆವಳಾಣಿಗಳ | ನಿನಗೆ ಹಾಕಿ ಹಿಡಿದಾಳು 3
--------------
ರುಕ್ಮಾಂಗದರು
ಮಂದಮತಿ ನಾನಯ್ಯ ಮಂಗಳಾಂಗಾ ಒಂದಾದರೂ ಗತಿ ಧರ್ಮ ಚಿಂತಿಸಲಿಲ್ಲಾ ಪ ಜಪತಪಗಳರಿಯೆ ಉಪವಾಸಗಳರಿಯೆ ಕೃಪೆ ಮಾಡಲರಿಯೇ ಪರಿಜನಗಳಲ್ಲಿ ಕುಪಿತವನು ಬಿಡಲರಿಯೆ ಅಪರಿಮಿತವಾಗಿದ್ದ ಅಪರಾಧಗಳ ಮಾಡಿ ತಪಿಸುವೆನು ಭವದೊಳಗೆ 1 ಯಾತ್ರೆ ಮಾಡಲರಿಯೆ ತೀರ್ಥ ಮೀಯಲರಿಯೆ ಗಾತ್ರದಂಡಣಿಯ ಮಾಡಲರಿಯೆ ಗಾತ್ರ ಲಘು ನೋಡಿ ಸ ತ್ಪಾತ್ರರನು ಭಜಿಸದೆ ವ್ಯರ್ಥ ಕಾಲವ ಕಳೆವ2 ಅನ್ನದಾನವರಿಯೆ ಮನ್ನಣೆ ಮಾಡಲರಿಯೆ ಚನ್ನಾಗಿ ಬಂಧುಗಳು ಪೊರಿಯಲರಿಯೆ ಎನ್ನ ಮನದೊಡಿಯ ಶ್ರೀ ವಿಜಯವಿಠ್ಠಲರೇಯಾ ನಿನ್ನ ಭಕುತಿ ಒಮ್ಮೆ ಪಡಿಯಲರಿಯೆ 3
--------------
ವಿಜಯದಾಸ
ಮಂದಾಸಲ ರಗಳೆ ರಾಮ ಪದಾಂಬುಜ ಭೃಂಗಗೆ ಜಯ ಜಯ ತಾಮಸ ಕುರುಕುಲ ಧ್ವಂಸಕ ಜಯ ಜಯ ಶ್ರೀ ಮತ್ಪೂರ್ಣ ಪ್ರಜ್ಞಗೆ ಜಯ ಜಯ 1 ವಾಸುದೇವ ಸುನಾಮಕ ಜಯ ಜಯ ದೋಷ ಜ್ಞಾನ ವಿನಾಶಕ ಜಯ ಜಯ ಸೂರ್ಯ ವ್ಯಾಸ ಸುಭೋಧೆಯ ದರ್ಪಣ ಜಯ ಜಯ 2 ಶುಭಗುಣಲಕ್ಷಣ ಶೋಭಿತ ಜಯ ಜಯ ಭವ ಮೋಚಕ ಜಯ ಜಯ ಇಭವರದಾಜ್ಞಾಧಾರಕ ಜಯ ಜಯ ವಿಭುಧ ಸುಖಾಂಬುಧಿ ಸೋಮನೆ ಜಯ ಜಯ3 ನಿತ್ಯ ಸದಾಗಮ ಕೋಶಗೆ ಜಯ ಜಯ ಸತ್ಯವತೀಸುತ ಪ್ರೀಯಗೆ ಜಯ ಜಯ ಸತ್ಯಾಖ್ಯಾತ ಸುಮಿತ್ರಗೆ ಜಯ ಜಯ ಸುರತರು ಜಯ ಜಯ 4 ಅಚ್ಚುತ ಪ್ರೇಕ್ಷರ ಶಿಷ್ಯಗೆ ಜಯ ಜಯ ಸ್ವಚ್ಚಗುಣಾರ್ಣವ ಋಜುಪತಿ ಜಯ ಜಯ ಕೆಚ್ಚೆದೆ ವೀರಾಗ್ರೇಸಗೆ ಜಯ ಜಯ ಪಾವಕ ಜಯ ಜಯ 5 ಶೃತಿತತಿ ವಿಮಲ ಸುಭೋದಕ ಜಯ ಜಯ ರತಿಪತಿ ಪಿತವರ ದೂತಗೆ ಜಯ ಜಯ ಕ್ಷಿತಿಧರ ದ್ವಿಜಶಿವವಂದಿತ ಜಯ ಜಯ 6 “ಶ್ರೀ ಕೃಷ್ಣವಿಠಲ” ಸದಾರತ ಜಯ ಜಯ ಲೋಕ ಹಿತಪ್ರದ ನಿಜಗುಣ ಜಯ ಜಯ ಶ್ರೀಕರ ಶುಭಕರ ಜಯಕರ ಜಯ ಜಯ ಆಕಮಲಾಸುತ ರಯೀಪತಿ ಜಯ ಜಯ 7
--------------
ಕೃಷ್ಣವಿಠಲದಾಸರು
ಮಧುಪುರದ ವಿಘ್ನೇಶ ದೇವ ಜಗದೀಶ ಫ ಪುರುಷಪಿತನಮಿತ ಕಮಲ ಗಿರಿಜಾತೆಯಣುಗಾದಿತ್ಯ ಕೋಟಿ ಪ್ರಕಾಶ ಕರಿವದನ ಕರುಣನಿಧಿ ಸಮುದ್ರ ಬಹುಕ್ಷಿಪ್ರ 1 ಭರದಿಂದ ರಕ್ಕಸ ಪುರವನು ದಹನಮಾಡೆ ಹರ ಮೊದಲು ನಿಮ್ಮನು ಅರ್ಚಿಸಿ ಮೆಚ್ಚಿಸಿ ಹರಿ ವಿರಂಚಾದಿಗಳೆಲ್ಲ ಜಯ ಜಯವೆನಲು ವರವಿತ್ತು ಮೆರೆದೆ ಗಣನಾಥ ವಿಖ್ಯಾತ 2 ಅರರೆ ನಿಮ್ಮ ಮಹಿಮೆಯನು ಪೊಗಳಲೆನಗಳವಲ್ಲ ಧರಣಿಯ ಪೊತ್ತಿಹ ಶೇಷಗರಿದು ಹರನಸುಕುಮಾರ ಸಕಲಾಗಮಕೆ ಸಾಕಾರ ಧರೆಯೋಳ್ ಮಧುಪರ ವಿಘ್ನೇಶ 3
--------------
ಕವಿ ಪರಮದೇವದಾಸರು
ಮಧ್ವಾಂತರ್ಗತ ವೇದವ್ಯಾಸ ಕಾಯೊ ಶುದ್ಧ ಮೂರುತಿಯೆ ಸರ್ವೇಶ ಪ. ಶ್ರದ್ಧೆಯಿಂದಲಿ ನಿನ್ನ ಭಜಿಸುವ ಭಕ್ತರಿಗೆಬುದ್ಧ್ಯಾದಿಗಳ ಕೊಟ್ಟುದ್ಧರಿಸೊ ದೇವರದೇವಅ.ಪ. ದ್ವಾಪರದಲಿ ಒಬ್ಬ ಮುನಿಪ ತನ್ನಕೋಪದಿಂದಲಿ ಕೊಡಲು ಶಾಪಸ್ಥಾಪಿಸಲು ಜ್ಞಾನ ಲೋಪಅಪಾರ ತತ್ವಸ್ವರೂಪಶ್ರೀಪತಿಯೆ ಕಾಯೆಂದು ಮೊರೆಯಿಡೆಪಾಪ ವಿರಹಿತÀಳಾದ ಯಮುನೆಯದ್ವೀಪದಲಿ ಅಂಬಿಗರ ಹೆಣ್ಣಿನರೂಪಕ್ಕೊಲಿದವಳಲ್ಲಿ ಜನಿಸಿದೆ 1 ಸೂತ್ರ ಪುರಾಣ ರಚಿಸಿವಾದಗಳ ನಿರ್ವಾದ ಮಾಡಿಸಾಧುವಂದಿತ ಬಾದರಾಯಣ 2 ಸುಮತಿಗಳಿಗೆ ನೀ ಬೋಧಿಸಿದೆ ಮಿಕ್ಕಕುಮತಗಳನ್ನು ಛೇದಿಸಿದೆ ಕ್ರಿಮಿಯಿಂದ ರಾಜ್ಯವಾಳಿಸಿದೆ ಜಗತ್‍ಸ್ವಾಮಿ ನೀನೆಂದು ತೋರಿಸಿದೆವಿಮಲರೂಪನೆ ಕಮಲನಾಭನೆರಮೆಯ ಅರಸನೆ ರಮ್ಯ ಚರಿತನೆಮಮತೆಯಲಿ ಕೊಡು ಕಾಮಿತಾರ್ಥವನಮಿಸುವೆನು ಹಯವದನಮೂರುತಿ3
--------------
ವಾದಿರಾಜ
ಮನ ಒಲಿದೆನ್ನನು | ಪಾಲಿಸು ಜನನಿ ಪ. ಘನ ವಿದ್ಯಾದಾಯಿನಿ | ಜಲಜಾಂಬಕಿ ನೀ ಅ.ಪ ವಿದ್ಯಾವಿದಾತೆ ಬುದ್ಧಿಪ್ರದಾತೆ || ಶ್ರದ್ಧೆಯ ಬೇಡುವೆ | ಸದ್ಗುಣಭರಿತೆ 1 ಗಾನವಿಲೋಲೆ | ವಿನಮಿತಪಾಲೆ || ಜ್ಞಾನಪ್ರದಾಯಿನಿ | ಘನಗುಣಶೀಲೆ 2 ಆಡುವ ನುಡಿ ಕೈ | ಗೂಡುವ ತೆರದಲಿ || ಮಾಡೌ ಬೇಡುವೆ | ನಡಿಗಳಿಗೆರಗಿ 3 ಮನ್ಮನದಿಷ್ಟವ | ನಿತ್ತೆನ್ನ ಪೊರೆ ನೀ || ಬೊಮ್ಮನ ರಾಣಿ | ನಿತ್ಯಕಲ್ಯಾಣಿ4
--------------
ವೆಂಕಟ್‍ರಾವ್
ಮನದಣಿ ನೋಡಿದೆನೊ ಸನಕಾದಿನಮಿತ ಮನದಣಿ ನೋಡಿದೆನು ದೃಢದಿ ಪ ನಿನಗೆ ಸರಿಯಿಲ್ಲ ಭುವನತ್ರಯದಿ ಮನಕೆ ಬೇಸರವಿಲ್ಲದನುದಿನ ತನುವನಪ್ಪಿಹಿಡಿದು ಭಕುತರ ಮನದ ವರಗಳನಡೆಸಿ ಸಲಹುವ ಕನಿಕರಾರ್ಣವ ವಿಠಲ ನಿನ್ನಡಿ ಅ.ಪ ಒಂದು ದಿನ ಆ ತ್ರೇತಾಯುಗದಲ್ಲಿ ಋಷಿಗಡಣ ಕೂಡಿ ಬಂದು ನಿಮ್ಮಯ ಚರಣಸನ್ನಿಧಿಲಿ ಭಯಭಕುತಿಯಿಂದ ವಂದಿಸಾಲಿಂಗನೆಯ ಕೋರುತಲಿ ಅಭಯ ಬೇಡುತಲಿ ನಿಂದ ಋಷಿಗಳಿಗ್ಹಲವು ಪರಿಯಲಿ ತಂದೆ ನೀ ಸಮ್ಮತವ ಪೇಳಿ ಬಂದು ದ್ವಾಪರಾಂತ್ಯಯುಗದಲಿ ಒಂದು ಅರಲವ ಅಗಲದಲೆ ನಿಮ್ಮ ಪೊಂದಿ ಆಲಿಂಗನವನೀಯುವೆ ನೆಂದು ವರವಿತ್ತ ವಿಠಲ ನಿಮ್ಮಡಿ 1 ಅಪಾರಮಹಿಮಜಾಲ ಅವತರಿತಿಸಿದಿ ದ್ವಾಪರಯುಗದಿ ಬಾಲಕೃಷ್ಣ ನೀನಾಗಿ ಶ್ರೀಪತಿ ಸುಜನಪಾಲ ದನುಜಕುಲಕಾಲ ಪಾಪಸಂಹಿತ ಅಮಿತಲೀಲ ಶಾಪಪರಿಹಾರ ವೇಣುಲೋಲ ತಾಪಸೋತ್ತಮರಿಷ್ಟ ನೀಡಲು ಗೋಪಿಕಾಸ್ತ್ರೀಯರೆನಿಸಿ ಪುಟ್ಟಿಸಿ ಗೌಪ್ಯದಾಲಿಂಗನವನಿತ್ತ ಭೂಪ ಭೂಪತಿ ವಿಠಲ ನಿಮ್ಮಡಿ 2 ಸುಗುಣ ಸಂತರಹೃದಯಸಂಚಾರ ದಾಸಾನುದಾಸರು ಪೊಗಳಿ ಭಜಿಸುವ ಗಾನಪ್ರಿಯಕರ ಮೌಲಕೌಸ್ತುಭ ಜಗದಜೀವನ ಪಾವನಾಕಾರ ಪರಮಸುಖಕರ ಅಗಣಿತಾಗಣಿತಮಹಿಮಭರಿತ ಪೊಗಳಲಳವೆ ನಿಮ್ಮ ಚರಿತ ತ್ರಿ ಜಗನಾಟಕ ಸುಲಭದಲಿ ನೀ ಅಗಲದನವರತಸಮ ಈ ಕಲಿ ಯುಗದಿ ಭಕ್ತರಿಗಾಲಿಂಗನೀಯುವ ನಿಗಮಗೋಚರ ವಿಠಲ ನಿನ್ನಡಿ 3 ಮಂದಹಾಸ ಮಂದರೋದ್ಧಾರ ಸುರಕಲ್ಪಧೇನು ಇಂದಿರೆಯರ ಪ್ರಾಣ ಮನೋಹರ ಹೇ ದೀನಬಂಧು ಸುಂದರಾಂಗ ಸುಗುಣಗುಣಹಾರ ಬಂಧನಿವಾರ ಸಿಂಧುಕಲಕಿದಪಾರ ಶೂರ ಕುಂದದೆ ಮೊರೆಕಾಯ್ದ ಸುರರ ಹೊಂದಿಭಜಿಸುವ ಭಕುತಜನಕಾ ನಂದ ನೀಡುತ ಚಂದನೋಡುತ ಸಿಂಧುನಿಲಯ ಮುಕ್ಕುಂದ ಮುರಹರಿ ಅಂದಮಾದ ವಿಠಲ ನಿಮ್ಮಡಿ 4 ಸುತ್ತಮುತ್ತ ಭಕ್ತರಾಲಯವು ಹಿಂಭಾಗದಲ್ಲಿ ಸತ್ಯಭಾಮ ರುಕ್ಮಿಣೀಕಾಂತನು ಮುಂಭಾಗದಲಿ ನಿತ್ಯನಿರ್ಮಲ ಚಂದ್ರಭಾಗಿನಿಯು ನಡುಮಧ್ಯ ರಂಗವು ಭಕ್ತಗೊಲಿದು ಭೂವೈಕುಂಠವ ಸತ್ಯವೆನಿಸಿ ಮೀರಿ ಮೆರೆವ ಭಕ್ತಜನರ ಕೈಯೆತ್ತಿ ಸಾರುವ ಪೃಥ್ವಿಗಧಿಕ ಮಹ ಪಂಢರಾಪುರ ಮುಕ್ತಿ ತವರೆಂಬ ಮಂದಿರದಲ್ಲಿ ಕರ್ತುಶ್ರೀರಾಮ ವಿಠಲ ನಿನ್ನಡಿ5
--------------
ರಾಮದಾಸರು
ಮನಮೋಹಮಂದಿರಾ ಶ್ರೀವರ ಘನಮಣಿ ತಾ ಹಾರಾ ಪ ಮಾಂಗಿರಿಧಾಮಾ ಮಂಗಳನಾಮಾ ಶರಣಾಗತ ಪ್ರೇಮಾ ಅ.ಪ ದಿವಿಜನಿಕರ ಪರಿವಾರಾ ದಯಾಪೂರಾ ಭುವನೇಶ್ವರ ಶೂರಾ ಆನಂದಲೀಲಾ ಆಗಮಮೂಲಾ ತುಳಸೀದಳ ವನಮಾಲಾ 1 ಭಾಗವತಪ್ರಿಯ ಸಾಗರತನಯಾ ಮನರಂಜನ ಸದಯಾ ಮುರಳೀಧೃತಕರ ಕುಂಜವಿಹಾರಾ ರಾಧಾಮನ ಮಣಿಹಾರಾ 2 ನಂದನ ಕಂದಾ ಜಗದಾನಂದ ಬೃಂದಾವನಾನಂದ ಗೋಪಿಕಾ ಜಾಲ | ಪ್ರೇಮಿತ ಬಾಲಾ ಬೃಂದಾವನ ಲೋಲಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮನವೆ ಎಲೆ ಮನವೆ ನೀನು ಯೋಚಿಸಿ ಕೆಡುವುದು ಅನುಚಿತವಲ್ಲೆ ಪ ನೀ ಮನನಮಾಡಿದ ಸಂಸಾರಿರದು ಕಾನನದ ಬೆಳದಿಂಗಳು ಇದು ಪರಿ ತಿಳಿದು ಹೀನಯೋಚನೆ ಬಿಟ್ಟು ಧ್ಯಾನಕವಚ ತೊಟ್ಟು ಜ್ಞಾನವೆಂಬಾಯುಧಪಾಣಿಯಾಗೆಲೊ ಬೇಗ 1 ಈ ದೇಹವೆಂಬುವ ಕಾಂತಾರ್ಹೊಕ್ಕು ಉಪಾ ಯುದ್ಹುಲಿಗಳ ತರಿದ್ಹಾಕು ಮಹಮಾಯ ಕೋಣಗಳೆಂಟು ನೂಕು ದಾಯಾದ್ಯೈವರ ಕೊಂದು ಜೀವಘಾತಕರಾದ ಮೂವರಂ ಭಂಜಿಸಿ ದ್ವಯಮಾರ್ಗ ಗೆಲಿಯೆಲೊ 2 ಕಂಟಕ ಬದಿಗಿಟ್ಟು ಬಹ ಆರೊಂದು ನದಿಗಳ ದಾಂಟು ಭೋರ್ಗರೆವ ಸರ್ಪನ ಹೆಡೆ ಮೆಟ್ಟು ಮಾರಾರಿ ವಿನಮಿತ ಧೀರ ಶ್ರೀರಾಮಪಾದ ವಾರಿಜಕ್ಕೆರಗಿ ಗಂಭೀರ ಸುಖದಿ ಮೆರಿ 3
--------------
ರಾಮದಾಸರು
ಮನವೆ ಮಾನ್ಯನ ಮನ್ನಿಸು ಶ್ರೀವ್ಯಾಸ ಮುನಿಗೆ ಒಲಿದಿಹ ವಾಯು ನಾ ಪ ಪ್ರತಿ ಸಂಚರ ಕಾಲದಿ ಅವಿಲೀನ ಮತಿಯುಳ್ಳ ದೇವನಿವನು ಸುತ ಜಯಾದೇವಿಗೀತ ತನ್ನ ಸರಿ ಚತುರಾಸ್ಯ ದೇಹದೊಳಿಹ 1 ಚತುರವಿಂಶತಿ ತತ್ವಕೆ ಅಭಿಮಾನಿ ಮತಿಯುಳ್ಳ ಸೂತ್ರನಾಮ ಹರಿರೂಪ ಮಿತಿ ಇಲ್ಲದಲೆ ಕಾಂಬನೊ 2 ಯತಿಯಾಗಿ ಬಂದು ಹರಿಯ ಕಾರ್ಯಗಳ ಕೃತಿಸಿ ತಾ ನಿಂದು ವ್ಯಾಸ ವ್ರತಿಯಿಂದ ಮಾಡಿಸಿದ ಈತಗೆ ಪತಿ ವಾಸುದೇವವಿಠಲ3
--------------
ವ್ಯಾಸತತ್ವಜ್ಞದಾಸರು