ಒಟ್ಟು 5214 ಕಡೆಗಳಲ್ಲಿ , 126 ದಾಸರು , 3313 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಗಳ ನೆರೆ ನಂಬಿರೊ ಪರಿಪಾಲಿಪ ಗುರುಗಳ ನೆರೆ ನಂಬಿರೊ ಪ ಪರಿ ಅಘದೊಳು ತೊಳಲುವ ಮನು ಜರ ಬವಣೆಗಳರಿತು ಸಜ್ಜನರ ಪಾಲಿಸುವಂಥ ಅ.ಪ ಚಿಂತೆಯೆಲ್ಲವು ನೀಗಿಸಿ ಮನಸಿಗೆ ಬಹು ಸಂತೋಷವನು ಸೂಚಿಸಿ ಪಾದ ಚಿಂತನೆ ಮಾಡುವ ಅಂತರಂಗದ ಭಕ್ತರೊಡನೆ ಮೆರೆವ ದಿವ್ಯ1 ಬೆಟ್ಟದೊಡೆಯನ ಪೂಜಿಸಿ ಭಕುತರ ಮನ ದಿಷ್ಟಗಳನು ಸಲ್ಲಿಸಿ ಸೃಷ್ಟಿಕರ್ತನ ಗುಣ ಸ್ವಚ್ಛ ತಿಳಿದು ಸರ್ವ ಕಷ್ಟಗಳ್ಹರಿಸಿ ಸಂತುಷ್ಟಿಪಡಿಸುವಂಥ 2 ಸರಿಯುಂಟೆ ಧರೆಯೊಳಗೆ ಗುರುಗಳ ಪೋಲ್ವ ನರರುಂಟೆ ಭುವಿಯೊಳಗೆ ಸಿರಿ ಉರಗಾದ್ರಿವಸ ವಿಠ್ಠಲದಾಸರ ಕೂಡಿ ವರಗಳ ಕೊಡುವಂಥ ಪರಮ ಸಾತ್ವಿಕರಾದ 3 ಪರಮ ಮಂಗಳ ಮೂರ್ತಿಯ ರೂಪವ ಹಗ ಲಿರುಳು ಧ್ಯಾನವ ಮಾಳ್ಪರ ಪರಮ ಗುರುಗಳ ಪರಮ ಪ್ರೀತಿಯ ಪಡೆದಂಥ ಉರಗಾದ್ರಿವಾಸ ವಿಠ್ಠಲದಾಸರೆಂಬಂಥ4 ಕರುಣದಿ ಸಲಹುವರು ಭಕ್ತರನೆಲ್ಲ ಕರೆದು ಬೋಧನೆ ಮಾಳ್ಪರು ವರ ಕಮಲನಾಭ ವಿಠ್ಠಲನ ಭಜಿಸುತ್ತ ಸಿರಿ ಶ್ರೀನಿವಾಸನ ನಿರುತ ಪೂಜಿಸುವಂಥ 5
--------------
ನಿಡಗುರುಕಿ ಜೀವೂಬಾಯಿ
ಗುರುಚರಣ ಪೂಜೆಯನು 'ರಚಿಸುವೆನೀಗಪರಮಾತ್ಮನೆಂದೆಂಬ ಸ್ಥಿರಮನದಿ ಬೇಗ ಪವರಮಂತ್ರರೂಪದಲಿ ಗುರು ತಾನು ದಯದಿಂದಭರದಿಂದ ಹೃದಯಮಂದಿರಕೆ ಬರಲಾಗಿಗುರುತರದಹಂಕಾರಶಯನದಿಂ ಮುರಿದೆದ್ದುಬರುವೆನಿದಿರಾಗಿ ಕರೆತರುವೆನೊಡಗೂಡಿ 1ಬ್ರಹ್ಮಕಮಲದಲೊಡೆದು ಜ್ಞಾನನಾಳದಿ ಕೂಡಿರಮ್ಯದಳವೆಂಟುಳ್ಳ ಕಮಲ ಮಧ್ಯದಲಿನಮ್ಮ ಗುರುಮೂರ್ತಿಯನು ಸಂಭ್ರಮದಿ ಕುಳ್ಳಿರಿಸಿವೊಮ್ಮನದಲಘ್ರ್ಯಾದಿಗಳನು ಭಕುತಿಯಲಿತ್ತು 2ಕರಗಳೆರಡುಳ್ಳ ಹರಿ ನಯನವೆರಡರ ಹರನುವರಮುಖ'ದೊಂದರಲಿ ವಾಗೀಶನೆನಿಸಿಪರಿಹರಿಸಿ ಗುಣಗಳನು ಪರಬ್ರಹ್ಮವಾಗಿರುವಗುರುವರನ ಮೂರ್ತಿಯನು ನೆರೆ ನೋಡಿ ಮನದೊಳಗೆ 3ಅ'ವೇಕವಂ ಪರಿದ ಗುರುಪದಕೆ ಪಾದ್ಯವನುಸು'ವೇಕವೆಂಬಘ್ರ್ಯವನು ಸ'ತ ಕೊಟ್ಟುಅ'ವೇಕದಿಂ ಬಂದ ಜೀವಭಾವವ ಬಿಡಿಸಿಕ'ವರನು ನೀನೆಂಬ ಶುದ್ಧಾಚಮನದಿಂದ 4ಪರಮಪಾವನರೂಪ ಸ್ನಾನದುಪಚಾರದಲಿಎರಡಿಲ್ಲವೆಂದೆಂಬ ಶುಭ್ರ ವಸ್ತ್ರದಲಿಬರೆದು ತಾ ಜೀವರೊಳು ಸೂತ್ರಾತ್ಮನಾದಡೆಯು ಬೆರೆಯದಿಹನೆಂತೆಂಬ ಸೂತ್ರೋಪಚಾರದಲಿ 5ಶರಣಾಗತರ ಕಾಯ್ವ ಗುಣಗಣಗಳಾಭರಣಪರಿಪರಿಯ ಕಾಮಗಳ ಹೊದ್ದದನುಲೇಪನೆರೆ ನಿವಾರಿತವಾದ ವಾಸನಾಕ್ಷಯ ಪುಷ್ಪಸರಗಳೀ ಪರಿಭಾವನೆಗಳೆಂಬ ಭಕ್ತಿಯಲಿ 6ಜಡ ದುಃಖ ಪುಸಿಗಳಿಗೆ ಬೇರೆಂಬ ಧೂಪದಲಿಎಡೆಬಿಡದ ಜ್ಯೋತಿಃಸ್ವರೂಪ ದೀಪದಲಿಬಿಡದ ಸುಖದನುಭವದ ದಿವ್ಯ ನೈವೇದ್ಯದಲಿಜಡಕೆ ಮಂಗಳ'ತ್ತ ಬಗೆಯ ತಾಂಬೂಲದಲಿ 7ನಿತ್ಯ ಪ್ರಕಾಶದಲಿ ಪೊಳೆವ ಮಂಗಳ ದೀಪಸತ್ಯದಾಧಾರದಲಿ ಸುಳಿವ ಕರಣಗಳಮತ್ತೆ ಸತ್ಯದೊಳಿರಿಸುತಿಹ ಮಂತ್ರಪುಷ್ಪದಲಿಸುತ್ತುವರಿದಿಹ ವಸ್ತುವೆಂದು ಬಲವಂದು 8ಘನ ಮ'ಮನಂಘ್ರಿಯಲಿ ತನು ಮನಾದಿಗಳನ್ನುನಿನಗೆ ಸಂದುದೆನುತ್ತಲಿತ್ತು ನ'ುಸುತ್ತಾಕನಕಮಯವಾದ ಶ್ರೀ ತಿರುಪತಿಯ ವೆಂಕಟನತನುರೂಪ ನೀಲಕಂಠಾರ್ಯರನು ಬಿಡದೆ 9ಓಂ ಸನಾತನಾಯ ನಮಃ
--------------
ತಿಮ್ಮಪ್ಪದಾಸರು
ಗುರುಜ್ಞಾನದ ಕೀಲು ಬ್ಯಾರ್ಯಾದ ನೋಡಿ ಬಲು ಮೇಲು ಧ್ರುವ ಮೇಲಾಗಿ ಸ್ವಸುಖ ಸಾಧನ ಚಾಲ್ವರುತದ್ಯಾತಕ ತಾ ಜನ ತಿಳಕೋಬಾರದ ಈ ನಿಜಖೂನ ಸುಲಲಿತ ನಿಜಧನ 1 ಮೂಲೊಕದಲ್ಯವ ಪೂರ್ಣಪವಿತ್ರ ನೆಲೆಗೊಂಡಿ ಹ್ಯ ಘನ ಚರಿತ್ರ ಬಲದಿಹ್ಯ ಬಾಹ್ಯಾಂತ್ರ 2 ದೀನಮಹಿಪತಿ ಗುರುದೇವದೇವೇಶ ಖೂನವಿಡವದು ಬಲುಸಾಯಾಸ ಮುನಿಜನರುಲ್ಹಾಸ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುದೈವದೊಲವೆÀನಗೆ ಬಲವೆ ಬಲವು ಏರಿ ಬಿನಗು ದೈವದ ಬಲವು ಯಾತಕೆ ಹಲವು ದ್ರುವ ಗುರುನಯನದೊಲವೆನಗೆ ನವನಿಧಾನದ ಬಲವು ಗುರುಅಭಯದೊಲುವೆ ನವಗ್ರಹದ ಒಲವು ಅನುದಿನ ಬಲವು ಸಿರಿ ಸಕಲಬಲವು 1 ಗುರು ದಯದೊಲವೆನಗೆ ತಾಯಿ ತಂದೆಯ ಬಲವು ಗುರು ಕರುಣದೊಲವೆನಗೆ ಬಾಹುಬಲವು ಗುರು ಬೋಧದೊಲವೆನಗೆ ಬಂಧುಗಳಗದ ಬಲವು ಗುರು ಧವರ್iದೊಲವೆನಗೆ ಸರ್ವ ಬಲವು 2 ಗುರು ಪ್ರಭೆದೊಲವೆನಗೆ ಅನುಭವಾಶ್ರಯ ಬಲವು ಗುರು ಙÁ್ಞನದೊಲವು ಘನÀ ದೈವ ಬಲವು ಗುರುನಾಮದೊಲವೆನಗೆ ಪಕ್ಷವಾಗಿ ಹ್ಯ ಬಲವು ತರಳ ಮಹಿಪತಿ ಸ್ವಾಮಿ ಬಲವೇ ಬಲವು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುನಿಕರÀ ಸಂಸೇವ್ಯ ಸತಿಪತಿಯ ಬಿಂಬ ಪ ಪರಮ ಪಾವನ ನಾಮ ಪಾಹಿ ಪಾಹೀ ಎನ್ನ ಅ.ಪ ಪತಿತಪಾವನ ಪರಮಗತಿ ನೀನು ಸರ್ವಸ್ವ ಸತತ ತತ್ವದ ಪಾಲಿಸು ಎನ್ನ ಶಿರದಿ ಹಿತದಿಂದ ನೆಲಸಿರಲಿ ಹರಿದಾಸ್ಯ ಕೊಟ್ಟೆನಗೆ ರತಿ ಬಿಡಿಸು ವಿಷಯದಲಿ ಮನ ನಿನ್ನ ಬಿಡದಿರಲಿ 1 ನಿನ್ನ ಕ್ರಿಯ ಗುಣರೂಪ ನಿನ್ನ ತಿಳಿಯದೆ ನಡೆದೆ ಘನ್ನಭಾವವ ನೀಡು ಪೂರ್ಣದಯದಿ ಅನ್ಯವೆಂದಿಗು ಒಲ್ಲೆ ಅನ್ನನೀಯನಗಾಗು ಪೂರ್ಣಪ್ರಜ್ಞರ ದೈವ ಪನ್ನಗಾದ್ರಿನಿಲಯ 2 ಲಕ್ಷ್ಮೀನಿಲಯ ಜಯೇಶವಿಠಲನೆ ವಿಧಿವಂದ್ಯ ಲಕ್ಷ್ಯನಿನ್ನಲಿ ನೆಲಸು ಸತತ ಬಿಡದೆ ಪೃಷ್ಯೇಶ ತವ ಕರುಣ ಬಂದು ಎನ್ನೊಳು ಬೀಳೆ ಭವ ಹಿಂಗಿ ಮೋಕ್ಷಸುಖ ಕರಗತವೊ 3
--------------
ಜಯೇಶವಿಠಲ
ಗುರುಪರಮ ಸ್ವರೂಪ ಧ್ರುವ ಇಡದು ತುಂಬೇದ ನೋಡಿ ಎಡಬಲ ಪೂರ್ಣ ಬಿಡದೆ ಸೂಸುತಲ್ಯದೆ ಜಡಿದು ನಿಧಾನ 1 ಸಂಧಿಸಿಹದು ನೋಡಿ ಹಿಂದೆಮುಂದೆಲ್ಲ ಒಂದು ಮನದಿ ನೋಡಿ ಬಂದು ನೀವೆಲ್ಲ 2 ಬೆಳದುಕೊಂಬುವಂತೆ ಹೊಳೆಯುತವಲ್ಲ ಸುಳುಹು ಶ್ರೀ ಕೃಷ್ಣನ ತಿಳುವವರಿಲ್ಲ 3 ಕಣ್ಣುಗೆಟ್ಟಿರಬ್ಯಾಡಿ ಕಾಣದೆ ಖೂನ ತ ನ್ನೊಳಗದೆ ನೋಡಿ ಸಾನ್ನಿಧ್ಯಪೂರ್ಣ 4 ಭಾಸುತಲ್ಯದೆ ಭಾಸ್ಕರಕೋಟಿ ತೇಜ ದಾಸ ಮಹಿಪತಿ ಪ್ರಾಣದೊಡಿಯ ಸಹಜ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುಭಕ್ತನೆ ಭಕ್ತ ಮೂರುಗುಣಕೆ ತಾ ವಿರಕ್ತ ಧ್ರುವ ನಾದಬಿಂದು ಕಳೆಯು ಭೇದಿಸಿದವಗ್ಯಾತರ ಚಳಿಯು ಆದಿತತ್ವದ ಕಳೆಯು ಎದುರಿಟ್ಟು ದಾವನ ಬಳೆಯು 1 ಆಶಾಪಾಶಕೆ ಸಿಲ್ಕಿ ಮೋಸಹೋಗನು ಎಂದಿಗೆ ಹೋಕ ವಾಸುದೇವನ ಸಖ ಭಾಸುತಿಹುದು ಆವಾಗನೇಕ 2 ಅಲ್ಪನಲ್ಲವೆ ತಾನು ಕಲ್ಪತರು ಕಾಮಧೇನು ಕಲ್ಪನೇಕರಹಿತನು ನಿಲುಕಡೆ ಕಂಡಿಹ್ಯ ನೆಲೆನಿಭನು 3 ಯೋಗಿ ನಾ ನೀನೆಂಬುದು ನುಡಿಯಲಿ ತ್ಯಾಗಿ ಭೋಗಿ ಜನನ ಮರಣ ಕಳೆದಿಹ ನೀಗಿ4 ಅಮೃತ ಸ್ವಾದ ನೀಡುವ ಭಯ ನಿಜವಾದ ಬೋಧ ಪಾದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುರಾಘವೇಂದ್ರ ಶರಣರ ಸುರ ತರುವೆ ಕರುಣಸಾಂದ್ರ ಪ ಧರೆಯೊಳು ನಿನ್ನ ಶ್ರೀ ಚರಣಕಮಲ ಪ್ರಭೆ ಪರಿ ಉದ್ಧರಿಸು ಈ ಶರಣನ್ನ ಅ.ಪ. ಸುಕೃತ ಸ್ವರೂಪ ದರುಶನ ಮಾತ್ರದಿ ಭವ ಶ್ರಮ ಹರಿಸುವ ಪ್ರತಾಪ ರಮೆ ಅರಸನ ಗುಣ ಸಮುದಾಯದೊಳು ಮಗ್ನ ಭ್ರಮೆರಹಿತ ಸ್ಥಿರಚಿತ್ತ ನಮೋ ನಮೋ ನಿನಗೆ ಅಮಿತ ಮತಿಯ ಕರುಣ ಕವಚವ ಅಮಿತಕಾಲದಿ ಕೊಟ್ಟು ಮೆರೆಯುವ ಅಮಿತ ಮಂಗಳದಾಯಿ ತತ್ವದ ಕಮಲ ವೈಭವ ಸಲಹಲೆನ್ನನು 1 ಪಾವನ ಸುಯತಿ ರನ್ನ ಲಾಲಿಸು ವಾಕು ಸಾವಧಾನದಿ ಘನ್ನ ಭವ ಭವಣೆ ದಾವಾಗ್ನಿಯೊಳು ನೊಂದೆ ಶ್ರೀ ವರನ ದಾಸ ಕಾವ ದೃಷ್ಟಿಯಲಿ ನೋಡೊ ನಿತ್ಯ ಮಂಗಳ ಭಾವರೂಪ ಗುಣತ್ರಯಗಳ ಆವ ಕಾಲಕು ಬಿಡದೆ ನೋಡುವ ಭೂವಿ ಬುಧಮಣಿ ಪಾಲಿಸೆನ್ನನು 2 ತುಂಗಾತೀರ ನಿವಾಸ ರಾಘವೇಂದ್ರ ಗುರು ತುಂಗ ಮಹಿಮ ನಿರ್ದೋಷ ಮಂಗಳಾಸಮಹರಿ ಗಂಗಾಪಿತನ ಕೂಡಿ ತುಂಗಪೂಜೆಯ ಕೊಂಡ್ವರಂಗಳ ಬೀರುವ ಪಾದ ತೀರ್ಥದಿ ಭವ ಭಂಗ ಬಗೆಯನು ಬಲ್ಲ ಮಹಾತ್ಮ ರಂಗ ಜಯೇಶವಿಠಲ ದೇವನ ಸಂಗ ನೀಡುವ ಕೃಪೆಯ ಮಾಳ್ಪ 3
--------------
ಜಯೇಶವಿಠಲ
ಗುರುರಾಜ ವರದ ವಿಠಲ | ಪೊರೆಯ ಬೇಕಿವಳಾ ಪ ಮರುತಂತರಾತ್ಮಕನೆ | ಪ್ರಾರ್ಥಿಸುವೆ ಹರಿಯೇ ಅ.ಪ. ಸೃಷ್ಟಾದಿ ಸತ್ಕರ್ಮ | ಸುಗುಣಮೂರುತಿದೇವಕಷ್ಟಗಳ ಪರಿಹರಿಸಿ ಕಾಪಾಡೋ ಹರಿಯೇಕೃಷ್ಣಮೂರುತಿ ದೇವ | ಅಷ್ಟ ಸೌಭಾಗ್ಯಗಳಕೊಟ್ಟು ಸಂತೈಸುವುದು | ಕಾರುಣ್ಯ ಮೂರ್ತೇ 1 ಆ ಪನ್ನ ಜನಪಾಲ | ಗೋಪಿಜನಪ್ರಿಯತಾಪತ್ರಯ ಕಳೆದು | ಕಾಪಾಡೊ ಹರಿಯೇಶ್ರೀಪತಿ ನೀನಾಗಿ | ಕೋಪಾದಿಗಳ ಕಳೆದುಕೈಪಿಡಿದು ಸಲಹೆಂದು | ಪ್ರಾರ್ಥಿಸುವೆ ಹರಿಯೇ 2 ಪತಿಸುತರು ಹಿತರಲ್ಲಿ | ಹರಿಯುವ್ಯಾಪ್ತನು ಎಂಬಮತಿಯನ್ನೆ ಕರುಣಿಸುತ | ಕಾಪಾಡೊ ಹರಿಯೇಸುಪ್ತಿಜಾಗ್ರತ ಸ್ವಾಪ | ಮಾರವಸ್ಥಾ ಸ್ವಾಮೀಆಪ್ತ ಗುರು ಗೋವಿಂದ | ವಿಠಲೆಂದು ತಿಳಿಸೊ 3
--------------
ಗುರುಗೋವಿಂದವಿಠಲರು
ಗುರುರಾಯ ನಂಘ್ರಿಯಾ ಹಿಡಿ ಹಿಡಿ ಹಿಡಿ ಪರಮ ಸದ್ಭಾವನೆ ಜಡಿ ಜಡಿ ಜಡಿ ಪ ಎರವಿನಾ ಮನೆಯೊಳು ಸ್ಥಿರವೆಂದು ಮೈಯ್ಯವ | ಮರೆವರೇ ಹರಿನಾಮಾ ನುಡಿ ನುಡಿ ನುಡಿ 1 ಕರವ ಮುಗಿದು ಬಾಗಿ ತರಣೋಪಾಯವ ನಿನ್ನ | ಅರಿತು ಸ್ವಹಿತದಲಿ ನಡಿ ನಡಿ ನಡಿ2 ತಂದೆ ಮಹಿಪತಿ ಕಂದಗೆಚ್ಚರಿಸಿದಾ | ಪಡಿ ಪಡಿ ಪಡಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುರಾಯನಾ ಮನಿಯಾ ನಾಯಿ ನಾನು ಪ ಗುರು ಗುರು ಎನುತಲಿ ಇರುವೆ ಬಾಗಿಲದೊಳು | ಗುರುವಿನೆಂಜಲ ನುಂಡು ಸುಖಿಸುವೆ ನಮ್ಮಯ್ಯನಾ 1 ಹರಿ ಶರಣರ ಕಂಡು ಗರುವಿಸಿ ಕೆಲಿಯೆನು | ದುರುಳರ ಬೆನ್ನಟ್ಟಿ ಹೋಗೆನಾ ನಮ್ಮಯ್ಯನಾ 2 ಒಡೆಯನ ಮುಂದೆ ಯನ್ನಾ ಒಡಲವ ತೋರುವೆ | ಬಿಡದೆ ಅಂಗಣದೊಳು ಹೊರಳುವೆ ನಮ್ಮಯ್ಯ ನಾ3 ಹರಿನಾಮದಿಂದ ಭೋಂಕರಿಸಿ ವದರುವೆ | ಬರಗುಡೆ ಹಮ್ಮ ಸ್ವಜಾತಿಯ ನಮ್ಮಯ್ಯ ನಾ 4 ತಂದೆ ಮಹಿಪತಿ ಸ್ವಾಮಿ ಬಂದು ಮೈಯ್ಯಾದಡವಿ | ನಿಂದು ತನ್ನ ಬಿರುದಕ ಹಾಕಿದ ನಮ್ಮಯ್ಯನ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುರಾಯಾ ದೊಡ್ಡವನೈ ಬಲು ಪರೋಪಕಾರಿ | ಪರಿ | ಪರಗತಿಯ ಸಾಧಕರಾಗುವ ಸಹಕಾರಿ | ಬೋಧ ಸುಧೆಯ ಉದಾರಿ | ಯುಕ್ತಿಯ ದೋರುವ ದಾರಿ 1 ಹಲವು ಶಾಸ್ತ್ರದ ಮಾತುಗಳ ಕೇಳಿ ಮುಂಗಾಣದೆ | ತೊಳಲುವ ಮನ ಸಂಶಯವಾ ವಂದು ಮಾತಿನಿಂದೆ | ಕಳೆದನು ದೃಢ ನೆಲೆಗೊಳಿಸಿ ಸ್ವಾನುಭವದಿಂದೆ | ಭವ ತಮ ಮೂಲದಿಂದಲೇ | ಬೆಳಗವ ದೋರುವ ತಂದೇ2 ಮೂಢ ಪಾಮರ ಮಂದಧಿಯನಾನೆಂದರಿಯೆನು | ನೋಡಿ ಕರುಣ ಕಟಾಕ್ಷದಲಿ ಮುಂದಕ ಕರೆದನು | ನೀಡಿ ಅಭಯ ಹಸ್ತವನು ರೂಢಿಯೊಳು ನಂದನೆನಿಸಿದನು | ಮಹಿಪತಿ ತ್ಯಾಜವಿತ್ತನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವಂತರ್ಗತ ವಿಜಯ ದಾಸಾ ಕಾಯೋಶರಣರ ಹೃತ್ಸನ್ನಿವಾಸಾ ಪ ಸುರಮುನಿ ಸುತನಾದ ವರ ಭೃಗ್ವಂಶಜನೆಂದುರೆ ಮೆರೆವನೀಯೊಳ್ ವರದ್ವಿಜನೆನಿಸೀದ ಅ.ಪ. ಪುರಂದರ ದಾಸ ರೂಪಿಯ | ಸ್ವಾಪದಲಿ ಕಾಣುತ್ತನಲಿದ 1 ಪಾದ | ದಾಸನ್ನ ಮಾತೆ ವಿಶ್ವಾಸದಲೀ ಪಡೆದೆ | ಭಾಸುರ ಉಪದೇಶ ||ಶ್ರೀಶನನುಗ್ರಹಿಸಿ ತನ್ನಯ | ದಾಸ ರೂಪವ ಮರೆಯಗೈಯ್ಯಲುಲೇಸು ಎಚ್ಚರಗೊಂಡು ಪುಳಕೀತ | ಭಾಸುರದ ಸುಸ್ತೋತ್ರಗೈದು 2 ಪಾವನ ವಾನಂದ ತೀರ್ಥ | ಭಾಷ್ಯಭಾವ ಕನ್ನಡದಿ ಪೇಳುತ್ತ |ಜೀವರುದ್ಧರ ಕಾರ್ಯ | ತೀವರ ನಡೆಸುತ್ತಕಾವಕೊಲ್ಲುವ ಗುರು | ಗೋವಿಂದ ವಿಠಲದೇವ ಸರ್ವೋತ್ತಮನು ಪವನನು | ಜೀವರುತ್ತಮನೆಂದು ಸ್ಥಾಪಿಸಿದೇವತತಿ ತರತಮದ ಭಾವವ | ಓವಿ ಪೇಳ್ದ ಮಹಾನುಭಾವ 3
--------------
ಗುರುಗೋವಿಂದವಿಠಲರು
ಗುರುವರÀ ತುಲಸೀರಾಮಯ್ಯಾ ಪೂರ್ವದ್ವಾರಗುರುಸ್ತುತಿ ಮಂಪಾಲಯಾ 'ಜಿತೇಂದ್ರಿಯಾ ಪಪುರಪುರವರ ತವ ತಿರುತಾರೊತ್ಸವನಿರತಸೇವಕೃತನುತ ಜನವೈಭವ 1ಪತಿತಜನಾವನ ಪದ್ಮಸುಲೊಚನಪ್ರಥಮಾಶ್ರಮ ಘನಕೃತಮುಖರಂಜನ 2ವೆಂಕಟಲಕ್ಷಾಂಬ ಸುಗರ್ಭೊದ್ಭವ ಪಂಕಜಭ' ಸಂಪದಯುತಪ್ರಭಾವ 3ಕೇಶವಪದನಿಜ ದಾಸಸ್ವರೂಪಾಆಶಯೇಶಯ ಜಿತವರಪ್ರತಿಭಾ 4ಶುಕಮುನಿ ವಾಗ್ಭರಿಸೂನೃತಚರಿತಸಕಲಪಂಡಿತೊತ್ತಮಜನ'ನುತ 5ಮ'ಸೂರ್ಪುರವರ ಮ'ಪತಿಸಮುಖಅ'ಪತಿರೀತ್ಯಾ ಹರಿಗುಣಕಥಕಾ 6ಚಾಮನೃಪಾಲ ಸುಜ್ಞಾನಬೊಧಿನೀಸಮಾಜಶೇಖರ ಸಾತ್ವಿಕಧೀಮಣಿ 7ಶ್ರೀರಾಮೋತ್ಸವ ಸೇವಾಬ್ದಪ್ರತಿಸಾರ್ಥಶತಂ ನಿಷ್ಕನ್ನಾ ರ್ಕತ 8ಭಗವದಾಂಶ ಸಂಭೂತ ಕೃಪಾಕರಅಗಣಿತ ಸುಗುಣಾಲಂಕೃತಧೀವರ 9ಮಂಗಳಕರ ಗುರುತುಲಸೀರಾಮಾರಂಗಸ್ವಾ'ುದಾಸ ಹೃದಯಸುಧಾಮಾ 10
--------------
ಮಳಿಗೆ ರಂಗಸ್ವಾಮಿದಾಸರು
ಗುರುವರನನು ಭಜಿಪೆ ಶ್ರೀ ಶೃಂಗೇರಿ ಗುರುವರನನು ಭಜಿಪೆ ಪಪರಮ ಪಾವನನಾದ ಗೂಢತತ್ವವನೊರೆವನರಸಿಂಹಭಾರತಿ ಗುರುವರನನು ಭಜಿಪೆ ಅ.ಪಸ್ವರ್ಣಪೀಠದಿ ಕುಳಿತು ಸ್ವರ್ಣಾಂಬರವ ಪೊದ್ದುಚಿನ್ಮುದ್ರೆಯನು ಧರಿಸಿ ಪನ್ನಗಭೂಷಣ ಪರಶಿವನಂದದಿತನ್ನ ಭಕ್ತರ ಕರೆದು ಛಿನ್ನಸಂಶಯರಮಾಳ್ಪ 1ಮಣಿಮಯ ಮಕುಟವ ಮಸ್ತಕದೊಳಗಿಟ್ಟುಮಣಿಮಾಲಿಕೆಯ ಧರಿಸಿ ದಿನಮಣಿಶತತೇಜವನು ಬೆಳಗುತ್ತ ತಾನುಘನ ಶಾಸ್ತ್ರಮಾರ್ಗವನನುವದಿಸುತಲಿಹ 2ಚಂದ್ರಗಾ'ಯನುಟ್ಟು ಚಂದ್ರಮೌಳೀಶ್ವರನಛಂದದಿ ಪೂಜಿಸುತ ಸಿಂಧುಜಾ ಧವನಾದ ತಂದೆ ವೇಂಕಟಪತಿಯಂದದಿ ದಾಸಗಾನಂದವನಿತ್ತು ಪೊರೆವ 3
--------------
ನಾರಾಯಣದಾಸರು