ಒಟ್ಟು 30086 ಕಡೆಗಳಲ್ಲಿ , 138 ದಾಸರು , 9126 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾರಾಪತಿಯಹುದೌ ಸತ್ಯಾಭಿನವ ತೀರ್ಥ ಗುರುವೆ ಪ.ತಾರಾಪತಿಯಂತೆ ಕೀರ್ತಿ ಪ್ರಸರವಿಸ್ತಾರದಿಬುಧಚಕೋರವೃಂದಕೆ ನೀನು1ಇಕ್ಷುಚಾಪನ ಗದೆ ಕಕ್ಷಿಪ ಮಾಯಿಗಳನೀಕ್ಷಿಪೆ ನಿರುತ ಸತ್ಪ್ರೇಕ್ಷೆಂದುಕಾಂತಿಗೆ 2ಶ್ರೀರಾಮ ವೇದವ್ಯಾಸರ ಸೇವೆಯೊಳಿಹೆಮಾರುತಿಮತತತ್ವ ವಾರಿಧಿತರಂಗಕೆ 3ಗುರುಪಾದ ಸ್ಮರಣೆಯ ಮರೆಯದೆ ಅಮೃತ ವಾಕ್ಯಗರೆಯುತಹೃತ್ತಾಪಪರಿಹರಿಸುವಂಥ4ಪ್ರಸನ್ವೆಂಕಟ ಪ್ರೀತ ಶ್ರೀ ಸತ್ಯನಾಥರ ಸುತವಸುಧೆಯಾಚಕಕುಮುದಕುಸುಮಕೋರಕಕೆ5
--------------
ಪ್ರಸನ್ನವೆಂಕಟದಾಸರು
ತಾರಿಸೊ ಶ್ರೀಹರಿ ತಾರಿಸೊ ಪತಾರಿಸೊ ಭವವ ನಿವಾರಿಸೊ ನಿನ್ನಡಿಯತೋರಿಸೊ ವೈಕುಂಠ ಸೇರಿಸೋ ರಂಗಯ್ಯ ಅ.ಪಪಾಪವಿನಾಶನ ಮಾಡುವಿ ನೀತಾಪಸರನುನಿತ್ಯಸಲಹುವಿ ||ವ್ಯಾಪಿಸಿ ಸರ್ವತ್ರ ನಿನ್ನವರನು ಕಾಯ್ವಶ್ರೀ ಪಾಂಡುರಂಗ ಪರಮಾತ್ಮ ಮುಕುಂದ 1ಹಿರಣ್ಯಕಶಿಪುವನು ಸೀಳಿದೆ ಅವನಕರುಳನು ಕೊರಳೊಳು ಹಾಕಿದೆ ||ದುರಳ ಬುದ್ಧಿಯ ತಳೆದ ದೈತ್ಯಾಧಮನ ಕೊಂದಕರುಣ ದಿಂದಲಿ ಕಂದಗೊಲಿದೆ ಗೋವಿಂದ 2ಅಸುರೆ ಪೂತನಿಯ ಸಂಹರಿಸಿದೆ ನೀಶಶಿಮುಖಿಯಭಿಮಾನ ಕಾಯ್ದೆ ||ಶಿಶುವಾಗಿ ಬಾಲಲೀಲೆಗಳನು ತೋರಿದೆಕುಸುಮನಾಭ ಶ್ರೀಪುರಂದರವಿಠಲ3
--------------
ಪುರಂದರದಾಸರು
ತಾಸು ಬಾರಿಸುತಿದೆಕೇಳಿ - ಹರಿದಾಸರೆಲ್ಲ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ತಾಸು ಬಾರಿಸುತಿದೆಕೇಳಿಪ.ಹಾಸುಮಂತ ಸುಪ್ಪತ್ತಿಗೆಯಲಿ - ಹಗಲು ಇರುಳು |ಹೇಸರಗತ್ತೆಯಂತೆ ಹೊರಳಿ - ಸ್ತ್ರೀಯರಗೂಡ |ಬೇಸರದೆ ನಿತ್ಯವು ಉರುಳಿ ||ಈಪರಿ ಕಾಲವ ಕಳೆದೆಯೊಕಾಲ ಸ |ಮೀಪವಾಯಿತು ಎಂದೀಗಲೆ 1ವೃಧ್ಧ ಯಾವನ ಬಾಲಕಾಲ - ವಿವೇಕವಿಲ್ಲದ |ಬುದ್ಧಿ ಮಾಂದ್ಯವು ಹಲವುಕಾಲ - ಆಹಾರಸಂಗ |ನಿದ್ರೆಯಿಂದಲಿ ಅತಿಲೋಲ ||ಈಶನ ಭಜಕರ ಭಜಿಸದೆ ಮಾನುಷಾ |ಯುಷ್ಯವೆಲ್ಲವು ವ್ಯರ್ಥವಾಯಿತಾಯಿತೆಂದು 2ಕಂಡ ವಿಷಯವ ಕಾಮಿಸಿ - ಕಷ್ಟಪಡದೆ |ತಾಂಡವ ಕೃಷ್ಟನ ಭೇಸಿ - ಪುಂಡನೆನಿಸದೆಭಂಡಧಾವತಿಯನು ತ್ಯಜಿಸಿ ||ಪುಂಡರೀಕಾಕ್ಷ ಪುರಂದರವಿಠಲನ |ಕೊಂಡು ಭಜಿಸಿರೈಯ ಢಂ ಢಂ ಢಂ ಡಣ್ಣೆಂದು 3
--------------
ಪುರಂದರದಾಸರು
ತಾಳಿಯ ಹರಿದು ಬಿಸಾಡೆ ನೀಹೇಳಿದವರ ಮಾತ ಕೇಳೇ ಗೈಯ್ಯಾಳಿ ಪ.ಎಲ್ಲಮ್ಮ ಎಕಲಾತಿ ಉರಿಮಾರಿ ಉಡತಮ್ಮಬುಲ್ಲ ಮಹಿಸಾಸುರ ದೈವವೆಂದೆಎಲ್ಲ ದೈವಗಳು ನಾಯಾಗಿ ಹರಿವಾಗಕಳ್ಳದೇವರ ನೆಚ್ಚಿ ಕೆಡಬೇಡ ಮೂಳಿ 1ಕೊರಳೊಳು ಕವಡಿಯ ಶಿರದಲಿ ಹಡಲಿಗೆಕರದಲಿ ದೀವಟಿಗೆ ಉರಿಸುತಲಿಉರಿವ ಪಂಜನೆ ಪಿಡಿದು ಉಧೋ ಉಧೋ ಎನುತಲಿತಿರುಗಿದ ಕೇರಿಗುಂಟ ಮೂಳಿ 2ಸೀಡಿಯ ಮುಳ್ಳನೆ ತಂದು ನಡುಬೆನ್ನಲೂರಿಕೊಂಡುಒಡೆಯ ಮಲ್ಲಣನೆಂದು ಜೋಲಾಡುಕಡುಹರಿ ಯಮದೂತರು ಬಂದು ಎಳೆವಾಗಒಡೆಯ ಮೆಲ್ಲುಣ್ಣೆತ್ತು ಹೋದನೆ ಮೂಳಿ 3ಗುಂಡಿಗೆ ಎಣ್ಣೆಯ ಎಡಗೈಯಲಿಟ್ಟು ಕೊಂಡುಗುಂಡಿಗೆ ತುಪ್ಪವ ಮುಂದಿಟ್ಟು ಕೊಂಡುಮಿಂಡೆ ಮೈಲಾರಿಯ ಖಂಡೆರಾಯನೆಂದುಕೆಂಡದ ಮೇಲೆ ರೊಟ್ಟಿಯ ಸುಟ್ಟು ಮೂಳಿ 4ಹೊನ್ನುನಾಗರ ಮಾಡಿ ಬಣ್ಣಿಸಿ ಕಿವಿಗಿಟ್ಟುನನ್ನಯ್ಯ ನಾಗಪ್ಪ ಸಲುಹೆನ್ನುತಚಿನ್ನನಾಗರ ಬಂದು ಓಡಾಡಿ ಕಡಿವಾಗಹೊನ್ನನಾಗರ ಎತ್ತ ಹೋದನೆ ಮೂಳಿ 5
--------------
ಪುರಂದರದಾಸರು
ತಿರುಪತಿಯ ಶ್ರೀವೆಂಕಟೇಶಗೋವಿಂದಹರಿಗೋವಿಂದಪರತರ ಪರಮಾನಂದ ಪಮಂದರಗಿರಿಧÀರ ಸುಂದರಮೂರುತಿನಂದನಕಂದ ಗೋವಿಂದ ಮುಕ್ಕುಂದ ಅ.ಪದುರಿತರಾಶಿ ನಾಶ ಗೋವಿಂದಪರಮಪದವಿಗೀಶ ಗೋವಿಂದಸುರಮುನಿಸೇವಿತ ಹರಅಜವಿನಮಿತಪರಮಚರಿತ ಸಿರಿಗೋವಿಂದ 1ಹುಟ್ಟುಸಾವಿಲ್ಲದ ಗೋವಿಂದತಟ್ಟು ಮುಟ್ಟಿಲ್ಲದ ಗೋವಿಂದಸೃಷ್ಟಿ ತನ್ನಾಧೀನದಿಟ್ಟು ಆಳುವ ದಿಟಸೃಷ್ಟಿಗೆ ಸಿಲುಕದ ಗೋವಿಂದ 2ಆದಿಅಂತಿಲ್ಲದ ಗೋವಿಂದನಾದಕಲೆಯಿಲ್ಲದ ಗೋವಿಂದಸಾರಿ ಪೊಗಳುವ ವೇದಕೆ ಕಾಣದಆದಿಅನಾದಿ ಬ್ರಹ್ಮ ಗೋವಿಂದ 3ಮುಚ್ಚಲು ಮಾಜದ ಗೋವಿಂದಬಿಚ್ಚಲು ಕಾಣದ ಗೋವಿಂದಅಚ್ಚುತಾನಂತೆಂದು ಬಚ್ಚಿಟ್ಟ್ಹೊಗಳುವರಸಚ್ಚಿತ್ತದ್ಹೊಳೆಯುವ ಗೋವಿಂದ 4ನಶ್ವರವಿಲ್ಲದ ಗೋವಿಂದಶಾಶ್ವತ ಮಹಿಮೆಯ ಗೋವಿಂದವಿಶ್ವವಿಶ್ವರಕ್ಷ ವಿಶ್ವನಾಟಕ ಮಹವಿಶ್ವವಿಶ್ವಾಕರ ಗೋವಿಂದ5ಅಸಮ ಲೀಲಾಜಾಲ ಗೋವಿಂದಅಸುರಕುಲದಕಾಲಗೋವಿಂದದಶವಿಧವತಾರದಿ ವಸುಧೆಯ ಭಾರವಕುಶಲದಿಂದಿಳುಹಿದ ಗೋವಿಂದ 6ತಿಳಿಯಲು ತಿಳಿಯದ ಗೋವಿಂದತಿಳಿವಿಗೆ ಸುಲಭದ ಗೋವಿಂದಬೆಳಕುಕತ್ತಲೆದೆಸೆಸುಳಿವಿಲ್ಲದಸ್ಥಾನದ್ಹೊಳೆಯುವ ಅಕಳಂಕ ಗೋವಿಂದ 7ಭೂಷಣ ಮಣಿಮಾಲ ಗೋವಿಂದಶ್ರೀಶ ಶ್ರೀನಿವಾಸ ಗೋವಿಂದವಾಸುಕಿಶಯನ ಶೇಷಾರಿಗಮನಸಾಸಿರನಾಮದ ಗೋವಿಂದ 8ನಾಮರೂಪಿಲ್ಲದ ಗೋವಿಂದನೇಮನಿತ್ಯಿಲ್ಲದ ಗೋವಿಂದಶಾಮಸುಂದರ ಮುಕ್ತಿ ಸೋಮಭೀಮಸುಖದ್ಧಾಮ ಶ್ರೀರಾಮ ನಿಜಗೋವಿಂದ 9
--------------
ರಾಮದಾಸರು
ತಿಳಿಯನು ಎಂದೆಂದಿಗನ್ಯ | ರಂಗಒಲಿದ ದಾಸರು ಜಗನ್ಮಾನ್ಯ ||ಅಲವಮಹಾತ್ಮರೆಂಬ ಪುಣ್ಯ | ಕೀರ್ತಿಗಳನಿತ್ಯಕೇಳ್ವನರಧನ್ಯ ಪಹಿರಣ್ಯಕಶ್ಯಪುಜ ಸಹ್ಲಾದನೇವೇ |ಎರಡನೆ ಜನ್ಮ ಶಲ್ಯನಾದ ||ಗುರುವಾದಿರಾಜರನರ್ಚಿಸಿದ |ಪುರಂದರದಾಸರಾಯರಲ್ಲುದಿಸಿದ1ಅಯ್ದನೆಯ ರೂಪವೀಗಿಂದಂತೆ |ಬಹುದು ಏಳು ಜನ್ಮ ಮುಂದಂತೆ ||ಮೋದಾಭಿವೃದ್ಧಿಗೇನೋ ಅಂತೇ ಎಂಬ |ವಾದಿಗಿದೆಲ್ಲ ಅಂತಿಗಂತೆ 2ದಾಸಕೂಟಸ್ಥರಿಗೀ ಮಾತು ಕೆಲವು |ದೇಶಗಳಲ್ಲಿ ಅನುಭವವಾಯ್ತು ||ಈ ಸುಕಥಾಲಾಪ ವಲ್ಲ್ಯಾಯಿತು ಶ್ರೀ ಪ್ರಾ |ಣೇಶ ವಿಠಲನಲ್ಲಿಹನಾತು 3
--------------
ಪ್ರಾಣೇಶದಾಸರು
ತು0ಟನಿವನು ಕಾಣಮ್ಮ ಗೋಪಾಲನು|ಉಂಟೋ ಇಲ್ಲವೊ ಕೇಳಮ್ಮ ಪಎಂತೆರಡು ಸಾವಿರ ನಂತರ ಹೆಂಗಳತುಂಟು ಮಾಡಿ ರವಿಕೆಗಂಟು ಬಿಚ್ಚಿ ನಿಂತ ಅ.ಪಹಸಿರು ಪಟ್ಟೆಯನು ಉಟ್ಟು - ನಮ್ಮನೆ ಹೆಣ್ಣು|ಮೊಸರು ಕಡೆಯುತಿರಲು||ನಸುನಗುತಲಿ ಬಂದುಕುಸುಮಮಲ್ಲಿಗೆ ಮುಡಿಸಿ|ಬಸಿರುಮಾಡಿದನೆಂಥ ಹಸುಳನೆಗೋಪಿ||1ಮುದ್ದುನಾರಿಯರು ಕೂಡಿ-ನಮ್ಮನೆಯಲಿ|ಉದ್ದಿನ ವಡೆಯ ಮಾಡಲು||ಸದ್ದು ಮಾಡದೆ ಎಂದು ಎದ್ದೆದ್ದು ನೋಡುತ|ಇದ್ದ ವಡೆಯನೆಲ್ಲ ಕದ್ದು ಮೆದ್ದೋಡಿದ 2ಗೊಲ್ಲ ಬಾಲಕರ ಕೂಡಿ-ಮನೆಯಲಿದ್ದ |ಎಲ್ಲ ಬೆಣ್ಣೆಯ ಮೆಲ್ಲಲು ||ಗುಲ್ಲು ಮಾಡದೆ ನಾವು ಎಲ್ಲರು ಒಂದಾಗಿ |ತಳ್ಳ ಹೋದರೆ ನಮಗೆ ಬೆಲ್ಲವ ತೋರಿದ 3ಹೊತ್ತು ಮುಳುಗುವ ಸಮಯದಿ-ನಮ್ಮನೆ ಹೆಣ್ಣು |ಹತ್ತಿ ಹೊಸೆಯುತಿರಲು |ಮುತ್ತು ಹವಳ ಸರ ಕತ್ತಿಗೆ ಹಾಕಿ ಸೀರೆ |ಎತ್ತಿ ನೋಡಿದನು ತಾ ಬತ್ತಲೆ ನಿಂತ 4ತಿಲಕ ಕತ್ತುರಿಯನಿಟ್ಟು-ನಮ್ಮನೆ ಹೆಣ್ಣು |ಗಿಲುಕು ಮಂಚದಲಿರಲು ||ತಿಲಕ ತಿದ್ದುತ ಕುಚಕಲಶ ಪಿಡಿದು ತನ್ನ |ಕೆಲಸವ ತೀರಿಸಿದ ಪುರಂದರವಿಠಲ 5
--------------
ಪುರಂದರದಾಸರು
ತುದಿನಾಲಿಗೆ ಬೆಲ್ಲ ಎದೆಗತ್ತರಿಯವರ ಸಂಗಬೇಡಹೃದಯ ದಾಕ್ಷಿಣ್ಯವನರಿಯದ ಮನುಜರ ಪ್ರಸಂಗಬೇಡ ಪ.ಮುಂದೆ ಭಲಾ ಎಂದು ಹಿಂದಾಡಿಕೊಂಬರ ಸಂಗಬೇಡಕುಂದು - ನಿಂದೆಗಳ ಪ್ರಯೋಗ ಮಾಡುವರಪ್ರಸಂಗ ಬೇಡ 1ಆಡಿ ಅಳುಕದ ಅಜಾÕನಿ ಮನುಜರ ಸಂಗಬೇಡಕೂಡಿ ಕುಮಂತ್ರವ ಎಣಿಸುವ ನರರ ಪ್ರಸಂಗ ಬೇಡ 2ವಿನಯ - ವಿವೇಕವಿಲ್ಲದ ವಿದ್ವಾಂಸರ ಸಂಗಬೇಡತನಗಲ್ಲದಬಂಟ- ನಂಟ - ಮಿತ್ರಾಂಗಳ ಸಂಗಬೇಡ3ತಮ್ಮ ಕಾರ್ಯಕ್ಕಾಗಿ ಪರರ ಕೆಡಿಸುವರ ಸಂಗ ಬೇಡನಮ್ಮ ಪುರಂದರವಿಠಲನಿರಲನ್ಯ ಪ್ರಸಂಗ ಬೇಡ 4
--------------
ಪುರಂದರದಾಸರು
ತುಂಬಿಕೊಂಡಿರುತಿಹನೊಬ್ಬ ಜಗವಿಂಬಿಲ್ಲದೆಲ್ಲವ ಸಕಲವೆಲ್ಲವತುಂಬಿಪಆರರೊಳಗೆತುಂಬಿಅತ್ತತ್ತಲುತುಂಬಿಮೂರು ಠಾವಲಿತುಂಬಿಮೂರುಮನೆತುಂಬಿಬೇರೆ ಮೇಲಕೆತುಂಬಿಬೆಳಗಿನೊಳಗೆತುಂಬಿಸಾರಾಮೃತದಿತುಂಬಿಸಾಕ್ಷಾತ್ಕಾರದಲಿತುಂಬಿ1ಮನಸಿನೊಳಗೆತುಂಬಿಮನವರ್ತನದಿತುಂಬಿತನುವಿನಲ್ಲಿಯೆತುಂಬಿಸರ್ವಾಯವತುಂಬಿತನುತ್ರಯದಲಿತುಂಬಿತನುವಿನಲ್ಲಿಯೆತುಂಬಿಘನಸುಖದಿತುಂಬಿ2ಇಳೆಯ ಒಳಗೆತುಂಬಿಇಹಜಂಗಮದಿತುಂಬಿಬಲು ಸ್ಥಾವರದಿತುಂಬಿಬಯಲಿನಲ್ಲಿಯೆತುಂಬಿಕೆಳಗೆ ನಡುವೆತುಂಬಿಕೇವಲ ಕೊನೆಯತುಂಬಿಚಲಿಸದಂದದಿತುಂಬಿಚಿದಾನಂದನೇತುಂಬಿ3
--------------
ಚಿದಾನಂದ ಅವಧೂತರು
ತುಂಬಿತುಂಬಿತುಂಬಿದೆ ಮುಕ್ತಿಯುತುಂಬಿದೆ ಮುಕ್ತಿಯು ತುಂಬಿದೆ ಮುಕ್ತಿಯುತುಂಬಿಪಧಡಧಡ ಧಡಿಸುತ ದಟ್ಟಣೆಯಿಂದಲಿ ದಯೆಗೈಯುತಲಿದೆತುಂಬಿಎಡದೆರಹಿಲ್ಲದೆ ಏಕವೆ ಎನಿಸುತ ಎಲ್ಲೆಡೆ ತುಂಬಿದೆತುಂಬಿ1ಅಂಬರದೊಳು ಚಿದಂಬರವೆನಿಸುವ ಅಂಬರತಾನಿದೆತುಂಬಿಬಿಂಬದಿ ತೋರುವ ಬಿಂಬಂತೆಲ್ಲವನಿಂಬಿಡುತಿದೆತಾತುಂಬಿ2ಜ್ಞಾನಾಮೃತ ರಸರಸವನೆ ಬೀರುತ ಜ್ಞಾನಕೆ ದೂರಿದೆತುಂಬಿತಾನೆ ತಾನೆ ತಾನಾದ ಪುರುಷಗೆ ತಾನೆಯಾಗಿದೆತುಂಬಿ3ನಾದದ ಮನೆಯಲಿ ನಾದದಿ ಮರೆಸುವ ನಾದದಿಬೆರೆತಿದೆತುಂಬಿಭೇದಾಭೇದಗಳಹ ದೃಗ್‍ದೃಶ್ಯದ ಭೇದವ ಸಾಕ್ಷಿಪತುಂಬಿ4ಇಂದುಅಮೃತಕರ ಸೂಸುವ ತೆರದಲಿಹೊಂದಿರುವವರನು ತಾತುಂಬಿಮಂದಹಾಸ ಮಹಾಲೀಲಾತ್ಮಕಸಿಂಧುಚಿದಾನಂದತುಂಬಿ5
--------------
ಚಿದಾನಂದ ಅವಧೂತರು
ತುರುಕರು ಕರೆದರೆ ಉಣಬಹುದಣ್ಣ |ತುರುಕರು ಕರೆದರೆ ಉಣಬಹುದು .......... ಪ.ಕರ ಕರೆ ಚಂಚಲ ಮಾಡದಿರಣ್ಣ |ತುರುಕರು ಕರೆದರೆ ಉಣಬಹುದು ಅಪತುರುಕರುವಿಂದ ಮುಟ್ಟು ಮುಡಚಟ್ಟು ಹೋಹುದು |ತುರುಕರುವಿಂದ ಹೋಹದು ಎಂಜಲವು ||ತುರುಕರು ಕಂಡರೆಸರಕನೆ ಏಳಬೇಕು |ತುರುಕರುವಿನ ಮಂತ್ರ ಜಪಿಸಬೇಕಣ್ಣ.............. 1ತುರುಕರುವಿಂದ ಸ್ವರ್ಗ ಸ್ವಾಧೀನವಾಹುದು |ತುರುಕರುವಿಂದ ನರಕ ದೂರಪ್ಪುದು ||ತುರುಕರು ಕೂದಲ ತುರುಬಿಗೆ ಸುತ್ತಿಕೊಂಡು |ಗರತಿಯರೆಲ್ಲ ಮುತ್ತೈದೆಯರಣ್ಣ.......... 2ತುರುಕರುವಿನ ನೀರೆರಕೊಂಡ ನಮ್ಮ ದೇವ |ಉರವಕೊಂಡ ನೀರೆಲ್ಲ ಸನಕಾದಿಗೆ ||ಬೆರಕೆಯ ಮಾಡಿದ ಪುರಂದರವಿಠಲ |ಅರಿಕೆಯ ಮಾಡಿದ ಹರಿದಾಸರಿಗೆಲ್ಲ......... 3
--------------
ಪುರಂದರದಾಸರು
ತೂಗಿದಳೆಶೋದಾದೇವಿ ಬಾಲಕನಾಸಾಗರ ಶಯನನ ಜೋಗುಳ ಹಾಡಿ ಪಪುಟ್ಟಿದ್ಹನ್ನೊಂದನೆ ದಿವಸ ಶ್ರೀಕೃಷ್ಣನಾತೊಟ್ಟಿಲೊಳಗಿಟ್ಟು ಸಂತೋಷದಿ ಮಗನ ಅ.ಪಜೋಜೋ ಸುಗುಣಶೀಲ ಗೋಪಾಲಜೋಜೋ ಯದುಕುಲ ಬಾಲ ಶ್ರೀಲೋಲನೆ ಎನುತಾ 1ರಂಗ ಕೃಪಾಂಗ ಶ್ರೀರಂಗನೆ ಜೋಜೋಅಂಗಜಪಿತ ನರಸಿಂಗನೆ ಜೋ ಎಂದು 2ನಂದನ ಕಂದನೆ ಜೋಜೋ ಗೋವಿಂದಾಮಂದರಗಿರಿಧರ ಜೋಜೋ ಎಂದೆನುತಾ 3
--------------
ಗೋವಿಂದದಾಸ
ತೇರನು ನೀವು ನೋಡಿಲ್ಲ ತಿಳಿಪುವೆ ಸಡಗರವೆಲ್ಲಚಾರುಯೋಗಿಯು ನೋಡಿಲಿದು ಚಲನೆ ಮನುಜರಿಗೆ ಸಲ್ಲದುಪಆರು ಚಕ್ರದ ಆರುನೆಲೆ ಮೂರು ಅವಸ್ಥೆಗಳ ಮೂರುಗಾಲಿಕುಂಡಲಿಎಂಬುದುಕೀಲುಚದುರಿನ ದಳಪಟ್ಟಿ ಮೇಲು1ಸಹಸ್ರಾರವೇ ಕೊನೆಯ ಸ್ಥಾನ ಸ್ವಾಮಿಯ ಸಿಂಹಾಸನಸೋಹಂ ಎಂದೆನಿಸುವ ಶಿಖರ ಸೊಗಸಿಂದಲಿಹುದು ಸುಪ್ರಕಾರ2ಸ್ಥಾನ ಸ್ಥಾನಕೆ ಒಂದು ಬೊಂಬೆ ಸಡಗರ ಏನೆಂಬೆಅನುರಾಗವೇ ಎಂಬ ಫಲವು ಆಶ್ಚರ್ಯ ತೇರಿನ ನಿಲುವು3ಹೇಷೆ ಎಂಬುವೆ ಕೋಟಿ ಚಂದ್ರ ಹೊಡೆವ ನಾದವೆ ವಾದ್ಯಸಾಂದ್ರಬಲುಹು ಆನಂದ ಸಲ್ಲಲಿ ಭಾಪು ಎನಲಿ ಸುಖದಲಿ4ಇಡಾಪಿಂಗಳ ಮಿಣಿಗಳಿಂದ ಎಳೆವುದು ಗುರುದಯದಿಂದಮೂಡಲಿಂದ ಪಶ್ಚಿಮಕ್ಕೆಗುರುಚಿದಾನಂದನ ಸ್ಥಾನಕ್ಕೆ5
--------------
ಚಿದಾನಂದ ಅವಧೂತರು
ತೇಲಿಸೊ ಇಲ್ಲ ಮುಳುಗಿಸೊ- ನಿನ್ನ-|ಪಾಲಿಗೆ ಬಿದ್ದೆನೊಪರಮದಯಾಳೊಪಸತಿ-ಸುತ-ಧನದಾಶೆ ಎಂತೆಂಬ ಮೋಹದಿ |ಹಿತದಿಂದ ಅತಿನೊಂದು ಬಳಲಿದೆನೊ ||ಗತಿಯನೀವರ ಕಾಣೆ ಮೊರೆಯ ಲಾಲಿಸೊ ಲಕ್ಷ್ಮೀ-|ಪತಿನಿನ್ನ ಚರಣದ ಸ್ಮರಣೆಯಿತ್ತೆನ್ನ1ಜರೆರೋಗ ದಾರಿದ್ರ್ಯ ಕಶ್ಮಲವೆಂತೆಂಬ |ಶರಧಿಯೊಳಗೆ ಬಿದ್ದು ಮುಳುಗಿದೆನೊ ||ಸ್ಥಿರವಲ್ಲ ಈ ದೇಹ ನೆರೆನಂಬಿದೆನು ನಿನ್ನ |ಕರುಣಾಭಯವನಿತ್ತು ಪಾಲಿಸೊ ಹರಿಯೆ 2ದೋಷವುಳ್ಳವ ನಾನು ಭಾಷೆಯುಳ್ಳವ ನೀನು |ಮೋಸ ಹೋದೆನೊ ಭಕ್ತಿರಸವ ಬಿಟ್ಟು ||ದಾಸರ ಸಂಗವಿತ್ತು ಪಾಲಿಸೊ ಹರಿಯೆ 3
--------------
ಪುರಂದರದಾಸರು
ತೇಲಿಸೊ ನೀ ಮುಣುಗಿಸೊ |ನಿನ್ನ ಮಾಯವ ತಿಳಿಯದ ಮೂಢ ಜನರನುಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ವಿಷಯದೊಳಗೆ ಮನ ಬುದ್ಧಿ ಗರ್ಕಾಯಿತುಘಸಣೆ ಬಡುವ ದೇಹ ಹ್ಯಾಗೆ ಪಾರಾಯ್ತು 1|ಹರ ಬಿಡಿಸು ಮೊರೆಹೋದೆ ದೇವಾಬಿರುಬೆಟ್ಟಿತು ಪರಿಹಾರ ಹ್ಯಾಗ2ಭವನದಿಯೊಳು ಸುಳಿದಾಡು ಹರಗೋಲಕ್ಕೆಶಿವಶಂಕರ ಕಡೆಗೆ ಹಚ್ಚು ಧಡಕ್ಕೆ3
--------------
ಜಕ್ಕಪ್ಪಯ್ಯನವರು