ಒಟ್ಟು 22462 ಕಡೆಗಳಲ್ಲಿ , 136 ದಾಸರು , 9185 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರ್ಮಬಂಧನ ಛೇದನ - ಶ್ರೀ - |ರಾಮನ ನಾಮವ ನೆನೆ ಮನವೆ ಪ.ಅರ್ಚಿಸಲರಿಯೆನು ಪೂಜಿಸಲರಿಯೆನು |ಮೆಚ್ಚಿಸಲರಿಯೆನೆಂದೆನ ಬೇಡ ||ಅಚ್ಯುತಾನಂತ ಗೋವಿಂದನ ನಾಮವ |ಇಚ್ಛೆ ಬಂದಾಗಲೆ ನೆನೆ ಮನವೆ 1ಸ್ನಾನವನರಿಯೆನು ಧ್ಯಾನವನರಿಯೆನು |ಏನನು ಅರಿಯೆನೆಂದೆನಬೇಡ ||ಜಾನಕಿರಮಣನ ದಶರಥನಂದನ |ದಾನವನಾಶನ ನೆನೆ ಮನವೆ 2ಮಂತ್ರವನರಿಯೆನು ತಂತ್ರವನರಿಯೆನು |ಎಂತು ಅರಿಯೆನೆಂದೆನಬೇಡ ||ಸಂತತಾನಂತ ಗೋವಿಂದನ ನಾಮವ |ಅಂತರಂಗದೊಳು ನೆನೆ ಮನವೆ 3ಜಪವ ನಾನರಿಯೆನು ತಪವ ನಾನರಿಯೆನು |ಉಪವಾಸವರಿಯೆನೆಂದೆನಬೇಡ ||ಅಪರಿಮಿತ ಗುಣಗಳ ಅನಂತಮಹಿಮನ |ಕೃಪೆಯ ಸಮುದ್ರನ ನೆನೆ ಮನವೆ 4ಕಲಿಯುಗದೊಳು ಹರಿನಾಮವ ನೆನೆದರೆ |ಕುಲಕೋಟಿಗಳುದ್ಧರಿಸುವುವು ||ಸುಲಲಿತ ಭಕ್ತಿಗೆ ಸುಲಭನೆಂದೆನಿಸುವ |ಜಲರುಹನಾಭನ ನೆನೆ ಮನವೆ 5ತಾಪತ್ರಯಗಳ ತಪ್ಪಿಸಿ ಸುಜನರ |ಪಾಪಗಳೆಲ್ಲವ ಪರಿಹರಿಸುವುದು ||ಶ್ರೀಪತಿ ಸದಮಲಧ್ಯಾನಗೋಚರನ |ಗೋಪೀನಾಥನ ನೆನೆ ಮನವೆ 6ವರದ ವೀರನಾರಾಯಣ ಸ್ವಾಮಿಯು |ಪರಮಪಾವನನು ಹಿತನಾಗಿ ||ಹರಿಯದ ಇಹಪರ ಕೊಡುವ ಸುಖಂಗಳ |ಪುರಂದರವಿಠಲನ ನೆನೆ ಮನವೆ 7
--------------
ಪುರಂದರದಾಸರು
ಕಲಿಯುಗದ ಮಹಿಮೆಯನು ಕಾಣಬೇಕಿಂತು ಪ.ಹರಿಸ್ಮರಣೆಯನು ಬಿಟ್ಟು ಹೀನರನೆ ಸ್ತುತಿಸುವರು |ಗುರುಹಿರಿಯರೊಳು ದೋಷವೆಣಿಸುತಿಹರು |ಪೊರೆದ ತಾಯ್ತಂದೆಗಳ ಮಾತ ಕೇಳದೆ ತಮ್ಮ |ತರುಣಿಯರ ನುಡಿಗಳನು ಲಾಲಿಸುತ್ತಿಹರು 1ಕಂಡುದನೆ ಹೇಳರು ಕಾಣದನೆ ಹೇಳುವರು |ಉಂಡ ಮನೆಗೆರಡನ್ನೆ ಎಣಿಸುತಿಹರು ||ಕೊಂಡಾಡಿ ಬೇಡಿದರೆ ಕೊಡರೊಂದು ರುವಿಯನ್ನು |ದಂಡಿಸುವರಿಂಗೆ ಧನಗಳನು ಕೊಡುತಿಹರು 2ಕಳ್ಳರೊಳು ಕಡುಸ್ನೇಹ ಸುಳ್ಳರೊಳು ಸೋಲುವರು |ಒಳ್ಳೆಯವರೊಡನೆ ವಂಚನೆ ಮಾಳ್ಪರು ||ಇಲ್ಲದ ಅನಾಥರಿಗೆ ಇದ್ದಷ್ಟು ತಾವ್ ಕೊಡರು |ಬಲ್ಲಿದವರಿಗೆ ಬಾಯ ಸವಿಯನುಣಿಸುವರು 3ಪಟ್ಟದರಸಿಯನಗಲಿ ಮೋಸದಲಿ ತಪ್ಪುವರು |ಕೊಟ್ಟ ಸಾಲವ ನುಂಗಿ ಕೊಡದಿಪ್ಪರು ||ಮುಟ್ಟಿ ಪರಹೆಣ್ಣಿಂಗೆ ಮೋಸದಲಿ ಕೂಡುವರು |ಬಿಟ್ಟು ಕುಲಸ್ವಾಮಿಯನು ಬಡದೈವಕೆರಗುವರು 4ಮಾಡಿದುಪಕಾರವನು ಮರೆತುಕಳೆವರು ಮತ್ತೆ |ಕೂಡಾಡಿ ಬೇಡುವರು ಕುಟಿಲತ್ವದಿಂದ ||ರೂಢಿಗೊಡೆಯನು ನಮ್ಮ ಪುರಂದರವಿಠಲನ |ಪಾಡಿ ಪೊಗಳುವರಿಂಗೆ ಭವಭಯಗಳಿಲ್ಲ 5
--------------
ಪುರಂದರದಾಸರು
ಕಲ್ಯಾಣಂ ತುಳಸೀ ಕಲ್ಯಾಣಂ ಪಕಲ್ಯಾಣವು ನಮ್ಮ ಕೃಷ್ಣ ಶ್ರೀ ತುಳಸಿಗೆ |ಬಲ್ಲಿದಶ್ರೀವಾಸುದೇವನಿಗೆಅ.ಪಅಂಗಳದೊಳಗೆಲ್ಲ ತುಳಸೀವನವ ಮಾಡಿ |ಶೃಂಗಾರವ ಮಾಡೆ ಶೀಘ್ರದಿಂದ ||ಕಂಗಳ ಪಾಪವ ಪರಿಹರಿಸುವ ಮುದ್ದು |ರಂಗಬಂದಲ್ಲಿ ನೆಲಸಿಹನು 1ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು |ತಂದ ಶ್ರೀಗಂಧಾಕ್ಷತೆಗಳಿಂದ ||ಸಿಂಧುಶಯನನ ವೃಂದಾವನದಲಿ ಪೂಜಿಸೆ |ಕುಂದದ ಭಾಗ್ಯ ಕೊಡುತಿಹಳು 2ಉತ್ಥಾನ ದ್ವಾದಶಿದಿವಸದಲ್ಲಿ ಕೃಷ್ಣ-|ಉತ್ತಮ ತುಲಸಿಗೆ ವಿವಾಹವ ||ಚಿತ್ತ ನಿರ್ಮಲರಾಗಿ ಮಾಡಿದವರಿಗೆ |ಉತ್ತಮ ಗತಿ¬ೂವ ಪುರಂದರವಿಠಲ 3
--------------
ಪುರಂದರದಾಸರು
ಕಲ್ಲು ಬೀಳಲಿ ಮೇಲ್ಮುಗಿಲ್ಲು ಬೀಳಲಿಫುಲ್ಲನಾಭನಿನ್ನ ಪಾದಪಲ್ಲವ ಛಾಯೆಯ ಬಿಡೆಪ.ಶೂಲಕೋಟಿಗಂಜೆಕರವಾಳಘಾತಿಗಂಜೆವಿಶ್ವಪಾಲಕ ನಿನ್ನ ದಿವ್ಯನಾಮಮಾಲಿಕೆ ವಜ್ರಾಯುಧುಂಟು 1ಪೋಕಜನಕಂಜೆ ದುರಿತಾನೀಕ ಬರಲಂಜೆ ಜಗದೇಕ ನಿನ್ನ ಶ್ರೀಪದಾರಾಧಕರ ಬಲ ಉಂಟೆನಗೆ 2ಅಂದು ಅಪಮೃತ್ಯು ಬಂದೆನ್ನಂದಗೆಡಿಸಲು ಎನ್ನತಂದೆ ಪ್ರಸನ್ವೆಂಕಟೇಶ ಬಂದು ಕಾಯಿದ ಹವಣು ಬಲ್ಲೆ 3
--------------
ಪ್ರಸನ್ನವೆಂಕಟದಾಸರು
ಕಲ್ಲುಸಕ್ಕರೆ ಕೊಳ್ಳಿರೊ - ನೀವೆಲ್ಲರು |ಕಲ್ಲುಸಕ್ಕರೆ ಕೊಳ್ಳಿರೊ ಪ.ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು |ಫುಲ್ಲನಾಭಕೃಷ್ಣನ ದಿವ್ಯನಾಮವೆಂಬಅ.ಪಎತ್ತ ಹೇರುವುದಲ್ಲ ಹೊತ್ತು ಮಾರುವುದಲ್ಲ |ಒತ್ತೊತ್ತಿ ಗೋಣಿಯ ತುಂಬುವುದಲ್ಲ ||ಎತ್ತ ಹೋದರು ಮತ್ತೆ ಸುಂಕವು ಇದಕಿಲ್ಲ |ಹತ್ತೆಂಟು ಸಾವಿರಕೆ ಬೆಲೆಯಿಲ್ಲದಂತಹ 1ನಷ್ಟಬೀಳುವುದಲ್ಲ ನಾಶವಾಗುವುದಲ್ಲ |ಕಟ್ಟಿ ಇಟ್ಟರೆ ಮತ್ತೆ ಕೆಡುವುದಲ್ಲ ||ಎಷ್ಟು ದಿನವಿಟ್ಟರೂ ಕೆಟ್ಟು ಹೋಗುವುದಲ್ಲ |ಪಟ್ಟಣದೊಳಗೊಂದು ಲಾಭವೆನಿಸುವಂಥ 2ಸಂತೆಪೇಟೆಗೆ ಹೋಗಿ ಶ್ರಮಪಡಿಸುವುದಲ್ಲ |ಎಂತು ಮಾರಿದರದಕಂತವಿಲ್ಲ ||ಸಂತತ ಪುರಂದರವಿಠಲನ ನಾಮವ |ಎಂತು ನೆನೆಯಲು ಪಾಪ ಪರಿಹಾರವಲ್ಲದೆ 3
--------------
ಪುರಂದರದಾಸರು
ಕಳವು ಕಲಿಸಿದೆಯಮ್ಮಗೋಪಿಕಮಲನಾಭಗೆ |ಉಳಿಸಿಕೊಂಡೆಯ ನಿಮ್ಮ ಮನೆಯ ಪಾಲು ಬೆಣ್ಣೆಯ ಪಆರೂ ಏಳದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ |ಗೀರುಗಂಧವಹಚ್ಚಿಹಾರವ ಹಾಕಿ ||ಕೇರಿಕೇರಿ ಪಾಲು-ಬೆಣ್ಣೆ ಸೂರೆ ಮಾಡಿ ಬಾರೆನ್ನುತ |ವಾರಿಜನಾಭನ ಕಳುಹಿದೆ ವನಜನಯನನ 1ಚಿತ್ತಜನಯ್ಯನ ಕೈಗೆ ಚಿನ್ನದ ಚೆಂಡನೆ ಕೊಟ್ಟು |ಅರ್ತಿಯಿಂದ ಸಿಂಗರಿಸಿ ಆಡಿ ಬಾರೆಂದು ||ಕತ್ತಲೆ ಬೀದಿಯ ಸುತ್ತೆ ಕಸ್ತುರಿ ತಿಲಕವನಿಟ್ಟು |ನಿತ್ಯಾನಂದಗೆ ನಿಲುವುಗನ್ನಡಿಯ ತೋರಿ 2ಸಣ್ಣಮಲ್ಲಿಗೆ ಮುಡಿಸಿ ಬಣ್ಣದ ವಲ್ಲಿಯ ಹೊದಿಸಿ |ಹೆಣ್ಣುಗಳ ಒಲಿಸುವಂತೆ ಹೇಳಿ ಬುದ್ಧಿಯ ||ಹುಣ್ಣಿವೆ ವಿೂಸಲ ಹಾಲು ಉಣ್ಣು ಉಣ್ಣು ಮೆಲ್ಲೆನುತ್ತ |ಚಿಣ್ಣನ ಕಳುಹಿದೆಯಮ್ಮ ಉಣ್ಣಲಿಕ್ಕದೆ 3ವಾರಿಜಾಕ್ಷ ಮಾಡಿದಂಥ ದೂರು ಹೇಳಿದರೆ ನಿಮಗೆ |ದೂರುಬಡಕರೆಂದುಗೋಪಿಬಯ್ವೆ ನಮ್ಮನು ||ಊರು ಮಾಡಿದ ಕೊಳಗ, ತಾಯಿ ಮಾಡಿದ ಹೊಟ್ಟೆ |ವಾರಿಜನಾಭನ ಕರೆದು ಬುದ್ಧಿಯ ಹೇಳೆ 4ಹೊಟ್ಟೆಬಾಕನಿವ ಬೆಟ್ಟದೊಡೆಯಗೆ ಪ್ರಿಯ |ಇಟ್ಟುಕೊಂಡೀರೇಳುಭುವನಉದರದಲ್ಲಿಯೆ ||ಎಷ್ಟು ಹೇಳಿದರೂ ಕೇಳ ಏನು ಮಾಡಲಮ್ಮ ನಾನು |ಕಟ್ಟು ಮಾಡಿಸಲುಬೇಕು ಪುರಂದರವಿಠಲಗೆ 5
--------------
ಪುರಂದರದಾಸರು
ಕಾಯಬೇಕೆನ್ನ ಗೋಪಾಲ ಬಂದು |ಪಾಯವನರಿಯೆನು ಭಕುತರ ಪಾಲಪಹಲವು ಜನ್ಮಗಳೆತ್ತಿ ಬಂದೆ-ಮಾಯಾ-|ಮಲವೆಂಬುದರಿಯದೆ ಭವದೊಳು ನೊಂದೆ ||ಬಲು ಭಯವಾಯಿತು ಮುಂದೆ-ನೀನು-|ಸುಲಭನೆಂದುಕೇಳಿಶರಣೆಂದೆ ತಂದೆ1ವಿತ್ತದೊಳಗೆ ಮನವಿಟ್ಟು-ನಿನ್ನ-|ಉತ್ತಮ ನಾಮದ ಸ್ಮರಣೆಯ ಬಿಟ್ಟು ||ಮತ್ತನಾದೆನು ಮತಿಗೆಟ್ಟು-ಇದ-|ಚಿತ್ತದಲಿ ತಿಳಿದಿ ಬಲು ದಯವಿಟ್ಟು 2ಜರುಗಿದ ಪಾಪಂಗಳೆಲ್ಲ-ಅನ್ಯ-|ನರರೇನ ಬಲ್ಲರು ಯಮಧರ್ಮ ಬಲ್ಲ ||ನರಕಕೆ ಒಳಗಾದೆನಲ್ಲ-ಸಿರಿ-|ವರನಾರಾಯಣ ಪುರಂದರವಿಠಲ 3
--------------
ಪುರಂದರದಾಸರು
ಕಾಯಲಾರೆನು ಕೃಷ್ಣಕಂಡವರ ಬಾಗಿಲನು |ನಾಯಿ ಕುನ್ನಿಗಳಂತೆ ಪರರ ಪೀಡಿಸುತೆ ಪಉದಯಕಾಲದಲೆದ್ದು ಸಂಧ್ಯಾವಿಧಿಯ ಬಿಟ್ಟು |ಪದುಮನಾಭನ ಪಾದಸ್ಮರಣೆ ಮೊದಲಿಲ್ಲದೆ ||ಮುದದಿ ನಿನ್ನರ್ಚಿಸದೆ ನರರ ಸದವನ ಪೊಕ್ಕು |ಒದಗಿ ಸೇವೆಯ ಮಾಡಿಅವರಬಾಗಿಲನು1ಕಲ್ಲಕರಗಿಸಬಹುದು ಹುರಿಗಡಲೆಯನು ಅರೆದು |ತೈಲವನು ತೆಗೆದಾದರುಣಲು ಬಹುದು ||ಬಲ್ಲಿದವರಾ ಮನಸು ಮೆಚ್ಚಿಸಲರಿಯೆನೈ |ಹಲ್ಲು ಕಿರಿಯುತಲಿ ಹಂಬಲಿಸಿ ಬಾಯ್ಬಿಡುತ 2ಇಂತು ನಾನಾ ಚಿಂತೆಯಲಿ ನಿನ್ನ ನೆನೆಯದೆ |ಭ್ರಾಂತಿಯೆಂತೆಂಬ ಹೆಬ್ಬಲೆಯೊಳು ಸಿಲುಕಿ |ಅಂತ್ಯವ ನಾ ಕಾಣೆ ಆದರಿಸುವರಿಲ್ಲ |ಚಿಂತೆಯ ಬಿಡಿಸಯ್ಯಪುರಂದರವಿಠಲ3
--------------
ಪುರಂದರದಾಸರು
ಕಾಯೆ ಭಾರತೀ ನಿನ್ನ ಆರಾಧಿಸುವೆ ಯನ್ನ |ಮಾಯಾಮಂದಿರನವರ ಕಿಂಕರನು ಯೆನಿಸೇ ಪವ್ಯೋಮಜ ರಮಣಿನಳಿನಭವಜಾತೆಕೃತಿಪುತ್ರೆ |ಸಾಮಜಗಮನೆ ಉರಗವೇಣಿ ಕಾಳೀ ||ಸೋಮಮುಖಿ ಬೇರೊರಸಿ ಯನ್ನ ದುರ್ಮತಿಯಳಿದು |ರಾಮಧ್ಯಾನದಲಿ ಮನ ನಿಲ್ಲಿಸುವದನಿಶ 1ಲೋಕನಾಯಿಕೆ ಶೈಲಜಾಪತಿ ಮುಖ ಪೂಜಿತಳೆ |ನೀ ಕರುಣದಲಿ ನೋಡಿಕರವಪಿಡಿಯೇ ||ಕಾಕುಮನುಜರ ಸಂಗವನು ಕೊಡದೆಯೊಂದಿನಕು |ಲೌಕಿಕವ ಸಂಪಾದಿಸಿಸಬೇಡವಮ್ಮ 2ಕೃಷ್ಣೆ ನಳನಂದಿನಿ ದ್ರುಪದ ತನುಜೆ ಶಿವಕನ್ಯೆ |ದುಷ್ಟ ಜನ ಗಿರಿಕುಲಿಶೆ ಸ್ವರ್ಣಗಾತ್ರೆ ||ಕೊಟ್ಟ ಮಾತಿಗೆ ತಪ್ಪದಲೆ ಕಾಯ್ವ ಪ್ರಾಣೇಶ |ವಿಠಲನ ಚರಣಯುಗ ಸರಸೀರುಹ ಭೃಂಗೆ3
--------------
ಪ್ರಾಣೇಶದಾಸರು
ಕಾಯೋ ಕೃಷ್ಣಭವತೋಯದಿ ಮುಳುಗಿ ಉ- |ಪಾಯವ ಕಾಣದೆ ಬಾಯ ಬಿಡುವೆನೋ ಕಾಯೋ ಕಾಯೋ ಪಭಾಗವತರ ಪ್ರಿಯ ನಾಗಭೂಷಣಸಖ|ನೀಗಿಭಯವಕರಬೇಗನೆ ಪಿಡಿಯೊ 1ಇಂದಿರೆಯರಸ ಮುಕುಂದ ಯಶೋದೆಯ |ನಂದನ ಕರುಣಿಸೊ ಇಂದೀವರಾಕ್ಷ2ಸಿಂಧುಶಯನ ಪೊರೆಯೆಂದು ಕರೆಯಕರಿ|ಬಂದು ಸಲಹಿದೆಯೋಮಂದದಯಾಳು3ಕುರುಪ ಪಿಡಿಯಲುದ್ಧರಿಸಿದೆ ತರುಣಿಯ |ನರಕಹ ನಿನಗೆ ನಾ ಪರಕೀಯನಲ್ಲೋ 4ಜಾನಕೀವಲ್ಲಭನೀನೇ ಮರೆದುಬಿಡೆ |ಕಾಣೆನೊ ಒಬ್ಬರ ನಾನವನಿಯೊಳು5ಭಕುತರಿಗೋಸುಗ ಹತ್ತವತಾರವ |ಅರ್ತಿಂದಲಿ ಕೊಂಡುತ್ತಮ ಶ್ಲೋಕ6ದ್ವೇಷಿಗಳೆನ್ನನು ಘಾಸಿಸದಂದದಿ |ಪೋಷಿಸುವುದು ಪ್ರಾಣೇಶ ವಿಠ್ಠಲನೇ 7
--------------
ಪ್ರಾಣೇಶದಾಸರು
ಕಾಯೋ ಶ್ರೀ ನಾರಸಿಂಹ ಕಾಯೋಕಾಯೋ ಶ್ರೀನಾರಸಿಂಹ ತ್ರಿಯಂಬಕಾದ್ಯಮರೇಶಘೋರಅಕಾಲಮೃತ್ಯು ಮೀರಿಬರಲು ಕಂಡುಭೀಷಣನೆ ಸುಭದ್ರ ದೋಷ ಮೃತ್ಯುಗೆ ಮೃತ್ಯುಜ್ಞಾನರಹಿತನಾಗಿ ನಾ ನಿನ್ನ ಮರೆತರೆಪ್ರಬಲೋತ್ತಮನೆನಿಸಿ ಅಬಲರ ಕಾಯದಿರೆಪಾಲಮುನ್ನೀರಾಗರ ಪದುಮೆ ಮನೋಹರ ಗೋ-
--------------
ಗೋಪಾಲದಾಸರು
ಕಾಸು ಕನಕದಾಸೆಯಾದುದೇ | ಹರಿಗೆ |ದಾಸ ಜನರನೆಲ್ಲ ಮರೆತನೇ ಕಡೆಗೆಪವಾಸುದೇವನು ಶ್ರೀನಿವಾಸನೆನಿಸಿಕೊಂಡು |ಶೇಷಗಿರಿಯ ಮೇಲೆ ವಾಸವಾಗಿರುವವಗೆಅ.ಪಛಪ್ಪನ್ನದೇಶದ ಕಪ್ಪವ ತರಿಸುವ | ಒಪ್ಪಿ ಜನರಸರ್ವ ತಪ್ಪಪಾಲಿಸುವ |ಸರ್ಪಶಯನ ನಮ್ಮ ತಾಪತ್ರೆ ಘನವೆನಲು |ಅರ್ಪಿತವಹುದೇತಿಮ್ಮಪ್ಪ| ವೆಂಕಟ ಪತಿಗೆ ||ಕಾಸು||1ಶನಿವಾರ ಶನಿವಾರ ಮನೆ ಮನೆ ಭಿಕ್ಷೆಗೈದು |ಮಿನುಗುವ ಡಬ್ಬಿಯೊಳಿಟ್ಟು ಜನರು ಪೂಜಿಸೆ ನಲಿದು |ವನಜಾಕ್ಷ ನಿನಗೆಂದು ಕಣಜಕ್ಕೆ ಸುರಿಯೆ ತಂದು |ಮನುಮಥ ಪಿತಗೆ ನಮ್ಮ ನೆನಪು ಎಂತಹುದೋ ||ಕಾಸು||2ಗಂಧಚಂದನನಾಮತೀರ್ಥ ಪ್ರಸಾದ |ಸುಂದರವಾಹನಹರಕೆ ವಿನೋದ |ಚಂದದಿ ನೋಡಲ್ ಹರಿಯ ಧನವಿಲ್ಲದಾಗದ |ಸುಂದರಾಮೂರ್ತಿಗೋವಿಂದಗೆ ಸಾರ್ವದಾ3xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಕಾಳಿಯಮರ್ದನ ರಂಗಗೆ- ಹೇಳೆ ಗೋಪಮ್ಮ ಬುದ್ಧಿ |ಕೇಳಲೊಲ್ಲನು ಎನ್ನ ಮಾತನು ಪದಿಟ್ಟ ನೀರೊಳು ಕಣ್ಣ ಮುಚ್ಚನೆ-ಹೋಗಿ |ಬೆಟ್ಟಕೆ ಬೆನ್ನಾತು ನಿಂತನೆ ||ಸಿಟ್ಟಿಲಿ ಕೋರೆದಾಡೆ ತಿಂದನೆ-ಅಹ |ಗಟ್ಟಿ ಉಕ್ಕಿನ ಕಂಬ ಒಡೆದು ಬಂದನೆ 1ಮೂರಡಿ ಭೂಮಿಯ ಬೇಡಿದನೆ-ನೃಪರ |ಬೇರನಳಿಯೆ ಕೊಡಲಿ ಪಿಡಿದನೆ ||ನಾರಮಡಿಯನುಟ್ಟು ಬಂದನೆ-ಅಹ |ಚೋರತನದಿ ಪಾಲ್ಬೆಣ್ಣೆಯ ತಿಂದನೆ 2ಬತ್ತಲೆ ನಾರಿಯರನಪ್ಪಿದ-ಹೋಗಿ ||ಉತ್ತಮಾಶ್ವವನು ಹತ್ತಿದ ||ಹತ್ತವತಾರವ ತಾಳಿದ-ನಮ್ಮ |ಭಕ್ತವತ್ಸಲ ಸ್ವಾಮಿ ಪುರಂದರವಿಠಲನು 3
--------------
ಪುರಂದರದಾಸರು
ಕಾಳೀ ದ್ರೌಪದಿ ಭಾರತೀನಿನ್ನಪಾದಕೀಲಾಲಜನುತಿಪೆಪ್ರತಿ||ವೇಳೆಯೊಳಗೂ ಲಕ್ಷ್ಮೀಲೋಲನ ಚರಣಾಬ್ಜ |ವಾಲಗವೀಯೇ ಸುಶೀಲೆ ಸ್ವಯಂಭುಜೆ ಪಇಂದ್ರಸೇನಾ ನಳನಂದಿನಿ ಶಿವಕನ್ಯಾ |ನಂದಪೂರಿತಳೆ ಚಂದ್ರಾ |ನಿಂದಕರಿಪುಜ್ಞಾನಸಾಂದ್ರೆ ಸುಪತಿವ್ರತೆಕಂದುಗೊರಳ ವಾರುಣೀಂದ್ರ ಅಂಡಜಾಧಿಪ ||ಇಂದ್ರನಿರ್ಜರವೃಂದ ಮುನಿಗಣವಂದಿತ ಪದಾರವಿಂದೆ ಭವದಲಿನೊಂದೆ ಭಯವಾರೆಂದು(ನಿನ್ನೊಡಿವೆಂದದಲಿ ನಿನ್ನಡಿ ಪೊಂದಿ ಬೇಡುವೆ ನಂದದಲಿ)ಕೊಡೆ (ಅ)ಮಂದಕರುಣೆ 1ತರಣಿಯಾನಂದ ಭಾಸೆ |ಪ್ರದ್ಯುಮ್ನ ದೇವರ ಸುತೆಕ್ಲೇಶಹರಿಸೆ |ಹರಹಿ ಯನ್ನಯ ಮೇಲೆ ಕರುಣಾಪಾಂಗದ ದೃಷ್ಟಿ |ದುರುಳಮತಿ ಪರಿಹರಿಸಿತವಕಹರಿ-ಗೆರಗೊ ಮನ ಕೊಡುಪರಮಧಾರ್ಮಿಕೆಕರೆವೆ ಬಂದೀಗಿರೆ ಹೃದಯಾಬ್ಜದಿ |ಉರು ಪರಾಕ್ರಮೆಪರತರಳೆ ಸದಾಪೊರೆಯೆ ಬಿಡದಲೆಕರಮುಗಿವೆ 2ವಾಣೀ ಸುಂದರಿ ವರದೆ ಸಾಧ್ವೀ |ವೀಣಾಪಾಣಿ ಪೇಳುವೆನೆ ಇದೇ |ಹೀನ ವಿಷಯವಲ್ಲೆ ಪೋಣಿಸಿ ಸುಮತಿ ಶ್ರೀಪ್ರಾಣೇಶ ವಿಠಲನ ಧ್ಯಾನದೊಳಿಹ ಮ-ಹಾನುಭಾವರ ಸಂಗ ಪಾಲಿಸೇ ||ಮಾನಿನೀ ಕುಲಮೌಳಿಮಣಿಚಂ |ದ್ರಾನನೆ ಮದಗಜಗಮನೆ ಸು-ಶ್ರೋಣಿ ಅಷ್ಟಾಪದ ಸುಕಾಂತೆ 3
--------------
ಪ್ರಾಣೇಶದಾಸರು
ಕುಸುಮನಾಭನ ಮಡದಿಯರುಹೆಸರ್ಹೇಳ ಅರ್ಥಿಲಿಹಸುಳೆಯರು ಹಾಡಿ ಪಾಡಿಕುಶಲದಿಕೋಲಹೊಯ್ದುಪ.ಬಂದು ರುಕ್ಮಿಣಿ ಭಾವೆಗೆವಂದಿಸಿ ಭದ್ರೆ ದ್ರೌಪತಿಮಂದಾರಮಲ್ಲಿಗೆ ಸಂಪಿಗೆಚಂದದಿಸೂರ್ಯಾಡಿ1ಕೃಷ್ಣನರಸಿಯರು ಇಬ್ಬರುಬುಕ್ಕಿಟ್ಟುಸೂರ್ಯಾಡಿಗಟ್ಟಿ ಕಂಕಣದ ಕರದಲೆಮುಟ್ಟಿ ಆಲಂಗಿಸುತ 2ಹರದಿರುಕ್ಮಿಣಿ ಕೈಯಮರಿಯದಲೆ ಹಿಡಿದು ದ್ರೌಪತಿದೊರೆಯರ ಹೆಸರ್ಹೇಳಿಮುಂದಕೆ ಬರಬೇಕೆಂದರು 3ಸತ್ಯಭಾಮೆಯ ಕೈಯಅರ್ಥಿಲೆ ಹಿಡಿದು ದ್ರೌಪತಿಮತ್ತೆ ಪತಿಗಳ ಹೆಸರುವಿಸ್ತರಿಸೆಂದರು 4ವಾರಿಜಾಕ್ಷನಹೆಸರುನಾರಿಯರಿಬ್ಬರು ಹೇಳಿಶ್ರೀ ರಾಮೇಶನ ಮಡದಿಯರುಏರಿದರು ಆಸನವ 5
--------------
ಗಲಗಲಿಅವ್ವನವರು