ಒಟ್ಟು 26040 ಕಡೆಗಳಲ್ಲಿ , 136 ದಾಸರು , 8537 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೆನ್ನ ಮಾತ ಕೇಳದು - ಮಂದಜ್ಞಾನದಿ |ತನುವಿನಾಸೆಯ ಬಿಡಲೊಲ್ಲದು ಪವನಜನಾಭನೆ ನಿನ್ನ ನಾಮ ಸಾಸಿರವ |ನೆನೆಯದೆ ಕಂಡಕಡೆಗೆ ಎರಗುತಲಿದೆ ಅ.ಪದೇಹ ಸಂಬಂಧಿಗಳಾದವರೈವರು |ಮೋಹಪಾಶದಿಕಟ್ಟಿಬಿಗಿದಿಹರೈ ||ಕಾಯಅನಿತ್ಯವೆಂಬುದನರಿಯದೆ |ಮಾಯಾಪ್ರಪಂಚದಿಂದಲಿ ಬದ್ಧನಾಗಿಹೆ1ಸಾಧುಸಜ್ಜನರ ಸಂಗವ ಮಾಡಿ ಪರಗತಿ-|ಗಾಧಾರವನು ಮಾಡಲೊಲ್ಲದಯ್ಯ ||ಕ್ರೋಧಕುಹಕದುಷ್ಟರೊಡನಾಡಿ ಕಾಲನ |ಬಾಧೆಗೆ ಒಳಗಾಗುವಂತೆ ಮಾಡುತಲಿದೆ 2ಮದಗಜ ಮೈಯ ಮರೆತು ಮುಂದುಗಾಣದೆ |ಕದುವಿನೊಳಗೆ ಬಿದ್ದಂತಾದೆನಯ್ಯ ||ಹೃದಯ ಕಮಲದಲಿ ನಿಂತ ರಕ್ಷಿಸೋ ಎನ್ನ |ಪದುಮಾಕ್ಷ ವರದ ಶ್ರೀಪುರಂದರವಿಠಲ3
--------------
ಪುರಂದರದಾಸರು
ಮನವೆಂಬ ಬೇಟೆಗಾರಹತ್ತಿಂದ್ರಿಯ ನಾಯಿಮನ ಬಂತು ಘೋರವಾದಮನಮನಾದಿ ಮೃಗಂಗಳನುಮಹಾಕೊಲೆಯ ಕೊಲ್ಲುತಿಹನುಪಮಹಾಪ್ರಪಂಚ ಬಲೆಯುತಾಪತ್ರಯತೊಡಕುಮಹಾವಿಷಯ ಮೇವು ಮಹಾವಿಷಯಮೇವಿಗೆ ಬಂದು ಮನುಜಮೃಗಗಳು ಕೆಡವುತಿಹವು1ನಯನೇಂದ್ರಿಯಗಳೆಂಬ ನಾಯಿಕಂಡಾಗಲೆ ಹಿಡಿವುದುಪ್ರಾಯ ಒಳ್ಳೆಯ ನಾಯಿನಿಯತವಿಹುದಲ್ಲೆ-ನ್ನದಲೆ ನೆನೆದಾಗಲೇ ಹಿಡಿಯುತಿಹುದು2ಒಂದಕ್ಕದೊಂದು ವೇಗವುಹತ್ತೀಪರಿನಾಯಿಬಂದರೆಂತೊಂದು ಸತ್ವವುಬಂದು ಹಿಡಿಯದಿರೆಮತ್ತೊಂದಾದರೆ ಹಿಡಿದು ಕೆಡವುತಿಹುದು3ಬಾಹ್ಯದ ಅಡವಿಯೊಳಗೆಮೃಗಂಗಳಿಗೆ ಬಹಬಾಧೆ ನಿತ್ಯದೊಳಗೆಬಾಹ್ಯ ವಿಷಯಪೇಕ್ಷೆಯಬಿಟ್ಟರೆ ಬದಿಯ ನಾಯಿಗಳು ಸೇರದಿಹವು4ತನಗೆ ತಿಳಿಯಬೇಕುತಾನುಳಿವುದಕೆ ತನಗೇಯಬೇಕುತನ್ನ ಚಿದಾನಂದನೆಂದು ತನ್ನ ಕಂಡರೆ ಭಯವಿಲ್ಲ5
--------------
ಚಿದಾನಂದ ಅವಧೂತರು
ಮನುಜ ಕೇಳೋ ಮನುಜ ಕೇಳೋಮನುಜ ಕೇಳೆನ್ನ ಮಾತನು ಮುಕ್ತನಾಗುವಿಪವೇಸಿಯ ಮೇಲಿಹವಾಸನೆತೊಲಗಿಸುಮೀಸಲ ಮನವಿಡು ಈಶ ನೀನಾಗುವಿ1ವಿಷಯಂಗಳಲಿ ನೀ ಬಯಸಿ ಬಿದ್ದ ತೆರಹುಸಿಯದೆನ್ನನು ಹೊಂದುಹರನು ನೀನಾಗುವಿ2ಸುದತಿಯ ಸುತರನುನಿತ್ಯನೀ ನೀ ನಂಬದೆಚಿದಾನಂದನ ಹೊಂದುಮುಕ್ತನೀನಾಗುವಿ3
--------------
ಚಿದಾನಂದ ಅವಧೂತರು
ಮನುಜ ತಪ್ಪೆ ಮಂಡೆಯ ಬೋಳುಶುನಕತಪ್ಪೆ ಕುಂಡೆಯ ಬೋಳುತೃಣದಾಸೆಗೆ ಕುರಿಯ ಸರ್ವಾಂಗ ಬೋಳ ಕಂಡೆನಯ್ಯ 1ತನುಬೋಳಾದ ಬೋಳೆಲ್ಲ ತಮ್ಮ ಗೋಳು ಕಾಣಿರೊಮನದೊಳು ದುರಾಶೆಂಬ ಹೀನಕ್ಲೇಶಗಳ್ಹೆಚ್ಚುತಿರಲು 2ಅನಾಥಬಂಧು ಹಯವದನ ನಿನ್ನಧ್ಯಾನ ಚಿಮ್ಮಟದೊ [ಳೆನ್ನ] ಕೂದಲಕಿತ್ತುಮುಕ್ತಿಬೋಳನ ಮಾಡೊ 3
--------------
ವಾದಿರಾಜ
ಮನುಜ ಶರೀರವಿದೇನು ಸುಖ - ಇದನೆನೆದರೆ ಘೋರವಿದೇನು ಸುಖ ? ಪ.ಜನನ - ಮರಣ ಮಲಕೂಪದಲ್ಲಿದ್ದುಅನುಭವಿಸುವುದು ಇದೇನು ಸುಖ ?ತನುವಿದ್ದಾಗಲೇ ಹೃದಯದ ಶೌಚದಸ್ತನಗಳನುಂಬುವುದೇನು ಸುಖ ? 1ದಿನವು ಹಸಿವುತೃಷೆಘನ ರೋಗಂಗಳಅನುಭವಿಸುವುದು ಇದೇನು ಸುಖನೆನೆಯಲುನಿತ್ಯ ನೀರ್ಗುಳ್ಳೆಯಂತಿಪ್ಪತನುಮಲಭಾಂಡವಿದೇನು ಸುಖ ? 2ಪರಿಪರಿ ವಿಧದಲಿ ಪಾಪವ ಗಳಿಸುತನರಕಕೆ ಬೀಳುವುದೇನು ಸುಖ ?ಪುರಂದರವಿಠಲನ ಮನದಿ ನೆನೆದು ಸದ್ಧರುಮದೊಳ್ ನಡೆದರೆ ಆಗ ಸುಖ 3
--------------
ಪುರಂದರದಾಸರು
ಮನುಷ್ಯನಾದ ಫಲವೇನುಶ್ರೀನಿವಾಸನ ಕಂಡು ಸುಖಿಯಾಗದನಕ ಪ.ಭಾನುಉದಿಸದ ಮುನ್ನ ಸ್ವಾಮಿ ಪುಷ್ಕರಿಣಿಯಲಿಸ್ನಾನಸಂಧ್ಯಾನಜಪಗಳನೆ ಮಾಡಿಸಾನುರಾಗದಿ ಶ್ರೀವರಹಗೆ ನಮಿಸಿತಾನಖಿಳ ಪುಣ್ಯವನು ಸೂರೆಗೊಳದನಕ 1ಹಸ್ತದಲಿ ವೈಕುಂಠವೆಂದು ತೋರುವ ವಿಮಾನಸ್ಥಾಚ್ಯುತನ ಕರ್ಮಗುಣನಾಮವಸ್ವಸ್ಥಮತಿಯಾಗಿ ಕೊಂಡಾಡಿ ಕುಣಿದಾಡಿ ತಾವಿಸ್ತರದಕೈವಲ್ಯಪಡೆಯದನಕ2ತುಲಸಿ ಬರ್ಹಕೆ ಪೋಲ್ವ ಆ ಮಹಾಪ್ರಸಾದವನುಅಲಸದೆ ಸೇವಿಸಿ ಕೃತಾರ್ಥನಾಗಿಹಲವು ದುರಿತಾರಿ ಪ್ರಸನ್ವೆಂಕಟಗಿರಿಯನಿಲಯನೆ ಗತಿಯೆಂದು ಭಜಿಸದನಕ 3
--------------
ಪ್ರಸನ್ನವೆಂಕಟದಾಸರು
ಮನೆಯೊಳಗಾಡೊ ಗೋವಿಂದ-ನೆರೆ-|ಮನೆಗಳಿಗೇಕೆ ಪೋಗುವೆಯೊ ಮುಕುಂದ ಪನೊಸಲಿಗೆ ತಿಲಕವನಿಡುವೆ-ಅಚ್ಚ-|ಹೊಸಬೆಣೆಯಿಕ್ಕಿ ಕಜ್ಜಾಯವ ಕೊಡುವೆ ||ಹಸನಾಧಾಭರಣಗಳಿಡುವೆ-ಚಿಕ್ಕ-|ಹಸುಳೆ ನಿನ್ನನು ನೋಡಿ ಸಂತೋಷಪಡುವೆ 1ಅಣ್ಣಯ್ಯ ಬಲರಾಮಸಹಿತ-ನೀ-|ನಿನ್ನೆಲ್ಲಿಯಾದರೂ ಆಡುವುದು ವಿಹಿತ ||ಹೆಣ್ಣುಗಳೇಕೋ ಸಂಗಾತ-ರಂಗ |ಬಿನ್ನಪಪರಿಪಾಲಿಸೊ ಜಗನ್ನಾಥ2ಜಾರನೆನಿಸಿಕೊಳಲೇಕೆ-ರಂಗ-|ಚೋರನೆನಿಸಿಕೊಂಬ ದೂರು ನಿನಗೇಕೆ ||ವಾರಿಜಾಕ್ಷಿಯರ ಕೂಡಲೇಕೆ-ನಮ್ಮ-|ಪುರಂದರವಿಠಲರಾಯ ಎಚ್ಚರಿಕೆ 3
--------------
ಪುರಂದರದಾಸರು
ಮನ್ನಾರು ಕೃಷ್ಣಗೆ ಮಂಗಳ ಜಗವಮನ್ನಿಸಿದೊಡೆಯಗೆಮಂಗಳ ಪ.ಬೊಮ್ಮನ ಪಡೆದಗೆ ಭಕ್ತರುದ್ಧಾರಿಗೆಕಮ್ಮಗೋಲನಯ್ಯಗೆ ಮಂಗಳ ||ಧರ್ಮಸಂರಕ್ಷಗೆ ದಾನವ ಶಿಕ್ಷಗೆನಮ್ಮ ರಕ್ಷಕನಿಗೆ ಮಂಗಳ 1ತುರುಗಳ ಕಾಯ್ದಗೆ ಕರುಣಾಕರನಿಗೆಗಿರಿಯನೆತ್ತಿದನಿಗೆ ಮಂಗಳ ||ಪುರದ ತಿಮ್ಮಪ್ಪಗೆ ವಾರಿಜನಾಭಗೆಹರಿರ್ವೋತ್ತಮನಿಗೆ ಮಂಗಳ 2ದೇವಕಿ ದೇವಿಯ ತನಯಗೆ ಮಂಗಳದೇವ ತಿಮ್ಮಪ್ಪಗೆ ಮಂಗಳ ||ಮಾವನ ಕೊಂದು ಮಲ್ಲರ ಮಡುಹಿದಪುರಂದರವಿಠಲಗೆ ಮಂಗಳ 3
--------------
ಪುರಂದರದಾಸರು
ಮರತೆ ಮರತೆ ಪ್ರಪಂಚವ ಎನಗೆ ಈಗಹರಿಯಿತು ಅಜ್ಞಾನದ ಋಣವು ಅಯ್ಯಪಸುರಪತಿಕಲ್ಪವೃಕ್ಷವು ತಾನು ಈಗಸಿರಿಗಿರಿಯನೀಗ ಬಯಸೆನು ನಾನುಪರಮಬಗಳೆ ತಾನಾಗಿಹ ನಾಶವಹಮುರುಕಿ ದೇಹ ಭ್ರಾಂತಿಯಲಿರುವೆನೆ ಕೇಳಕ್ಕಯ್ಯ1ಸತ್ಯವಾದ ಕಾಮಧೇನುವು ಅದು ಈಗಬುತ್ತಿಗೆ ಕೈ ನೀಡುವುದೇ ಕೇಳಕ್ಕಯ್ಯನಿತ್ಯಮಂಗಳೆ ಬಗಳೆಯಾಗಿಹಳು ಸ್ವಪ್ನದಿ ತೆರದಿಮಿಥ್ಯಸಂಸಾರಕೆ ಆಸೆ ಮಾಡುವೆನೆ ಕೇಳಕ್ಕಯ್ಯ2ಚಿಂತೆ ದೂರ ಚಿಂತಾಮಣಿಯನುಕ್ಷುದ್ರ ದೂರ ಕಲ್ಪವೃಕ್ಷವನು ನೆನೆವೆ ಕೇಳಕ್ಕಯ್ಯಚಿಂತಾಯಕ ಚಿದಾನಂದನಾದ ಬಗಳೆ ಇರುವಾಗಎಂತು ಜನನ ಮರಣದ ಚಿಂತೆ ಕೇಳಕ್ಕಯ್ಯ3
--------------
ಚಿದಾನಂದ ಅವಧೂತರು
ಮರತೆ ಮರತೆ ಬಗಳ ಮಹಾಮಂತ್ರವಸುರತರುವಿಗೆ ತರುವಾದ ಬ್ರಹ್ಮಾಸ್ತ್ರವಪಭುಗುಭುಗಿಸಿ ಭುವನಗಳನ್ನೆಲ್ಲಾ ಪಾಲಿಪ ಮಂತ್ರಧಗಧಗಿಸಿ ಝಗ ಝಗಿಸಿ ನಿಗಿ ನಿಗಿವ ಮಂತ್ರಜಗದೊಡೆಯರಾದವರಿಗೆ ಒಡೆಯಳ ಮಂತ್ರತಗತಗನೆ ಶತಕೋಟಿರವಿಸೂಸುವ ಮಂತ್ರ1ಸರಸಿಜಾಸನ ತಾನೆ ಜಪಿಸುತಿಹ ಮಂತ್ರಹರಿಹರರುಅನವರತಸ್ಮರಿಸುವಾ ಮಂತ್ರಸುರಪ ಇಂದ್ರಾಗ್ನಿಗಳಿಗಭಯ ನೀಡಿಹ ಮಂತ್ರದುರುಳರಿಪು ವನಗಳಿಗೆದಾವಾಗ್ನಿಮಂತ್ರ2ಹರಿಯ ಸಮಭಾಗ್ಯ ಕೋ ಎಂದು ಕೊಡುವ ಮಂತ್ರಹರಗೆ ಸರಿಯಾದ ಸತ್ವವನೀವ ಮಂತ್ರಗುರುಚಿದಾನಂದ ತಾನಾದ ಬಗಳ ಮಹಾ ಮಂತ್ರಪರಬ್ರಹ್ಮ ಸತ್ಯ ಬ್ರಹ್ಮಾಸ್ತ್ರ ಮಂತ್ರ3
--------------
ಚಿದಾನಂದ ಅವಧೂತರು
ಮರವನು ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ ಪ.ಒಂಟಿ ಕೊಂಬಿನ ಪಕ್ಷಿ ಒಳಗೆ ಕರುಳಿಲ್ಲಗಂಟಲು ಮೂರುಂಟು ಮೂಗು ಇಲ್ಲಕುಂಟು ಮನುಜನಂತೆ ಕುಳಿತಿಹುದು ಮನೆಯೊಳಗೆಎಂಟು ಹತ್ತರ ಭಕ್ಷ ಭಕ್ಷಿಸುವುದು 1ನಡುವೆ ತಲಿಯೆಂಬುವದು ನಡು ನೆತ್ತಿಯಲಿ ಬಾಯಿಕಡು ಸ್ವರಗಳಿಂದ ಗಾನ ಮಾಡ್ವದುಅಡವಿಯಲಿ ಹುಟ್ಟುವುದು ಅಂಗವೆರಡಾಗುವುದುಬಡತನ ಬಂದರೆ ಬಹಳ ರಕ್ಷಿಪುದು 2ಕಂಜ ವದನೆಯರ ಕರದಲ್ಲಿ ನಲಿದಾಡುವುದುಎಂಜಲನುಣಿಸುವುದು ಮೂರ್ಜಗಕೆರಂಜಿಪಶಿಖಾಮಣಿ ಸಿಂಹಾಸನದ ಮೇಲಿಪ್ಪಸಂಜೀವ ಪಿತ ಪುರಂದರವಿಠಲನೇ ಬಲ್ಲ * 3
--------------
ಪುರಂದರದಾಸರು
ಮರವನೇರಿ ಮಡುವದು ಮುಂದಾ ಶ್ರೀ ಕೃಷ್ಣ ಕಾಳಿಶಿರವನೇರಿ ತಾಂಡವವಾಡಿದಾಸ್ಮರಿಸಲವನ ತರುಣಿಯರಿಗೆ ವರವ ಪ್ರಾಣವಿರಿಸಿ ಕೊಟ್ಟುಶಿರದಿಚರಣಗುರುತನಿರಿಸಿ ಪೊರೆದ ಕಾಳಿಂಗನನು ಕೃಷ್ಣ 1ರಜತಗಿರಿಗೆ ಸದೃಶವೆನಿಸಿದ ಶ್ರೀಕೃಷ್ಣ ಯಮ-ಳಾರ್ಜುನವೆಂಬ ಮರವ ಕೆಡಹಿದಅಜಗರನ ನಿಜ ಉರಕೆ ಬಿಜಯಂಗೈದು ಸುಜನೋದ್ಭಾರಿಭಜಿಸೆ ಗೋವ್ರಜವ ಕಾಯ್ದ ಅಜಗರನ ಸೀಳಿ ಕೃಷ್ಣ 2ಚಂದ್ರಮುಖಿಯರುಡುವ ಶೀರೆಯ ಶ್ರೀಕೃಷ್ಣನು ಮರದಿಬಂಧಿಸಿಟ್ಟು ಮಾನಗಳೆವೆಯಾನಂದನನ್ನು ಬಂದು ತುಡುಕಿದಂದು ಫಣಿಯ ಹೊಂದಿಸಿದೆನಂದಗೋಪಿ ಕಂದ ಗೋವಿಂದದಾಸವಂದ್ಯ 3
--------------
ಗೋವಿಂದದಾಸ
ಮರವೆ ಎಂಬುದು ಎಲ್ಲಿಹುದೋ ಯೋಗಿಗೆಮರವೆ ಎಂಬುದು ಎಲ್ಲಿಹುದೋಅರಿತು ಸರ್ವವ ಸರ್ವದಲಿ ಆತ್ಮ ತಾನಾಗಿರ್ದುನಿರುತ ಕಾಲದಿ ಮುಕ್ತಗೆ ಅವಗೆಪನಿರ್ವಿಕಲ್ಪಸಮಾಧಿನಿತ್ಯನಿತ್ಯಳವಟ್ಟುದುರ್ವಿಘ್ನಗಳೆಜರಿದುಗರ್ವದೂರವಾಗಿ ಗಾಢ ತೂರ್ಯದೊಳಿದ್ದುನಿರ್ವಹಿಸಿ ನಿಜಸುಖವನುಪರ್ವಿಪಸರಿಸಿ ತನಗೆ ಪ್ರತಿಗಾಣುತಿರುತಿಪ್ಪಸರ್ವಸಾಕ್ಷಿ ತಾನಾದವಗೆ1ನಾದದೊಳು ಕಿವಿಯಿಟ್ಟು ನಾಸ್ತಿಮನವಸಿಮಾಡಿಬೋಧೆ ಬಲಿದಾ ಲಹರಿಯಹಾದಿಯಂತುಟೋ ಅಂತು ಹರಿದಾಡುತಲಿ ತಾಭೇದಾ ಭೇದಗಳನುಳಿದುಸಾಧು ಸಂಗವ ಕೂಡಿ ಸಂತುಷ್ಟನಾಗಿಪ್ಪನಾದ ಮೂರುತಿಯಾಗೆ2ಪರಮಸಾರವ ತಿಳಿದು ಪರಿಪೂರ್ಣನಾಗಿರುತವರಚಿದಾನಂದ ಗುರುವೆಚರಣಸ್ಮರಣೆಯ ಮನದಿ ಚಲಿಸದಂತಾವಾಗಹಿಡಿದು ನಾಲಗೆಯೊಳಿರಿಸಿಗುರುವೆ ಗುರುವೆ ಎಂದು ತಾನಾಗಿರ್ದುನಿರತಿಶಯದ ಪರಮಗೆ3
--------------
ಚಿದಾನಂದ ಅವಧೂತರು
ಮರುಳಾಟವೇಕೊ - ಮನುಜಾ |ಮರುಳಾಟವೇಕೊ? ಪ.ಊಧ್ರ್ವ ಪುಂಢ್ರವಿಲ್ಲದ ಮುಖವ ತಿದ್ದಿ ನೋಡಲೇಕೊ |ಶುದ್ದ ಸಾತ್ತ್ವಿಕವಿಲ್ಲದನ ಬುಧ್ಧಿ ಏತಕೊ ||ಕದ್ದು ಹೊಟ್ಟೆಹೊರಕೊಂಬುವಗೆ ಶುದ್ಧ ಶೀಲವೇಕೊ |ಮಧ್ವಶಾಸ್ತ್ರ ಓದದವನವಿದ್ಯೆಏತಕೊ - ಮನುಜಾ1ಮೃತ್ತಿಕೆ ಶೌಚವಿಲ್ಲದವಗೆ ಮತ್ತೆ ಸ್ನಾನ - ಜಪವೇಕೊ |ಹಸ್ತಕಟ್ಟಲರಿಯದವಗೆ ಅಗ್ನಿಹೋತ್ರವೇತಕೊ ||ತೊತ್ತು ಹೋಗುವವಗೆ ಪರತತ್ತ್ವವಿಚಾರವೇಕೋ |ಕರ್ತೃ ಕೃಷ್ಣನ ನೆನೆಯದವನ ಉತ್ತಮತನವೇಕೊ 2ಹಸಿವೆ ತೃಷೆಯ ತಾಳದವನ ಹುಸಿಯ ವೈರಾಗ್ಯವೇಕೊ |ವಿಷಯ ಮೆಚ್ಚಿದವಗೆ ಪರದ ಕುಶಲವೇತಕೊ ||ಹುಸಿಜಪಗಳ ಮಾಡುವವಗೆ ಮುಸುಕಿನ ಡಂಬಕವೇಕೊ |ಕುಸುಮನಾಭಗರ್ಪಿಸದ ಅಶನವೇತಕೊ - ಮನುಜಾ 3ಸೂಳೆಗಾರನಿಗೆ ತುಳಸಿ ಮಾಲೆಯ ಶೃಂಗಾರವೇಕೊ ||ಶ್ರೀಲೋಲನ ನೆನೆಯದವನ ಬಾಳುವೆಯೇತಕೊ |ಮೂಲಮಂತ್ರವರಿಯದವಗೆ ಮೇಲೆ ದೇವತಾರ್ಚನೆ ಏಕೊ |ಸಾಲಗ್ರಾಮದಭಿಷೇಕವಿಲ್ಲದ ತೀರ್ಥವೇತಕೊ ಮನುಜಾ 4ಕಂಡ ನಾರಿಯೀಕ್ಷಿಸುವ ಲಂಡಗೆ ಪುರಾಣವೇತಕೋ |ಭಂಡ ಮಾತನಾಡುವನ ಪಾಂಡಿತ್ಯವೇತಕೊ |ಪುಂಡರೀಕವರದ ಶ್ರೀ ಪುರಂದರವಿಠಲನ |ಕಂಡು ಭಜಿಸಲರಿಯದವನವಿತಂಡಬುಧ್ಧಿಯೇತಕೋ5
--------------
ಪುರಂದರದಾಸರು
ಮರುಳು ಮಾಡಿಕೊಂಡೆಯಲ್ಲೇ - ಮಾಯಾದೇವಿಯೆ ಪಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಪ್ಪಂತೆ ಅ.ಪಜಾÕನಿಗಳುನಿತ್ಯಅನ್ನ-ಪಾನದಿಗಳನ್ನು ಬಿಟ್ಟು |ನಾನಾವಿಧ ತಪವಿದ್ದರು-ಧ್ಯಾನಕೆ ಸಿಲುಕದವನ 1ಸರ್ವಸಂಗವ ಬಿಟ್ಟು ಸಂ-ನ್ಯಾಸಿಯಾದ ಕಾಲಕು |ಸರ್ವದಾ ತನ್ನೆದೆಯ ಮೇಲೆ ಬಿಡದೆ ನಿನ್ನ ಧರಿಸಿಪ್ಪಂತೆ 2ಪ್ರಳಯಕಾಲದಲ್ಲಿ ಆಲ-ದೆಲೆಯ ಮೆಲೆ ಮಲಗಿದ್ದಾಗ |ಹಲವು ಆಭರಣಂಗಳು-ಜಲವು ಆಗಿ ಜಾಣತನದಿ 3ರಂಗನು ಭುಲೋಕದಿ-ಭುಜಂಗ ಗಿರಿಯೊಳಾಲ ಮೇಲು |ಮಂಗಪತಿಯಾಗಿ ನಿನ್ನ-ಅಂಗೀಕರಿಸುವಂತೆ 4ಮಕ್ಕಳ ಪಡೆದರೆ ನಿನ್ನ-ಚೊಕ್ಕತನವು ಪೋಪುದೆಂದು |ಪೊಕ್ಕುಳೊಳು ಮಕ್ಕಳ ಪಡೆದು-ಕಕ್ಕುಲಾತಿ ಪಡುವಂತೆ 5ಎಡಕೆ ಭೂಮಿ ಬಲಕೆ ಶ್ರೀಯು-ಎದುರಿನಲ್ಲಿ ದುರ್ಗಾದೇವಿ |ತೊಡೆಯ ಮೇಲೆ ಲಕುಮಿಯಾಗಿ- ಬಿಡದೆ ಮುದ್ದಾಡುವಂತೆ 6ಎಂದೆಂದಿಗೂ ಮರೆಯೆ ನಿನ್ನಾ-ನಂದದಿ ಜನರಿಗೆಲ್ಲ |ತಂದು ತೋರೇ ಸ್ವಾಧೀನ ಪು-ರಂದರವಿಠಲ ಹರಿಯ 7
--------------
ಪುರಂದರದಾಸರು