ಒಟ್ಟು 1168 ಕಡೆಗಳಲ್ಲಿ , 97 ದಾಸರು , 984 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿವಾಸುದೇವನೆ ಬ್ಯಾಸರಿಲ್ಲದೆ ದಾಸನ ಮೊರೆ ಕೇಳು ಜಗದೀಶ ನನ್ನ ಸಮಾನ ಕರುಣಾಭೂಪರುಂಟೆ ಪೇಳು ಪ. ಕಾಲಕಾಲಕೆ ಪೇಳಲಂಜುವೆ ಶ್ರೀಲಲಾಮ ಹರಿಯೆ ಆದರೆ ಬೀಳಗೊಳಿಸುವ ದೇಹಬಾಧೆಯು ತಾಳಲಾಪ ಹೊರೆಯೆ ಎರಡೇಳು ಭಕ್ತಿಯ ಮ್ಯಾಳವರಿಯದೆ ಹಾಳು ಮೋಹ ತೆರೆಯೆ ಮುಳಿಗೇಳಲಾರೆನು ಮಾಧವನೆ ಕರುಣಾಳು ಕಾಯೊ ದೊರೆಯೆ 1 ಯಾರ ಧನವಿನ್ಯಾರ ಭೂಮಿಯು ಯಾರ ವಸ್ತುಗಳಿವು ಕುಂಬಾರ ಭಾಂಡಗಳಂತೆ ನಶ್ವರ ತೋರಲ್ಯಾಕೆ ಫಲವು ಲಘು ನೀರಗುಳ್ಳೆಯ ಪೋಲ್ವ ದೇಹಕೆ ಸೇರಿದ ಸನ್ನಹವು ಬಿಳಿ ಭಾರ ಪೊತ್ತ ಥರವು 2 ಅದರಿಂದ ವೆಂಕಟಮಂದಿರನೆ ನಿನ್ನಿಂದ ಮಾತ್ರ ತಿಳಿಸು ಮೂರ್ತಿ ತಾಪಗಳಿಂದ ಬ್ಯಾರೆಗೊಳಿಸು ದ್ವಿಜ ವೃಂದ ರಕ್ಷಕನೆಂಬ ಬಿರುದನು ಎಂದೆಂದಿಗು ಘಳಿಸು ಭವ ಬಂಧ ಮೋಚಕ ನಿನ್ನ ಸೇವಾನಂದವಾರ್ಧಿಗಿಳಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿಸರ್ವೋತ್ತಮನೆಂದರಸುವರು ಪ ಹರಿದಾಸರಿವರು ಧರೆಯೊಳಿವರಿಗೆ ಸರಿಗಾಣೆ ಕೇಳಮ್ಮ ಜಾಣೆ ಅ.ಪ ಸಾಧುಸಜ್ಜನರಿಗೆ ಬಾಗುವರು ವೇದಕೆ ನಮಿಸುವರು ವಾದವಾಂಛಲ್ಯವ ತೊಡದಿಹ್ಯರು ಭೇದಿಲ್ಲದಿವರು 1 ಕಾಮ ಕ್ರೋಧಾದಿಗಳು ಜೈಸಿಹ್ಯರು ತಾಮಸಬಿಟ್ಟಿಹರು ಭೂಮಿ ಮೋಹಾದಿಗಳನಳಿದಿಹ್ಯರು ಸ್ವಾಮಿನ ಭಜಿಸುವರು 2 ಕ್ಲೇಶಪಂಚಕದಿಂದುಳಿದಿಹ್ಯರು ಮೋಸಕೆ ಒಳಪಡರು ಅಶಪಾಶಗಳೆಲ್ಲ ತುಳಿದಿಹ್ಯರು ವಾಸನೆ ತೊಳೆದಿಹ್ಯರು 3 ಮೆಚ್ಚದೆ ಸಂಸಾರ ತುಚ್ಛೀಕರಿಸಿಹ್ಯರು ಎಚ್ಚರಗೊಂಡಿಹ್ಯರು ಅಚ್ಚುತಾನಂತನೆ ಗತಿಯೆಂಬುವರು ಬಚ್ಚಿಟ್ಟು ನೆನೆಯುವರು 4 ಹರಿಯೆ ಪರದೈವವೆಂದರಿತಿಹ್ಯರು ಹರಿಯ್ಹೊರತಿಲ್ಲೆಂಬುವರು ಸರುವ ಜಗಭರಿತನೆಂದವರು ಸಿರಿರಾಮನ್ನ ತಿಳಿದಿಹ್ಯರು 5
--------------
ರಾಮದಾಸರು
ಹರಿಹರಿ ಕೊಡು ನಿನ್ನಯಚ್ಚರನು ಶರಣವಾ ಧೃಡದಲಿ ಬಂದೆನಾನು ಪ ಅವಿದ್ಯೆಮಬ್ಬಿನಲಿ ಹರಿಬಂದ ಹಾವಿನ ಪರಿಯಾಗಿ ವಿವೇಕ ಯವಿಮುಚ್ಚಿಕಂಗಾಣದೆ ಸೇವೆಗೆ ಹೊರತಾದೆ 1 ನ್ಯೂನವ ನಾಲಿಸಲು ತಪ್ಪಿಗೆ ತಾನೆಣಿಕೆಗಳಿಲ್ಲಾ ಏನರಿಯದ ಮೂಢಾ ಇವನೆಂದು ನಿನುದ್ಧರಿಸೆನ್ನಾ 2 ಎಂದೆಂದು ಪ್ರೇಮದಲಿಂದಾ ಗೆಳೆತನಾ ಛೆಂದವೆನಗ ನಿನಗ | ಎಂದೇ ಮನೆಯೊಳಿದ್ದು ಮಾತಾಡದೇ ನಿಂದುದುಚಿತವಲ್ಲ 3 ಕಡೆಗಣ್ಣಿಲಿ ನೋಡೋ ಉದಾಸೀನ ನುಡಿಯ ಮಾಡಲಿಬೇಡ | ಒಡೆಯಾ ನಿನ್ನಂಘ್ರಿಮದಾ ದಾಸರಾ ಅಡಿಗಳಾಶ್ರಯದಲಿಡೋ 4 ಕಾಲಬಿದ್ದರವು ರಾಕುಡುವರು ಕೆಳೆಲೋ ಗಾದಿಯನು ಪಾಲಿಸೋಮಹಿಪತಿ ಸುತ ಪ್ರಭು ಒಲುಮೆಯಾ ಸುಖನೀಡೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಸ್ತಿ ಮಾದಲಾದಉತ್ತಮ ರಥವು ಸಂದಣಿಸಿತು ಕೋಲ ಪ. ಇಂದ್ರನು ತಾನೊಂದು ಗಜೇಂದ್ರನೇರಿಕೊಂಡುಮಂದಗಮನೆಯರ ಶಚಿ ಸಹಿತ ಕೋಲಮಂದಗಮನೆಯರ ಶಚಿ ಸಹಿತ ವಜ್ರಾಯುಧಉಪೇಂದ್ರನ ಮನೆಗೆ ಬರುತಾನೆ ಕೋಲ 1 ಹುತಭುಕ್ತನು ತಾನುಸತಿ ಸ್ವಾಹಾದೇವಿಯ ಕೂಡಿಅತಿಶಯವಾದ ಮೇಷವೇರಿಅತಿಶಯವಾದ ಮೇಷವೇರಿ ಶಕ್ತಿಯ ಧರಿಸಿಕ್ರತುಪತಿ ಮನೆಗೆ ಬರುತಾನೆ ಕೋಲ 2 ಜಾಣ ಯಮನು ತಾನು ಕೋಣ ವೇರಿಕೊಂಡುರಾಣಿ ಶಾಮಲೆಯ ಸಹಿತಾಗಿ ಕೋಲರಾಣಿ ಶಾಮಲೆಯ ಸಹಿತಾಗಿ ದಂಡವ ಧರಿಸಿಪ್ರಾಣೇಶನ ಮನೆಗೆ ಬರುತಾನೆ ಕೋಲ 3 ನಿರುತಿ ತಾನೊಂದು ನರನ ಪೆಗಲನೇರಿತರುಣಿಯ ಸಹಿತ ಆಯುಧ ಧರಿಸಿ ಕೋಲತರುಣಿಯ ಸಹಿತ ಆಯುಧ ಧರಿಸಿನರಹರಿ ಮನೆಗೆ ಬರುತಾನೆ ಕೋಲ4 ಮಕರ ಮೇಲೇರಿ ಶ್ರೀ ಭಾಗೀರಥಿಯ ಒಡಗೂಡಿ ಕೋಲಶ್ರೀ ಭಾಗೀರಥಿಯ ಒಡಗೂಡಿ ಪಾಶವ ಧರಿಸಿದರಾಧರನ ಮನೆಗೆ ಬರುತಾನ ಕೋಲ 5 ಮರುತನು ತಾನೊಂದು ಎರಳಿ ಮೇಲೇರಿತರುಣಿ ಪ್ರವಹಿ ಒಡಗೂಡಿ ಕೋಲತರುಣಿ ಪ್ರವಹಿ ಒಡಗೂಡಿ ಗದೆಯ ಧರಿಸಿಮುರಹರನ ಮನೆಗೆ ಬರುತಾನ ಕೋಲ 6 ವಿತ್ತಪನು ತಾನೊಂದು ಉತ್ತಮ ಹಯವೇರಿಚಿತ್ತದೊಲ್ಲಭೆಯ ಒಡಗೊಡಿ ಕೋಲಚಿತ್ತದೊಲ್ಲಭೆಯ ಒಡಗೊಡಿ ಖಡ್ಗವ ಧರಿಸಿಪೃಥ್ವೀಶನ ಮನೆಗೆ ಬರುತಾನೆ ಕೋಲ7 ಈಶನು ತಾನೊಂದು ವೃಷಭನ ಮೇಲೇರಿಶ್ರೀ ಸತಿದೇವಿ ಒಡಗೂಡಿಕೋಲಶ್ರೀ ಸತಿದೇವಿ ಒಡಗೂಡಿ ತ್ರಿಶೂಲವ ಧರಿಸಿನರಸಿಂಹನ ಮನೆಗೆ ಬರುತಾನೆ ಕೋಲ8 ಧರ್ಮ ಭೀಮಾರ್ಜುನ ನಕುಲ ಸಹದೇವರುಪ್ರೇಮದಿಂದಲೆ ಪೊರ ಹೊರಟು ಕೋಲಪ್ರೇಮದಿಂದಲೆ ಪೊರ ಹೊರಟು ಬರುತಾರೆ ರಮಿಯರಸನ ಅರಮನೆಗೆ ಕೋಲ 9
--------------
ಗಲಗಲಿಅವ್ವನವರು
ಹಾಸ್ಯದ ಮಾತಿದು ಮಾನವಗೆ ವಿಷಯೇಚ್ಛೆಯ ಜೀವನವೆಂಬುದು ಶಾಶ್ವತ ಶಾಂತಿಯ ನೀಡುವ ನಿನ್ನಯ ಪದವನೆ ಮೆರೆತಿಹದು ಗುರುವೇ ಈಶ್ವರನೀತನೆಂದು ಸಾರಿತು ಶೃತಿ ಇದ ಕೇಳುತ ನಾ ಕರುಣಾ ನಿಧಿಯೇ ನಿನ್ನ ಹೊರತಿ ನ್ನನ್ಯರು ಗತಿಯಿಲ್ಲೆನ್ನುತ ನಾ ಚರಣಕಮಲಕೆ ಮೊರೆಹೊಕ್ಕೆ ಪರಮಾನಂದಾತ್ಮ ಸ್ವರೂಪದಾ ಅರಿವನು ನೀಡಿ ಪೊರೆವುದು ಎನ್ನಶಂಕರ ಗುರುದೇವಾ
--------------
ಶಂಕರಭಟ್ಟ ಅಗ್ನಿಹೋತ್ರಿ
ಹಿಡಿ ಸಾಧು ಸಂತರಾ ಸಂಗೆನ್ನ ಮನವೆ | ಹಿಡಿ ಸಾಧು ಸಂತರ ಸಂಗಾ | ಪೊಡವಿಲಿ ಭವಭಯ ಬಿಡಿಸಿ ಮುಕುಂದನ | ಅಡಿಗಳ ತೋರಿಸಿ ಕಾವುದು ಹಿಡಿಹಿಡಿ ಪ ಐದು ವರುಷ ಮಗನೈದಿದ ತಪದಲಿ | ಸಾಧು ಸಂಗನೇ ಹೊರೆಯಿತು | ಸಾಧಿಸಿ ಗರ್ಭದಲಿರೆ ಸಾಧು ಸಂಗ | ಪ್ರ | ಲ್ಹಾದನ ಯಚ್ಚರಿಸಿತು | ಹಾದಿಯೊಳಗ ರಾಹುಗಳ ರಾಯಾಗಾಗಲು | ಸಾಧು ಸಂಗುದ್ಧರಿಸಿತು | ಮೇದಿನಿಪತಿ ಪರೀಕ್ಷಿತಗೇಳು ದಿನದಲ್ಲಿ | ಬೋಧಿಸಿ ಸದ್ಗತಿ ದೋರಿತು ಹಿಡಿಹಿಡಿ 1 ವನಜಭವನ ಲೋಕದಲಿ ಸಾಧು ಸಂಗವು | ಸನಕಾದಿಕರ ಹೊರೆಯಿತು | ವನದಲಿ ಯದುರಾಯಗಾಗಲು ಸತ್ಸಂಗ | ಅನುಭವ ಸುಖ ದೊರೆಯಿತು | ವಿನಯದಿ ಸತ್ಸಂಗ ದೇಹೂತಿ ಮೊದಲಾದ | ಮುನಿಜನರುದ್ಧರಿಸಿತು | ರಣದಲ್ಲಿ ಅರ್ಜುನಗಾಗಲು ಸತ್ಸಂಗ | ಅನುಮಾನ ನೀಗಿಸಿ ಕಾಯಿತು ಹಿಡಿಹಿಡಿ 2 ಅಂದಿಗೆಂದಿಗೆ ಸಿದ್ಧ ಸಾಧಕರೆಲ್ಲಾ | ನಂದನ ಸುಖ ಬಿಡಿಸಿತು | ಹಿಂದಿನ ಕಥೆಗಳಿರತಿರಲಿನ್ನು ಸತ್ಸಂಗ | ಇಂದೆನ್ನ ಧನ್ಯಗೈಸಿತು | ಪಾದ ಪದುಮಸಂಗ | ನಂದನುದ್ಧರಿಸಿತು | ಯಂದೆಂದಿಗಗಲದೆ ಮುಕ್ತಿಗೆ ಹೊಣೆಯಾಗಿ | ಕುಂದದಾ ಸುಖಕೈಯ್ಯ ಗೊಟ್ಟಿತು ಹಿಡಿಹಿಡಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿತ ನೋಡಿ ಸಂತರ ಕೂಡೀ ಪ ಹಿತ ನೋಡಿ ಸಂತರ ಕೂಡೀ | ಮತಿ ನಿಜ ಮಾಡಿ | ಶ್ರೀ ಪತಿಯ ಕೊಂಡಾಡಿ 1 ದುರಿತ ವಿಭಂಗಾ | ನೆರೆ ಕರುಣಾಂಗದಿ | ಹೊರೆವನು ರಂಗಾ 2 ಪರಿ | ರಂಜಿಸುತಿಹ ತೇಜಃ | ಪುಂಜನ ನೋಡಿ 3 ಕಂಡಪದಕ ಹರಿದಂಡಲಿಯದೆ ನೆಲೆ | ಗೊಂಡ ವಿವೇಕದ | ಪಂಡಿತರಾಗಿ 4 ತಂದೆ ಮಹಿಪತಿನಂದನು ಸಾರಿದಾ | ಬಂದ ಜನುಮಕಿದು | ಛಂದದು ನೋಡಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿಂದಕೆ ತಿರುಗಿ ನೋಡು ಮನವೆ ಹೊಂದಿಕಿ ಹೊಲಬು ನಿನ್ನ ಸದ್ಗುರುವಿನ ಶ್ರೀಚರಣ ಧ್ರುವ ಹೊಲಬು ಮರೆದ್ಯೊ ಎಂದೆಂದಿಗೆ ಆಗಲದ ಸದ್ವಸ್ತು ಸಂಧಿಸಿಹುದು ಜರೆದ್ಯೊ ಕುಂದಿ ಕುಂದಿ ಕಳೆವ ವಿಷಯಕೆ ಸಂಧಿಸಿ ಬಾಯ್ದೆರದ್ಯೊ ಬಂದು ಬಂದು ಭವಪಾಶಕೆ ಸಿಲ್ಕಿ ಬೆಂದು ಒಡಲನೆ ಹೊರೆದ್ಯೊ 1 ತಿರುಗಿ ನೋಡಲು ತನ್ನೊಳಗೆ ತಾ ತೋರುತ ಅದೆ ಕೌತುಕ ಏರಿ ನೋಡಲು ಆರುಚಕ್ರ ಸುರಿಯುತಿದೆ ಸವಿಸುಖ ಪರಿಪರಿ ಭಾಸುತಿಯಹುದು ಪರಬ್ರಹ್ಮದ ಗತಿ ಹರುಷಾನೇಕ ಸದ್ಗುರುಮುಖ 2 ಸೆರಗವಿಡಿದು ಸಾರುವ ಶ್ರುತಿಯ ತಿರುಗಿನೋಡು ನಿನ್ನೊಳಗೆ ಮರಳಿ ಹುಟ್ಟಿ ಬಾರನೀ ಜನ್ಮಕೆ ಸ್ಥಿರಹೊಂದುವಿ ಗತಿಯೊಳಗೆ ಘನ ಬೆಳಗೆ ಘನ ತನ್ನೊಳಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಿಂದಿಲ್ಲ ಸ್ವಾಮಿ ಮುಂದಿಲ್ಲ ತಂದೆ ನೀನಲ್ಲದೆ ಕಾಯುವರೆನಗಾರು ಪ ಚರಣದಾಸರಿಗೆ ಆವರಿಸಿದ ಸಂಕಟ ಪರಿಹರಿಸಿ ಕಾಯಲು ಹರಿಯೆ ನೀನಲ್ಲದೆ 1 ಭಕ್ತವತ್ಸಲ ನೀನು ಮುಕ್ತಿ ದಾಯಕನಯ್ಯ ಭಕ್ತರ ವಿಪತ್ತು ಕಳೆಯುವರಾರು ನಿನ್ನ್ಹೊರತು 2 ಶ್ರೀಶ ಶ್ರೀರಾಮ ಜಗದೀಶ ಈ ದಾಸನ ಆಸೆಯ ಪೂರೈಸಿ ಪೋಷಿಸು ಬೇಗನೆ 3
--------------
ರಾಮದಾಸರು
ಹೀಂಗರಿದವ ಜ್ಞಾನಿ ಪ ಅವ್ಯಕ್ತದಲುದಿಸುದು ಪ್ರತಿಮೆಗಳು | ವ್ಯಕ್ತದಲಡಗುವದೀ ಸಕಲು | ಈ ವ್ಯವಹಾರದ ಭ್ರಮೆ ಮಾತುಗಳು 1 ಥೆರೆ ನೆರೆ ಬೊಬ್ಬುಳಿ ತಾ ದಿಟವಲ್ಲಾ | ತೋರಿಕರಿಗಿದರೇನು ಯಲ್ಲಾ | ನೀರಿಗೆ ಜನ್ಮ ಮರಣವಿಲ್ಲಾ 2 ಕಿರಣದಿ ದೋರಿತು ನದಿಗಡ ಪೂರಾ | ಹೊರತಾಗಿರದು ಕಿರಣಕ ದೂರಾ | ಕಿರಣೇ ಆಯಿತು ತಾ ಮೃಗನೀರಾ 3 ಕದಳಿಯ ಗಿಡರೂಪದ ಪದರೆಲ್ಲಾ | ಬಿದರಿಸಿ ನೋಡಲು ಏನುಳಿಲಿಲ್ಲಾ | ಪರಿ ಪ್ರಪಂಚದ ಸೊಲ್ಲಾ 4 ಗುರುವರ ಮಹಿಪತಿಸ್ವಾಮಿಯ ಕಂಡು | ಅರ್ಹವಿಕೆ ಮಾತ್ರವನೇ ಪಡಕೊಂಡು | ಚರಿಸುವಾ ಅನುಭವ ನೆಲೆಗೊಂಡು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹುಚ್ಚುಮನವೆ ನಿನ್ನ ಹುಚ್ಚಾಟವನೆ ಕಂಡು ರೊಚ್ಚುಬರುತಿದೆ ಎನಗೆ ಎಚ್ಚರಿರೆಲೆಲೇ ಪ ಉಚ್ಚೆಕುಣಿಯಲಿ ಬಂದು ಭವದ ಮಾಯಾ ಜಗವ ನೆಚ್ಚಿ ಸಕಲ ಮರೆದು ಮುಂದಿನ ಎಚ್ಚರವೆ ಮರೆತೆಲ್ಲೋ ಪಾಪಿ ಅ.ಪ ಒಳಗೊಂದು ಹೊರಗೊಂದು ತಿಳಿಯುತಲಳಿಯುವಿ ಅಳಿದುಹೋಗುವ ಇಳೆಯ ಸಲೆ ಸುಖಕೊಲಿದು ಮಲದ ಭಾಂಡದಿ ಸಿಲುಕಿ ಅನುದಿನ ಮಲಿನಗುಣದಿಂ ತೊಳಲಿಬಳಲುತ ಗಳಿಸಿಕೊಂಡು ಬಂದ ಸಮಯ ಕಳೆದುಕೊಳ್ಳುವಿಯಲ್ಲೋ ಪಾಪಿ 1 ಹಿಂದೊಂದು ಮುಂದೊಂದು ವಂದಿಸಿ ನುಡಿಯುತ ಮಂದ ನೀನಾಗಿ ಹಂದಿಯು ಮಲ ಮೆದ್ದತೆರದಿ ಕುಂದಿಪೋಗುವ ಬಂಧುಬಳಗಕೆ ನಂದುನಂದೆಂಬ ವಿಷಯಲಂಪಟ ರಂಧ್ರೆಯಲ್ಲಿ ಬಿದ್ದು ಕೆಡುವಿ ಪಾಪಿ 2 ನುಡಿಯೊಂದು ನಡೆಯೊಂದು ಕಡುದೃಢ ನುಡಿಯಾಡಿ ಒಡಲಕಿಚ್ಚಿಗೆ ಬಲು ಮಿಡುಕುತಲಿ ಕೆಡುವ ತನುವಿನ ಮೋಹ ಬಿಡದೆ ಪೊಡವಿಗಧಿಕ ನಮ್ಮೊಡೆಯ ಶ್ರೀರಾಮ ನಡಿಯ ನಂಬದೆ ಮಡಿದುಪೋಗುವಿ ಕಡೆಗೆ ಹೆಡತಲೆಮೃತ್ಯುಗೆದೆಯಾಗಿ 3
--------------
ರಾಮದಾಸರು
ಹೇ ಪಾಪಿ ಮನಸೇ ನೀ ನಾರಾಯಣೆನೆಲೋ ಅಪಾರ ಮಹಿಮನ ಮಹಿಮೆ ತಿಳಿದು ನೋಡೋ ಪ ‘ನಾ’ ಎಂಬೋ ಮಹದಾದಿಬೀಜದಕ್ಷರ ತುದಿ ನಾಲಿಗೆಯಿಂದ್ಹೊರಡುವನಿತರೊ ಳ್ಹಿಂದಿನ ನಾನಾಜನುಮದ ಪಾಪ ಪರ್ವತವೆಲ್ಲವು ನಿವೃತ್ತಿಯಾಗಿ ಮಹ ಪಾವನನೆನಿಪುದು 1 ‘ರಾ’ ಎಂದು ಮುಖದಿಂದ ಹೊರಟ ಕೂಡಲೆ ಸರ್ವ ರವರವನರಕದ ಯಾತನಳಿದು ಭವ ರೋಗವೆಲ್ಲನು ನೀಗಿ ಕಾಯಕರ್ಮವ ಕಡಿದು ರಾಜಿಪ ಪರಲೋಕ ಸದರವೆನಿಸುವುದೆಲೊ 2 ‘ಯ’ ಎಂದು ನುಡಿಯುತಲೆ ಜನುಮ ಸಫಲವಾಗಿ ಎಷ್ಟೋ ಕೋಟ್ಯಜ್ಞದ ಪುಣ್ಯ ಫಲವು ದೊರಕಿ ಯಮನ ಭೀತಿಯ ಗೆಲಿಸಿ ದಾಸರೊಲುಮೆ ಲಭಿಸಿ ಎಸೆವ ತ್ರಿಕಾಲಜ್ಞಾನ ಸ್ಥಿರವಾಹುದೆಲೊ 3 ‘ಣ’ ಎಂದು ಸಂಪೂರ್ಣ ಉಚ್ಚರಿಸಿದ ಮಾತ್ರವೆ ಕರತಲ ಮಾಗಿ ನಿತ್ಯ ನಿರ್ಗುಣನಂಘ್ರಿ ಕಂಗಳೊಳ್ಹೊಳೆಯುತ ನಿತ್ಯಾನಂದದ ಪದವಿ ಕೈವಶವಹದೆಲೊ 4 ನಿರಾಮಯ ಶ್ರೀರಾಮ ನಿಗಮಗೋಚರ ನಿರಂಜನ ನಿಜಗುಣನನುಪಮಮಹಿಮೆ ನಿಜಮತಿಯಿಂದರಿತು ನಿರ್ಮಲ ಮನಸಿನಿಂ ನೆನೆಯಲು ಘನಮುಕ್ತಿ ಸಾಮ್ರಾಜ್ಯ ಪಡೆಯುವಿ 5
--------------
ರಾಮದಾಸರು
ಹೊತ್ತಾಗಿ ಹೊರಟಿಹೆನು ವೈಕುಂಠಕೆ ಮುಟ್ಟಬೇಕು ನಾನು ಪ ಹೊತ್ತಾಗಿ ಹೊರಟಿಹೆ ಹೊತ್ತುಗಳೆದು ವ್ಯರ್ಥ ವತ್ತರದಿಂ ಪೋಗಿ ಹೊತ್ತೆ ಮುಟ್ಟಬೇಕು ಅ.ಪ ಊರುದೂರಾದಿನ್ನು ಕೇಳದೆ ಅರುಮಾತನಾನು ಊರಜನರ ಮಾತು ಮೀರಿ ಆತುರದಿಂದ ಪಾರವಾರಿಲ್ಲದ ವಾರಿಧಿಯನೀಸಿ 1 ದಾರಿ ಅರಿಯೆ ನಾನು ಬಲ್ಲವರು ತೋರಿರೆ ಮಾರ್ಗವನು ಸಾರಮೋಕ್ಷಕ್ಕಾಧಾರನ ಪಟ್ಟಣ ಸಾರಸೌಖ್ಯ ತಲೆಸೇರಿ ಸಕಲ ಮೀರಿ 2 ಆ ಮಹ ಸುಕೃತಗೂಡಿ ನಾಮಾಮೃತಮಂ ನೇಮದಿ ಸವಿಯುತ ಸ್ವಾಮಿ ಶ್ರೀರಾಮನ ಪ್ರೇಮಯಾನವೇರಿ 3
--------------
ರಾಮದಾಸರು
ಹೊನ್ನು ಹೆಣ್ಣು ಮಣ್ಣು ಮೂರನು ಬಿಟ್ಟು ಚರಿಸುವವ ಯೋಗಿ ಬಣ್ಣ ಸಣ್ಣ ಸರ್ವಾಭರಣವಿಟ್ಟು ಮೆರೆವನು ಬೋಗಿ ಪ ನಾರಿಯರದನು ಕಂಡು ಥೂ ಎಂದುಗುಳಿ ತೊಲಗುವಯೋಗಿ ಭೋಗಿ ಘೋರ ತಪವ ಚರಿಸಿ ಅಡವಿಸೇರಿ ಕೊಂಬನು ಯೋಗಿ ಭೋಗಿ 1 ಮಾಯೆಯಳಿದು ವಸ್ತುವರಿತು ಚರಿಸುತಿಹನು ಯೋಗಿ ಜಾಯೆ ಸುತರ ಸಿರಿಯ ನೆಚ್ಚಿ ಹಿಗ್ಗುತಿಹನು ಭೋಗಿ ಬಾಯ ಬಿಡದೆ ಮೌನಿಯಾಗಿ ಜಪಿಸುತಿಹನು ಯೋಗಿ ಭೋಗಿ 2 ಕುಲದಲಾವನೆಂದು ಜನಕೆ ತಿಳಿಯ ಬಾರದವನು ಯೋಗಿ ಹೊಳಲಿನೊಳಗೆ ಸುಳಿದು ಸುಳಿದು ನಲಿಯುತಿಹನು ಭೋಗಿ ಚಲನ ಭವನ ಕೋಣೆ ಲಕ್ಷ್ಮೀರಮಣನು ತಾನೆಯಾಗಿ ಒಳಗು ಹೊರಗು ಬೆಳಗುತಿಹನು ಯೋಗಾನಂದನಾಗಿ 3
--------------
ಕವಿ ಪರಮದೇವದಾಸರು
ಹೊರಗ್ಹೋಗಿ ಆಡಬೇಡವೋ ಕಂದಾ ಮಹಾನಂದಾ ಬಹುಸರಸಿಜಾಕ್ಷಿಯರು ದೂರುವರೋ ಗೋವಿಂದಾ ಬಾ ಮನೆಗೆ ಮುಕುಂದಾ ಪ ಹೆಂಗಸ ಕೊಂದನೆಂಬುವರು ಮನೆ ಅಂಗಳದೊಳಗೆ ಬಚ್ಚಿಟ್ಟು ಕೊಂಬುವರೋಶೃಂಗಾರದಲಿ ಮೋಹಿಸುವರೋ ತಮ್ಮ ಕಂಗಳಿಂದಲಿನೋಡಿ ದೃಷ್ಟಿ ಬಿಡುವರೋ1 ಕಳ್ಳತನವ ಕಲಿಸುವರೋ ಏನ ಬಲ್ಲೆ ಕಂದಮ್ಮ ನೀ ಸುಳ್ಳಕಲಿಸುವರೋಒಳ್ಳೆಯವರಲ್ಲ ಗೋಪಿಯರು ಗ್ರಾಮದಲೆ ನಿಲ್ಲಲು ಕೆಟ್ಟ ಸೊಲ್ಲನಾಡುವರೋ2 ಸುಂದರ ಸೌಭಾಗ್ಯನಿಧಿಯೇ ನಿನ್ನಒಂದು ಕ್ಷಣವು ಬಿಟ್ಟು ಇರಲಾರೆ ಹರಿಯೇ ಇಂದಿರೇಶನಸುರ ದೊರೆಯೇ 3
--------------
ಇಂದಿರೇಶರು