ಒಟ್ಟು 8519 ಕಡೆಗಳಲ್ಲಿ , 133 ದಾಸರು , 4842 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೆ ನಿನಗೆ ಮೊರೆಯನಿಡುವೇ ಪ. ದುರಿತ ಪರಿಹಾರ ನಿನ್ನ | ಸ್ಮರಣೆ ಎನಗೀಯೋ ಅ.ಪ. ಜ್ಞಾನ ಜ್ಞೇಯ ಜ್ಞಾತೃವೆಂಬಭಿಧಾನದಿಂದ ಕರೆಸುವಿಯೋನಾನು ನನ್ನದು ಎಂಬ ದುರಭಿ | ಮಾನವನ್ನೆ ಪರಿಹರಿಸೋ 1 ಮೂರ್ತಿ 2 ಆಳು ನಿನ್ನವನೆಂದು ತಿಳಿಯೋ | ಪಾಲಿಸೊಲಿಮೆ ನಿನ್ನ ಪದದಿಪಾಲ ಸಾಗರ ಶಯ್ಯ ಕೃ | ಪಾಲು ಗುರು ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಹಲವು ಸಂಭ್ರಮಗಳಿಂ ಮನೆ ಕಟ್ಟಿದೀ ದೇವ ಪ ನೆಲೆಗೆಡಿಸಿ ಅದನಿಂದು ಕೆಡಹುತಿರುವೀ ಅ.ಪ ಪ್ರಾರಬ್ಧಕರ್ಮವೆಂತೆಂಬ ಹಳ್ಳವ ತೋಡಿ ಆರು ಜನ ಕೆಲಸಗಾರರನಲ್ಲಿ ಕೂಡಿ ಮೀರಿ ಮಾಯೆಯ ಭಾರಿ ಕಲ್ಕೆಸರುಗಳ ಹೂಡಿ ಭಾರಿನೆಲಗಟ್ಟು ರಚಿಸಿದರೊಂದುಗೂಡಿ 1 ಎಲುವಿನ್ಹಂದರ ಹರಹಿ ಬಲಿದ ಮಾಂಸದ ಗೋಡೆಗಳ ಮೇಲೆ ಚೆÀಲುವ ಚರ್ಮ ಹೊದ್ದಿಸಿ ಜಲರಕ್ತ ಕಾಲ್ವೆಗಳ ಹರಿಸಿ | ಸ್ವಚ್ಛತೆಯಿರಿಸಿ ಬಲುಉಸಿರುಬಲದಿಂದಲದ ಚಲನಗೊಳಿಸಿ 2 ಐದು ಇಂದ್ರಿಯಗಳೇ ದ್ವಾರ ಕಿಟಕಿಗಳಾಗೆ ಐದುಬಗೆ ವಿಷಯಗಳು ಆಹಾರವಾಗೆ ವೈದು ಯಮಪುರಿಗೆ ತಲ್ಪಿಸÀಲುಣಿಸನಿದನುಂಡು ಐದಿದುದು ನರಕಕೂಪಕೆ ಜೀವದಂಡು 3 ಕ್ಷೇತ್ರಜ್ಞ ನೀನು ನಿನ್ನಯ ಕಣ್ಣಮುಂದಿಂತು ಗಾತ್ರದಲಿ ವಾಸಿಪ ಜೀವನು ನಿನ್ನ ಮರೆತು ಕ್ಷೇತ್ರಘಾತಕಕಾರ್ಯವೆಸಗುತಿರಲಂದಂದೆ ನೇತ್ರ ಹಸ್ತಗಳ ಛೆÉೀದಿಸದೆ ಉಳುಹಿದೆಯೆಂತು 4 ಸರ್ವಸ್ವತಂತ್ರನೀ ಜೀವ ಪರತಂತ್ರನವ ಗರ್ವ ಅಜ್ಞಾನ ಅಂಧತೆಗಳಲಿ ಸಿಲುಕಿ ಸರ್ವ ದುಷ್ಕರ್ಮಗಳ ನಡೆಸಿ ಕೆಡಸಿಹನಿದನು ಸರ್ವದಾ ಕ್ಷಮಿಸಿ ಪೊರೆ ರಘುರಾಮವಿಠಲ 5
--------------
ರಘುರಾಮವಿಠಲದಾಸರು
ಹೂವ ಕೊಡೆ ದೇವಿ ಹೂವ ಕೊಡೆಯಾವಾಗಲೂ ನಿಮ್ಮ ಸಿರಿಮುಡಿಯೊಳಗಿರ್ಪ ಪ ವರಮಹಾಲಕ್ಷ್ಮಿ ನಿಮ್ಮ ಸಿರಿಮುಡಿಯನೆ ಕಟ್ಟಿಪರಿ ಪರಿ ಧೂಪ ಧೂಮಗಳನಿಕ್ಕಿಪರಿಮಳಿಸುವ ಸಂಪಿಗೆಯ ಪೂಸರವ ಸಿಂ-ಗರಿಸಿರಲಾಮಾಳಿಕೆಯೊಳು ಸಂಪಿಗೆ ಹೂವ 1 ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆಸರಸಿಜ ಮೊದಲಾದ ಕುಸುಮದಿಂದಪರಿಮಳಿಸುವ ನಿಮ್ಮ ಸಿರಿಮುಡಿಯೊಳಗಿರ್ಪಅರಳಿದ ಮಲ್ಲಿಗೆ ಹೂವ ಕಂಡೆ ಹೂವ 2 ವ್ಯೋಮಗಂಗೆಯೊಳಿಂದ ಹೇಮಕಾಮರಸವಕಾಮಿನಿಯರು ಕೊಯ್‍ತಂದದನುಶ್ರೀ ಮಹಾದೇವಿ ನಿಮ್ಮ ತುರುಬಿಗೆ ಮುಡಿಸಿರ-ಲಾ ಮಹಾಕುಸುಮ ಮಾಲಿಕೆಯೊಳು ತಾವರೆ ಹೂವ 3 ಮುತ್ತಿನ ಲಹರಿಯ ರತ್ನದ ರಾಗಟೆಯಸುತ್ತ ಮುತ್ತಲೂ ರಾರಾಜಿಸುವಪುತ್ಥಳಿಯ ಚಿನ್ನದಂತೆ ಘಮಘಮಿಸುವಉತ್ತಮವಾದ ಸುವರ್ಣದ ಕೇದಗೆ ಹೂವ 4 ಜಾತಿ ರತ್ನದ ನಡುವೆ ಜ್ಯೋತಿಯ ತೆರನಂತೆನೂತನವೆನಿಸಿ ಪ್ರಜ್ವಲಿಸುತಿಹಶಾತಕುಂಭದ ಚೌರಿಯ ಮೇಲೆ ಮುಡಿಸಿದಜಾತಿಮಲ್ಲಿಗೆ ಸಂಪಿಗೆ ಸೇವಂತಿಗೆ ಹೂವ 5 ಇಂದೀವರದಳನಯನೆ ಶುಭಪ್ರದೆಇಂದು ನಿಭಾನನೆ ಹೂವ ಕೊಡೆಮಂದಗಮನೆ ನಿಮ್ಮ ತುರುಬಿನೊಳೊಪ್ಪುವಮಂದಾರದ ಮೋಹನ ಮಾಲಿಕೆಯೆಂಬ ಹೂವ 6 ಚಂದ್ರಗಾವಿಯ ಸೀರೆ ಚೆಲುವ ಮುತ್ತಿನಸರದಿಂದಲೆಸೆವ ದೇವಿಹೂವ ಕೊಡೆಮುಂದಲೆ ಮುತ್ತಿನ ಸರದ ಮೇಲೊಪ್ಪುವಬಂಧುರಪೂಗಪುನ್ನಾಗ ಪಾರಿಜಾತದ ಹೂವ 7 ದೇವಿ ನಿಮ್ಮನು ಪೂಜೆಗೈದು ಮೆಚ್ಚಿಸಬಲ್ಲನಾವನೀ ಧರೆಯೊಳುಹೂವ ಕೊಡೆಪಾವನಾತ್ಮಕಿಯ ಪರಾಕ ಮಾಡದೆ ವರ-ವೀವ ಸಮಯವಿದು ಹೂವ ಕೊಡೆ ಹೂವ 8 ಮುತ್ತೈದೆತನವನು ನಿತ್ಯ ಸೌಭಾಗ್ಯವಉತ್ತಮ ಧನಕನಕಾಂಬರವಪುತ್ರ ಸಂತಾನವ ಕೊಡುವೆನೆನುತ ಕರ-ವೆತ್ತಿ ಅಭಯವಿತ್ತು ಹೂವ ಕೊಡೆ ಹೂವ 9 ಎಂದೆಂದೂ ಈ ಮನೆಗೆ ಕುಂದದ ಭಾಗ್ಯವಚಂದವಾಗಿಹ ಛತ್ರಚಾಮರವಚಂದ್ರ ಸೂರ್ಯರ ಪೋಲ್ವ ನಂದನರನುದಯ-ದಿಂದಲಿ ಕೊಟ್ಟು ರಕ್ಷಿಪನೆಂದು ಸೂಡಿದ ಹೂವ10 ವರದಾನದಿಯ ತೀರವಾಸ ಶ್ರೀ ಕೆಳದಿಯಪುರವರಾಧೀಶ ರಾಮೇಶ್ವರನಪರಮ ಪಟ್ಟದ ರಾಣಿ ಪಾರ್ವತಿ ನಿಮ್ಮಯಸಿರಿಮುಡಿಯೊಳಗಿರ್ಪ ಹೂವ ಕೊಡೆ ಹೂವ 11
--------------
ಕೆಳದಿ ವೆಂಕಣ್ಣ ಕವಿ
ಹೇಮವತಿಯ ತೀರವಾಸನೇ | ನಾರಸಿಂಹಪ್ರೇಮದಿಂದ ಕಾಯೋ ಬೇಗನೇ ಪ ನಾಮಮಾತ್ರ ಸಲಹುತಿರುವ | ಸ್ವಾಮಿ ನಿಮ್ಮ ಕಂಡು ಭಜಿಸೆಕಾಮಿತಾರ್ಥವಿತ್ತು ಪೊರೆವೆ | ಕಾಮ ಜನಕ ಕಮಲನಾಭ ಅ.ಪ. ಭವದೊಳಾನು ಬಳಲಿ ಬಂದೆನೋ | ಭವ್ಯರೂಪಿಹವಣೆ ತಿಳಿಸಿ ಭವವ ಕಳೆಯಲೋಪವನ ಮತದಿ ಉದಿಸಿಹೇನು | ಭುವನ ಧರಿಸಿ ಮೆರೆಯುವಾನರವಿಯ ಕಂಡು ಹಾರಿದವನ | ಪವನರಾಯನ ಕಾಣೆ ನಾನು 1 ತನುವು ಮನವು ಧನದ ಆಶೆಯೂ | ಪೋಗಲಿಲ್ಲಘನ ಸುಜ್ಞಾನ ಭಕ್ತ್ಯಿ ಭಾವವೂಕನಸಿಲಾದರೊಮ್ಮೆ ಎನ್ನ | ಮನಸ್ಸು ನಿಮ್ಮ ಚರಣ ದ್ವಂದ್ವವನಜದಲ್ಲಿ ನೆಲೆಸಲಿಲ್ಲ | ಅನಘ ನೀನೇ ದಯವ ಬೀರೊ 2 ವನಧಿ ಹರಿಯೆ | ಗುರು ಗೋವಿಂದ ವಿಠ್ಠಲಾನೆ 3
--------------
ಗುರುಗೋವಿಂದವಿಠಲರು
ಹೇಸಿಕಿಲ್ಲವೊ | ಎನಗೆ ಹೇಸಿಕಿಲ್ಲವೋ ಪ ಮೀಸಲೆನಿಸಿ ಮನವ ನಿನ್ನ | ಆಶೆಯಲ್ಲಿ ಇರಿಸದಾಲೆ ಅ.ಪ. ವೈರಿ ಕಾಡುತಿಹನು 1 ವಿಷಯದಾಶೆ ಪೋಗಲಿಲ್ಲ | ಹಸಿವು ತೃಷೆಯು ಮೀರಲಿಲ್ಲಕುಸಿಯುತಿದೆ ದೇಹವೆಲ್ಲ | ಎಸೆವ ವ್ರತವ ಚರಿಸಲಿಲ್ಲ 2 ನಾನು ನನ್ನದೆಂಬ ಮಮತೆ | ಹೀನವೆಂದು ತಿಳಿದು ತಿಳಿದುಗೇಣು ಎಂಟು ದೇಹಕಾಗಿ | ಹೀನ ವಿಷಯದಾಶೆ ಇಹುದು 3 ಸಂದು ಪೋದ ಜನ್ಮ ತಿಳಿಯೆ | ಮುಂದೆ ಬಾಹುದೆಂತೊ ಕಾಣೊಇಂದಿರೇಶ ನೀನೆ ಗತಿಯೊ | ಮಂದಹಾಸ ಬೀರಿ ಪೊರೆಯೊ 4 ನಿನ್ನ ಕಾಣಧಾಂಗೆ ದೇಹ | ಇನ್ನೂ ಪೋಗದಂತೆ ಮಾಡಿ |ಘನ್ನ ಮಹಿಮ ರೂಪ ತೋರೊ | ಚೆನ್ನ ಗುರು ಗೋವಿಂದ ವಿಠಲ5
--------------
ಗುರುಗೋವಿಂದವಿಠಲರು
( ನಿಂದಾಸ್ತುತಿ) ಬಹುಲೋಭಿಯೋ ನೀನು ಮುರಹರ ಪ ವರವೇನನೀವೆಯೆನಗೆ ವಿಹಿತದಿ ಪೊರೆ ಮಂದಾರ ಅ.ಪ ಹಾಸಿಕೊಳ್ವ ವಾಸುಕಿಯ ಬೀಸಿ ಬರುವ ಗಾಳಿ ಕುಡಿವ ವಾಸುದೇವನೆ ವಾಹನನ ಪನ್ನಗಾಸನನಾಗಿರುವನಲ್ಲವೆ 1 ಹೆಂಡತಿಯಾಗಿರುವ ಸಿರಿಯಂ ಕಂಡಕಂಡರ ಮನೆಗೆ ಕಳುಹಿ ಮಂಡಿಸುತ್ತ ಭಕ್ತರ ಗೃಹದೊಳುಂಡುಂಡು ತಣಿಯುತಿರುವೆ 2 ವ್ಯಯ ಮಾಡದೆ ಕೈಯಕಾಸ ನಯದಿಂದಲೆ ನಡೆದುಕೊಂಡು ಜಯ ಜಯ ಧಾರಾಳಿಯೆನಿಪ ಜೀಯ ಜನಾರ್ಧನ ಜಾಜಿಕೇಶವ3
--------------
ಶಾಮಶರ್ಮರು
(1) ನಿಂದಾಸ್ತುತಿಗಳು ಏನುಂಟು ನಿನ್ನೊಳಗೆ ನಾ ಬೇಡಲು ಏನು ಕೊಡುವೆ ಎನಗೆ ಪ ಶ್ರೀನಿವಾಸನೇ ಬಲು ದೀನನೊಳವಲಕ್ಕಿ ಮಾನವ ನೋಡದೆಅ.ಪ ತಿರುಕನಾಗಿ ತಂದೆ ಧರೆಯ ಕಶ್ಯಪನೆಂಬ ತಿರುಕ ಹಾರುವನಿಗೆ ಗುರಿಮಾಡಿದೆ ಸಿರಿಯನು ರಜಕನ ಪರಿವಾರದಿ ಬಿಟ್ಟು ಗರಳ ಹಾಸಿನೊಳೊರಗಿದೆ ಕೃಷ್ಣ 1 ಧನಕನಕಂಗಳು ನಿನಗಿರೆ ಸತ್ರಾಜಿ ತನ ಮಣಿಯನು ನೀಗಣಿಸುವೆಯಾ ಅನುವಾದ ಮನೆಯಿರೆ ಮುನಿಮನವೇತಕೆ ಮನೆವಾರ್ತೆಯುಳ್ಳರೆ ವನವಾಸಬೇಕೆ 2 ಕಾಮಧೇನುವು ಕಲ್ಪನಾಮಕ ತರುವು ಚಿಂ ತಾಮಣಿಗಳನು ಸುತ್ರಾಮಗಿತ್ತು ಗೋಮಯರಸಗಳ ಕಾಮಿಸಿ ಕದ್ದು ನೀ ದಾಮೋದರನಾದೆ ತಾಮರಸಾಕ್ಷ 3 ಖ್ಯಾತಿ ನೋಡದೆ ರಣ ಭೀತಿಯೊಳೋಡಿದೆ ಜಾತಿ ನೋಡದೆ ಜಾಂಬವತಿಗೂಡಿದೆ ನೀತಿಯ ನೋಡದೆ ಕೋತಿಯೊಳಾಡಿದೆ ಮಾತು ನೋಡದೆ ಬರಿ ಮಾಯೆಯ ಪಿಡಿದೆ 4 ಗತಿಹೀನರಿಗೆ ವರ ಗತಿಯ ತೋರಿಪನಾಮ ಸ್ಮøತಿಯೊಂದಿತ್ತರೆ ಸಾಕೆನಗೆ ಅತಿಶಯವಿದು ಎನ್ನ ಮತಿಯೊಳು ನಿನ್ನಯ ರತಿಯನ್ನು ಪಾಲಿಸು ವರದವಿಠಲರಾಮ 5
--------------
ವೆಂಕಟವರದಾರ್ಯರು
(ಅ) ಗೋಪಾಲಕುಲ ಬಾಲ ಗೋವಿಂದ ಗುಣಶೀಲ ನೀ ಪಾಲಿಸೆನ್ನನು ದೇವ ಪ ಶರನಿಧಿ ಸಂಚಾರ ವರ ಮಂದರೋದ್ಧರ ಪರಮಾತ್ಮ ಭೂಧರ ದೇವ 1 ನರಭಕ್ತ ಭಯಹಾರ ಸುರಕಾರ್ಯಕೃತ ಧೀರ ಧರಣೇಸುರೇಶ್ವರ ದೇವ 2 ಸಕಲಾರ್ತಿಹರ ಶÀೂರ ಕುರುತೇಷ್ಟದಾತಾರ ವಿಕಟಾರ್ತ ಶ್ರೀಕರ ದೇವ 3 ಕಲಿದೋಷ ಪರಿಹಾರ ಸಲೆ ಧರ್ಮವಿಸ್ತಾರ ಜಲಧೀಶ ಮಂದಿರ ದೇವ 4 ಶ್ರೀಕಾಂತ ಶ್ರೀಮಂತ ಶ್ರೀಕೃಷ್ಣ ಜಯವಂತ ನೀ ಪಾಲಿಸೆನ್ನನು ದೇವ 5
--------------
ಲಕ್ಷ್ಮೀನಾರಯಣರಾಯರು
(ಅ) ಜಯಜಯತು ಶ್ರೀರಾಮ ಜಯಜಯತು ಘನಶ್ಯಾಮ ಜಯಜಯತು ಮುನಿಪ್ರೇಮ - ರಿಪು ಭೀಮ ಜಯಜಯತು ಸುರಸ್ತೋಮ - ವಿನಮಿತ ಮಂಗಳ ನಾಮ ಜಯತು ಸದ್ಗುಣಧಾಮ - ರಘುರಾಮ 1 ಆನಂದ ಜ್ಞಾನದನೆ - ಆನಂದ ಮಾಸದನೆ ಆನಂದ ಸಿದ್ಧಿದನೆ - ಅನಘನೇ ಆನಂದ ಮಂದಿರನೆ - ಆನಂದ ಚಂದಿರನೆ ಆನಂದ ಸುಂದರನೆ - ಅಘಹಾನೇ 2 ಸುರಾರಿದರ್ಪಹರ - ಪುರಾರಿ ಮಿತ್ರವರ ದರಾರಿ ಅಭಯಕರ-ಸುಕುಮಾರ ಕಾರುಣ್ಯಪಾಂಗವರ-ಲಾವಣ್ಯರೂಪಧರ ವರೇಣ್ಯನಿಕರ - ಸಿರಿಕಾಂತ 3
--------------
ಲಕ್ಷ್ಮೀನಾರಯಣರಾಯರು
(ಅ) ಧಾಮ - ನಿಸ್ಸೀಮ ಸುಮನೋರಮ ಪ ಕಾಮಾರಿಸ್ತುತ ಮಂಗಳನಾಮ ಅ ದುರಿತ ವಿದೂರ ಕರುಣಾಕರ ಸುಂದರ ಗಂಭೀರ 1 ದೀನೋದ್ಧಾರ ವಿಪಿನವಿಹಾರ ದಾನವಹರ ಸುರಕಾವ್ಯ ವಿಚಾರ 2 ಸೀತಾನಾಥ ವಾನರಯೂಥ ವಾತಾತ್ಮಜ ನುತ ಶ್ರೀ ಲಕ್ಷ್ಮೀಕಾಂತ 3
--------------
ಲಕ್ಷ್ಮೀನಾರಯಣರಾಯರು
(ಅ) ಮಾಡುವುದೋ ಕೃಪೆ ದಾಸನೊಳು ರಾಮ ಮಾಡುವುದೋ ಕೃಪೆ ದಾಸನೊಳು ಪ ನೋಡ ನೋಡುತ ಕೈಯ್ಯ ಬಿಡುವರೆ ಬೇಡ ಬೇಡಿಕೊಂಬೆನು ರೂಢಿಯೊಳು ನಿನ್ನಂಥ ಕರುಣಿಯ ನೊಡಲಿಲ್ಲವೋ ಎಲ್ಲಿಯು ಅ ಬಂದೆನೋ ನಾನಾ ಜನ್ಮದಲೀ | ರಾಮ ನೊಂದೆನೋ ನಾ ಬಹು ಭವಣೆಯಲೀ ದ್ವಂದ್ವ ದುಃಖದಿ ಕಂದಿ ಕುಂದುತ ಮುಂದುಗಾಣದೆ ಕೆಟ್ಟೆನೋ ಕಂದನೆನ್ನುತ ಬಂದು ಪೊರೆ ಪರಮಾತ್ಮ ನಂಬಿದೆ ನಿನ್ನನು 1 ದಾನ ಧರ್ಮಗಳ ನಾನರಿಯೆ | ರಾಮ ಮೌನ ಮಂತ್ರಗಳ ನಾನರಿಯೆ ಧ್ಯಾನ ಧಾರಣ ಜ್ಞಾನಸಾಧನವೇನೊಂದನು ಅರಿಯೆ ಹಾನಿಯಿದ ನಾನೇನನೊರೆಯಲಿ ಮಾನನಿಧಿ ನಿನ್ನವನು ನಾ 2 ಕಾಮಿನಿ ಕಾಂಚನ ಭೂಮಿಗಳ | ರಾಮ ಕಾಮಕೆÉ ಸಿಕ್ಕಿದೆನೋ ಬಹಳ ನೇಮ ನಿಷ್ಠೆಗಳೇನೂ ಇಲ್ಲದೇ ತಾಪದಿ ನಾ ಕೆಟ್ಟೆನೋ ನಾಮಸುಧೆಯ ಪಾನ ಕರುಣಿಸು ಪ್ರೇಮದಲಿ ಶ್ರೀಕಾಂತನೇ 3
--------------
ಲಕ್ಷ್ಮೀನಾರಯಣರಾಯರು
(ಅ) ಶಂಭೋ ಅಂಬಾಮನೋಹರ ದೇವ ಮಹದೇವ ಪ ಘನ ಗಂಭೀರ ನಂಬಿದೆ ಕಾಯೊ ವರವೀಯೋ ಅ.ಪ ಸುರನರ ಭುಜಂಗ ಸಂಸೇವ್ಯ ಸುಭಾವ್ಯ ಸರ್ವಕಾಂiÀರ್i ಸತತ ಸಹಾಯ ಧೀರ ಅಘೋರ ರಿಪು ಸಂಹಾರ ಉದಾರ ದಾತಾರ ದುರಿತವಿದೂರ 1 ವರದೇಶ ದಿನೇಶ ಪ್ರಕಾರ ಸರ್ವೇಶ ಕೈಲಾಸ ವರ ಗಿರಿವಾಸ ಈಶ ಮಹೇಶ ವಿಶ್ವೇಶ ಉಮೇಶ ದುರ್ವಾಸ ಪರಮ ವಿಲಾಸ 2 ಶರಣರ ಆಧಾರ ಪರಮಾರ್ಥ ವಿಚಾರ ಉರಗೇಂದ್ರ ಭೂಷಿತಹಾರ ಮಾರಸಂಹಾರ ಭವದೂರ ಉದ್ಧಾರ ಶ್ರೀಕಾಂತ ಪ್ರಿಯ ಮಂದಾರ 3
--------------
ಲಕ್ಷ್ಮೀನಾರಯಣರಾಯರು
(ಅ) ಶ್ರೀಹರಿಸ್ತುತಿಗಳು ಬೋಧರೂಪನೆ ವೇದವೇದ್ಯನೆ ಬೇಗ ಮೋಕ್ಷವನೀವನೇ ವೇದತಸ್ಕರನಂ ವಿಭಂಜಿಸಿ ವೇದಮಂತ್ರವ ತಂದನೇ ಪ ಮೋದದಿಂದಗವನ್ನು ಬೆನ್ನಲಿ ಮಂತ್ರಪೊತ್ತ ದೇವನೆ ಪೋಷಿಸೈ ಸಾದರಂಮಿಗೆ ರಂಗನಾಥನೆಸಂತತಂ ನುತಿಗೈದಪೆಂ ಅ.ಪ ವಿಹಂಗ ರಾಜತುರಂಗ ಸನ್ಮುನಿ ಸಂಗಮಾ ಹಿರಣ್ಯ ಲೋಚನದರ್ಪಶಿಕ್ಷಲ ಸತ್ಕøಪಾ ಪಾಂಗ ದೈತ್ಯತನೂಭವೇಷ್ಟದ ತುಂಗ ಶೌರ್ಯ ವಿಶಿಷ್ಟ ಶ್ರೀ ರಂಗನಾಥನೆ ರಕ್ಷಿಸೈ ಭವದಂಘ್ರಿಸೇವೆಯೊಳಾವಗಂ1 ಸುಂದರಾಂಗನೆ ಸೂರಿವಂದ್ಯನೆ ಕುಂದಕುಟ್ಮಲದಂತನೇ ಮಂದಹಾಸದೊಳೊಂದಿ ಬಾಲಕನಂದದಿಂದಲಿ ಬಂದು ಸಾ ನಂದದಿಂಬಲಿಯಿಂದಭೂಮಿಯನಂದುದಾನವಕೊಂಡಗೋ ವಿಂದಪೋಷಿಸುರಂಗನಾಥಮುಕುಂದನೀಂ ಪರಿತೋಷದಿಂ2 ರಾಮ ತಾಮರಸೋದ್ಭವಸ್ತುತನಾಮ ಸದ್ಗುಣಧಾಮ ಶ್ರೀ ರಾಮಕೃಷ್ಣ ದಿನೇಶಮಂಡಲಧಾಮದೀನಶರಣ್ಯ ನಿ ಷ್ಕಾಮ ಸಂಗರಭೀಮ ದೈತ್ಯವಿರಾಮ ಸುಂದರಕಾಮ ಸು ತ್ರಾಮವಂದ್ಯನೆ ರಂಗನಾಥನೆ ರಕ್ಷಿಸೆನ್ನನು ಮೋದದಿಂ3 ಧೀರಬುದ್ಧನೆ ಕಲ್ಕಿರೂಪನೆ ಧೀರಸಂಕುಲದಿವ್ಯಮಂ ದಾರ ನಿನ್ನನೆ ಬೇಡಿಕೊಂಬೆನು ಘೋರಸಂಸ್ಕøತಿಬಂಧದಿಂ ಗಾರುಮಾಡಿಸದಿನ್ನು ಮಾತೆಯಗರ್ಭಕೆಂದಿಗುತಾರದೆ ಪಾರಗಾಣಿಸಿ ರಂಗನಾಥನೆ ಪಾಲಿಸೈ ಬಿಡದಳ್ಕರಿಂ 4
--------------
ರಂಗದಾಸರು
(ಆ) ಶ್ರೀ ವೆಂಕಟೇಶ್ವರ ಅಭಯ ಗಿರಿಯವಾಸ ಶ್ರೀನಿವಾಸನು ನಮಗೆ | ಶುಭವೀವ ನಿರುತ ಮಂದಹಾಸನೊ ಪ ಧೇನಿಪರ ಮನಕೆ ಚಿಂತಾಮಣಿಯೋ ಸ್ವಾಮಿ | ನೀನೆ ಗತಿಯೆಂಬರಿಗೆ ಹೊಣೆಯೋ ಜ್ಞಾನಮಯ ಸಂದಣಿಯೊ ಪುಣ್ಯ ಕಾನನ ನಿವಾಸ ಸುರಖಣಿಯೊ 1 ವಜ್ರ ಪಂಜರನೋ ದುಷ್ಟ ದುರುಳ ದೈತ್ಯರಿಗೆ ಝರ್ಝರನೊ ದುರಿತ ಕದಳಿಗೆ ಕುಂಜರನೊ ಸ್ವಾಮಿ ಉರಗತಲ್ಪನಾದ ಸಿರಿವರನೊ 2 ಪರಮೇಷ್ಟಿ ಶಿವರೊಳಗಿಪ್ಪನೋ ಇಂದು ಮರುತನ ಪೆಗಲೇರಿ ಬಪ್ಪನೊ ಶರಣರಿಗೊರವೀಯೆ ತಪ್ಪನೋ ನಮ್ಮ ಸಿರಿ ವಿಜಯವಿಠ್ಠಲ ತಿಮ್ಮಪ್ಪನೊ 3
--------------
ವಿಜಯದಾಸ
(ಒ) ಭಾರತೀ ದೇವಿ ಏನು ಮರುಳಾದೆಮ್ಮ ಯೆಲ ಭಾರತೀ | ನಿಕರ ಶ್ರೇಷ್ಠನಾದವಗೆ ಪ ನಿನ್ನ ತೊರೆದು ಬ್ರಹ್ಮಚಾರಿಯಾಗಿ || ಹಣ್ಣಿಗಾಗಿ ಹೋಗಿ ವನವ ಕಿತ್ತೀಡ್ಯಾಡಿ | ಉಣ್ಣ ಕರದರೆ ಎಂಜಲೆಡೆವೈದ ಕಪಿಗೆ 1 ಪುಟ್ಟಿದನು ಗುರುತಲ್ಪಕನ ವಂಶದಲಿ | ನಟ್ಟಿರುಳೆ ಒಬ್ಬ ಅಸುರಿಯ ಕೂಡಿದಾ || ಹೊಟ್ಟೆಗಾಗಿ ಪೋಗಿ ಭಿಕ್ಷದನ್ನವನುಂಡ | ಅಟ್ಟು ಹಾಕುವನಾದ ಕುಲವ ಕೊಂದವಗೆ 2 ಮಂಡೆ ಬೋಳನಾಗಿ ಭೂಮಂಡಲ ಚರಿಸುವ | ಕಂಡವರಾರು ಈತನ ಗುಣಗಳಾ || ಪುಂಡರೀಕಾಕ್ಷ ವಿಜಯವಿಠ್ಠಲನ್ನ | ಕೊಂಡಾಡುತ ತಾ ಬೋರೆ ಗಿಡದ ಕೆಳಗಿಪ್ಪ 3
--------------
ವಿಜಯದಾಸ