ಧುಮ್ಮಸಾಲೆನ್ನಿರ್ಯೋ ಶ್ರೀ ಗುರುವಿನ ಬಳಗವೆ
ಧುಮ್ಮಸಾಲೆನ್ನಿ ಸದ್ಗುರುವಿನ ಬಳಗವೆ ಧ್ರುವ
ಗುರುವಿನ ಬಳಗವೆಂದು ಗುರುತುವಿಟ್ಟು ನೋಡಿರ್ಯೋ
ಅರುಹಿನೊಳು ಮುಣಗಿ ಪರಮಸುಖ ಸೂರ್ಯಾಡಿರ್ಯೋ
ಗರ್ವಿನಾಹರಿಗೆ ಬಿಟ್ಟು ಹರಿದುಹೋಗ ಬ್ಯಾಡಿರ್ಯೋ
ಪರ್ವಣಿದೆ ಗುರುಕರುಣ ಪಡೆದು ಪೂರ್ಣಕೂಡಿರ್ಯೋ 1
ಧುಮ್ಮಸಾಲೆನ್ನಿರ್ಯೋ ಬೆರದು ಬ್ರಹ್ಮ ಸುಖವ
ಸಮ್ಯಙÁ್ಞನದಿಂದ ದೂರಮಾಡಿ ಭವದು:ಖವ
ನಿಮ್ಮ ನಿಮ್ಮೊಳು ನೋಡಿ ಘನ ಕೌತುಕವ
ಹ್ಯಮ್ಮಿಯೊಳಗಾಗಿ ನೀವು ಹೋಗಬ್ಯಾಡಿ ಹೋಕುವ 2
ಕಣ್ಣದ್ಯರದು ನೋಡಿರ್ಯೊ ಚಿನ್ನುಮಯ ರೂಪವ
ಭಿನ್ನವೆಲ್ಲದ್ಯದೆ ತನ್ನೊಳು ಸಮೀಪವ
ಪುಣ್ಯ ಹಾನಿ ಮಾಡಿಕೊಂಡು ಹಿಡಯಬ್ಯಾಡಿ ಕೋಪವ
ಕಣ್ಣ ದ್ಯರಸಿಕುಡುವ ಹಚ್ಚಿ ಗುರು ತಾನ ದೀಪವ 3
ನಮ್ಮ ನಿಮ್ಮ ದ್ಯಾವರೆಂದು ಹೊಯಿದಾಡಬ್ಯಾಡಿರ್ಯೋ
ಬೊಮ್ಮನ ಪಡದ ಪರಬ್ರಹ್ಮನೊಬ್ಬ ನೋಡಿರ್ಯೋ
ಇಮ್ಮನಕ ಹೋಗದೆ ಒಮ್ಮನವ ಮಾಡಿರ್ಯೋ
ಸುಮ್ಮನೆ ಸುವಿದ್ಯದೊಳು ಬೆರದು ನಿಜಗೂಡಿರ್ಯೋ 4
ಸುಗ್ಗಿಯೋ ಸುಗ್ಗಿಯೋ ಸುಙÁ್ಞನದ ಲಗ್ಗಿಯೋ
ಭಾಗ್ಯವಿದೆ ನೋಡಿ ಭಕ್ತಿ ಙÁ್ಞನ ವೈರಾಗ್ಯಯೋ
ಬಗ್ಗಿ ನಡವ ಸಾಧುಸಂತ ಜನರಿಗಿದು ಯೋಗ್ಯಯೋ
ಹಿಗ್ಗಿ ಹರುಷಪಡುವ ಮಹಿಪತಿಯ ನಿಜ ಸ್ರಾಘ್ಯಯೋ 5