ಸಿಕ್ಕದಿರು ನಾರಿಯರ ಕಡೆಗಣ್ಣಿಗೆ ಮನ
ವಿಕ್ಕಿದರೆ ಇಹಪರದ ಗತಿ ಕೆಡಗು ನಿನಗೆ ಪ
ಹೇಸದೇತಕೆ ಮನಸು ಪರದಾರ ಪರದ್ರವ್ಯ
ದಾಸೆಯೊಳು ಹಗಲಿರುಳು ಕುದಿದು ಕುದಿದು
ಘಾಸಿಯಾಗುತ ತೊಳಲಿ ಬಳಲಿ ಯಮನರಕದೊಳು
ವಾಸವನು ಮಾಡದಿರು ಎಲೆ ಮೂಢ ಮನುಜ 1
ಮೊಲೆಯೆ ಮಾಂಸದ ಚೆಂಡು ಮೊಗವು ಶ್ಲೇಷ್ಮೆಯಗೂಡು
ಬಳಸಿ ನೋಡಿದರಿದಕೆ ಹುರುಳಿಲ್ಲವೋ
ಒಳ ಹೊರಗು ಹೊಲಸು ಹೆಬ್ಬಡಿಕೆಗಳು ವಸನದಲಿ ಬೆಳಗುವಳು
ತಲೆ ತುರಿಸಿ ಸಿಲುಕದಿರು ಕಂಡ್ಯಮನುಜ 2
ವಿಧಿ ಲಿಖಿತ ಸರಿಗು ಇಹಪರ ಕೆಡಗು
ಪರವಧುವಿನೊಳು ಮನವ ಹರಿಸಬೇಡ
ತೊರೆದಿವರ ಮರುತಸುತ ಕೋಣೆ ಲಕ್ಷ್ಮೀಪತಿಯ
ಸಾಯುಜ್ಯ ಪದವಿಯನು 3