ಒಟ್ಟು 354 ಕಡೆಗಳಲ್ಲಿ , 76 ದಾಸರು , 327 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸು ಕಾರುಣ್ಯನಿಧಿಯೇ ನಿನ್ನ ಚರಣವ ನಂಬಿದೆ ಶ್ರೀಪತಿಯೇ ಪ. ಕರುಣಿಸು ವರಗುಣಾಭರಣಸೇವಕ ಭಯ ಹರಣನೆ ಸುವಂದ್ಯಚರಣನೆ ರಘುವರ ಅ.ಪ. ಸುರರು ನಿನ್ನ ಚರಣವೇಗತಿಯೆಂದಿಹರು ಸರಸಿಜೊದ್ಬವೆ ನಿನ್ನ ಉರದಲ್ಲಿ ನೆಲೆಸಿರೆ ಪರಮಮಂಗಳಮೂರ್ತಿ ಪೊರೆಯೆನ್ನ ಕೈಪಿಡಿದೆತ್ತಿ 1 ಅಂಗಜಜನಕನೆ ನಿನ್ನ ಪಾದಂಗಳ ನಂಬಿರುವೆನ್ನಾ ಕಂಗಳಿಗಾನಂದ ಪೊಂಗುವಂದದಿ ಶ್ರೀ ರಂಗನೆ ದಯಾಪಾಂಗನೆ ಮೈದೋರು 2 ವರಶೇಷಗಿರಿವಾಸ ನಿನ್ನ ನಿಜ ಶರಣರ ದಾಸ್ಯದೊಳಿರಿಸೆನ್ನ ಕರವೆತ್ತಿ ಮುಗಿವೆನು ಭರಿಸೆನ್ನ ದೊರೆ ನೀನು ದುರಿತ ಕೋಟಿಗಳನ್ನು ಪರಿಹರಿಸೆಂಬೆನು 3
--------------
ನಂಜನಗೂಡು ತಿರುಮಲಾಂಬಾ
ಕಲಯೇಹಂ ಶ್ರೀ ಕನಕಾದ್ರೀಶಂ ಜಲದೋಪಮ ಭಾಸಂ ಪ ಸುಲಲಿತ ಕರಧೃತ ಧರರಥಚರಣಂ ಕಲಿಕಲಹಾಪಹ ಕಮನೀಯ ಚರಣಂ ಅ.ಪ ಮಸ್ತಕ ನಿಹಿತ ಮಹಾರ್ಹ ಕಿರೀಟಂ ಕಸ್ತೂರೀ ತಿಲಕಿತ ದಿವ್ಯಲಲಾಟಂ ನಿಸ್ತುಲ ಮದಮಾಂಚಿತ ಜೂಟಂ ಕೌಸ್ತುಭ ಶೋಭಿತ ಮಣಿಸರ ಕೂಟಂ 1 ಸುಮಶರಕೋಟಿ ಮನೋಹರ ವೇಷಂ ಕಮಲಾಸಖ ಭಾ ಭರಣ ವಿಭೂಷಂ ಸುಮಹಿತಭಣಿತ ಸದೃಶ ಮಂಜುಭಾಷಂ ವಿಮಲಹೃದಯ ಸೇವಕ ಪೋಷಂ 2 ಶ್ರೀರಮಣೀಪರಿಶೋಭಿತಗಾತ್ರಂ ವಾರಿಜಭವಕೃತ ವಿವಿಧ ಸ್ತೋತ್ರಂ ಸಾರಸದಳ ವಿಸ್ತಾರ ಸುನೇತ್ರಂ ನಾರದಮುನಿಕೃತ ಪೂಜಾಪಾತ್ರಂ 3 ಶರದಿಂದುಮಂಡಲ ಸುಂದರವದನಂ ವರಕುಂದಕುಟ್ಮಲ ಸನ್ನಿಭ ರದನಂ ಕರಸಂದರ್ಶಿತ ವೈಕುಂಠಸದನಂ ತರಣಿ ಘೃಣಿ ರುಚಿದಂತ ಹಸನಂ 4 ತುರುಣ ಶ್ರೀತುಳಸೀ ಶೋಭಿತಮಾಲಂ ಸರಸಿಜಗರ್ಭರುಚಿರ ದಿವ್ಯಚೇಲಂ ವರವ್ಯಾಘ್ರಭೂಧರ ವಿಹರಣಶೀಲಂ ವರವಿಠಲಮಖಿಲಾಗಮ ಪಾಲಂ 5
--------------
ವೆಂಕಟವರದಾರ್ಯರು
ಕಲೆಯೇಹಂ ಶ್ರೀ ಕನಕಾದ್ರೀಶಂ ಜಲದೋಪಮ ಭಾಸಂ ಪ ಸುಲಲಿತ ಕರಧೃತ ಧರರಥ ಚರಣಂ ಕಲಿಕಲುಹಾಪಹ ಕಮನೀಯ ಚರಣಂ ತಿಲಕಿತ ದಿವ್ಯಲಲಾಟಂ ಕೌಸ್ತುಭ ಶೋಭಿತ ಮಣಿಸರಕೂಟಂ 1 ಸುಮಶರಕೋಟಿ ಮನೋಹರವೇಷಂ ಕಮಲಾಸಖಭಾಭರಣ ವಿಭೂಷಂ ಸುಮಹಿತಭಣಿತ ಸದೃಶಮಂಜು ಭಾಷಂ ವಿಮಲ ಹೃದಯ ಸೇವಕ ಪೋಷಂ2 ವಾರಿಜ ಭವಕೃತವಿವಿಧ ಸ್ತೋತ್ರಂ ಸಾರಸದಳ ವಿಸ್ತಾರಸುನೇತ್ರಂ ನಾರದ ಮುನಿಕೃತ ಪೂಜಾಪಾತ್ರಂ 3 ಶರದಿಂದು ಮಂಡಲ ಸುಂದರ ವದನಂ ವರಕುಂದ ಕುಟ್ಮಲ ಸನ್ನಿಭರದನಂ ಕರಸಂದರ್ಶಿತ ವೈಕುಂಠ ಸದನಂ ತರುಣ ತರಣಿಘೃಣಿ ರುಚಿದಂತ ಹಸನಂ 4 ತರುಣ ಶ್ರೀ ತುಳಸೀ ಶೋಭಿತ ಮಾಲಂ ಸರಸಿಜಗರ್ಭ ರುಚಿರ ದಿವ್ಯ ಚೇಲಂ ವರವ್ಯಾಘ್ರಭೂಧರ ವಿಹರಣ ಶೀಲಂ ವರದ ವಿಠಲ ಮಖಿಲಾಗಮಪಾಲಂ 5
--------------
ಸರಗೂರು ವೆಂಕಟವರದಾರ್ಯರು
ಕಾಯೊ ಕಾಯೊ ಗುರು ವಿಜಯರಾಯಕಾಯೊ ಕಾಯೊ ವರವೀಯೊ ವಿಜಯ ಗುರುರಾಯ ನೀನಲ್ಲದೆ ಉಪಾಯವೆ ಯಿಲ್ಲ ಪ ಪರಿ ಪರಿ ಥರವೆ 1 ಪಾಪಗಳೆಣಿಸದೆ ಪಾವನ ಮಾಳ್ಪದುಶ್ರೀಪತಿ ಪಡೆದ ಸುರಾಪಗದಂತೆ 2 ದುರಿತ 3 ಮಾಳ್ಪದು ನೀ ಕರಿಸದೆ ಬಲುವ್ಯಾಕುಲನಾಗಿಹೆ ನೀ ಕರುಣದಲಿ 4 ಪರಿಹರಿಸಲಿ ಸಲ್ಲ ಕರವಿಡಿ ಬ್ಯಾಗನೆಗುರುವೆ ನಿಮ್ಮಯ ಚರಣ ಸೇವಕನ 5 ನೀನಾಳುವರೊಳು ಈ ನರಮೂರ್ಖನುಏನು ಅರಿಯೆ ಬಲು ದೀನವಾಗಿಹನೊ 6 ಆಲಸ ತಾಳದು ಪಾಲಿಸು ವೇಣು ಗೋ- ಪಾಲ ವಿಠಲನ ಆಳು ಕೃಪಾಳೊ 7
--------------
ವೇಣುಗೋಪಾಲದಾಸರು
ಕಾರುಣ್ಯಸಾಗರನೇ ನಾ ಸೇರುವೆ ಮಾರನ ಪಡೆದವನೇ ಪ ಭಾವಾತೀತನೆ ಯೆನ್ನ ಅವಗುಣವೆನಿಸದೆ ಸೇವಕನಿಗೆ ನಿನ್ನ ಭಕ್ತಿಯ ನೀಡೋ 1 ದೇವಕಿ ಕಂದನೇ ಸನಕವಂದಿತನೇ ಸೇವೆಯ ಮಾಡುವೆ ಚರಣವ ನೀಡೋ 2 ಅಜನಿಗೆ ಪಿತನಾಗಿ ದ್ವಿಜರಿಗೊಡೆಯನಾಗಿ ಗಜನನ್ನು ಪೊರೆದ ಶ್ರೀ ಲಕ್ಷ್ಮೀ ಸೇವಿತನೇ 3 ಪಾದ ಯುಗ್ಮಗಳನ್ನು ಭಜಕನ ಸಲಹಯ್ಯ ಚನ್ನಕೇಶವನೇ 4
--------------
ಕರ್ಕಿ ಕೇಶವದಾಸ
ಕೃಷ್ಣಮೂರುತಿ ಎನ್ನ ರಕ್ಷಿಸೈ ಕಾರುಣ್ಯನಿಧೆ ಸಿರಿ ಕೃಷ್ಣಮೂರುತಿ ಎನ್ನ ರಕ್ಷಿಸೈ ಪ ನಾಗೇಂದ್ರಶಯನನೆ ನಾಗೇಂದ್ರ ಮರ್ದನನೆ ನಾಗೇಂದ್ರಗೊಲಿದವನ್ಹಾಗೆ ನಾನಲ್ಲವೇನೊ 1 ತಾಪಸಸತಿ ಶಿಲಾರೂಪವ ಪೊಂದಿರಲು ಶಾಪ ಬಿಡಿಸಿ ಅವಳ ಕಾಪಾಡಲಿಲ್ಲವೇನೊ 2 ಆ ನೀಚನಿಂದ ಯಜ್ಞಸೇನೆಗೆ ಬಂದ ಮಾನ ಹಾನಿ ತಪ್ಪಿಸಿ ಅಭಿಮಾನಿಸಿ ರಕ್ಷಿಸಿದ 3 ಇಂದಿರೆಯರಸನೆ ವಂದಿಸಿ ಬೇಡುವೆನೊ ಎಂದಿಗು ಎನ್ನ ಹೃದಯಮಂದಿರ ಬಿಡದಿರೊ 4 ವರನಾಮಗಿರಿ ಸಿರಿನರಹರಿಮೂರುತಿಯ ಚರಣಸೇವಕನೆಂದು ಕರುಣ ಎನ್ನೊಳಗಿಟ್ಟು 5
--------------
ವಿದ್ಯಾರತ್ನಾಕರತೀರ್ಥರು
ಕೇಶವನೊಲುಮೆಯು ಆಗುವತನಕ ಹರಿ ದಾಸರೊಳಿರು ಮನವೆ ದಾಸರ ಸ್ತುತಿಯನು ಪೊಗಳುತ ಮನದೊಳು ಪ ಕಾಶಿಗೆ ಪೋದರೆ ಪೋದೀತೆ ಲೇಸಾಗದೆ ಸುಮ್ಮನಿದ್ದೀತೆ ಮೋಸವ ಮಾಡದೆ ಬಿಟ್ಟೀತೆ ನಿಜವಲ್ಲದೆ ಪುಸಿಯಾದೀತೆ 1 ಸೊಣಕನ ಮನಸಿಗೆ ಸೊಗಸೀತೆ ಹೀನ ವಿಷಯಗಳು ಬಿಟ್ಟೀತೆ ಮಾನಾಭಿಮಾನವು ಉಳಿದೀತೆ ದೀನಗೆ ಮುಕ್ತಿಯು ದೊರಕೀತೆ 2 ಕತ್ತೆಯ ಮನಸಿಗೆ ಬಂದೀತೆ ತೊತ್ತಿನ ಮನಸಿಗೆ ಬಂದೀತೆ ಅರ್ಥ ತೊರೆಯದೇ ಬಿಟ್ಟೀತೆ ಚಿತ್ರದಿ ಬೊಂಬೆ ವಿಚಿತ್ರದಿ ಬರೆದಿತ್ತ ಮುತ್ತು ಕೊಟ್ಟರೆ ಮಾತಾಡೀತೆ 3 ನಾಯಾಗಿ ಹುಟ್ಟೋದು ಬಿಟ್ಟೀತೆ ಮಾಯಾವಾದಿಗೆ ಮುಕುತಿಯು ದೊರಕೀತೆ ಬಾಯಿಬೊಬ್ಬಿಲಿ ಬೊಗಳುವ ಮನುಜಗೆ ಘಾಯವಾಗದೆ ಬಿಟ್ಟೀತೆ ಕಾಯಕ ಕಷ್ಟ ಬಿಡದಿದ್ದೀತೆ 4 ರ್ವಾದಿಗೆ ಮುಕುತಿಯು ದೊರಕೀತೆ ಗೈದವಗೆ ವ್ಯಾಧಿ ಕಾಡದೆ ಬಿಟ್ಟೀತೆ ಬುದ್ಧಿಹೀನನೆಂಬೋದು ಬಿಟ್ಟೀತೆ ಇದ್ದದ್ದೋಗದೆ ಉಳಿದೀತೆ 5 ಅಂಗನೆಯರ ಬಯಸೀತೆ ಶೃಂಗಾರದ ಬಗೆ ತೋರೀತೆ ಭೃಂಗಗೆ ಮುಕ್ತಿಯು ದೊರಕೀತೆ 6 ಕರುಣಾನನ ಸ್ಮರಣೆವುಳ್ಳರಿಗೆ ಪರಮ ಪದವಿ ಆಗದಿದ್ದೀತೆ ಚರಣ ಸೇವಕನಾಗಿ ಇರು ಕಂಡ್ಯ ಮನವೆ 7
--------------
ಬೇಲೂರು ವೈಕುಂಠದಾಸರು
ಕೈವಲ್ಯಪತಿ ವಿಠಲ | ಇವಳ ನೀ ಸಲಹೋ ಪ ದೇವದೇವೊತ್ಮತವ | ದಾಸ್ಯಕಾಂಕ್ಷಿಪಳಾ ಅ.ಪ. ಗುರುಗಳೊಂದಗೆ ಯಾತ್ರೆ | ಭರದಿ ಸ್ವಪ್ನದಿಗೈದು |ಮರಳಿ ಕೊಲ್ಹಾಪುರದ | ಶಿರಿರಮೆಯ ಕಂಡೂ |ಮರುತ ದರ್ಶನದಿಂದ | ವರಸು ಉಪದೇಶಕ್ಕೆತರುಣಿ ಶುದ್ಧಳು ಇಹಳು | ಉರಗಾದ್ರಿವಾಸಾ 1 ತೈಜಸನು ನೀನಾಗಿ ನೈಜದಂಕಿತ ಪ್ರಾಪ್ತಿಮಾಜದಲೆ ಸೂಚಿಸಿಹೆ | ಭ್ರಾಜಿಷ್ಣು ಮೂರ್ತೇ|ಯೋಜಿಸಿದೆ ಅದಕಾಗಿ | ತರಳೆಗಂಕಿತವನ್ನುರಾಜಿಸೋ ಮನದಿ ತವ | ನೈಜರೂಪವನೂ 2 ತರತಮದ ಸುಜ್ಞಾನ | ಹರಿಗುರೂ ಸದ್ಭಕ್ತಿಮರುತ ಮತ ದೀಕ್ಷೆಯನು | ಪರಮ ವೈರಾಗ್ಯಕರುಣಿಸುತ ಸಂಸಾರ ಶರಧಿಯನೆ ದಾಂಟಿಸೊಅರವಿದೂರನೆ ಹರಿಯೆ | ಪ್ರಾರ್ಥಿಸುವೆ ನಿನ್ನಾ 3 ಕರ್ಮ ನಿಷ್ಕಾಮದಲಿ | ಪೇರ್ಮೆಯಲಿ ಚರಿಪಂತೆಭರ್ಮಗರ್ಭನ ಪಿತನೆ | ಸನ್ಮನವನಿತ್ತೂ |ನಿರ್ಮಮತೆ ನೀಡಿ | ಕರ್ಮನಿರ್ಲೇಪದಲಿಹಮ್ರ್ಯ ವೈಕುಂಠವನು | ಗಮಿಪ ತೆರಮಾಡೋ 4 ಭಾವುಕರ ಪರಿಪಾಲ | ಭೂವೈಕುಂಠಲೋಲದೇವದೇವೋತ್ತಮನೆ | ಗೋವಿಂದ ಮೂರ್ತೇ |ನೀ ವೊಲಿಯದಿಲ್ಲ ಗುರು | ಗೋವಿಂದ ವಿಠ್ಠಲನೆಸೇವಕಳ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ 5
--------------
ಗುರುಗೋವಿಂದವಿಠಲರು
ಕೊಡಲಾಗದಿದ್ದರೆ ನುಡಿಯುವರೇನಣ್ಣ ಕಡೆಯಿಂದ ಬಾರೆಂದು ಜಡಿದಿಂದು ಪ. ದುಡುಕಿದೆವೆನ್ನುತ ಮಿಡುಕದಿರಣ್ಣಯ್ಯ ಕಡುಮುದದಿಂದಾವು ನಡೆದೇವು ಕೋಲೇಕೋಲೆ ಮುತ್ತಿನ ಕೋಲೆ ಅ.ಪ ಗುಣಯುತರೆನಿಸುವ ಹಿರಿಯ ವಂದಿಸ ಲೆನಂತಲೈ ತಂದೆವು ಮಣಿದೆವು ಹಣಗಾರರರೆಂದಲ್ಲಿ ಮಣಿಯಲು ಬರಲಿಲ್ಲ ಹಣದಾಸೆ ನಮಗಿಲ್ಲ ಕೇಳೀಸೊಲ್ಲ ||ಕೋಲೇ|| 1 ಅಣ್ಣಯ್ಯ ನಿಮಗೀ ಘನತೆಯು ಸಲ್ವುದು ಗಣ್ಯರಾದಿರಿ ನೀವು ಜಗದೊಳು ಪುಣ್ಯವಂತೆಯು ನಿಮ್ಮ ಪಡೆದಾಮಾತೆಯು ಧನ್ಯರಾದಿರಿ ನಿಮ್ಮೀಗುಣದಿಂದ ಕೋಲೆ 2 ದೋಷರಹಿತ ಶ್ರೀಶೇಷಗಿರೀಶನಾ ಕೇಶವನೊಲವೊಂದೆಮಗಿರಲಿ ಭಾಷೆಯ ಕೊಡುವೆವು ದೇಶಸೇವಕರಾವು ಲೇಸಾಗಲಿಳೆಗೆಂದು ಮನದಂದು ||ಕೋಲೆ||3
--------------
ನಂಜನಗೂಡು ತಿರುಮಲಾಂಬಾ
ಕೊಡುವುದು ಮನದಿಷ್ಟ ತಡೆಯದೆ ದೇವ ಪ ಅಡಿಯಿಡೆ ಬಿಡೆ ಮುಂದೆ ನಡೆಯಲು ದೇವಾ ಅ.ಪ ವಾರಿಧಿ ಸುರಮುನಿ ವಂದಿತ ಪರಮೇಶ ಪುತ್ರ ಕೊಡು | 1 ವಾಹನ ವಲ್ಲೀಲೋಲಾ |ಕೊಡು | 2 ಸೇವಕ ದಾಸನ ಕಾವ ಕಾರ್ತಿಕೇಯ | ಕೊಡು | 3
--------------
ಬೆಳ್ಳೆ ದಾಸಪ್ಪಯ್ಯ
ಖೇಟ ಕುಕ್ಕುಟ - ಜಲಟಾ | ತ್ರೈರೂಪಿನಿಶಾಟ ಸಂಕುಲ ರೋಟಾ ಪ ಕೈಟಭಾರಿ ಪದ ಓಲೈಸುವಗೆ ಅ.ಪ. ಕರ್ಮ ಭಂಜನ ಭವ ಅಘ ಶೋಧಕ | ಶುಚಿ ಶರಣೂ 1 ಸಿರಿ ಹರಿತ್ರೈವಿಕ್ರಮ ಪದ ಪೂಜಕ | ನಿಷ್ಕಾಮಕ | ಸೇವಕ ಶರಣೂ | 2 ಹರಿ ಪಾದಾಂಗುಷ್ಠದುಗುರೂ | ಖರ್ಪರದೊಳೂ | ಮಾಡೆ ಡೊಗರೊ ಹರಿಯಿತು ಹೊರ ಜಲಜಾಂಡದೊಳೊ ||ಕರುಣಾರ್ಣವ ಗುರು | ಗೋವಿಂದನ | ಪದ ತೊಳೆದನವರ ಪದವನ | ಸಾರುವನ | ಚರಣವನ | ಶರಣೂ 3
--------------
ಗುರುಗೋವಿಂದವಿಠಲರು
ಗಾಡಿ ಪಾಳ್ಯ ಹನುಮಾ | ತವ ಪದಬೇಡಿ ಭಜಿಪೆ ಭೀಮಾ ಪ ಈಡು ರಹಿತ ತವ | ಮಹಿಮೆಗಳನು ಕೊಂ-ಡಾಡ ಬಲ್ಲನೇ | ಪಾಮರನು ನಾಅ.ಪ. ಸತಿ ವತ್ಸರ ಪೂರ್ವದಿಹಿತಧಾಗಮನವ | ಸೂಚಿಸಿ ಸ್ವಪ್ನದಿ 1 ಸತಿ ತೈಜಸ ಪೇಳಿದನಿಜ ಭಾವವ ತಾ | ಸುಜನರಿಗ್ವೊರೆದು2 ಮಣಿ ಸಹ ವಿರಲವನೂ ||ಘನ ಸಂತಾನವು ಇರದಿರೆ ದಂಪತಿಮನವನು ಹರಿಪದ | ವನಜದಲಿರಿಸೀ 3 ಒಡಗೂಡಿ ಸೇವಕರಾ | ತರಿದನು | ಗಿಡ ಗಂಟಿಯ ವಿವರಾ ||ಅಡವಿಯೊಳೊಡ | ಮೂಡಿದ ಬರಿ ಶಿಲೆಕಂಡು ಮನದಿ ಬಯ | ಲಾಶೆಯೊಳಿರಲೂ 4 ಮಲಗಿರೆ ಮನನೊಂದೂ | ಸ್ವಪ್ನದಿ | ಬಲ ಹನುಮಂತನು ಬಂದೂ ||ಚೆಲುವ ತನ್ನಯ ರೂಪ | ತೋರಿಸಿ ಪೇಳಲುಒಲಿಸಿ ಗಂಧದಲಿ | ಲಿಖಿಸಿ ಪೂಜಿಸಿದ 5 ಮೊಗವನು ದಕ್ಷಿಣಕೆ | ತಿರುಗಿಸಿ | ನಗವನು ಮೇಲಕ್ಕೇ ||ನೆಗಹಿ ತನ್ನ ಎಡ | ಹಸ್ತದೊಳಗೆ ಬಲಭಾಗ ಕೈಯ್ಯ ತಾ | ನಿರಿಸಿಹ ಕಟಿಯಲಿ 6 ಚಾರು ಮತಿಯಲಿ 7 ಸ್ಥಿರ ಚರ ಸುವ್ಯಾಪ್ತಾ | ಮರುತ | ಶರಣ ಜನರ ಆಪ್ತಾ ||ಸುದತರು ಭಕುತರ | ಹರಕೆ ಪೂರೈಸುವೆನಿರುತ ಹರಿಯ ಪದ | ರತಿಯನೆ ಕೊಡುವುದು 8 ಕೋವಿದರರಸನ್ನಾ | ಗುರು | ಗೋವಿಂದ ವಿಠಲನ್ನಾ ||ಓವಿ ತೋರೊ ಮಮ | ಹೃದ್ವನಜದೊಳಗೆ ಪಾವಮಾನಿಯೆ ಮ | ತ್ಪ್ರಾರ್ಥನೆ ಸಲಿಸೀ 9
--------------
ಗುರುಗೋವಿಂದವಿಠಲರು
ಗುರುರಾಜನೇ ಎನ್ನ ಪರಿಪಾಲಿಪುದ ಬಿಟ್ಟು ವರ ಮಂತ್ರಾಲಯದೊಳಿರುವುದುಚಿತವೇನೋ ಪ ಬಡ ಭಕ್ತನನು ಕಷ್ಟ ಕಡಲೊಳಿರಿಸಿ ತುಂಗಾ ದಡದಿನಿಂತೆನ್ನ ಕೈ ಬಿಡುವುದುಚಿತವೇನೋ 1 ಅಡಿ ಸೇವಕನೊಳಿಂಥಾ ಕಡು ಕೋಪವ್ಯಾತಕೋ ನುಡಿ ನುಡಿಗೆನ್ನ ತಪ್ಪು ಹಿಡಿದು ಪೋಗುವರೇನೊ 2 ಒಡೆಯ ಶ್ರೀ ಹನುಮೇಶವಿಠಲನ ದಾಸನೇ ಬಡವನಿರುವೆನೆಂದು ನೋಡದಿರುವರೇನೊ 3
--------------
ಹನುಮೇಶವಿಠಲ
ಗುರುವರÀ ತುಲಸೀರಾಮಯ್ಯಾ ಪೂರ್ವದ್ವಾರಗುರುಸ್ತುತಿ ಮಂಪಾಲಯಾ 'ಜಿತೇಂದ್ರಿಯಾ ಪಪುರಪುರವರ ತವ ತಿರುತಾರೊತ್ಸವನಿರತಸೇವಕೃತನುತ ಜನವೈಭವ 1ಪತಿತಜನಾವನ ಪದ್ಮಸುಲೊಚನಪ್ರಥಮಾಶ್ರಮ ಘನಕೃತಮುಖರಂಜನ 2ವೆಂಕಟಲಕ್ಷಾಂಬ ಸುಗರ್ಭೊದ್ಭವ ಪಂಕಜಭ' ಸಂಪದಯುತಪ್ರಭಾವ 3ಕೇಶವಪದನಿಜ ದಾಸಸ್ವರೂಪಾಆಶಯೇಶಯ ಜಿತವರಪ್ರತಿಭಾ 4ಶುಕಮುನಿ ವಾಗ್ಭರಿಸೂನೃತಚರಿತಸಕಲಪಂಡಿತೊತ್ತಮಜನ'ನುತ 5ಮ'ಸೂರ್ಪುರವರ ಮ'ಪತಿಸಮುಖಅ'ಪತಿರೀತ್ಯಾ ಹರಿಗುಣಕಥಕಾ 6ಚಾಮನೃಪಾಲ ಸುಜ್ಞಾನಬೊಧಿನೀಸಮಾಜಶೇಖರ ಸಾತ್ವಿಕಧೀಮಣಿ 7ಶ್ರೀರಾಮೋತ್ಸವ ಸೇವಾಬ್ದಪ್ರತಿಸಾರ್ಥಶತಂ ನಿಷ್ಕನ್ನಾ ರ್ಕತ 8ಭಗವದಾಂಶ ಸಂಭೂತ ಕೃಪಾಕರಅಗಣಿತ ಸುಗುಣಾಲಂಕೃತಧೀವರ 9ಮಂಗಳಕರ ಗುರುತುಲಸೀರಾಮಾರಂಗಸ್ವಾ'ುದಾಸ ಹೃದಯಸುಧಾಮಾ 10
--------------
ಮಳಿಗೆ ರಂಗಸ್ವಾಮಿದಾಸರು
ಗೋಪಸತಿಯರೆಲ್ಲ ಕೇಳೆರೆನ್ನಯ ಮಾತ ಪರಿ ಕೂಸಿನ ಕಂಡೀರ್ಯಾ ಪ ತೊಟ್ಟಿಲೊಳಗಿಟ್ಟು ವತ್ತಿ ಮಾತಾಡದೆ ಮುಟ್ಟದೆ ಉಣಲಿಕ್ಕೆ ಕುಳಿತಿರಲು ಚಿಟ್ಟಕ್ಕಿ ಚೀರೆದ್ದು ಭೇಟಿ ತಾನಳುತಿಹ ಹೊಟ್ಟಿ ತುಂಬಾ ಉಣಲೀಸ ಎಷ್ಟೆಂದೇಳಲೆ ನಾನು 1 ಬಣ್ಣಿಸಿ ಬಣ್ಣಿಸಿ ಪದವ ಪಾಡಿ ತೂಗಿ ಥಣ್ಣಾಗೆ ಬೀಸಿ ಬೀಸಣಿಕೆಯಲಿ ಕಣ್ಣ ಮುಚ್ಚಿಸಿದೆವೆಂದರಿತು ಸುಪ್ಪಾಣಿಸೆ ಅಣ್ಣ ತಾನೇಳುವ ನಿದ್ರೆಗೈಯ್ಯಲೀಸ 2 ಅನಿಮಿಷರಾದೆವೆ ಅನಶನರಾದೆವೆ ಮನಸು ಕೂಸಿನಲ್ಲೆ ನಟ್ಟಿಹುದೆಮಗೆ ಮನೆಕೆಲಸಗಳಲ್ಲ ಎಲ್ಲಿವೆ ನಮಗಿನ್ನು ತನಯ ಪುಟ್ಟಿದ ಪುಣ್ಯದಿಂದಲ್ಲಿನ್ನೇನೆಂಬೆ 3 ಚಿಕ್ಕವರೊಳು ಪೋಗಿ ಮಕ್ಕಳಾಟಿಕೆ ಆಡಿ ಲೆಖ್ಖವಿಲ್ಲದ ದೂರು ಘಕ್ಕನೆ ತರುವ ರಕ್ಕಸರೆನÀಲು ತಾ ಲೆಕ್ಕಿಸದವರ ಸೊಕ್ಕು ಮುರಿವನಿವನಕ್ಕೊಜಾಕ್ಕೇನೆಂಬೆ4 ದೇವತೆಗಳ ಮೀಸಲಾವಾಗ ಮೆಲುವನು ಸೇವಕರಂತಲ್ಲೆ ತಾವಾ ಹೊರೆ ದಾವಾದಿ ಭಯದಿಂದ ಕಾವಾನೀತನೆ ವಾಸು - ದೇವಾವಿಟ್ಠಲನೆಂದು ಭಾವಿಸಿ ತಿಳಿವೆನು 5
--------------
ವ್ಯಾಸತತ್ವಜ್ಞದಾಸರು