ಒಟ್ಟು 66 ಕಡೆಗಳಲ್ಲಿ , 27 ದಾಸರು , 63 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಶರಣು ಶರಣ್ಯವಂದಿತ ಶಂಖಚಕ್ರಗದಾಧರ |ಶರಣು ಸರ್ವೇಶ್ವರ ಅಹೋಬಲ ಶರಣ ಸಲಹೋ ನರಹರಿ ಪ.ಶೀಲದಲಿ ಶಿಶು ನಿನ್ನ ನೆನೆಯಲುಕಾಲಲೋತ್ತುತ ಖಳರನು |ಲೀಲೆಯಿಂದಲಿ ಚಿಟಿಲು ಭುಗಿಭುಗಿ -ಲೆನುತ ಉಕ್ಕಿನ ಕಂಬದಿ ||ಖೂಳದೈತ್ಯನ ತೋಳಿನಿಂದಲಿ ಸೀಳಿಹೊಟ್ಟೆಯ ಕರುಳನು ||ಮಾಲೆಯನು ಕೊರಳೊಳಗೆ ಧರಿಸಿದಜ್ವಾಲನರಸಿಂಹಮೂರ್ತಿಗೆ 1ಖಳಖಳಾ ಖಳನೆಂದು ಕೂಗಲು ಕೋಟಿ ಸಿಡಿಲಿನ ರಭಸದಿ ||ಜಲಧಿ ಗುಳಗುಳನೆದ್ದು ಉಕ್ಕಲು ಜ್ವಲಿತ ಕುಲಗಿರಿ ಉರುಳಲು ||ನೆಲನು ಬಳಬಳನೆಂದು ಬಿರಿಯಲು ಕೆಳಗೆ ದಿಗ್ಗಜ ನಡುಗಲು ||ಥಳ ಥಳಾ ಥಳ ಹೊಳೆವ ಮಿಂಚಿನೊಲ್ಹೊಳೆವ ನರಸಿಂಹ ಮೂರ್ತಿಗೆ 2ಕೋರೆ ಕೆಂಜೆಡೆ ಕಣ್ಣು ಕಿವಿ ತೆರೆ -ಬಾಯಿ ಮೂಗಿನ ಶ್ವಾಸದಿ||ಮೇರುಗಿರಿ ಮಿಗಿಮಿಗಿಲು ಮಿಕ್ಕುವ ತೋರ ಕಿಡಿಗಳ ಸೂಸುತ ||ಸಾರಿಸಾರಿಗೆ ಹೃದಯರಕುತವ ಸೂರೆ ಸುರಿಸುರಿದೆರಗುತಘೋರರೂಪಗಳಿಂದ ಮೆರೆಯುವ ಧೀರ ನರಹರಿಮೂರ್ತಿಗೆ3ಹರನು ವಾರಿಜಭವನು ಕರಗಳ ಮುಗಿದು ಜಯಜಯವೆನುತಿರೆ ||ತರಳ ಪ್ರಹ್ಲಾದನಿಗೆ ತಮ್ಮಯ ಶರಿರಬಾಧೆಯ ಪೇಳಲು ||ಕರುಣಿ ಎನ್ನನು ಕರುಣಿಸೆನ್ನಲು ತ್ವರದಲಭಯವನೀಡುತ ||ಸಿರಿಬರಲು ತೊಡೆಯಲ್ಲಿ ಧರಿಸಿದ ಶಾಂತ ನರಹರಿಮೂರ್ತಿಗೆ4ವರವ ಬೇಡಿ ದನಿರುವ ತಂದೆಯ ಪರಿಯನೆಲ್ಲವ ಬಣ್ಣಿಸಿ ||ನಿರುತದಲಿ ನಿನ್ನೆರಡು ತೊಡೆಯಲಿ ಶರೀರವಿರಲೆಂದೆನುತಲಿ ||ಸುರರು ಪುಷ್ಪದ ವೃಷ್ಟಿಗರೆಯಲು ಸರಸಿಜಾಕ್ಷನು ಶಾಂತದಿ ||ಸಿರಿಯ ಸುಖವನು ಮರೆದಹೋಬಲವರದ ಪುರಂದರವಿಠಲಗೆ 5
--------------
ಪುರಂದರದಾಸರು
ಶ್ರೀ ಶುಕ್ಲನಾಮ ಸಂವತ್ಸರ ಸ್ತೋತ್ರ147ಶುಕ್ಲ ಸಂವತ್ಸರದ ಮುಖ್ಯ ಸ್ವಾಮಿಯು ಸುಖಪೂರ್ಣ ಶೋಕಾದಿದೋಷ ದೂರ ಶ್ರೀ ಉಪೇಂದ್ರನಿಗೆ ಆನಮಿಸುವೇ ಪ.ದೇವಗುರುಬೃಹಸ್ಪತಿ ದೇವೇಂದ್ರ ಮೊದಲಾದ ಸರ್ವ ದೇವ ವಿಧಶಿವ ವಿಧಸೇವ್ಯಶ್ರೀ ಲಕ್ಷ್ಮೀಶ ಸರ್ವೇಶನು ತಾನೆಈ ವರುಷರಾಜ ಶುಕ್ರನೊಳು ಮತ್ತು ವರುಷನಿತ್ಯನಾಯಕರುಸಚಿವ ಸೇನಾ ಸಸ್ಯ ರಸ ನಿರಸಾಧಿ ಪತಿಗಳೊಳಾಗಿರುವ 1ಇದ್ದು ಶೃತಿಗಳ ನಡೆಸಿ ಲೋಕ ಜನರಿಂದ ವಿಹಿತಾ ವಿಹಿತಸಾಧನ ಗೈಸಿ ಸಜ್ಜನರಿಗೆ ಕಷ್ಟ ಬಾರದೇ ಕಾಯುವಸಾಧು ಸಾಧನ ಮಾಳ್ಪದಕೆ ಅನುಕೂಲ ಶುಕ್ಲ ಸಂವತ್ಸರಸಂತಾಪ ಸಿಡಿಲು ಗಾಳಿ ಔಷ್ಣವ ಜಯಿಸಬಹುದು ಹರಿದಯದಿ 2ಚೌರ್ಯ ಅಸತ್ಯ ನಿಂದಾ ನಿಷ್ಠುರ ದುಷ್ಟ ತನಾದಿಗಳುಸಂತ್ಯಜಿಸಿಪತಿತಾಯಿ ತಂದೆಗುರುಸೇವಾಹರಿಪೂಜೆಕಾಯವಾಙ್ಮನದಿಂದ ಮಾಳ್ಪರಿಗೆ ಮಧ್ವಹುದಬ್ಜಗನುತೋಯಜಾಸನ ಪಿತ ಪ್ರಸನ್ನ ಶ್ರೀನಿವಾಸ ಒಲಿದು ಸಂರಕ್ಷಿಸುವನು 3| ಶ್ರೀ ಕೃಷ್ಣಾರ್ಪಣಮಸ್ತು |
--------------
ಪ್ರಸನ್ನ ಶ್ರೀನಿವಾಸದಾಸರು
ಸಿಕ್ಕಿದನೆಹರಿಅಕ್ಕಕ್ಕ ಸುಖದಕ್ಕಿಸಿ ಕೊಳಬನ್ನ್ಯಕ್ಕಕ್ಕಚಿಕ್ಕವನಿವನಲ್ಲಮ್ಮಮ್ಮ ಬಿಡೆಪುಕ್ಕಟೆ ಜಾರುವನಮ್ಮಮ್ಮ ಪ.ಚಲ್ಲಿದ ಹಾಲ್ಮೈಯೆಲ್ಲಾಗಿದೆ ಹೊನ್ಚಲ್ಲಣ ತೊಯಿದಿದೆ ನೋಡವ್ವೆಅಳ್ಳೆದೆಗಾರನು ಅಳುಕುವನೆ ಹಗಲ್ಗಳ್ಳನ ಮಾಟವ ನೋಡವ್ವೆ 1ಮುಂಗುರುಳಿಗೆ ಮೆತ್ತಿದೆ ಕೆನೆಮೊಸರುಕಂಗಳುತುಪ್ಪಾಗಿದೆ ತಂಗಿ ರತ್ನದುಂಗುರ ಬೆರಳು ಮುಂಗೈಯ ಮತ್ತಂಗೈ ಬೆಣ್ಣ್ಯಾಗಿದೆ ತಂಗಿ 2ಪಡಗೊಡಿದು ಬಿಸಳಿಗೆ ನುಗ್ಗಲ್ಲೆಅಡಗ್ಯಡಗ್ಯಾಡುವನಿವನಂತೆಬಡಗಣ ಮೂಡಣ ಪಡು ತೆಂಕಣದಿತುಡುಗನ ಹುಯ್ಯಲು ಘನವಂತೆ 3ಗೋಡೆಯನೇರುವ ಧುಮುಕುವ ತಾ ಸಿಡಿದೋಡುವನಂಜದೆ ಅಲ್ಲಲ್ಲೆನೋಡಲು ಬಾಲಕ ಬಾಲೆಯರ ಪಿಡಿದಾಡ್ಯಾಲಂಗಿಪನಲ್ಲಲ್ಲೆ 4ಈಗಲೆ ಕಟ್ಟುವ ಬಿಟ್ಟರೆ ಇನ್ನಾವಾಗಲಿ ಸಿಕ್ಕುವನೆ ಬಾಲೆಹ್ಯಾಗಾದರೆ ಪ್ರಸನ್ವೆಂಕಟಗಿರಿಭೋಗಿಯ ಹೊಂದುವ ಬಾಲೆ 5
--------------
ಪ್ರಸನ್ನವೆಂಕಟದಾಸರು