ಹರಿನಾಮದರಗಿಳಿಯು ದೊರಕಿತಿಂದು
ವರ ಹಿರಿಯರಾ ಕರುಣದಿಂದೆನಗೆ ಪ.
ಸಾರ ಹಾದಿಯಲಿ ವರದ ಮಾಧವನೆಂಬ
ಸಾಧಿಸಿ ಕಂಸನ ಗೆದ್ದ ಗೋವಿಂದ 1
ದುಷ್ಟರನು ಶಿಕ್ಷಿಪ ವಿಷ್ಣುವಿನ ನಾಮವು
ಕಷ್ಟವನು ಪರಿಹರಿಪ ಮಧುಸೂಧನ
ಇಷ್ಟ ಮೂರುತಿ ತ್ರಿವಿಕ್ರಮನ ನಾಮವು
ಉತ್ಕøಷ್ಟ ವಾಮನನೆಂಬ ಕಠ್ಠಾಣಿ ಮುತ್ತಿನ 2
ಭವ ಚಂದಿರಾನನನಾದ ದಾಮೋದರನಾ 3
ವಾಸುದೇವ ಎಂಬ
ಸಂಕಟವ ಪರಿಹರಿಪ ಪ್ರದ್ಯುಮ್ನನೆಂಬುವನ ಎನ್ನ
ಸಂಕುಚಿತ ಮಂಕನಳಿವ ಅನಿರುದ್ಧನ 4
ಪರಮ ಪದವಿಯನಿತ್ತು ಪೊರೆವ ಪುರುಷೋತ್ತಮನ
ಪರರ ಬೇಡಿ ಸದ್ವಸ್ತು ಅಧೋಕ್ಷಜನಾ
ವರ ಜ್ಞಾನಿಗಳ ಮಾನಸ ನಾರಸಿಂಹನ
ಪರಮಪುರುಷನೆಂಬ ಅಚ್ಚುತನ್ನಾ 5
ಮುದ್ದು ಮುಖದೊಳು ತಿಲಕ ತಿದ್ದಿದ ಜನಾರ್ಧನನ
ಹದ್ದುವಾಹನನಾದ ಉಪೇಂದ್ರನ
ಮುದ್ದು ರಮೆಯರಸ ಶ್ರೀ ಶ್ರೀನಿವಾಸನೆಂಬುವನ 6