ಗೋಕುಲ ಆನಂದ ಲೀಲಾ | ಘನ ಸುಂದರ ರುಕ್ಮಿಣಿಲೋಲ
ಶ್ರೀಕರ ಶುಭದಾಯಕ ವರ | ಗೋಪಾಲ ಬಾಲ ಪ
ಮಣಿರಂಜಿತ ಭೋಗರಾಗವಿಮಲ
ಶೃಂಗಾರಶೀಲ ಸುರಪಾಲ ಸಂಸೇವ್ಯ ಗಾನಲೋಲ ಅ.ಪ
ಪದ್ಮಲೋಚನ ಪರಿವೃತ ಶರಣವತ್ಸಲ
ಸರ್ವಜ್ಞ ಸುಭಾಷಿತ ಸದ್ಭಾವ ವಿನಯಾದಿ
ಭೂಷಿತ ಚಿತ್ರ ವಿಚಿತ್ರ ಕರ್ಷಿತ
ಸೂತ್ರಾ ಮನಸಿಜ ಗಾತ್ರಾ | ಸುವಿನೀತ ಗೋಪೀನಂದನ 1
ಮಣಿಪೀಠ ಮಂಡಿತಾ | ಕಿರೀಟ ಮಣಿಮಯ
ರಾರಾಜಿತ | ಗೋಪಿಕಾನತ ಪಾಂಡವಪಕ್ಷ
ದನುಜವಿಪಕ್ಷ |ಕಮಲದಳಾಕ್ಷ ದಾನವಶಿಕ್ಷ
ಶ್ರೀವನಮಾಲಿಕಾವಕ್ಷ | ಮಾಂಗಿರಿನಾಥಾ ದೀನರಕ್ಷ 2