ಒಟ್ಟು 100 ಕಡೆಗಳಲ್ಲಿ , 22 ದಾಸರು , 86 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಧುಸಂಗ ಶೀಘ್ರಕೂಡಿಸೊ ಪ ಎಷ್ಟು ದಿನ ಕಷ್ಟಪಡುವದೋಈ ಭವದೊಳು ಈಸಲಾರೆನಯ್ಯ ಹರಿಯೇ ಇಷ್ಟು ದಿನ ಇದ್ದಂತೆ ಇರಲಾರೆನೆಂದು ಕರವ ಮುಟ್ಟಿ ಮುಗಿದು ಬೇಡಿಕೊಂಬೆ ಮುರಾರಿ ಕೃಷ್ಣ ನೀನೇ ಕಾಯೋ 1 ಹರಿಹರರು ಸಮಾನರೆನ್ನದಾ ಈ ಸಜ್ಜನರಾ- ಸಂಗದಿಂದ ಹೀನಾ ನಾನಾದೆ ಇನ್ನುಮ್ಯಾಲೆ ಇಲ್ಲವಯ್ಯ ಸೃಷ್ಟಿಗಧಿಕ ಶ್ರೀನಿವಾಸಾ ಇನ್ನು ನಿನ್ನ ಸ್ಮರಣೆಯಿಂದ ಇರುವೆನಯ್ಯ ಮುಕುಂದ 2 ಪೃಥ್ವಿಯಲ್ಲಿ ಪುಟ್ಟಿದಾ ಮೊದಲು ನಿನ್ನಾ ವೃತ್ತಾಂತ ಒಂದು ದಿನ ಮಾಡಲಿಲ್ಲವೋ ಎಂದು ಎನ್ನ ಮ್ಯಾಲೆ ಕ್ರೂರದೃಷ್ಟಿಯಿಂದಾ ನೋಡಾದೀರು ವಾಸುದೇವ ವೈಕುಂಠವಾಸ ಲಕ್ಷುಮಿ ರಮಣ3 ನಿತ್ಯದಲ್ಲಿ ವಿಪ್ರರಾ ವೃಂದಾದೊಳಗೆ ನಾ ಆ- ಸಕ್ತನಾಗಿ ಇರುವೆ ಮುಕುಂದಾ ಎಂಥ ಪಾಪಿ ಎಂದು ಉದಾಸೀನಮಾಡಿ ನೋಡಬೇಡ ನಿನ್ನ ಕಂದಾನೆಂದು ತಿಳಿದು ಪಾಲಿಸಯ್ಯ ನಾರಾಯಣ 4 ಹನುಮ ಭೀಮ ಮಧ್ವೇಶಾರಿಂದಾ ಸೇವಿತ ಪ್ರಿಯಾ ಶಾಂತಮೂರ್ತಿ ಶಾಮವರ್ಣನೇ ಶ್ರೀದವಿಠಲೇಶಾ ನಿನ್ನಾ ದಾಸನೆಂದು ಪಾಲಿಸೆನ್ನ ಸಾರಿ ಬೇಡಿಕೊಂಬೆನಯ್ಯ ರಾಮಚಂದ್ರ ರಾವಣಾಚಾರಿ5
--------------
ಶ್ರೀದವಿಠಲರು
ಸಾಮಧಾನವು ಸಾಮಧಾನ ಪವಮಾನ ಶ್ರೀಮನ್ಮಹಾಸುಗುಣಧಾಮ ಸುತ್ರಾಣ ಪ. ಲೋಕ ಮುಳುಗುವದು ನೀನೀ ಕೆಲಸಮಂಗೈಯೆ ಸಾಕುವವರ್ಯಾರು ಜಗದೇಕವೀರ ಶ್ರೀಕಾಂತಸುಪ್ರೀತ ಶೋಕಮೋಹವಿಧೂತ ಪರಾಕು ಮುಖ್ಯಪ್ರಾಣ 1 ಜಗಕೆ ನೀನಾಧರ ಜನ್ಮ ಮೃತಿಭಯದೂರ ಚಾಗಮಾಗಮವಿಚಾರ ನಿತ್ಯಶೂರ ಸುಗುಣನಿಧಿ ಲಕ್ಷುಮಿನಾರಾಯಣನ ಕಿಂಕರನೆ ಮಗುಚಬೇಡೈ ಧರೆಯ ಮುಗಿವೆ ನಾ ಕೈಯ2
--------------
ತುಪಾಕಿ ವೆಂಕಟರಮಣಾಚಾರ್ಯ
ಸುಳಾದಿ ಕೌಸ್ತುಭ ಫಾಲ ಸಿಂಗಾಡಿಯಂತಿಪ್ಪ ಪುರ್ಬುಕೂರ್ಮನಂದದಿಗಲ್ಲ ಚುಬುಕ ಚುಬುಕಾಗ್ರದಿಂಸಿರಿಯರಸ ಹಯವದನ ಶೇಷಗಿರಿ ಅರಸನ ಕಿರೀಟದÀಪರಿಪರಿಯ ಸೊಬಗ ನಾ ಕಂಡು ಕೃತಾರ್ಥನಾದೆ ನಾ 1 ಮಠ್ಯತಾಳ ಇಂದಿನದಿನ ಸುದಿನ ಗೋವಿಂದನ ಕಂಡ ಕಾರಣಹಿಂದಿನ ಪಾಪವೃಂದವು ಬೆಂದುಹೋಯಿತು ಎನಗೆಮುಂದಿನ ಮುಕುತಿ ದೊರಕಿತುತಂದೆ ಹಯವದನನೊಲವಿಂದ 2 ತ್ರಿಪುಟತಾಳ ಪಾದ ಪದುಮದ ನೆನಹೊಂದಿದ್ದರೆ ಸಾಕು 3 ರೂಪಕತಾಳ ಗುರು ಭಕುತಿಯಿರಬೇಕು ಹಿರಿಯರ ಕರುಣವು ಬೇಕುಹರಿಕಥೆಗಳ ನಿತ್ಯದಲಿ ಕೇಳುತಿರಬೇಕುವಿರಕುತಿ ಬೇಕು ವಿಷ್ಣುವಿನಾರಾಧನೆ ಬೇಕುವರಮಂತ್ರ ಜಪಬೇಕು ತಪಬೇಕು ಪರಗತಿಗೆಪರಿಪರಿಯ ವ್ರತಬೇಕು ಸಿರಿಪತಿ ಹಯವದನನಪರಮಾನುಗ್ರಹ ಬೇಕು ವಿಷಯನಿಗ್ರಹಬೇಕು 4 ಝಂಪೆತಾಳ ಹರಿಸಗುಣ ಸಾಕಾರ ಸಕಲಸುರರೊಡೆಯ ನಿ-ರ್ಜರರೆಲ್ಲ ಹರಿಯ ಕಿಂಕರರೆಂದರಿಯಬೇಕುಮರಣಜನನ ದೋಷಗಳಿಗತಿ ದೂರತರನೆನಿಪಸ್ಮರಣೆ ಸಂತತಬೇಕು ದುರಾಚಾರ ಬಿಡಬೇಕುಸಿರಿ ಹಯವದನ ಶೇಷಗಿರಿ ಅರಸನಸ್ಮರಣೆಯಿದ್ದವನು ಸಂಸಾರ ಭಯವನುತ್ತರಿಸುವ 5 ಆದಿತಾಳ ಶ್ರೀನಾಥ ಪ್ರಭುವೆತ್ತ ಹೀನಯೋನಿಗಳೊಳುನಾನಾದುಃಖಗಳುಂಬ ಹೀನ ಮಾನವನೆತ್ತಭಾನುಮಂಡಲವೆತ್ತ ಶ್ವಾನನುಬ್ಬರವೆತ್ತಮಾನವ ಹರಿ ನಾನೆಂಬುದ ನೆನೆಯದಿರುದಾನವಕುಲವೈರಿ ಹಯವದನ ವೆಂಕಟಶ್ರೀನಿವಾಸನ ದಾಸರ ದಾಸನೆನಿಸಿಕೊ 6 ಏಕತಾಳ ಕೈವಲ್ಯವನೀವ ನಮ್ಮಶ್ರೀವಲ್ಲಭನ ಕೈಯಿಂದನೀವೆಲ್ಲ ಕ್ಷುದ್ರವ ಬೇಡಿಗಾವಿಲನ ಪೋಲದಿರಿಸಾವಿಲ್ಲದ ಮುಕುತಿಪಥವಬೇಡಿಕೊಳ್ಳಿರೊನೋವಿಲ್ಲದಂತೆ ಸುಖಿಸಬಲ್ಲಕೋವಿದರೆಲ್ಲರುಪೂವಿಲ್ಲನಯ್ಯ ವೆಂಕಟಪತಿ ಹ-ಯವದನನ್ನ ಪ-ದವಲ್ಲದನ್ಯತ್ರ ದಾವಲ್ಲಿ ಭಯ ತಪ್ಪದು 7 ಅಟ್ಟತಾಳ ಗಾತ್ರವ ಬಳಲಿಸಿ ಸ್ತೋತ್ರವ ಪಾಡುತ್ತಯಾತ್ರೆಯ ಮಾಡಿ ವೆಂಕಟೇಶನ ಮೂರ್ತಿಯನೇತ್ರದಿ ನೋಡಿ ತಮ್ಮಿಷ್ಟವ ಪಡೆವ ಸ-ದ್ಭಕ್ತರ ಕಂಡುನಿನ್ನ ಮನದ ಭ್ರಮೆಯ ಬಿಡುದೈತ್ಯ ಪೌಂಡ್ರಕಮತವ ನೆಚ್ಚಿ ಕೆಡಬೇಡಚಿತ್ರಚರಿತ್ರ ಹಯವದನನೊಲಿಸಿಕೊ 8 ದಿಲ್ಲಿಯರಾಯನ ಕಂಡು ಪುಲ್ಲಿಗೆಯ ಬೇಡುವರೆತಲ್ಲೆಯೂರಿ ತಪಸು ಇದ್ದಲ್ಲಿ ಸಾಧಿಸಿಕೊಳ್ಳಿರೊಕ್ಷುಲ್ಲಕರೆಂಜಲನುಂಡು ಬಾಳ್ವರ ನೋಡು ಲಕ್ಷುಮಿವಲ್ಲಭನಲ್ಲದೆ ಹೀನಫಲದಾಸೆ ಸಲ್ಲದಯ್ಯಚೆಲ್ವ ಹಯವದನ ತಿಮ್ಮನಲ್ಲದೆ ಕೈವಲ್ಯಕೆಹಲ್ಲು ಹಂಚಿಗೆ ಬಾಯಿತೆರೆದಂತೆ ಅಲ್ಲಲ್ಲಿಗೆ ಪೋಗದಿರಿ 9 ರೂಪಕತಾಳ ಹನುಮಂತನ ನೋಡು ತನುಮನಧನಂಗಳಶ್ರೀನರಸಿಂಹಗರ್ಪಿಸಿದಪ್ರಹ್ಲಾದನ ನೋಡುಅನುದಿನ ವನದಲ್ಲಿ ತಪವ ಮಾಡುವಮುನಿಜನರ ಕಂಡು ನಿನ್ನ ಮನದ ಭ್ರಮೆಯ ಬಿಡುಘನಮಹಿಮ ವೆಂಕಟಪತಿ ಹಯವದನನ ಭೃತ್ಯರ ಪರಿಚಾರಕರ ಭೃತ್ಯನೆನಿಸಿಕೊ 10 ಜತೆÀ ತಿರುಮಲೆರಾಯ ತ್ರಿವಿಕ್ರಮಮೂರುತಿಸಿರಿ ಹಯವದನನ [ಚರಣವೆ ಗತಿಯೆನ್ನು]
--------------
ವಾದಿರಾಜ
ಸ್ವಾಮಿ ವೆಂಕಟರಮಣ ಭೂಮಿಪಾಲಕ ದೇವ ಸಂಜೀವ ಪ ಸುರರು ಅಸುರರೆಲ್ಲ ಶರಧಿಯ ಮಥಿಸಲು ಸಿರಿಯು ಜನಿಸಿ ಬಂದು ಹರಿಯ ಸೇರಿದಳು 1 ಸತಿ ಕುಸುಮಮಾಲೆಯನು ಅತಿ ಹರುಷದಿ ಜಗತ್ಪತಿಗೆಯಿಕ್ಕಿದಳು 2 ವಾರಿಧಿಯಾಕ್ಷಣ ಧಾರೆಯನೆರೆಯಲು ವಾರಿಜಾಂಬಕ ಲಕ್ಷ್ಮಿ ಒಡನೆ ನಿಂದಿರಲು 3 ಫಣ್ಭಿಹ್ತ್ರ1ಸೆಮಣಿಯೊಳು ರಮಣಿಯನೊಡಗೊಂಡು ಗುಣನಿಧಿಯು ಒಪ್ಪಿರಲು ತರುಣಿಯರೆಲ್ಲ 4 ಪಚ್ಚವ ಧರಿಸಿ ನವ ಸ್ವಚ್ಛವಾಗಿಯೆ ತುಳಿದು ಅಚ್ಯುತ ಮಹಾಲಕ್ಷ್ಮಿಗಚ್ಚಬೇಕೆನುತ 5 ಸಣ್ಣ ಮಲ್ಲಿಗೆ ಎಣ್ಣೆ ಬಣ್ಣವಾದರಿಸಿನವ ಪುಣ್ಯವಂತೆಗೆ ಕೈಗರ್ಣವ ಕೊಡಲು 6 ಸಿರಿ ತನ್ನ ತಲೆಗೆ ಪ್ರೋಕ್ಷಿಸಿಕೊಳಲು ಹರಿಯು ಮೆಚ್ಚಿದನು 7 ಗಟ್ಟಿಯಾದರಿಸಿನವ ಬಟ್ಟಲೆಣ್ಣೆಯಗೂಡಿ ಮುಟ್ಟಲಂಜಿಯೆ ನಿಲಲು ಸೃಷ್ಟಿಪಾಲಕನ 8 ಅಂಗೈಯ ಅರಿಸಿಣವ ಮುಂಗೈಗೆ ಒರಸುತ್ತ ರಂಗನ ಸಿರಿಮೊಗವ ಕಂಗಳಿಂದೀಕ್ಷಿಸುತ 9 ಅಭಯ ಹಸ್ತವನಿತ್ತ ತ್ರಿಭುವನದೊಡೆಯನು ಅಬುಜಲೋಚನೆ ಮುಖಾಂಬುಜಕೆ ತಿಮುರಿದಳು 10 ಸತಿ ಕೈಯ ಅರಿಶಿಣವ ಪತಿಯಾದಿಕೇಶವನ ನುತಿಸಿ ಊರಿದಳು 11 ಸಿರಿಯೆನೆತ್ತಿದ ಕೈಯ ಹರಿ ತಾನು ತೋರಿಸಲು ಸಿರಿ ನಾರಾಯಣ ಎಂದು ಅರಿಶಿಣವ ತಿಮುರೆ 12 ಶಂಖವ ಧರಿಸಿದ ಪಂಕಜಾಕ್ಷನೆ ವಿಷ್ಣು ವೆಂಕಟೇಶನ ಕರಪಂಕಜಕೆ ತಿಮುರೆ 13 ಕದನದೊಳ್ ಖಳರನು ಸದೆದು ಮರ್ದಿಸಿ ಗೆಲಿದು ಮಧುಸೂದನ ಶ್ರೀವತ್ಸದೆದೆಯ ತೋರೆನುತ 14 ಚಕ್ರವ ಪಿಡಿದು ಪರಾಕ್ರಮಿಯೆನಿಸಿಯೇ ಅಕ್ರೂರಗೊಲಿದ ತ್ರಿವಿಕ್ರಮಗೆ ತಿಮುರೆ 15 ವಾಮನನನಾಗೆ ಶ್ರಮವನು ಪಟ್ಟೆನುತ ಭೂಮಿಯ ಅಳೆದ ಪಾದವಿತ್ತಲು ತಾರೆನುತ16 ಕಾದಲನು ಕಾಣುತ್ತ ಪಾದವನಿತ್ತನು ಶ್ರೀಧರನೆನುತಲಿ ಅರಸಿನವ ತಿಮುರೆ 17 ವಾಮಪಾದವ ಕಂಡು ಭಾಮಿನಿ ತಾರೆನೆಲು ಸೋಮಸನ್ನಿಭ ಹೃಷಿಕೇಶ ತಾನಿತ್ತ 18 ಪದ್ಮಬÁಂಧವ ತೇಜ ಪದ್ಮಸಂಭವ ಪೂಜ ಪದ್ಮನಾಭಗೆ ಪದ್ಮಗಂಧಿ ತಾ ತಿಮುರೆ 19 ಆ ಮಹಾ ನಾಮದ ದಾಮೋದರನ ಕಂಡು ಭಾವೆ ಮಹಾಲಕ್ಷುಮಿ ವೀಳ್ಯವ ಕೊಡಲು 20 ವಾಸುದೇವನು ತನ್ನ ಅರಸಿ ಮಾಲಕ್ಷ್ಮಿಗೆ ಪೂಸಿದನರಿಸಿನದ ಎಣ್ಣೆಯ ಮೊಗಕೆ 21 ಪಂಕಜಾಕ್ಷನ ಕಂಡು ಕಂಕಣದ ಹಸ್ತವನು ಕುಂಕುಮದೆಣ್ಣೆಯ ಸಂಕರ್ಷಣ ತಿಮುರೆ 22 ಬುದ್ಧಿವಂತೆಯ ಎಡದ ಮುದ್ದು ಹಸ್ತವ ನೋಡಿ ಉದ್ಧರಿಸಿ ನವ ಪ್ರದ್ಯುಮ್ನ ನಗುತ 23 ಅನಿರುದ್ಧ ನಗುತಲೆ ಘನಕುಚಮಂಡಲಕೆ ಅರಿಸಿನವ ತಿಮುರೆ 24 ಪುರುಷರೊಳು ಉತ್ತಮನು ಹರುಷವನು ತಾಳಿಯೆ ಅರಸಿ ಮಹಾಲಕ್ಷುಮಿಗೆ ಅರಿಸಿನವ ತಿಮುರೆ 25 ಅಧೋಕ್ಷಜನು ತನ್ನ ತುದಿವೆರಳ ಅರಿಸಿನವ ಪದುಮನೇತ್ರೆಯ ಪದದೊಳಗೆ ಮಿಡಿದಿರ್ದ 26 ನಾರಸಿಂಹನು ಸತಿಯ ಮೋರೆಯಿಂದಾರಭ್ಯ ಓರಣವಾಗಿಯೇ ಅರಿಸಿನವ ತಿಮುರೆ 27 ನೆಚ್ಚಿಯೆ ಹರಿ ತಾನು ಅಚ್ಚ ಕರ್ಪೂರದೆಲೆಯ ಅಚ್ಯುತ ಕೊಡಲು 28 ಮನದಿ ಲಜ್ಜಿತೆಯಾಗಿ ಘನಮಹಿಮ ಮುನಿವಂದ್ಯ ತನಗೆ ವಲ್ಲಭ ನಿಜನಾದನೆನುತ 29 ಆ ಪರಮಹಿಮನು ರೂಪಸಂಪನ್ನ ದ- ಯಾಪರನಾಗಿಯೆ ಉಪೇಂದ್ರ ತಾನೊಲಿದು 30 ಹರಯೆಂಬ ನಾಮದಿ ಹರದಿ ಮಾಲಕ್ಷ್ಮಿಯ ವರಸಿದ ಶ್ರೀಹರಿಯು ಹರದಿಯರ್ಪೊಗಳೆ31 ಬೆಟ್ಟದೊಡೆಯನೆನಿಸಿ ದೃಷ್ಟಿಗೋಚರವಾದ ಶ್ರೀಕೃಷ್ಣ ಮಾಲಕ್ಷುಮಿಗೆ ಆರತಿಯ ತಿಮುರೆ 32 ವರಮಹಾಲಕ್ಷುಮಿಗೆ ವರಾಹತಿಮ್ಮಪ್ಪಗೆ ಅರಸಿನದೆಣ್ಣೆಯ ರಚಿಸಿದ ಪರಿಯು 33
--------------
ವರಹತಿಮ್ಮಪ್ಪ
(ಮೂಲ್ಕಿಯ ನರಸಿಂಹದೇವರು)ನಂಬಿದೆ ನಿನ್ನ ಇಂಬಿದೆಯೆಂದುಅಂಬುಜಾಯತಾಂಬಕ ತ್ರ್ಯಂಬಕಸನ್ನುತಪ.ಕಂಬದಿಂದ ಕಾಣಿಸಿದಗಂಭೀರಗುಣಾಂಭೋನಿಧಿ ಡಿಂಬೋದ್ಧರ ನರಮೃಗವರ ಅ.ಪ.ಭಾನುಕೋಟಿಭಾಸ್ಕರಪವ-ಮಾನನಯ್ಯ ಪ್ರಾಣದಸುತ್ರಾಣಸುಗುಣದೀನಜನಸಂತಾನ ಮಾನದಆನಂದ ಗುಣಾನಂತ ವಿತಾನಾಬ್ಧಿಶಯಹರಿ1ಎಷ್ಟೊ ಪಾಪಿ ಕನಿಷ್ಠನೆಂದುಬಿಟ್ಟರೇನು ಬಿರುದು ಹಿರಿದು ಬರುವುದುಸೃಷ್ಟಿಕರ್ತರಿಷ್ಟಹರ್ತಮುಷ್ಟಿಕಭಿದ ತುಷ್ಟಿಪ್ರದ ವಿಠಲ ಕೈಗೊಟ್ಟುಳುಹು 2ಚಿತ್ತಸಾಕ್ಷಿ ಚಿನುಮಯಾತ್ಮಸತ್ಯರೂಪ ಸದಯೋದಯ ಸದುಪಾಶ್ರಯದೈತ್ಯಭಂಜನ ಸತ್ಯರಂಜನಕ್ಷೇತ್ರಜÕ ಪವಿತ್ರಕಥಾಸ್ತೋತ್ರಾರ್ಹ ಶ್ರೀವತ್ಸಾಂಕಿತ 3ಮೂಲಿಕಾಪುರ ಮೌಳಿರುತುನನೀಲೇಂದೀವರಶ್ಯಾಮಲ ಕಲಿಮಲಭೀಷಣಕಾಲಕಾಲ ವಿಶಾಲ ಭುಜಬಲಮೂಲೇಶಮುನೀಂದ್ರಾರ್ಚಿತ ಶ್ರೀಲಕ್ಷುಮಿನಾರಾಯಣ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಎಂಥ ದಯಾವಂತನೊ ಲಕ್ಷುಮಿಕಾಂತಎಂಥ ದಯಾವಂತನೊ ಪ.ಕರಿಜನ್ಮ ತಾಳ್ದರಸ ನೀರೊಳಗೆ ನಕ್ಕರಿಯೊಳು ಕಾದಿ ಮುಳುಗಿ ಹರಿಹರಿಹೊರಿಯೆಂದು ಹರಣವ ತೊರೆವಾಗಬರಿಮಂಡೆಯಲಿ ಬಿಟ್ಟರಸಿಯ ಭರದ್ಯುದ್ಧರಿಸಿದೆ ಭಳಿ ಕಿಂಕರರಭಿಮಾನಿ 1ಶೂಲಿಯ ಮತಿಕದ್ದುವರಕೊಂಡು ಮಹಾಸುರಮೇಲೆ ಬೆಂಬತ್ತಿ ಓಡಲುಶ್ರೀಲೋಲಾಕಾಲಕೆ ಆಲೋಚಿಸಿಬಾಲೆಯ ಲೀಲೆಲಿ ಖಳನ ಜ್ವಲಿಸಿ ಕಪಾಲಿಯ ಪಾಲಿಸಿದೆ ಸುರ ಶಾರ್ದೂಲ 2ನಿನ್ನನುಜೆಯಮಾನವಕೊಂಡೇನೆಂದುಕುನ್ನಿ ಕೌರವನೆಳೆಯೆ ಕೃಷ್ಣಣ್ಣ ಪ್ರಸನ್ವೆಂಕಟ ರನ್ನ ಬಾರೆನ್ನಲುಪುಣ್ಯ ಪುರುಷವರೇಣ್ಯ ನೀ ಬಂದೆಮನ್ನಿಸಿ ಬಣ್ಣ ಬಣ್ಣದ ವಸ್ತ್ರವÀನುಡಿಸಿದೆ 3
--------------
ಪ್ರಸನ್ನವೆಂಕಟದಾಸರು
ಎಲ್ಲೆಲ್ಲು ನೋಡಿದರುಕೆಲದಿರಂಗನ ಪಾಡಿನಲ್ಲೆಯರುಕೋಲಹಾಕೋರಮ್ಮಪ.ಹಗಲು ಜ್ಯೋತಿಗಳು ಹೊಳೆವಂಥ ನಾರಿಯರ ಕೂಡನಗಧರಬಂದು ನಿಂತಾನಮ್ಮ1ಕೃಷ್ಣನರಸಿಯರು ನಿಂತಿರಲು ಸುರನಾರಿಯರೆಲ್ಲಉತ್ಕøಷ್ಟದಿ ಹಾಡಿ ಪಾಡೋರಮ್ಮ 2ರಂಗನರಸಿಯರು ನಿಂತಿರಲು ಅಂಬರದಿಗಂಧರ್ವರು ಹಾಡಿ ಪಾಡೋರಮ್ಮ 3ನಕ್ಷತ್ರ ಮಾಲೆಯಂತೆ ಹೊಳೆವೊ ನಾರಿಯರ ಕೂಡಲಕ್ಷುಮಿರಮಣ ನಿಂತಾನಮ್ಮ 4ಚಂದ್ರ ಜ್ಯೋತಿಗಳು ಹೊಳೆವಂಥ ಯಾದವರ ಕೂಡತಂದೆ ರಾಮೇಶ ನಿಂತಾನಮ್ಮ 5
--------------
ಗಲಗಲಿಅವ್ವನವರು
ಜಗವು ನಿನ್ನಧೀನ ಖಗಪತಿವಾಹನನಿಗಮಗೋಚರ ಕೃಷ್ಣ ನಿತ್ಯತೃಪ್ತ ಮೋಹನಪ.ಇಂದ್ರಿಯ ಪ್ರೇರಕಇಂದಿರೆನಾಯಕಸಿಂಧುಶಯನ ಸದಾನಂದ ಸುಖಪ್ರದ 1ಜೀವವಿಲಕ್ಷಣ ಜೀವಸಂಪ್ರೇಕ್ಷಣಕೇವಲ ನಿರ್ಗುಣ ಕೇಶಿನಿಷೂದನ 2ವಾಯುಜನಕ ಯದುರಾಯ ರುಕ್ಮಿಣಿಸಖಪ್ರಿಯ ಶ್ರೀ ಲಕ್ಷುಮಿನಾರಾಯಣ ಪಾವನ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಜನನಿರುದ್ರಾಣಿ ರಕ್ಷಿಸು ಎನ್ನಜಗದೀಶನ ರಾಣಿ ಪ.ವನಜಭವಸುರಮುನಿಕುಲಾರ್ಚಿತೆಕನಕವರ್ಣಶರೀರೆ ಕಮಲಾ-ನನೆ ಕರುಣಾಸಾಗರೆ ನಮಜ್ಜನ-ಮನಮುದಾಕರೆ ಮಾನಿತೋದ್ಧರೆ ಅ.ಪ.ಆದಿಕೃತಾಯುಗದಿ ಪ್ರತಿಷ್ಠಿತ-ಳಾದೆ ಧರಾತಳದಿಆದಿತೇಯರ ಬಾಧಿಸುವ ದಿತಿ-ಜಾಧಮರ ಭೇದಿಸಿದೆ ಸಜ್ಜನ-ರಾದವರ ಮನ್ನಿಸಿದೆ ತ್ರೈಜಗ-ದಾದಿಮಾಯೆ ವಿನೋದರೂಪಿಣಿ 1ಖಂಡ ಪರಶುಪ್ರೀತೆ ನಿಖಿಲಬ್ರ-ಹ್ಮಾಂಡೋದರಭರಿತೆಚಂಡಮುಂಡವೇತಂಡದಳನೋ-ದ್ದಂಡಸಿಂಹೆ ಅಖಂಡಲಾರ್ಚಿತೆಪಾಂಡುತನುಜಕೋದಂಡವಿತರಣೆಚಂಡಿಕೇ ಕರದಂಡಲೋಚನಿ 2ಸಿಂಧೂರಸಮಯಾನೆ ಸರಸ ಗುಣ-ವೃಂದೆ ಕೋಕಿಲಗಾನೆಸುಂದರಾಂಗಿ ಮೃಗೇಂದ್ರವಾಹಿನಿಚಂದ್ರಚೂಡಮನೋಜೆÕ ಸತತಾ-ನಂದಪೂರ್ಣೆ ಮುನೀಂದ್ರನುತೆ ಸುಮ-ಗಂಧಿ ಗೌರಿ ಶಿವೇ ಭವಾನಿ 3ಲಂಬೋದರಮಾತೆ ಲಲಿತ ಜಗ-ದಂಬಿಕೆ ಗಿರಿಜಾತೆಕಂಬುಕಂಠಿ ಕಾದಂಬನೀಕು-ರುಂಬಜಿತಧಮ್ಮಿಲ್ಲೆ ತವ ಪಾ-ದಾಂಬುಜವ ನಾ ನಂಬಿದೆನು ಎನ-ಗಿಂಬು ಪಾಲಿಸೆ ಶುಂಭಮರ್ದಿನಿ 4ಘನವೇಣುಪುರವಾಸೆ ಸರ್ವಾರ್ಥದಾ-ಯಿನಿ ತ್ರೈಜಗದೀಶೆಸನಕನುತೆ ಶ್ರೀಲಕ್ಷುಮಿನಾರಾ-ಯಣಭಗಿನಿ ಶ್ರೀಮಹಿಷಮರ್ದಿನಿಮನಮಥಾಮಿತರೂಪೆ ಕಾತ್ಯಾ-ಯಿನಿ ನಿರಾಮಯೆ ಮಂಜುಭಾಷಿಣಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಜಯಜನನೀ ಶಾರದೆ ಜನನಮೃತಿಭಯಭಿದೆ ಪ.ನಯವಿದೆ ತ್ರಿಜಗನ್ಮಯೆ ವೀಣಾವಿನೋದೆ ಅ.ಪ.ಭಕ್ತಿಜ್ಞಾನ ಮಾನದೆ ಭಗವತ್ಪ್ರಾಪ್ತ ಪ್ರಸಾದೆಮುಕ್ತಿಶಕ್ತಿಪ್ರದೆ ನಿಜ ಭೃತ್ಯವತ್ಸಲೆ ಪ್ರಬುದ್ಧೆ 1ವೇದಾರ್ಥತತ್ವಪ್ರಬೋಧೆ ಆದಿತೇಯಾನತಪದೆಶ್ರೀಧರೆ ಸದಾನಂದೆ ಸಾಧು ಸೌಭಾಗ್ಯನಿಧೆ 2ಅನಘಲಕ್ಷುಮಿನಾರಾಯಣನ ಭಕ್ತ ಪ್ರಹ್ಲಾದಸನಕನುತೆ ಸನ್ನುತೆ ಘನಪಾಪಾಪಹ್ನುತೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ದಿಟ್ಟ ಮುಖ್ಯಪ್ರಾಣನೆ ಜಗಜಟ್ಟಿ ಬಾ ಸುತ್ರಾಣನೆಶ್ರೇಷ್ಠದನುಜಘರಟ್ಟ ಸುಗುಣವಿಶಿಷ್ಟ ಭಕ್ತಶಿಖಾಮಣಿ ಪ.ವಾಯುಪುತ್ರ ವಿಚಿತ್ರ ಬಲಿಸುರರಾಯರಾಯರ ಗಂಡನೆಪ್ರೀಯರಾಮಪದಾಬ್ಜಮಧುಕರ ಮಾಯಿಕದನಪ್ರಚಂಡನೆ 1ಶ್ರೀವರೋತ್ತಮ ಹನುಮ ಭೀಮಕೃಪಾವಲಂಬ ಮಹೋಜನೆಪಾವಮಾನಿಪರೇಶ ಪದ್ಮಜ ಭಾವಿ ಯತಿಕುಲರಾಜನೆ2ಶೂರಾಗ್ರಣಿ ಸುಗುಣಿ ಲಕ್ಷುಮಿನಾರಾಯಣದಾಸನೆಭಾರತೀವದನಾರವಿಂದಕೆ ಸೂರ ನಿತ್ಯವಿಲಾಸನೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಿನ್ನ ಸೇರಿದೆ ಮಹಾಲಿಂಗ ಎನ-ಗಿನ್ಯಾರುಗತಿಕಾಣೆ ಕರುಣಾಂತರಂಗ ಪಾರ್ವತಿ ಮೋಹನಾಂಗಪ.ನಿನ್ನಂತೆ ಕೊಡುವ ಉದಾರ ತ್ರಿಭು-ವನ್ನದೊಳಿಲ್ಲದಕ್ಯಾವ ವಿಚಾರಮುನ್ನ ಮಾರ್ಕಾಂಡೇಯ ಮುನಿಯ ಭಯವನ್ನು ಪರಿಹರಿಸಿದೆಯೊ ಸದುಪಾಯ ನಮೋ ಶಿವರಾಯ 1ಸರ್ವಾಪರಾಧವ ಕ್ಷಮಿಸು ಮಹಾ-ಗರ್ವಿತರಾಶ್ರಯಕ್ಕೊಲ್ಲದು ಮನಸುಶರ್ವರೀಶಭೂಷ ನಿನ್ನ ಹೊರ-ತೋರ್ವರಿಲ್ಲ ರಣಮಲ್ಲ ಮುಕ್ಕಣ್ಣ ಕಾಯೊ ಸುಪ್ರಸನ್ನ 2ಅಂತರಂಗದ ದಯದಿಂದ ಯುದ್ಧ-ಮಂ ತೊಡಗಿದೆ ಪಾರ್ಥನೊಳತಿಚಂದಪಂಥದ ನೆಲೆಯನ್ನು ತಿಳಿದು ಸರ್ವ-ಮಂತ್ರಾಸ್ತ್ರಗಳನಿತ್ತೆಯೊ ಭಕ್ತಗೊಲಿದುದೊಡ್ಡದು ನಿನ್ನ ಬಿರುದು 3ಸಿದ್ಧಿಸು ಸರ್ವಸಂಕಲ್ಪ ಅಡ್ಡ-ಬಿದ್ದು ಬೇಡುವೆ ನಿನಗ್ಯಾವದನಲ್ಪಬುದ್ಧಿಯ ನಿರ್ಮಲಮಾಡು ನಿನ್ನಹೊದ್ದಿದವರಿಗಿಲ್ಲೆಂದಿಗು ಕೇಡು ದುಷ್ಟರದ್ಯಾವ ಪಾಡು 4ಅಂಜಿಕೆ ಬಿಡಿಸಯ್ಯ ಹರನೆ ಪಾ-ವಂಜಾಖ್ಯವರಸುಕ್ಷೇತ್ರಮಂದಿರನೆಸಂಜೀವನ ತ್ರಿಯಂಬಕನೆ ನವ-ಕಂಜಾಕ್ಷ ಲಕ್ಷುಮಿನಾರಾಯಣಸಖನೆಸಲಹೊ ಪಂಚಮುಖನೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪಾಹಿಮಾಂ ರಾಮಚಂದ್ರ ಅಚಲಾಂ ಭಕ್ತಿಂದೇಹಿ ಕಲ್ಯಾಣಸಾಂದ್ರ ಪ.ಶ್ರೀಹರಿ ನಾಗಾರಿವಾಹನ ಶ್ಯಾಮಲ-ದೇಹ ರಾಕ್ಷಸ ಸಮೂಹವಿದಾರಕಅ.ಪ.ಸಜ್ಜನ ಕಲ್ಪವೃಕ್ಷ ಪಾಪಾಂಕುರ-ಭರ್ಜನ ವಿಬುಧಪಕ್ಷಧೂರ್ಜಟಿಸಖ ದೂಷಣಾರಿ ದ್ಯುಮಣಿಕೋಟಿ-ಪ್ರಜ್ವಲಿಪಪರಮಜಗಜ್ಜೀವನಧಾಮನಿರ್ಜರೇಂದ್ರ ಪ್ರಮುಖ ಸುರಗಣ ಪೂಜ್ಯಪೂರ್ಣಬ್ರಹ್ಮ ರಘುವಂ-ಶೋರ್ಜಿತಾತ್ಮ ಮಹಾಮಹಿಮ ರಿಪುದುರ್ಜಯಜಯಾಕಾಂತ ಪ್ರಭುವೆ 1ವೇದೋದ್ಧಾರಣ ಕೂರುಮವರಾಹಪ್ರ-ಹ್ಲಾದವರದ ಗುಣಧಾಮಸಾಧುವಟುವೇಷವಿನೋದಭಾರ್ಗವಬಹುಕ್ರೋಧಿ ಕ್ಷತ್ರಿಯಕುಲ ಭೇದಿ ರಾವಣಾಂತಕಯಾದವಕುಲಾಂಬೋಧಿಚಂದ್ರಕುವಾದಿಜನದುರ್ಬೋಧಬದ್ಧವಿ-ರೋಧ ಕಲಿಮಲಸೂದನಾಚ್ಯುತಶ್ರೀಧರ ರಮಾಮೋದಮಾನಸ 2ಕಾಶಿಮಠಸ್ಥ ಯತಿ ಪರಂಪರ್ಯ-ಭೂಷಣ ಶುದ್ಧಮತಿಶ್ರೀ ಸುಕೃತೇಂದ್ರ ಸನ್ಯಾಸಿ ಪೂಜಿತಪಾದವಾಸುದೇವತವ ದಾಸ್ಯವ ಪಾಲಿಸುಶೇಷಶಯನ ವಿಲಾಸ ಪರಮದಯಾಸಮುದ್ರಸುಭದ್ರ ಶ್ರವಣ ಪ-ರೇಶಭವರುಗ್ಭೇಷಜನೆ ನರಕೇಸರಿಯೆ ಶ್ರೀ ವ್ಯಾಸ ರಘುಪತಿ 3ಪಾರಗಾಣರು ನಿನ್ನಯ ಬ್ರಹ್ಮಾದ್ಯರುಭೂರಿಗುಣದ ಮಹಿಮೆಯಸೂರಿಜನಪ್ರೀತ ಸೀತಾನಯನ ಚ-ಕೋರಚಂದ್ರನು ಮಹೋದಾರ ಶಾಙ್ರ್ಗಧರಮೀರಣಾತ್ಮಜವರದ ನತಮಂದಾರ ಕೈರವಶ್ಯಾಮ ರಾಮನ 4ಪ್ರಣವರೂಪ ನಿರ್ಲೇಪ ನಿತ್ಯಾತ್ಮದು-ರ್ಜನವನೋದ್ದಹನೋದ್ದೀಪಮನುಕುಲಮಣಿ ಮುನಿಗಣ ಸಮಾಹಿತ ಜನಾ-ರ್ದನ ಬ್ರಹ್ಮಾದ್ಯಖಿಳ ಚೇತನರು ನಿನ್ನಾಧೀನಜನುಮ ಜನುಮಕೆ ಲಕ್ಷುಮಿನಾರಾಯಣಚಿದಾನಂದೈಕ ದೇಹನೆಮನ ವಚನ ಕಾಯದಲಿ ಧ್ಯಾನಿಪಘನಭಕುತಿ ಭಾಗ್ಯವನು ಪಾಲಿಸು 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪೊರೆಯುವುದೆಮ್ಮನು ನರಹರಿ ನೀನುಸ್ಮರಿಪೆವು ತವ ಪದಸರಸಿಜಗಳನು ಪ.ತರಳಪ್ರಹ್ಲಾದನು ಮೊರೆಯಿಟ್ಟು ತಾನುಕರೆಯಲಾಕ್ಷಣ ಬಂದೆ ತ್ವರಿತದಿ ನೀನು 1ದುರುಳಹಿರಣ್ಯಕಸುರನನು ಸೀಳಿಸುರರನ್ನು ಸಲಹಿದೆ ಕರುಣವ ತಾಳಿ 2ಮಿತ್ರಮಂಡಳಿ ಶತಪತ್ರಕೆ ನೀನುಮಿತ್ರನಂತೆಸಗು ವಿಮಿತ್ರತೆಯನ್ನು 3ಕಾರುಣ್ಯಾಮೃತವಾರಿಧೇ ಮೂರ್ತೇವರಲಕ್ಷುಮಿನಾರಾಯಣ ಸತ್ಕೀರ್ತೇ4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಾಲಗಜಾನನ ಬಾ ಗುಣಸದನಪಾಲಿತ ತ್ರಿಭುವನ ಬಾಲ ಜಗಜ್ಜೀವನ ಪ.ರಾಧಾದೇವಿಯಾರಾಧಿಸಿದಳು ನಿನ್ನಆದಿಯೊಳ್ ಕೈಕೊಂಬೆ ಮೋದದಿಂದ ಪೂಜನ 1ವಿಘ್ನವಿಭಂಜನ ವಿಧಿಸುರ ರಂಜನಅಗ್ನಿ ಗರ್ಭನಗ್ರಜ ಅಖುವಾಹನ ಮೋಹನ 2ಪ್ರಿಯ ಶ್ರೀ ಲಕ್ಷುಮಿನಾರಾಯಣಶರಣಕಾಯೊ ಕಾಮಿತಫಲದಾಯಕ ಸುಮನ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ