(ಏ) ಸಂಪ್ರದಾಯದ ಹಾಡುಗಳು
ಆರತಿ ಬೆಳಗುವೆ ನಿನಗೆ ಶ್ರೀರಾಮ
ಸಾರಸಾಕ್ಷ ಹರಿ ಮೇಘಶ್ಯಾಮ ಪ
ಪೀತಾಂಬರಧರ ತುಲಸೀಮಾಲ
ಪಾತಕ ವಿದಳನ ಸೀತಾಲೋಲ 1
ಕುಂಡಲ ಮೃಗಮದತಿಲಕ
ನಿರುಪಮ ಸುಂದರ ಮನ್ಮಥ ಜನಕ 2
ಭರತ ಶತ್ರುಘ್ನರ ಚಾಮರ ಸೇವ
ಹರುಷದಿ ತೋರುವ ಪರಮಪ್ರಭಾವ 3
ಸೋದರ ಲಕ್ಷ್ಮಣ ಹನುಮ ಸಮೇತ
ಮೋದದಿ ಮಾತೆಯರನು ಪೊರೆದಾತ 4
ಶುಕ ಮುನಿನುತ ಶುಭನಾಮ
ಪತಿ ಪೂರ್ಣಸುಕಾಮ 5
ಶರಣಾಗತ ಪರಿಪಾಲಕ ಶೌರಿ
ಕರುಣಾಕರ ಕಲಿವೈರಿ ಮುರಾರಿ 6
ಜಾಜೀಶ ಚನ್ನಕೇಶವ ಮೂರ್ತಿ
ಅಗಣಿತ ಕೀರ್ತಿ 7